Skip to main content

ಪವಿತ್ರ ಭೂಮಿ ಸಲಾಲಃಕ್ಕೆ ಒಂದು ಯಾತ್ರೆ


ಪವಿತ್ರ ಭೂಮಿ ಸಲಾಲಃಕ್ಕೆ ಒಂದು ಯಾತ್ರೆ
KCF ಒಮಾನ್ ಸಲಾಲ ಯಾತ್ರೆ- 2019
ಭಾಗ ೪
✍ MHB Ullal.

 ಉವೈಸುಲ್ ಕರ್ನೈನ್(ರ‌.ಅ) ರ ಝಿಯಾರತ್ ನಂತರ ನಮ್ಮೆಲ್ಲರ ಮನಸ್ಸು ಮದೀನಾದ ಕಡೆಗೆ ಹೋಗಿತ್ತು. ನಮ್ಮ ಯಾತ್ರೆ ಮುಂದುವರೆಯಿತು. ಬಸ್ಸ್ ನಲ್ಲಿ ಪ್ತವಾದಿ ಪ್ರ ಕೀರ್ತನೆಗಳನ್ನು ಹಾಡಿದರು. 

ನಂತರ ನಾವು ತಲುಪಿದ್ದು ಅರಬೀ ಸಮುದ್ರದ ತಟದಲ್ಲಿರುವ ಪ್ರಕ್ರತಿ ರಮಣೀಯ *ಮಗ್ಸಲ್ ಬೀಚ್* ಗೆ. ಅಲ್ಲಿಯೇ ಮಧ್ಯಾಹ್ನದ ಊಟ ಕೂಡಾ ಮಾಡಿದೆವು. ಸುಂದರವಾದ ಒಂದು ತಾಣವಾದ್ದರಿಂದ ಎಲ್ಕರೂ ಅಲ್ಲಿ ಫೋಟೋಗಳನ್ನು ಕ್ಲಿಕ್ಕಿಸುತ್ತಾ ಸ್ವಲ್ಪ ಅಲ್ಲಿಯೇ ವಿರಾಮ ತೆಗೆದುಕೊಂಡೆವು. 

ನಂತರ ಅಲ್ಲಿಂದ ನಮ್ಮ ಯಾತ್ರೆ ಹೋದದ್ದು ನಾವು ದಿನಾಲೂ ನಮ್ಮ ಕಷ್ಟ ಪರಿಹಾರಕ್ಕಾಗಿ ಹೋದುವ  *ನಾರಿಯತ್‌ ಸ್ವಲಾತ್‌ ರಚಿಸಿದ  ಸಾಲಿಮ್ ಬಿನ್ ಅರಬಿಯ್ಯ(ರ.ಅ)* ಎಂಬ ಔಲಿಯಾರ ಮಕ್ಬರ ಇರುವಲ್ಲಿಗೆ. ಆದರೆ ಅಲ್ಲಿ ಗೇಟ್ ಕಾಮಗಾರಿ ನಡೆಯುತ್ತಿದ್ದ ಕಾರಣ ಗೇಟ್ ಬಂದ್ ಆಗಿತ್ತು. ನಾವು ಹೊರಗಿನಿಂದಲೇ ಝಿಯಾರತ್ ಮಾಡಿ ಬಂದೆವು. 

ಅಲ್ಲಿಂದ ಮುಂದೆ *ಸ್ವಾಲಿಹ್ ನಬಿಯವರ ಒಂಟೆಯು* ಬಂಡೆ ಕಲ್ಲಿನಿಂದ ಹೊರಬಂದ ಸ್ಥಳವನ್ನು ಹೊರಗಡೆಯಿಂದ ವೀಕ್ಷಿಸಿ,  ನಂತರ ಕೇರಳದ ರಾಜ ಭಾರತದ ಪ್ರಥಮ ಸ್ವಹಾಬಿ *ಅಬೂಬಕ್ಕರ್ ತಾಜುದ್ದೀನ್(ರ ) (ಚೇರಮಾನ್ ಪೆರುಮಾಳ್)* ಮಕ್ಬರ ಝಿಯಾರತ್ ನಡೆಸಲು ಹೋದೆವು‌. 

ಅವರ ಬಗ್ಗೆ ನಾನು ಹೆಚ್ಚು ಬರೆಯುವ ಆವಶ್ಯಕತೆ ಇಲ್ಲ. ಎಲ್ಲರಿಗೂ ತಿಳಿದಿದೆ. ನಮ್ಮ ಊರಿನಲ್ಲಿ ದೀನ್ ಪ್ರಚಾರಕ್ಕೆ ಬಂದ *ಮಾಲೀಕುದ್ದೀನಾರ್(ರ.ಅ)* ರವರ ನೇತೃತ್ವದ ಸ್ವಹಾಬಿಗಳಿಗೆ ಪ್ರಥಮವಾಗಿ ಸ್ವೀಕಾರ ನೀಡಿದವರು. ನಮ್ಮ ದೇಶದ ಮೊತ್ತಮೊದಲ ಮಸೀದಿ ಇರುವುದು ಅವರ ಹೆಸರಲ್ಲೇ ತಾನೇ‌‌.. 

ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ﷺ* ರವರು ಚಂದ್ರನನ್ನು ಭಾಗ ಮಾಡಿದಾಗ ಅದನ್ನು ಕಂಡವರಲ್ಲವೇ.. 

ಅವರು ಮದೀನಾಕ್ಕೆ ಹೋಗಿ ಅಲ್ಲಾಹನ ಹಬೀಬ್ *ಮುಹಮ್ಮದ್ ಮುಸ್ತಫಾ ﷺ* ರನ್ನು ನೇರವಾಗಿ ಕಂಡು ಇಸ್ಲಾಂ ಸ್ವೀಕರಿಸಿ ಊರಿಗೆ ಮರಳುವ ಸಮಯದಲ್ಲಿ ಸಲಾಲ ತಲುಪುವಾಗ ರೋಗ ಬಂದು ಅಲ್ಲಿಯೇ ಬಾಕಿಯಾಗಿದ್ದರು. ಅಲ್ಲಿಯೇ ಅವರು ಮರಣ ಹೊಂದಿದರು.

*ಅಲ್ಲಾಹು ಅವರ ಬರಕತ್ ನಿಂದ ನಮ್ಮ ಈಮಾನ್ ಸಲಾಮತ್ ಮಾಡಲಿ.‌ಆಮೀನ್*
🤲🤲🤲 


ಮಾಶಾ ಅಲ್ಲಾಹ್ ಅಲ್ಲಿ ಹೋಗುವ ದಾರಿಯಲ್ಲಿ ನಮ್ಮ ಊರಿನ ಅನುಭವ. ತೆಂಗಿನ ಮರಗಳು, ಬಾಳೆ ಮರಗಳು, ತೋಟಗಳು‌‌. ಸುತ್ತಮುತ್ತಲೂ ಹಸಿರಿನಿಂದ ಕಂಗೊಳಿಸುತ್ತಿತ್ತು.  ನಮ್ಮ ಊರಿಗೆ ಬಂದಿದ್ದೇವೆ ಅಂತ ಎನಿಸುತ್ತದೆ. 


 ಅಲ್ಲಿಂದ ನೇರವಾಗಿ ಮಾರ್ಕೆಟ್ ಗೆ ತೆರಳಿ ಸಿಯಾಳ, ಕಬ್ಬು, ಬಾಳೆಹಣ್ಣುಗಳನ್ನು ಖರೀದಿಸಿ ತಿಂದೆವು. ಅದು ಒಂಥರಾ ಊರಿನ ನೆನಪನ್ನು ಮರುಕಳಿಸುವ ಸಂದರ್ಭವಾಗಿತ್ತು.
😌😌😌😌


 ಕೊನೆಯದಾಗಿ ನಾವು ಹೋದದ್ದು *ಹೂದ್ ನೆಬಿ (ಅ.ಸ)* ಯವರ  ಮಕ್ಬರ ಝಿಯಾರತ್ ಮಾಡಲು. ಅದೊಂದು ತರಹ ಹಳ್ಳಿ ಪ್ರದೇಶ. ಈಗಲೂ ಅಲ್ಲಿಗೆ ಕರೆಂಟ್ ತಲುಪಿಲ್ಲ‌. ಶಾಂತವಾದ ಸ್ಥಳ. ನಾವು ತಲುಪುವಾಗ ರಾತ್ರಿಯಾಗಿತ್ತು. ಅಲ್ಲಿ ಝಿಯಾರತ್ ನಡೆಸಿ  ನಮ್ಮ ಯಾತ್ರೆಯನ್ನು ಮಸ್ಕತ್ ಕಡೆಗೆ ತಿರುಗಿಸಿದೆವು.
ಅಲ್ ಹಂದುಲಿಲ್ಲಾಹ್....


   ಯಾತ್ರೆಯುದ್ದಕ್ಕೂ ದೀನೀ ತರಗತಿಗಳು, ದ್ಸಿಕ್ರ್ ಮಜ್ಲಿಸ್, ಮೌಲೂದ್ ಪಾರಾಯಣ, ಸ್ವಲಾತ್, ಮನಸ್ಸನ್ನು ಮದೀನಕ್ಕೆ ಕೊಂಡೊಯ್ಯುವ ಸುಮಧುರ ಶೈಲಿಯ ಮಧ್ಃ ಹಾಡು ನಡೆಯಿತು.

 ವಿದ್ವಾಂಸರಾದ  *ಉಬೈದ್ ಸಖಾಫಿ ಉಸ್ತಾದ್, ಕಲಂದರ್ ಬಾವ ಉಸ್ತಾದ್, ಸಲೀಮ್ ಮಿಸ್ಬಾಯಿ ಉಸ್ತಾದ್, ನಿಝಾರ್ ಝುಹ್ರಿ ಉಸ್ತಾದ್, ಉಸ್ಮಾನ್ ಸಖಾಫಿ ಬೊಳ್ಮಾರ್* ಉಸ್ತಾದ್ ಇವರುಗಳು ಭಕ್ತಿ ನಿರ್ಭರವಾದ ಪ್ರಾರ್ಥನೆ, ದೀನೀ ತರಗತಿಗಳು ಮತ್ತು  ದ್ಸಿಕ್ರ್, ಸ್ವಲಾತ್ ಮಜ್ಲಿಸ್'ಗಳಿಗೆ ನೇತೃತ್ವ ನೀಡಿದರು. 

ಕೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ *ಅಯ್ಯೂಬ್ ಕೋಡಿ* ಹಾಗೂ ಸಾಂತ್ವನ ವಿಭಾಗದ ಅಧ್ಯಕ್ಷರಾದ ಜನಾಬ್ *ಮುಹಮ್ಮದ್ ಇಬ್ರಾಹಿಂ ಹಾಜಿ ಆತ್ರಾಡಿ* ಸೂಕ್ತ ಸಲಹೆ, ಸಹಕಾರ ಉಪದೇಶಗಳನ್ನು ಯಾತ್ರೆಯುದ್ದಕ್ಕೂ ನೀಡಿದರು.

 ಯಾತ್ರೆಯಲ್ಲಿ ಯಾವುದೇ ರೀತಿಯ ಸಣ್ಣ ಮಟ್ಟಿನ ತೊಂದರೆಗಳು ಎದುರಾಗದ ಹಾಗೇ ಎಲ್ಲವನ್ನೂ ನಮ್ಮ ನಾಯಕರು ಸೂಕ್ತ ರೀತಿಯಲ್ಲಿ ನಿಭಾಯಿಸಿದರು. 08/06/19 ರಂದು ನಮ್ಮ ಯಾತ್ರೆಯು ಮಸ್ಕತ್ನಲ್ಲಿ ಕೊನೆಗೂಂಡಿತು.

 ಸಲಾಲ ಯಾತ್ರೆಯಿಂದ ಮನಸ್ಸು ಸಂತುಷ್ಠಗೊಂಡಿದ್ದರೂ,   ಸಹಯಾತ್ರಿಗಳಿಗೆ ವಿದಾಯ ಹೇಳುವಾಗ ಮನಸ್ಸು ತುಂಬಾ ಭಾರವಾಗಿತ್ತು. ಮೊದಲ ಬಾರಿ ಕುಟುಂಬವನ್ನು, ಸ್ನೇಹಿತರನ್ನು ಬಿಟ್ಟು ಗಲ್ಫ್ ಬಂದ ದಿನ ಉಂಟಾದ ಅದೇ ಅನುಭವ ಮರುಕಳಿಸಿತು. 


ಅಲ್ಲಾಹು ನಮ್ಮ ಯಾತ್ರೆಯನ್ನು ಸ್ವೀಕರಿಸಲಿ. ಎಲ್ಲಾ ಪ್ರವಾದಿಗಳ  ಸ್ವಹಾಬಗಳ ಹಾಗೂ ಮಹಾತ್ಮರುಗಳ ಬರಕತ್ ನಿಂದ ನಮಗೆ *ಪುಣ್ಯ ಮದೀನಾ* ಕಾಣಲು ಅಲ್ಲಾಹು ನಮಗೆ ತೌಫೀಕ್ ನೀಡಲಿ.  ಅವರೊಂದಿಗೆ ನಮ್ಮನ್ನೂ, ನಮ್ಮ ಕುಟುಂಬದವರನ್ನೂ ಸ್ವರ್ಗದಲ್ಲಿ ಒಟ್ಟುಗೂಡಿಸಲಿ. ಆಮೀನ್ ಯಾ ರಬ್ಬಲ್ ಆಲಮೀನ್.
🤲🤲🤲


*💚 اَلصَّلَاةُ وَالسَّلَامُ عَلَيْكَ يَا سَيَّدِي يَارَسُولَ اللّٰه ﷺ*


*ನಾನು ಬರೆದದ್ದನ್ನು ಅಲ್ಲಾಹು ಸ್ವೀಕರಿಸಲಿ.ಆಮೀನ್*


ಕೊನೆಯದಾಗಿ ಈ ಮೇಲೆ ಹೇಳಿದ ಎಲ್ಲರ ಮೇಲೂ ಒಂದು ಫಾತಿಹಾ ಓದಿ ನನಗೂ, ನನ್ನ ಕುಟುಂಬದವರಿಗೂ ಪ್ರತ್ಯೇಕ ದುವಾ ಮಾಡಿ. ಜಝಾಕಲ್ಲಾಹು ಖೈರನ್.


















Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...