*ಪವಿತ್ರ ಭೂಮಿ ಸಲಾಲಃಕ್ಕೆ ಒಂದು ಯಾತ್ರೆ*
*KCF ಒಮಾನ್ ಸಲಾಲ ಯಾತ್ರೆ- 2019*
🌹🌹🌹🌹
*ಭಾಗ-೨*
✍✍✍
MHB Ullal.
ಮಿರ್ಬಾತ್ ನಿಂದ ಸ್ವಲ್ಪ ಮುಂದೆ ಹೋದರೆ, ಒಂದು ಹಳ್ಳಿ ತರಹ ಪ್ರದೇಶ ಇದೆ. ಅಲ್ಲಿ ಸಮುದ್ರದ ಹತ್ತಿರವಾಗಿದೆ *ಆಶಿಖುರ್ರಸೂಲ್ ಆದ ಝುಹೈರ್ ರ.ಅ* ರವರ ಮಖ್ಬರ ಇರುವುದು.
ಇವರು ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ* ಸ್ವಹಾಬಗಳಲ್ಲಿ ಸೇರಿದವರು ಎಂಬ ಅಭಿಪ್ರಾಯ ಕೂಡಾ ಇದೆ.
ಇಲ್ಲಿಯ ವಿಶೇಷತೆ ಏನೆಂದರೆ, ಇವರ ಮಖ್ಬರ ಕಿಬ್ಲಗೆ ಮುಖ ಮಾಡಿ ಇರದೆ, ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ* ರೌಳಾಗಿ ತಿರುಗಿಯಾಗಿದೆ ಇರುವುದು.
ನನ್ನ ಮಯ್ಯತ್ ದಫನ್ ಮಾಡುವಾಗ ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ* ಕಡೆಗೆ ತಿರುಗಿಸಬೇಕು ಅಂತ ಅವರು ವಸೀಹತ್ ಮಾಡಿದ್ದರು.
ಆದರೆ ಜನರು ಕಿಬ್ಲಗೆ ಮುಖ ಮಾಡಿ ದಫನ್ ಮಾಡಿದರು. ಆದರೆ ಮಹಾನರ ಕರಾಮತ್, ಇಶ್ಕ್ ನಿಂದ ಕಬ್ರ್ ಪವಿತ್ರ ರೌಳಾಗೆ ತಿರುಗಿ ನಿಂತಿದೆ. ಸುಬ್ಹಾನಲ್ಲಾಹ್..
🤲🤲🤲
ಅಲ್ಲಾಹು ಆ ಮಹಾನರ ಬರಕತ್ ನಿಂದ ನಮ್ಮನ್ನೂ ಹಬೀಬ್ *ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ* ಆಶಿಕ್ ಗಳಲ್ಲಿ ಸೇರಿಸಲಿ. ಅವರ ಬರಕತ್ ನಿಂದ ಅಲ್ಲಾಹನು ಹಬೀಬ್ *ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ* ಮೇಲಿನ ಸ್ನೇಹ ನಮ್ಮ ಹೃದಯದಲ್ಲಿ ಜಾಸ್ತಿಗೊಳಿಸಲಿ. ಆಮೀನ್ ಯಾ ಅಲ್ಲಾಹ್
🤲🤲🤲
ಅಲ್ಲಿಂದ ಝಿಯಾರತ್ ನಡೆಸಿ ಹೋಗುವ ದಾರಿಯಲ್ಲಿ *ದರ್ಬಾತ್* ಎಂಬ ಸ್ಥಳದಲ್ಲಿ ಒಂದು ವಾದೀ(ವಾಟರ್ ಫಾಲ್ಸ್) ಇದೆ. ಅಲ್ಲಿ ನಿಲ್ಲಿಸಿ ವಾದಿಯಲ್ಲಿ ಹರಿಯುವ ನೀರಿನ ಸೌಂದರ್ಯವನ್ನು ವೀಕ್ಷಿಸಿದೆವು. ಕೆಲವರು ನೀರಿಗೆ ಇಳಿದು ಸೆಲ್ಫಿಗಳನ್ನು ತೆಗೆದರು.
ಅಲ್ಲಿಂದ ಯಾತ್ರೆ ಮುಂದುವರಿಸಿದ ನಮ್ಮ ಯಾತ್ರಾ ತಂಡವು *ಸಿ.ಎಂ. ವಲಿಯುಲ್ಲಾಹಿ ಮಡವೂರ್ (ಖ.ಸಿ)* ಜೀವಿತ ಕಾಲದಲ್ಲಿ (ಯಾವುದೇ ವಾಹನಗಳ ವ್ಯವಸ್ಥೆ ಇಲ್ಲದ ಕಾಲದಲ್ಲಿ) ಪ್ರತ್ಯೇಕವಾಗಿ ಝಿಯಾರತ್ ನಡೆಸಲು ನಿರ್ದೇಶಿಸಿದ ಒಂದು ಕೇಂದ್ರವಾಗಿದೆ - *ಖಳಾ*.
ಆ ಒಂದು ಪ್ರದೇಶಕ್ಕೆ ಬಸ್ಸ್ ನಲ್ಲಿ ಪ್ರಯಾಣಿಸುವಾಗಲೇ ನಮಗೆ ಒಂಥರಾ ಭಯ ಹುಟ್ಟಿಸುತ್ತದೆ. ಅಷ್ಟೊಂದು ವಿಚಿತ್ರವಾದ ಒಂದು ಪ್ರದೇಶ. ಆ ಪ್ರದೇಶವನ್ನು ಎಲ್ಲರೂ ಉಲ್ಲೇಖಿಸಿದ್ದು ಕೂಡಾ ಜಿನ್ನ್ ಗಳು ಹಾಜರಾಗುವ ಸ್ಥಳ ಎಂದು. ಹಾಗೆಯೇ ಆ ಪ್ರದೇಶಕ್ಕೆ ಯಾರೂ ಕೂಡಾ ಸಲೀಸಾಗಿ ಬೇಟಿಮಾಡಬಾರದು ಅನ್ನುವ ದೃಷ್ಟಿಯಲ್ಲಿ ಸುತ್ತಮುತ್ತಲು ಸಂಪೂರ್ಣವಾಗಿ ಜಬಲ್ ನಿಂದ ಆವರಿಸಿದ್ದು, ಜಿನ್ನ್ ಗಳು ಜಾಸ್ತಿಯಾಗಿ ಬಂದು ಹೋಗುತ್ತಿರುವ ಒಂದು ಶಾಂತವಾದ ಪ್ರದೇಶವಾಗಿದೆ.
ಇಲ್ಲಿ ಇರುವುದು ಎಲ್ಲವೂ ವಲಿಯ್ಯ್ ಗಳ ಮಖ್ಬರಗಳಾಗಿವೆ. ಅಲ್ಲಿಯ ಮತ್ತೊಂದು ವಿಶೇಷವೆಂದರೆ ಅದೊಂದು ದೊಡ್ಡದಾದ ವಾದಿ ಪ್ರದೇಶವಾಗಿದೆ. ಆದರೆ ಇದುವರೆಗೂ ಅಲ್ಲಿರುವ ಯಾವುದೇ ಮಖ್ಬರಗಳಿಗೆ ಯಾವುದೇ ರೀತಿಯ ಅಡ್ಡಿಗಳು ಸಂಭವಿಸಿಲ್ಲ. ಸಾಧಾರಣವಾಗಿ ಸಣ್ಣ ಒಂದು ವಾದಿ ಬಂದರೆ ದೊಡ್ಡ ಗಾತ್ರದ ವಸ್ತುಗಳು, ವಾಹನಗಳು ಕೊಚ್ಚಿಹೋಗುವುದು ಸಹಜ ಆದರೆ ಈ ವಾದಿಯಲ್ಲಿ ಇರುವ ಮಖ್ಬರಗಳು ಇದುವರೆಗೂ ನೀರಿನಲ್ಲಿ ಕೊಚ್ಚಿ ಹೋಗದೇ ಹಾಗೆಯೇ ಉಳಿದಿದೆ ಅನ್ನುವುದು ಕೂಡಾ ಅವುಲಿಯಾಗಳ ಕರಾಮತ್ ನ ನಿದರ್ಶನಕ್ಕೆ ಒಂದು ಸಾಕ್ಷಿಯಾಗಿ ಉಳಿದಿದೆ.
ಅಲ್ಲಿ ನಾವು ಝಿಯಾರತ್ ನಡೆಸಿದೆವು. ಅಲ್ಲಿಯೇ ಸ್ವಲ್ಪ ಕೆಳಗಡೆ *ಸ್ವಾಹಿಬುಲ್ ಖಳಾ* ಅಂದರೆ ಅಲ್ಲಿಯ ವಲಿಯ್ಯ್ ಗಳ ನೇತಾರರ ಕಬ್ರ್ ಇದೆ. ಒಂದು ದೊಡ್ಡ ಉದ್ದದ ಮಿಝಾನ್ ಕಲ್ಲು ಅಲ್ಲಿ ಕಾಣಸಿಗುತ್ತದೆ. ಅಲ್ಲಿ ಕೂಡಾ ಝಿಯಾರತ್ ನಡೆಸಿದೆವು.
ನಂತರ ಅಲ್ಲಿಂದ ರೂಮ್ ಕಡೆ ಅಂದರೆ ಸಲಾಲ ಸಿಟಿಗೆ ಹೊರಟೆವು. ರೂಮಿಗೆ ಹೋಗುವ ಮೊದಲು ಅಲ್ಲಿಯೇ ಸಿಟಿಯ ಮಧ್ಯದಲ್ಲಿ ಸಲಾಲದ *ದೋಫರ್ ನಲ್ಲಿರುವ* ಸುಬ್ಹಾನಲ್ಲಾಹ್ ಅತೀ ಉದ್ದದ ಮಖ್ಬರ *ಇಮ್ರಾನ್ ನಬಿ(ಅ.ಸ)*
ಮಕ್ಬರ ಝಿಯಾರತ್ ನೊಂದಿಗೆ ಆ ದಿನದ ಯಾತ್ರೆ ಮುಗಿಸಿ ವಿಶ್ರಾಂತಿಗೆಂದು ರೂಮಿಗೆ ಹೋದೆವು.
ಮರುದಿನ ದಿನಾಂಕ 07/06/2019 ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ನಮ್ಮ ಯಾತ್ರೆಯು ಜಬಲ್ ಅಯ್ಯೂಬ್ ನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ *ಅಯ್ಯೂಬ್ ನಬಿ ಅಲೈಹಿಸ್ಸಲಾಮ್* ರವರ ಮಕ್ಬರ ಝಿಯಾರತ್ ಮಾಡಲು ಹೊರಟೆವು. ಎತ್ತರದ ಜಬಲ್ ನ ಮೇಲೆಯಾಗಿತ್ತು ಅವರ ಮಖ್ಬರ ಇರುವುದು. ಜಬಲ್ ನ ಮೇಲೆ ತುಂಬಾ ಮಂಜು ಆವರಿಸಿತ್ತು. ಈ ಮೊದಲು ಇಲ್ಲಿ ಬಂದವರು ಹೇಳಿದರು, ಖಾರಿಫ್ ಸಮಯದಲ್ಲಿ ಇಲ್ಲಿ ಏನು ಗೋಚರಿಸಲ್ಲ ಅಂತ. *ಇಲ್ಲಿ ಅವರ ಪವಿತ್ರವಾದ ಪಾದದ ಗುರುತು ಕೂಡಾ ಇದೆ*
*ಅಯ್ಯೂಬ್ ನೆಬಿ ಅಲೈಹಿಸ್ಸಲಾಮ್* ರವರ ರೋಗ ಕಠಿಣವಾಗಿ ಸೊತ್ತುಗಳು ಇಲ್ಲದಂತಾಯಿತು. ಊರಿನವರು, ಅವರ ಕುಟುಂಬದವರು ಎಲ್ಲರೂ ದೂರ ಮಾಡಿದರು.
ಆಗ ಅವರ ಹೆಂಡತಿಯರಲ್ಲಿ ಒಬ್ಬರಾದ *ರಹ್ಮತ್ ಬೀವಿ* ಯೊಂದಿಗೆ ಅವರು ಒಂದು ಪರ್ವತದ ಮೇಲೆ ಹೋಗಿ ನೆಲೆಸಿದರು. ಸಲಾಲದ ಇತಿನ್ ನಲ್ಲಿರುವ *ಜಬಲ್ ಅಯ್ಯೂಬ್*. ಇಲ್ಲಿಯಾಗಿದೆ ಅವರ ಪವಿತ್ರ ಮಖ್ಬರ ಇರುವುದು.
ಅವರ ಹೆಂಡತಿ *ರಹ್ಮತ್ ಬೀವಿ* ಆಹಾರಕ್ಕೆ, ಔಷದ ತೆಗೆಯಲು ಮನೆ ಕೆಲಸಕ್ಕೆ ಹೋಗುವ ಪರಿಸ್ಥಿತಿ ಕೂಡಾ ಬಂದಿತ್ತು ಅಂತ ಕೆಲವು ಉಲಮಾಗಳು ಉಲ್ಲೇಖಿಸಿದ್ದಾರೆ.
ಕೊನೆಗೆ ರೋಗ ಮಿತಿಮೀರಿ ಅವರಿಗೆ ಚಿಕಿತ್ಸೆ ಮಾಡಲು ಕೂಡಾ ಬಹಳ ಕಷ್ಟವಾಯಿತು. ಆಗ *ರಹ್ಮತ್ ಬೀವಿ* ಯವರು ತಮ್ಮ ಕೂದಲನ್ನು ಕತ್ತರಿಸಿ ಮಾರಿ ಅದರಲ್ಲಿ ಸಿಕ್ಕಿದ ಹಣದಿಂದ *ಅಯ್ಯೂಬ್ ನೆಬಿ* ಯವರಿಗೆ ಔಷಧ ತಂದರು ಅಂತ ಚರಿತ್ರೆ.
ರೋಗ ಎಷ್ಟು ಕಠಿಣ ವಾದರೂ ಕೂಡಾ ಅಯ್ಯೂಬ್ ನೆಬಿ ಯವರು ಅಲ್ಲಾಹನಿಗೆ ಸ್ವಬೂರ್ ಮಾಡುತ್ತಾ ಇದ್ದರು. ದಿಕ್ರ್ ಹೇಳುತ್ತಿದ್ದರು.
ಕೊನೆಗೆ ರೋಗದ ಕಠಿಣತೆ ತಮ್ಮ ನಾಳೆಗೆಯ ಮೇಲೆ ಪ್ರಭಾವ ಬೀರಲು ಆರಂಭಿಸಿದಾಗ ಎಲ್ಲಿ ಅಲ್ಲಾಹನ ಸ್ಮರಣೆ ಮಾಡಲು ಆಗಲ್ಲಾ ಅಂತ ಹೆದರಿ, ಕೊನೆಗೆ ಅವರು ಅಲ್ಲಾಹನ ಬಳಿ ಪ್ರಾರ್ಥಿಸಿದರು.
ಆಗ ಅಲ್ಲಾಹನ ನಿರ್ದೇಶನದ ಪ್ರಕಾರ ಅವರು ಅಲ್ಲೇ ಕೆಳಗಡೆ ಇರುವ ಒಂದು ಬಂಡೆಕಲ್ಲಿನ ಹತ್ತಿರ ಹೋಗಿ ಕುಳಿತು ತಮ್ಮ ಕಾಲುಗಳಿಂದ ನೆಲಕ್ಕೆ ಹೊಡೆದರು. ಆಗ ಅವರ ಪಾದದ ಅಡಿಯಲ್ಲಿ ನೀರು ಚಿಮ್ಮಿತು. ಆ ನೀರಿನಿಂದ ಅವರು ಸ್ನಾನ ಮಾಡಿದರು. ಆಗ ಅವರ ಶರೀರದಲ್ಲಿದ್ದ ರೋಗ ಮಾಯವಾಯಿತು. ಸುಬ್ಹಾನಲ್ಲಾಹ್....
ಈಗಲೂ ಆ ಬಂಡೆಯ ಅಡಿ ಭಾಗದಲ್ಲಿ ನೀರು ಬರುತ್ತಿದೆ. ಅಷೇ ಅಲ್ಲ, ಅಲ್ಲಿ ಒಂದು ಕೊಳ ಕೂಡಾ ಇದೆ. ಜನರು ತಮ್ಮ ರೋಗಗಳು ಶಿಫ ಆಗಲು ನಿಯ್ಯತ್ ಮಾಡಿ ಅಲ್ಲಿ ಸ್ನಾನ ಮಾಡುತ್ತಾರೆ.
ನನಗೆ ಅರ್ನಿಯಾದ ಆಪರೇಷನ್ ಆಗಿ ೩ ತಿಂಗಳು ಜಾಸ್ತಿಯಾಯಿತು. ಆದರೂ ನೋವು ಹೋಗಿರಲಿಲ್ಲ. ಜಾಸ್ತಿ ನಡೆಯಲು, ಜರ್ನಿ ಮಾಡಲು ತೊಂದರೆ ಆಗುತ್ತಿತ್ತು. ಅಷ್ಟೇ ಅಲ್ಲ ಸಲಾಲ ಯಾತ್ರೆ ಹೋಗುವಾಗ ಏನಾಗಬಹುದೋ ಎಂದು ಹೆದರಿಕೆ ಕೂಡಾ ಆಗಿತ್ತು. ಅಲ್ಲಿ ತಲುಪುವಾಗ, ಜಬಲ್ ಅಯ್ಯೂಬ್ ನ ಕೆಳಗಡೆ ಆ ಕೊಳದ ಬಳಿ ಹೋಗುವಾಗ ಅಶ್ರಫ್ ರವರೊಂದಿಗೆ ಇದೇ ಹೇಳುತ್ತಿದೆ. ತುಂಬಾ ನೋವಿದೆ. ನಡೆಯಲು ಆಗುತ್ತಿಲ್ಲ. ಆ ಬಸ್ಸಿನವನು ಯಾಕೆ ಬಸ್ಸ್ ಮೇಲೆ ನಿಲ್ಲಿಸಿದ್ದು ಕೆಳಗಡೆ ಬರಬಹುದಿತ್ತಲ್ವಾ ಅಂತ ಸ್ವಲ್ಪ ಕಿರಿಕಿರಿ ಮಾಡಿದೆ.ಆದರೂ ಮನಸ್ಸಿನಲ್ಲಿ ಅಲ್ಲಿ ಹೋಗಿ ಆ ನೀರಿನಿಂದ ಉಳೂ ಮಾಡಬೇಕು ಅದೇ ತರಹ ಶರೀರವಿಡೀ ಹಾಗೂ ಈ ಗಾಯವನ್ನು ಆ ಪವಿತ್ರ ನೀರಿನಿಂದ ತೊಳೆಯಬೇಕು ಅಂತ ನಿಶ್ಚಯ ಮಾಡಿದ್ದೆ. ಅದೇ ತರಹ ಮಾಡಿದೆ.
ಅಲ್ ಹಂದುಲಿಲ್ಲಾಹ್ ಯಾತ್ರೆ ಮುಗಿದು ರೂಮ್ ತಲುಪುವಷ್ಟರಲ್ಲಿ ಆ ನೋವೇ ಮಾಯವಾಗಿದೆ. ಈಗ ಆ ನೋವೇ ಇಲ್ಲ.
🤲🤲🤲
ಅಲ್ಲಾಹು ಅಯ್ಯೂಬ್ ನೆಬಿ ಅಲೈಹಿಸ್ಸಲಾಮ್ ರವರ ಬರಕತ್ ನಿಂದ ನಮ್ಮ, ನಮ್ಮ ಕುಟುಂಬದವರ ಎಲ್ಲಾ ರೋಗಗಳನ್ನು ಶಿಫ ನೀಡಲಿ. ಎಲ್ಲಾ ಮಾರಕವಾದ ರೋಗಗಳಿಂದ ನಮ್ಮನ್ನು ಕಾಪಾಡಲಿ. ಆಮೀನ್ ಯಾ ಅಲ್ಲಾಹ್.
🤲🤲🤲
*ಅಯ್ಯೂಬ್ ನಬಿ(ಅ.ಸ)* ಸ್ನಾನ ಮಾಡಿದ ಆ ಪವಿತ್ರ ನೀರಿನಿಂದ ಎಲ್ಲರೂ ಶರೀರ ತೊಳೆದು, ವುಲೂಹ್ ಮಾಡಿ, ಆ ಕೊಳ ವೀಕ್ಷಿಸಿ ಅಲ್ಲಿಂದ ಬರಕತ್ತ್'ಗಾಗಿ ಕೆಲವರು ನೀರು ಸಂಗ್ರಹಿಸಿ ತಂದರು.































Comments