Skip to main content

ಅಹಂಭಾವ ನಿಷಿದ್ಧ

ಅಹಂಭಾವ ನಿಷಿದ್ಧ
*السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه*
✍🏻 *ಎಂ.ಫಯಾಝ್*
*ಬೀಸಿರೋಡು(ಪಿಸಿ)*

🌾🥀🎋🌾🥀🎋🌾🥀🎋🌾🥀

*ಅಲ್ಲಾಹುﷻ ಹೇಳುತ್ತಾನೆ: ಆ ಪಾರತ್ರಿಕ ಭವನವನ್ನು ಭೂಮಿಯಲ್ಲಿ ದರ್ಪ ಹಾಗೂ ಕ್ಷೋಭೆಯನ್ನು ಬಯಸದವರಿಗೆ ಸಿದ್ದಗೊಳಿಸಿರುವೆನು. ಉತ್ತಮ ಪರ್ಯವಸಾನವು ಭಕ್ತರಿಗಾಗಿದೆ". (ಕುರ್ ಆನ್)*

*ಭೂಮಿಯಲ್ಲಿ ನೀನು ದರ್ಪದಿಂದ ನಡೆಯದಿರು.*

ಜನರಿಂದ ಮುಖ ತಿರುಗಿಸದಿರು. ಭೂಮಿಯ ಮೇಲೆ ಅಹಂಭಾವದಿಂದ ನಡೆಯದಿರು. ದರ್ಪ ಹಾಗೂ ದುರಭಿಮಾನದ ಯಾರನ್ನೂ ಅಲ್ಲಾಹನುﷻ ಇಷ್ಟಪಡುವುದಿಲ್ಲ. (ಕುರ್ ಆನ್)

*ಕಾರೂನನು ಮೂಸಾ(ಅ) ನಬಿಯವರ ಜನತೆಗೆ ಸೇರಿದವನಾಗಿದ್ದನು. ಆತನು ಅವರ ವಿರುದ್ಧ ಅನ್ಯಾಯವೆಸಗಿದನು. ಅವನಿಗೆ ಧಾರಾಳ ನಿಧಿಗಳನ್ನು ನೀಡಿದ್ದೆ. ಅವುಗಳ ಕೀಲಿಗಳೇ ಶಕ್ತರಾದ ಒಂದು ಗುಂಪಿಗೆ ಭಾರವಾಗುವಷ್ಟಿತ್ತು. ಆತನಲ್ಲಿ ಅವನ ಜನತೆ ಹೇಳಿದ ಸಂದರ್ಭ, ನೀನು ಮಿತಿಮೀರಿ ಪ್ರತಿಷ್ಠೆ ಮೆರೆಯಬೇಡ. ಮಿತಿ ಮೀರಿ ಆನಂದಿಸುವವರನ್ನು ಅಲ್ಲಾಹುﷻ ಇಷ್ಟ ಪಡುವುದಿಲ್ಲ.*
             ಕೊನೆಗೆ ಆವನನ್ನೂ ಅವನ ಮನೆಯನ್ನೂ ನಾನು ಭೂಮಿಯೊಳಕ್ಕೆ ಇಳಿಸಿಬಿಟ್ಟೆನು.
(ಕುರ್ ಆನ್)

*ಆ ಪಾರತ್ರಿಕ ಬೀಡನ್ನು ಭೂಮಿ ಮೇಲೆ ಮೇಲ್ಮೆ ಮತ್ತು ಅಶಾಂತಿಯನ್ನು ಬಯಸದವರಿಗಾಗಿ ನಾನು ಮಾಡಿರುತ್ತೇನೆ. ಸತ್ಪರಿಣಾಮವು ಸದ್ಭಕ್ತರಿಗೆ" (ಕುರ್ಆನ್)*

ಮೇಲ್ಮೆ(ಅಹಂಭಾವ) ಮತ್ತು ಅಶಾಂತಿ ಬೇರೆ ಬೇರೆ ಪಾಪಗಳು. ಆದ್ದರಿಂದ ಇವೆರಡರಲ್ಲಿ ಒಂದು ಇದ್ದರೂ ಪ್ರಸ್ತುತ ಎಚ್ಚರಿಕೆ ಅನ್ವಯವಾಗುವುದು" ಎಂದು ವ್ಯಾಖ್ಯಾನಿಸಲಾಗಿದೆ.

*ತನ್ನ ಚಪ್ಪಲಿಯ ಅಟ್ಟೆ ಕೂಡಾ ಇನ್ನೊಬ್ಬರ ಚಪ್ಪಲಿಯ ಅಟ್ಟೆಗಿಂತ ಮೇಲ್ತರದ್ಧಾಗ ಬೇಕು ಎಂಬ ಪೈಪೋಟಿ ಮನಸ್ಥಿತಿ ಕೂಡಾ ಅಹಂಭಾವದ ಯಾದಿಗೆ ಸೇರುತ್ತದೆ ಎಂದು ಮೇಲುದ್ಧರಿತ ವ್ಯಾಖ್ಯಾನವನ್ನು ಹೇಳಿದ ಇಮಾಂ ಅಬೂಹಿಬ್ಬಾನ್ ಉಲ್ಲೇಖಿಸಿದ್ದಾರೆ.*

*ಅಣು ಗಾತ್ರ ಅಹಂಭಾವ ಮನದಲ್ಲಿರುವವನು ಸ್ವರ್ಗಕ್ಕೆ ಹೋಗಲಾರನು" - ಹದೀಸ್*

*ಅಲ್ಲಾಹನಿಗೆﷻ* ಮೊಟ್ಟ ಮೊದಲು ಎಸಗಲಾದ ಪಾಪ "ಕಿಬ್ರ್' ಆಗಿತ್ತು. ಆ ಮೊದಲು ಯಾವ ಸೃಪ್ಟಿಯೂ *ಅಲ್ಲಾಹನಿಗೆﷻ* ಯಾವ ಪಾಪವನ್ನೂ ಮಾಡಿರಲಿಲ್ಲ. ಇಬ್ಲೀಸನು(ಲ) ಕಿಬ್ರ್ ಪ್ರದರ್ಶಿಸುವ ಮೂಲಕ ಪಾಪಗಳನ್ನು ಉದ್ಘಾಟನೆ ಮಾಡಿದನು.

*ಕಿಬ್ರ್ ಬಗ್ಗೆ ಜಾಗ್ರತೆ ವಹಿಸಿರಿ. ಆದಮ್ ನಬಿ(ಅ)ಗೆ ಸುಜೂದ್ ಮಾಡದಂತೆ ಇಬ್ಲೀಸ್(ಲ)ಗೆ ತಡೆದದ್ದು ಅವನ ಕಿಬ್ರ್.*

*ಆಸೆಯನ್ನು ತ್ಯಜಿಸಿರಿ. ಆದಮರು(ಅ) ನಿಷೇಧಿತ ಹಣ್ಣು ತಿನ್ನಲು ಕಾರಣವಾದುದು ಆಸೆಯಾಗಿತ್ತು. ಅಸೂಯೆ ತ್ಯಜಿಸಿರಿ. ಕಾಬೀಲನು ಹಾಬೀಲನನ್ನು ವಧಿಸಲು ಹೇತುವಾದುದು ಕಾಬೀಲನ ಅಸೂಯೆ. ಈ ಮೂರು ದೋಷಗಳು ಸರ್ವಪಾಪಗಳಿಗೆ ಮೂಲವಾಗಿರುತ್ತದೆ. - ಹದೀಸ್*

ಅಹಂಭಾವಿಗಳಿಗೆ ಪರಲೋಕದಲ್ಲಿ ನಿಂದನೆಗಾಗಿ ಬಹಳ ಕಿರಿದಾದ ರೀತಿಯಲ್ಲಿ ಅವರ ಆಕೃತಿಯನ್ನು ಅಲ್ಲಾಹನುﷻ ಕುಗ್ಗಿಸುವನು.
ಸರ್ವ ಕಡೆಗಳಿಂದಲೂ ಅವಮಾನಿತರಾಗುವ ಅವರು ಕೊನೆಗೆ ಬೂಲಸ್ ಎಂಬ ಹೆಸರಿನ ನರಕದ ಪ್ರಪಾತಕ್ಕೆ ತಳ್ಳಲ್ಪಡುವರು. *ಅಲ್ಲಿ ಅವರಿಗೆ "ತೀನತುಲ್ ಖಬಾಲ್' ಎಂಬ ದುರ್ಗಂಧದ ಪೇಯವನ್ನು (ನರಕದವರ ದೇಹಗಳಿಂದ ಸುರಿದು ಕುದಿದ ರಕ್ತ, ಕೀವುಗಳ ಸಂಗ್ರಹದಿಂದ ಕುಡಿಸಲಾಗುವುದು) - ಹದೀಸ್.*

*ಜನರು ನನಗಾಗಿ ಎದ್ದು ನಿಲ್ಲಬೇಕು ಎಂದು ಬಯಸುವವನು ನರಕದಲ್ಲಿ ತನ್ನ ಆಸನವನ್ನು ಕಾದಿರಿಸಿಕೊಳ್ಳುತ್ತಾನೆ" - ಹದೀಸ್*

ತನ್ನ ಧರ್ಮ ನಿಷ್ಠೆ ಮತ್ತು ಆರಾಧನೆಗಳ ವಿಚಾರದಲ್ಲಿ ಕೂಡಾ ತಾನು ಹೆಮ್ಮೆ ಪಟ್ಟುಕೊಳ್ಳುತ್ತಿದ್ದರೆ ಅವನೂ ನೀಚ" - ಹದೀಸ್

ನರಕದವನನ್ನು ನೋಡಬೇಕೆ? ಜನರು ನಿಂತಿರುವಾಗ ಮಧ್ಯೆ ಕೂತಿರುವವನು ನರಕದವನು.
(ಹದೀಸ್)

*ಒಬ್ಬನ ಬೆನ್ನ ಹಿಂದೆ ಜನ ಜಾಸ್ತಿ ಸೇರಿದಷ್ಟು ಆತ ಅಲ್ಲಾಹನಿಂದ ದೂರವಾಗುತ್ತಾ ಇರುತ್ತಾನೆ.*
(ಹದೀಸ್)

*ಇಸ್ರಾಯೀಲ್ ಸಮುದಾಯದಲ್ಲಿ ಸಂತನೊಬ್ಬನ ಬಳಿಗೆ ಒಬ್ಬ ನೀಚ ಬಂದಾಗ ಸಂತನು ಅವನನ್ನು ಕಡೆಗಣಿಸಿದನು.*
ನೀಚನಿಗೆ ದೋಷ ಮುಕ್ತಿ ನೀಡಲಾಗಿದೆ, ಸಂತನ ಪುಣ್ಯಗಳೆಲ್ಲಾ ನಷ್ಟವಾಗಿದೆ" ಎಂದು ಆ ಕಾಲದಲ್ಲಿದ್ದ ಪ್ರವಾದಿಗೆ ಸಂದೇಶ ಬಂತು. ಪಾಪಿಯ ಮನಸಾಕ್ಷಿಯ ತಿವಿತವು ನಿಷ್ಟನ ಹೆಮ್ಮೆಗಿಂತ ಶ್ರೇಷ್ಟ. *ಯಾವುದೇ ಸೃಷ್ಟಿಗಿಂತ ತಾನು ಮೇಲು, ಯಾವನೇ ವ್ಯಕ್ತಿಗಿಂತ ತಾನು ಶ್ರೇಷ್ಟ ಎಂಬ ಭಾವನೆ ಅಹಂಭಾವವಾಗುತ್ತದೆ ಎಂದಿದ್ದಾರೆ ಇಮಾಮ್ ಗಝ್ಝಾಲಿ (ರ).*
*ತಾನು ಫಿರ್ಔನಿಗಿಂತ ಶ್ರೇಷ್ಟ ಎಂಬ ಭಾವನೆ ಕೂಡಾ ಅಹಂಭಾವವಾಗುತ್ತದೆ ಎಂದಿದ್ದಾರೆ ಇಮಾಂ ಹಮದೂನ್(ರ)*

ಮನದಲ್ಲಿ ಅಣುವಿನಷ್ಟು ದರ್ಪ ಇರುವವನು ಸ್ವರ್ಗಕ್ಕೆ ಹೋಗಲಾರನು" ಎಂದು ನಬಿﷺರವರು ಹೇಳಿದಾಗ
*"ಒಬ್ಬನು ತನ್ನ ವಸ್ತ್ರ, ಚಪ್ಪಲಿ ಮುಂತಾದ್ದು ಚೆನ್ನಾಗಿರಬೇಕೆಂದು ಬಯಸುವುದು ದರ್ಪವಾದೀತೇ" ಎಂದು ಕೇಳಿದರು. ಆಗ ನಬಿಯವರು, "ಅಲ್ಲಾಹನು ಸುಂದರನು, ಸೌಂದಯವನ್ನು  ಇಷ್ಟಪಡುತ್ತಾನೆ.ದರ್ಪ ಅಂದರೆ ಸತ್ಯವನ್ನು ನಿರಾಕರಿಸುವುದು ಮತ್ತು ಜನರನ್ನು ಅವಗಣಿಸುವುದು" ಎಂದರು.*
(ವ: ಅಬ್ದುಲ್ಲಾಹ್ ಬಿನ್ ಮಸ್ಊದ್, ಉ:ಮುಸ್ಲಿಂ)

*ಒಬ್ಬನು ನಬಿﷺರವರ ಸನ್ನಿಧಿಯಲ್ಲಿ ಎಡಗೈಯಲ್ಲಿ ತಿಂದನು. ಬಲಗೈಯಲ್ಲಿ ತಿನ್ನು ಎಂದು ನಬಿﷺರವರು ಹೇಳಿದರು.* ಆತ ದರ್ಪದಿಂದ ಬಲಗೈಯಲ್ಲಿ ತಿನ್ನಲು ನನ್ನಿಂದಾಗುವುದಿಲ್ಲ ಎಂದನು,ಆಗ *ನಬಿﷺ ರವರು* ನಿನ್ನಿಂದ ಸಾಧ್ಯವಿಲ್ಲ ಎಂದರು.
ಅನಂತರ ಆ ಮನುಷ್ಯ ತನ್ನ ಬಲ ಕೈಯನ್ನು ಬಾಯಿಗೆ ಎತ್ತಲೇ ಇಲ್ಲ. (ವ:ಸಲಮತ್ ಉ: ಮುಸ್ಲಿಮ್)

*ನಬಿﷺರವರು ಹೇಳಿದರು. ಸ್ವರ್ಗದವರು ಯಾರೆಂದು ನಿಮಗೆ ಹೇಳೆಲೇ? ಅವರು ಯಾರೆಂದರೆ ದುರ್ಬಲರು ಮತ್ತು ಅವಶರು. ಅವರು ಅಲ್ಲಾಹನﷻ ಹೆಸರಲ್ಲಿ ಪ್ರತಿಜ್ಞೆ ಮಾಡಿದರೆ ಅದನ್ನವರು ಪೂರೈಸುವರು.*
*ನರಕದವರು ಯಾರೆಂದು ನಿಮಗೆ ತಿಳಿಸಿಕೊಡಲೇ? ಕ್ರೂರ ಮನಸ್ಕರು, ಅನ್ಯಾಯವಾಗಿ ಸೊತ್ತು ಸಂಪಾದಿಸಿದವರು ಹಾಗೂ ಅಹಂಕಾರಿಗಳು.*
(ವ: ಹಾರಿಸತ್ ಬಿನ್ ವಹಬ್ ಉಲ್ಲೇಖ: ಬು.ಮು)

*ದರ್ಪದಿಂದ ಉಡುಪು ವಸ್ತ್ರವನ್ನು ಎಳೆದು ನಡೆಯುವವನಿಗೆ ಪರಲೋಕದಲ್ಲಿ ಅಲ್ಲಾಹುﷻ ಕರುಣೆಯ ನೋಟವನ್ನು ನೋಡಿವುದಿಲ್ಲ.(ಹದೀಸ್)*

*_ಆದ್ದರಿಂದ ನಾವು ಅಹಂಕಾರಿಗಳಾಗಿ  ಜೀವಿಸದೆ, ಅಲ್ಲಾಹನ ಆಜ್ಞೆಯನ್ನು ಪಾಲಿಸಿಕೊಂಡು,ಎಲ್ಲರಿಗೂ ಒಳಿತನ್ನು ಬಯಸಿ ಉತ್ತಮ ವ್ಯಕ್ತಿಗಳಾಗಿ ಬಾಳುವ ಅಲ್ಲಾಹುﷻ ತೌಫೀಕ್ ನೀಡಲಿ._*
*_ಆಮೀನ್ ಯಾರಬ್ಬಲ್ ಆಲಮೀನ್._*

*(ಮುಗಿಯಿತು.)*

*_ನಮ್ಮೆಲ್ಲರ ಹಬೀಬ್ ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಗಳ ಮೇಲೆ 3 ಸ್ವಲಾತ್ ಹೇಳುವ_*
*اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ.*

✍🏻 *ಎಂ.ಫಯಾಝ್*
*ಬೀಸಿರೋಡು(ಪಿಸಿ)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...