ಪವಿತ್ರ ಭೂಮಿ ಸಲಾಲಃಕ್ಕೆ ಒಂದು ಯಾತ್ರೆ
KCF ಒಮಾನ್ ಸಲಾಲ ಯಾತ್ರೆ- 2019
ಭಾಗ-೩
✍✍✍
MHB Ullal.
ಜಬಲ್ ಅಯ್ಯೂಬ್ ನಿಂದ ಹೊರಟ ನಮ್ಮ ಯಾತ್ರೆ ತಲುಪಿದ್ದು ಆಶಿಕೇ ರಸೂಲ್ *ಉವೈಸುಲ್ ಕರ್ನೈನ್ (ರ.ಅ)* ರವರ ಮಖ್ಬರ ಇರುವ ಸಲಾಲದ, ಇತಿನ್ ಕಡೆ.
*ಉವೈಸುಲ್ ಕರ್ನೈನ್(ರ.ಅ)* ರವರು ಒಬ್ಬರು ಅಪ್ಪಟ ಪ್ರವಾದಿ ಪ್ರೇಮಿಯಾಗಿದ್ದರು. ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು* ಹೋಗಿ ಕಾಣಬೇಕು ಎಂಬ ಬಹಳ ಆಸೆ ಇತ್ತು. ಅದಕ್ಕಾಗಿ ಅವರ ಮನಸ್ಸು ಚಟಪಡಿಸುತ್ತಿತ್ತು.
ಆದರೆ ಅವರಿಗೆ ಒಬ್ಬರು ವೃದ್ಧರಾದ ತಾಯಿ ಇದ್ದರು. ಅವರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಅವರನ್ನು ಬಿಟ್ಟು ಹೋಗುವಂತಿರಲಿಲ್ಲ.
ಕೊನೆಗೆ ಆ ತಾಯಿಯವರು ಮಗನನ್ನು ಕರೆದು, "ನೀನು ಮದೀನಕ್ಕೆ ಹೋಗಿ ಅಲ್ಲಾಹನ ಹಬೀಬರನ್ನು ಕಂಡು ಬೇಗ ಬಾ. ಅಷ್ಟರವರೆಗೆ ನಾನು ಸುಧಾರಿಸುತ್ತೇನೆ ಅಂತ."
ಅವರಿಗೆ ತಾಯಿಯನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ ಆದರೆ ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು* ನೋಡಲು ಸಿಗುತ್ತದಲ್ವಾ ಎಂಬ ಒಂದೇ ಒಂದು ಉದ್ದೇಶದಿಂದ ಮದೀನಾಕ್ಕೆ ಹೋದರೆ.
ಆದರೆ ಅಲ್ಲಿ ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಮರು* ಇರಲಿಲ್ಲ. ಬೇರೆ ಕಡೆಗೆ ಹೋಗಿದ್ದರು. ಅವರ ಮನಸ್ಸಿಗೆ ತುಂಬಾ ಬೇಜಾರಾಯಿತು. ಅಲ್ಲಿ ಹೆಚ್ಚು ಸಮಯ ನಿಲ್ಲುವಂತಿರಲಿಲ್ಲ. ವೃದ್ಧರಾದ ತಾಯಿ ಒಬ್ಬರೇ ಇರುವುದರಿಂದ ಒಳ್ಳದ ಮನಸ್ಸಿನಿಂದ ಊರಿಗೆ ಮರಳಿದರು.
ಇವರ ಪ್ರವಾದಿ ಪ್ರೇಮ ಹೇಳಿ ತೀರದು. ಉಹ್ದು ಯುದ್ಧದಲ್ಲಿ ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ﷺ* ರವರ ಪವಿತ್ರ ಹಲ್ಲು(ಸಿನ್ನ್ ಮುಬಾರಕ್) ಕೆಳಗೆ ಬಿದ್ದ ವಿಷಯ ತಿಳಿದ ಇವರು, ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ﷺ* ರಿಗೆ ಇಲ್ಲದ ಹಲ್ಲು ನನಗೆ ಬೇಡ ಅಂತ, ಯಾವ ಹಲ್ಲು ಅಂತ ತಿಳಿಯದೆ ಇದ್ದುದರಿಂದ ತಮ್ಮ ಎಲ್ಲಾ ಹಲ್ಲುಗಳನ್ನು ಚಚ್ಚಿ ತೆಗೆದರು. ಸುಬ್ಹಾನಲ್ಲಾಹ್
ಅಷ್ಟೇ ಅಲ್ಲ ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ﷺ* ರವರು *ಉಮರ್(ರ.ಅ)* ರೊಂದಿಗೆ ಹೇಳಿದರು, "ಯಮನ್ ನ ಕರ್ನೈನ್ ಎಂಬ ಸ್ಥಳದಿಂದ ಒಬ್ಬರು ಬರಲಿದ್ದಾರೆ. ಅವರ ಕೈಯಲ್ಲಿ ಬಿಳಿಯ ಒಂದು ಕಲೆ ಇರುತ್ತದೆ *(ಉವೈಸುಲ್ ಕರ್ನೈನ್ (ರಅ) ರಿಗೆ ಪಾಂಡು ರೋಗ ಬಂದಿತ್ತು. ಅದು ಶಿಫಾ ಆಗಿ ಒಂದು ಕೈಯಲ್ಲಿ ಮಾತ್ರ ಸ್ವಲ್ಪ ಬಾಕಿ ಇರುತ್ತದೆ)* ಅವರನ್ನು ಕಂಡರೆ ನೀವು ದುವಾ ಮಾಡಿಸಿ".
*ಮಾಶಾ ಅಲ್ಲಾಹ್.... ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ﷺ* *ರವರೇ ಉಮರ್(ರ.ಅ) ರೊಂದಿಗೆ ದುವಾ ಮಾಡಿಸಲು ಹೇಳಿದ ವ್ಯಕ್ತಿ ಅಂದ ಮೇಲೆ ಅವರ ಸ್ಥಾನ ಎಷ್ಟು ಇರಬಹುದು!*
*ಯಾ ಅಲ್ಲಾಹ್. ಅವರ ಇಸ್ಕ್ ನ ಒಂದು ಅಂಶವಾದರೂ ನಮ್ಮ ಹೃದಯದಲ್ಲಿ ನೀಡು. ಆಮೀನ್ ಯಾ ರಬ್ಬಲ್ ಆಲಮೀನ್*
🤲🤲🤲
*💚 اَلصَّلَاةُ وَالسَّلَامُ عَلَيْكَ يَا سَيَّدِي يَارَسُولَ اللّٰه ﷺ*
*ಇನ್ಶಾ ಅಲ್ಲಾಹ್ ಉಳಿದದ್ದು ಕೊನೆಯ ಭಾಗದಲ್ಲಿ ಮುಂದುವರಿಯುವುದು*





Comments