Skip to main content

ರೋಗಿಗೆ ದೊರೆಯುವ ಪುಣ್ಯ

ರೋಗಿಗೆ ದೊರೆಯುವ ಪುಣ್ಯ
✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)

ಮುಸ್ಲಿಮನಿಗೆ ಯಾವುದೇ ಪ್ರಾರಬ್ಧ, ದುಖ,ರೋಗ ಬೇಸರ ತಟ್ಪಿದರೂ ಒಂದು ಮುಳ್ಳು ತಾಗಿದರೂ ಕೂಡಾ ಅದರ ಕಾರಣಕ್ಕೆ ಅಲ್ಲಾಹನುﷻ ಅವನ ಪಾಪಗಳನ್ನು ಪರಿಹಾರ ಮಾಡುತ್ತಾನೆ.(ಬುಖಾರಿ,ಮುಸ್ಲಿಂ)

"ರೋಗ ಬಂದು ವಾಸಿಯಾದರೆ ಪಾಪಗಳಿಗೆ ಪರಿಹಾರವೂ ಭವಿಷ್ಯತ್ತಿಗೆ ಪಾಠವೂ ಆಗಿರುವುದು."
ಆದರೆ ಕಪಟಿಗೆ ರೋಗ ಬಂದು ವಾಸಿಯಾದರೆ ಕಟ್ಟಿ ಹಾಕಿದ ನಂತರ ಹಗ್ಗ ಬಿಚ್ಚಲ್ಪಟ್ಟ ಒಂಟೆಯಂತೆ. ತನ್ನ ಪಾಲಕರು ನನ್ನನ್ನು ಯಾಕೆ ಕಟ್ಟಿ ಹಾಕಿದರು, ಯಾಕೆ ಬಿಟ್ಟರು ಎಂಬುವುದು ಅದಕ್ಕೆ ಗೊತ್ತಿರುವುದಿಲ್ಲ."(ಅಬೂದಾವೂದ್)

"ಅಲ್ಲಾಹನುﷻ ಯಾರಿಗಾದರೂ ಏನಾದರೂ ಒಳಿತನ್ನು ಬಯಸಿದರೆ, ಅವರಿಗೆ ಏನಾದರೊಂದು ಅನಾಹುತ ಅಥವಾ ತೊಂದರೆಯನ್ನು ಕೊಡುತ್ತಾನೆ.."(ಬುಖಾರಿ)
"ಪರಲೋಕದಲ್ಲಿ ಹುತಾತ್ಮರನ್ನು ಕೊಡುಗೈ ದಾನಿಗಳನ್ನು ವಿಚಾರಣೆಗೆ ತಂದು ನಿಲ್ಲಿಸಲಾಗುವುದು.
ನಂತರ ರೋಗ ಬಾಧಿತರಾಗಿದ್ದವರನ್ನು ಕರೆತರಲಾಗುವುದು. ಅವರಿಗೆ ಯಾವುದೇ ಲೆಕ್ಕ, ವಿಚಾರಣೆ ಇಲ್ಲದೇ ಪುಣ್ಯಗಳನ್ನು ಸುರಿಸಲಾಗುವುದು. ಆಗ ಇಹದಲ್ಲಿ ಆರೋಗ್ಯದಲ್ಲಿದ್ದವರು, ಇಹದಲ್ಲಿ ನಮ್ಮ ದೇಹಗಳನ್ನು ಕತ್ತರಿಸಬೇಕಿತ್ತು ಎಂದು ಆಸೆಪಡುವರು. ಇಹದಲ್ಲಿ ಕಷ್ಟ ತೊಂದರೆಗಳನ್ನು ರೋಗವನ್ನು ಅನುಭವಿಸಿದವರಿಗೆ, ಅಲ್ಲಿ ಸಿಗುವ ಅಪಾರ ಪುಣ್ಯವನ್ನು ಕಂಡು, ಆಸೆ ಪಡುವರು.(ಹದೀಸ್,ತ್ವಬ್ ರಾನೀ)
"ಮೂರು ದಿನಗಳ ಕಾಯಿಲೆ ಬಂದರೆ ನವಜಾತ ಶಿಶುವಿನಂತೆ ಪಾಪ ಮುಕ್ತನಾಗುವನು" (ಹದೀಸ್)

"ಒಂದು ದಿನದ ಜ್ವರವನ್ನು(ಜನರಲ್ಲಿ ದೂರಿಕೊಳ್ಳದೆ) ತನ್ನಷ್ಟಕ್ಕೆ ತಾನೇ ಸಹಿಸಿಕೊಂಡರೆ, ನವಜಾತ ಶಿಶುವಿನಂತೆ ದೋಷ ಮುಕ್ತನಾಗುವನು" ಅವನನ್ನು ನರಕ ಮುಕ್ತವೆಂದು ಅಲ್ಲಾಹು  ದಾಖಲಿಸುವನು. ಅಲ್ಲಾಹನುﷻ ನೀಡಿದ ರೋಗವನ್ನು ಇನ್ನೊಬ್ಬರಲ್ಲಿ ದೂರಿಕೊಳ್ಳದ ಕಾರಣಕ್ಕಾಗಿ ಅವನ ಪಾಪಗಳನ್ನು ಅಲ್ಲಾಹುﷻ ಕ್ಷಮಿಸುವನು.(ಹದೀಸ್)
ಜ್ವರ ಅಥವಾ ಇನ್ನಿತರ ಯಾವುದೇ ರೋಗ ಬಂದರೆ ಬಯ್ಯಬಾರದು.

"ತಲೆಸುತ್ತು ಅಥವಾ ನೆಗಡಿಯಂತಹ ಯಾವುದೇ  ಸಣ್ಣ ರೋಗಗಳು ಭಕ್ತರ ಒಡನಾಡಿ ಇದರಿಂದ ಅವರ ಪಾಪಗಳು ಬೆಟ್ಟದಷ್ಟಿದ್ದರೂ ಪರಿಹಾರವಾಗಿ ಹೋಗುತ್ತದೆ.(ಹದೀಸ್)
ಒಂದು ರಾತ್ರಿಯ ಜ್ವರವು ಒಂದು ವರ್ಷಕ್ಕೆ ಪರಿಹಾರ, ಅದೇ ರೀತಿ ಜ್ವರವೂ ನರಕದ ಒಂದು ಕುಲುಮೆ.ಅದನ್ನು ತನ್ನೀರಿನಿಂದ ಶಮನಗೊಳಿಸಿರಿ.(ಹದೀಸ್)
ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯಿಂದ ತೀರಿಕೊಂಡವರಿಗೆ ಕಬರಲ್ಲಿ ಶಿಕ್ಷೆ ಇಲ್ಲ.(ಹದೀಸ್)
ರೋಗಿ ಸಹನೆ ಪಾಲಿಸದೇ ಇದ್ದರೂ ಪಾಪ ಪರಿಹಾರವಿದೆ.ಆದರೆ ಪುಣ್ಯ ಲಭ್ಯವಿಲ್ಲ.ಪುಣ್ಯ ದೊರೆಯಬೇಕಾದರೆ ಸಹನೆ ಪಾಲಿಸಬೇಕು.ಇಂಷಾಅಲ್ಲಾಹ್...

ಅಲ್ಲಾಹುﷻ ನಮಗೆಲ್ಲರಿಗೂ ಅನುಗ್ರಹಿಸಲಿ.ಇಹಪರ ಜೀವನವನ್ನು ಸಲಾಮತ್ ಮಾಡಲಿ,ಅದೇ ರೀತಿ ಉತ್ತಮ ಸ್ವಭಾವದಿಂದ ಜೀವಿಸಿಲು ನಮಗೆಲ್ಲರಿಗೂ ಅಲ್ಲಾಹುﷻ ತೌಫೀಕ್ ನೀಡಲಿ ಆಮೀನ್ ಯಾ ರಬ್ಬಲ್ ಆಲಮೀನ್.

(ಮುಗಿಯಿತು.)

ನಮ್ಮೆಲ್ಲರ ಹಬೀಬ್ ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಗಳ ಮೇಲೆ 10 ಸ್ವಲಾತ್ ಹೇಳುವ
اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ.

✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...