Skip to main content

ಒಳ್ಳೆಯವರಾಗೋಣ, ಮತ್ತೊಬ್ಬರಿಗೂ ಉಪದೇಶ ಮಾಡೋಣ

ಒಳ್ಳೆಯವರಾಗೋಣ, ಮತ್ತೊಬ್ಬರಿಗೂ ಉಪದೇಶ ಮಾಡೋಣ
✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)

ಅಲ್ಲಾಹನುﷻ ಹೇಳುತ್ತಾನೆ."ಸ್ವಂತವನ್ನು ಮರೆತು ಜನರಿಗೆ ಉಪದೇಶ ನೀಡುತ್ತಿದ್ದೀರಾ.? ನೀವಾದರೋ ವೇದಗಳನ್ನು ಓದುತ್ತಲೂ ಇದ್ದೀರಿ! ನಿಮಗೆ ಯೋಚಿಸಬಾರದೇ.?

ಅಲ್ಲಾಹುﷻ ಹೇಳುತ್ತಾನೆ.
ಓ ಸತ್ಯವಿಶ್ವಾಸಿಗಳೇ ನೀವು ಪಾಲಿಸದೇ ಇರುವುದನ್ನು ನೀವ್ಯಾಕೆ ಉಪದೇಶ ನೀಡುತ್ತೀರಾ.?
ನೀವು ಸ್ವತ ಪಾಲಿಸದೆ ಉಪದೇಶಿಸುವುದು ಅಲ್ಲಾಹನﷻ ಬಳಿ ಕಠಿಣ ಕ್ರೋಧವನ್ನುಂಟು ಮಾಡುತ್ತದೆ.

ಶುಐಬ್ ನಬಿ(ಅ) ಹೇಳಿದ ಮಾತನ್ನು ಅಲ್ಲಾಹನುﷻ ಉದ್ಧರಿಸುತ್ತಾನೆ.
   ನಿಮಗೆ ನಾನು ಏನನ್ನು ವಿರೋಧಿಸುತ್ತಿರುವೆನೋ ಅದನ್ನು ನಾನು ಸ್ವತಃ ಮಾಡಲು ಇಚ್ಚಿಸಲಾರೆ.(11-88)

ಪ್ರವಾದಿ ನಬಿ ಮುಹಮ್ಮದ್ ಮುಸ್ತಫಾﷺರವರು ಹೇಳಿದರು. ಪುನರುತ್ಥಾನ ದಿನದಂದು ಒಬ್ಬನನ್ನು ಹಾಜರುಪಡಿಸಿ ನರಕಕ್ಕೆ ಎಸೆಯಲಾಗುತ್ತದೆ.ಆಗ ಅವನ ಹೊಟ್ಟೆಯೊಳಗಿನಿಂದ ಕರುಳು ಬಳ್ಳಿಯ ಮಾಲೆ ಹೊರಬಂದು ನೇತಾಡುವುದು.ಒರಳು ಕಲ್ಲನ್ನು ಎಳೆಯುತ್ತಾ ಕತ್ತೆ ಸುತ್ತುವರಿಯುವಂತೆ ಅವನು ನರಕದಲ್ಲಿ ಸುತ್ತುವರಿಯುವನು. ಆಗ ಉಳಿದವರು ಅವನಲ್ಲಿ  ನಿನಗೇನಾಯಿತು.? ನೀನು ನಮಗೆ ಒಳಿತಿಗೆ ಕರೆ ಕೊಡುವವನು ಕೆಡುಕಿಗೆ ವಿರೋಧಿಸುವವನು ಆಗಿದ್ದೆಯಲ್ಲ.? ಎಂದು ಕೇಳುವರು ಆಗ ಅವನು ಹೇಳುವನು. ನಿಜ ನಾನು ಒಳಿತಿಗೆ ಕರೆಕೊಡುತ್ತಿದ್ದೆ.ಆದರೆ ಅದನ್ನು ನಾನು ಪಾಲಿಸುತ್ತಿರಲಿಲ್ಲ.ಕೆಡುಕಿಗೆ ವಿರೋಧಿಸುತ್ತಿದ್ದೆ ಆದರೆ ಆ ಕೆಡುಕನ್ನು ನಾನು ಮಾಡುತ್ತಲೂ ಇದ್ದೆ ಎಂದು ಹೇಳುವನು.

ಆದ್ದರಿಂದ ಇಂಷಾಅಲ್ಲಾಹ್ ಮೊದಲು ನಾವು ಎಲ್ಲಾ ಸತ್ಕರ್ಮಗಳನ್ನು ಮಾಡಿ, ಕೆಡುಕುಗಳನ್ನು ವಿರೋಧಿಸಿ ಸ್ವತಃ ನಾವು ಒಳ್ಳೆಯವರಾದ ಮೇಲೆ ಮತ್ತೊಬ್ಬರಿಗೆ ಉಪದೇಶ ಮಾಡುವ ಅಲ್ಲಾಹುﷻ ತೌಫೀಕ್ ನೀಡಲಿ.
      ಆಮೀನ್ ಯಾರಬ್ಬಲ್ ಆಲಮೀನ್.

(ಮುಗಿಯಿತು...)

ನಮ್ಮೆಲ್ಲರ ಹಬೀಬ್ ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಗಳ ಮೇಲೆ 10 ಸ್ವಲಾತ್ ಹೇಳುವ.
اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ.
✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...