Skip to main content

ಪರಲೋಕ ವಿಜಯದ ಪಯಣಕ್ಕಾಗಿ ನಾವೆಲ್ಲರೂ ಹೋಗಬೇಡವೇ

ಪರಲೋಕ ವಿಜಯದ ಪಯಣಕ್ಕಾಗಿ ನಾವೆಲ್ಲರೂ ಹೋಗಬೇಡವೇ?
✍🏻 ಎಂ.ಫಯಾಝ್
         ಬೀಸಿರೋಡು(ಪಿಸಿ)

ಮನುಷ್ಯನಿಗೆ ಅಲ್ಲಾಹುﷻ ಒಂದು ದೊಡ್ಡ ಅನುಗ್ರಹ ಕೊಟ್ಟಿರುತ್ತಾನೆ.ಆ ಅನುಗ್ರಹವೇ ಬುದ್ಧಿ.
ಬುದ್ಧಿ ಇಲ್ಲದ ಮನುಷ್ಯ ಮೃಗಕ್ಕಿಂತ ಕಡೆಯಾಗುತ್ತಾನೆ ಆದರೆ ಅಲ್ಲಾಹುﷻ ನಮ್ಮೆಲ್ಲರನ್ನೂ ಬುದ್ಧಿ ಕೊಟ್ಟು ಅನುಗ್ರಹಿಸಿದ್ದಾನೆ ಅಲ್ ಹಮ್ದುಲಿಲ್ಲಾಹ್

ಅಲ್ಲಾಹುﷻ ಪರಿಶುದ್ಧ ಕುರ್ ಆನಿನಲ್ಲಿ ಒಂದೆಡೆ ಈ ರೀತಿ ಹೇಳಿದ್ದಾನೆ.
ಮನುಷ್ಯ ವರ್ಗವನ್ನು ಮತ್ತು ಜಿನ್ನ್ ವರ್ಗವನ್ನು ನಾನು ಸೃಷ್ಟಿಸಿದ್ದು ನನಗೆ ಆರಾಧಿಸಲಿಕ್ಕೆ ಆಗಿರುತ್ತದೆ ಎಂದು.
ಇದರಿಂದ ನಾವು ಚಿಂತಿಸಬೇಕಾಗಿರುವುದು   ಅಲ್ಲಾಹುವಿಗೆ ﷻ ಇಬಾದತ್ ಮಾಡಲಿಕ್ಕೋಸ್ಕರವೇ ನಮ್ಮನ್ನು ಸೃಷ್ಟಿ ಮಾಡಿದ್ದು ಎಂದು.

ಅದು ಬಿಟ್ಟು ಸಿನಿಮಾ,ಸೀರಿಯಲ್ , ಕ್ರಿಕೆಟರ್ಸ್  ಹಾಗೆ ಹೇರ್ ಸ್ಟೈಲ್  ಹಾಗೂ ಅವರ ಹಾಗೆ ಇತರ ಚಟುವಟಿಗೆಗಳನ್ನು ಅನುಸರಣೆ ಮಾಡಲು ಅಲ್ಲ.

ನಾವು ಅನುಸರಣೆ ಮಾಡಬೇಕಾಗಿರುವುದು ಅಲ್ಲಾಹನ ರಸೂಲ್ ನೆಬಿ ಮುಹಮ್ಮದ್  ಮುಸ್ತಫಾ ﷺ ರವರನ್ನಾಗಿದೆ. ಆದರೆ ಆಧುನಿಕವಾದ ಈ ಜಗತ್ತಿನಲ್ಲಿ ಇವೆಲ್ಲವೂ ತಿರುಗು ಮುರುಗಾಗಿ  ಮಾರ್ಪಟ್ಟಿದೆ.

ಭೂಲೋಕವು ನಮಗೆ ಶಾಶ್ವತವಲ್ಲ. ನಮಗೆ ಶಾಶ್ವತವಾದ ಲೋಕವೊಂದಿದೆ ಅದು ಪರಲೋಕವಾಗಿರುತ್ತದೆ.

ಪರಲೋಕದಲ್ಲಿ ನಾವು ವಿಜಯಗಳಿಸಬೇಕಾದರೆ ಭೂಲೋಕದಲ್ಲಿ ಅಲ್ಲಾಹನಿಗೆﷻ ತಕ್ವ ಉಳ್ಳವರಾಗಬೇಕು .ಅವನ ಆಜ್ಞೆ ಪಾಲಿಸುತ್ತಾ ನಮಾಝ್, ಉಪವಾಸ,ಝಕಾತ್,ಹಜ್ಜ್ ನಿರ್ವಹಿಸುತ್ತಾ ಅಲ್ಲಾಹನಲ್ಲೂ   ಅವನ ಮಲಕುಗಳಲ್ಲಿ,ಅಂಬಿಯಾಮುರ್ಸಲುಗಳಲ್ಲೂ,ಕುರ್ ಆನ್ ಗಳಲ್ಲೂ  ಮತ್ತು ಅಂತಿಮ ದಿನದಲ್ಲಿ ವಿಶ್ವಾಸ ಇಟ್ಟುಕೊಂಡು ಒಳ್ಳೆಯ ವ್ಯಕ್ತಿತ್ವ ರೂಢಿಸಿಕೊಂಡು,ತಂದೆ ತಾಯಿಗೆ ಉತ್ತಮ ಮಕ್ಕಳಾಗಿ,ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಿ,ಅಹಂಕಾರ ಅಸೂಯೆ ಬಿಟ್ಟು,ಯಾರನ್ನೂ ತಾತ್ಸಾರ ಮಾಡದೆ ಕಡೆಗಣಿಸದೇ ಫಿತ್ನಾ, ಫಸಾದ್ ಮಾಡದೇ ಎಲ್ಲರಲ್ಲೊಬ್ಬರಾಗಿ ಉತ್ತಮ ಮಾನವನಾಗಿ ಬಾಳಬೇಕು.

ಈ ರೀತಿ ಜೀವಿಸಿದರೆ ಮಾತ್ರ ಪರಲೋಕದಲ್ಲಿ ವಿಜಯ ಗಳಿಸಲು ಸಾಧ್ಯ. ಈ ಲೋಕದಿಂದ ಪರಲೋಕಕ್ಕೆ ಯಾತ್ರೆ ಹೋಗಲಿಕ್ಕಿದೆ.ಟ್ರೈನ್ ವಿಮಾನಗಳಲ್ಲದೆ ಹಣಗಳಿಲ್ಲದೆ ಉಚಿತ ಯಾತ್ರೆ ಹೋಗಲಿಕ್ಕಿದೆ. ಉತ್ತಮ ಮನೋಭಾವದಿಂದ ಹೋಗುವ ಯಾತ್ರೆ ಅದು ಸ್ವರ್ಗಕ್ಕೆ ಹೋಗುವ ಯಾತ್ರೆಯಾಗಿರುತ್ತದೆ. ಇದಕ್ಕೆ ಒಳ್ಳೆಯ ಪ್ರವರ್ತ್ತಿಗಳು,ಅಲ್ಲಾಹನಿಗೆ ಶುಕ್ರ್ ಗಳು,ನಮಾಝ್, ಝಿಕ್ರ್ ಸ್ವಲಾತ್,ಹಾಗೂ ಮರಣದ ಚಿಂತೆ,ಪ್ರತಿದಿನವೂ ಅಲ್ಹಾಹನ ಸ್ಮರಣೆ  ಇರಬೇಕು.
ಅಲ್ಲಾಹು ತೌಫೀಕ್ ನೀಡಲಿ.
ಆಮೀನ್ ಯಾರಬ್ಬಲ್ ಆಲಮೀನ್...

(ಮುಗಿಯಿತು)

ನನಗೂ ಹಾಗೂ ನನ್ನ ಕುಟುಂಬದವರಿಗೂ,ಮಿತ್ರರಿಗೂ,ಬಂಧು ಬಳಗದವರಿಗೂ ಪ್ರತ್ಯೇಕವಾಗಿ ದುಆ ಮಾಡಬೇಕಾಗಿ ದುಆ ವಸೀಯ್ಯತ್ತಿನೊಂದಿಗೆ

✍🏻 ಎಂ.ಫಯಾಝ್
         ಬೀಸಿರೋಡು(ಪಿಸಿ)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...