Skip to main content

ಯಾತ್ರೆಯ ನಮಾಝ್

ಯಾತ್ರೆಯ ನಮಾಝ್
✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)

ಲುಹ್ರ್ ಮತ್ತು ಅಸ್ವರನ್ನೂ ಳುಹ್ರ್ನ ಸಮಯದಲ್ಲೂ ಮಗ್ರಿಬ್ ಮತ್ತು ಇಷಾಹ್ ನಮಾಝ್ಗಳನ್ನು ಮಗ್ ರಿಬ್ ನ ಸಮಯದಲ್ಲೂ ನಿರ್ವಹಿಸಬಹುದಾಗಿದೆ.
ಎರಡನೇ ನಮಾಝ್ ಒಂದನೇ ನಮಾಝ್ ವೇಳೆಯಲ್ಲಿ ನಿರ್ವಹಿಸುವ ಈ ವಿಧಾನಕ್ಕೆ ಜಂಉತ್ತಕ್ದೀಮ್ ಎಂದು ಹೆಸರು.

ಇದರ ನಿಬಂಧನೆಗಳು....
1. ಪ್ರಯಾಣದ ದೂರ ಕನಿಷ್ಠ 132 ಕಿ.ಮೀ ಇರಬೇಕು.
2. ಯಾತ್ರೆಗೆ ನಿರ್ದಿಷ್ಟ ಸ್ಥಳ (ಗುರಿ) ಇರಬೇಕು.
3. ವಾಸವಿರುವ ಊರಿನ ಗಡಿಯನ್ನು ದಾಟಿರಬೇಕು.
4. ಧರ್ಮ ಸಮ್ಮತ ಯಾತ್ರೆಯಾಗಿರಬೇಕು.
5. ಮೊದಲ ನಮಾಝನ್ನು ಮೊದಲೇ ನಿರ್ವಹಿಸಬೇಕು.
6. ಎರಡನೇಯ ನಮಾಝನ್ನು ಇದರೊಂದಿಗೆ ಜಂಉ ಮಾಡಿ ನಿರ್ವಹಿಸುವೆನು ಎಂದು ಒಂದನೇ ನಮಾಝ್ನ ತಕ್ಬೀರಿನಲ್ಲಿ ಅಥವಾ ನಮಾಝ್ ಮುಗಿಯುವ ಮುನ್ನ ಯಾವುದೇ ಸಂದರ್ಭದಲ್ಲೂ ನಿಯ್ಯತ್ತ್ ಮಾಡಬೇಕು.
7. ಒಂದನೇ ನಮಾಝ್  ಮುಗಿದ ತಕ್ಷಣ  ಎರಡನೇ ನಮಾಝನ್ನು ನಿರ್ವಹಿಸುವುದು. ಮೊದಲನೇ ನಮಾಝ್ ನಲ್ಲಿ ಬಾಂಗ್ ಇಕಾಮತ್, ಹಾಗೂ ಎರಡನೇಯದಕ್ಕೂ ಇಕಾಮತ್ ಸುನ್ನತ್ತಿದೆ.
8.ಎರಡನೇ ನಮಾಝ್ ಮುಗಿಯುವ ತನಕ ಯಾತ್ರೆಯಲ್ಲಿರುವುದು. (ಆದ್ದರಿಂದ ಎರಡನೇ ನಮಾಝ್ ಆರಂಭಿಸುವ ಮುನ್ನ ಪ್ರಯಾಣ ಮುಗಿದರೆ ಆ ನಮಾಝನ್ನು ಅದರ ಸಮಯದಲ್ಲೇ ನಿರ್ವಹಿಸಬೇಕು.)
ಎರಡನೇ ನಮಾಝ್ ಯಾತ್ರೆಯಲ್ಲೇ ಮುಗಿದಿದ್ದರೆ ನಂತರ ಊರಿಗೆ ತಲುಪಿದರೆ ತೊಂದರೆಯಿಲ್ಲ. ಎರಡನೇ ನಮಾಝ್ ಸಮಯ ಇನ್ನೂ ಬಾಕಿಯಿದ್ದರೂ ಕೂಡಾ ಆವರ್ತಿಸಿ ನಿರ್ವಹಿಸಬೇಕಾಗಿಲ್ಲ.

ಜಂಉ ತ್ತಅ್ ಖೀರ್ (ವಿಳಂಬ ಜಂಉ)
*----------------------------*
ಇದೂ ಕೂಡಾ ಯಾತ್ರೆಯಲ್ಲಿ ಅನುಕೂಲ. ಲುಹ್ರ್ ಮತ್ತು  ಅಸ್ವರನ್ನು ಅಸರಿನ ವೇಳೆಯಲ್ಲಿ ಮತ್ತು ಮಗ್ರಿಬ್ ಹಾಗೂ ಇಶಾವನ್ನು ಇಶಾದ ವೇಳೆಯಲ್ಲಿ ಇದರ ವಿಧಾನವಾಗಿದೆ.

ಇದರ ನಿಯಮಗಳು:
ಜಂಉತ್ತಕ್ದೀಮ್ ಗೆ ಹೇಳಲಾದ ಒಂದರಿಂದ ನಾಲ್ಕರವರೆಗಿನ ನಿಬಂಧನೆಗಳು ಇದಕ್ಕೂ ಅನ್ವಯ. ಅದರ ಜೊತೆಗೆ ಈ ನಿಬಂಧನೆಗಳೂ ಅನ್ವಯ.

1.) ಒಂದನೇ ನಮಾಝ್ ಆದ ಬಳಿಕ ಆ ಸಮಯವು ಸಂಪೂರ್ಣ ಮುಗಿಯುವುದಕ್ಕೆ ಐದು ನಿಮಿಷವಿರುವ ಮೊದಲೇ  (ಅಂದರೆ ಮೊದಲಿನ ನಮಾಝನ್ನು ನಿರ್ವಹಿಸುವಷ್ಟು ಸಮಯ)ದ ಒಳಗೇ ಜಂಉ ಮಾಡುವುದನ್ನು ಸಂಕಲ್ಪಿಸಿಕೊಳ್ಳುವುದು. ಈ ನಮಾಝನ್ನು ಮುಂದಿನ ನಮಾಝಿನ ಸಮಯದಲ್ಲಿ ಜಂಉ ಮುಂದೂಡುತ್ತಿದ್ದೇನೆ ಎಂದು ಸಂಕಲ್ಪ (ನಿಯ್ಯತ್ತ್) ಮಾಡಬೇಕು.

2.) ಒಂದನೇ ನಮಾಝ್ ಮುಗಿಯುವವರೆಗೂ ಯಾತ್ರೆಯಲ್ಲೇ ಇರಬೇಕು. (ಅದಕ್ಕೆ ಮುನ್ನವೇ ಯಾತ್ರೆ ಮುಗಿದರೆ ಆ ನಮಾಝನ್ನು ಕಳಾಃ ಆಗಿ ಪರಿಗಣಿಸುವುದು.
ಈ ಎರಡೂ ವಿಧದಲ್ಲೂ ನಮಾಝ್ ನ ಸಾಮಾನ್ಯ ನಿಯ್ಯತ್ತಿನಲ್ಲಿ ಬದಲಾವಣೆಯಿಲ್ಲ.

ಕ್ವಸ್ರ್
------
ನಾಲ್ಕು ರಕಅತ್ ಗಳಿರುವ ನಮಾಝ್ ಗಳನ್ನು  (ಳುಹ್ರ್,ಅಸ್ವರ್,ಹಾಗೂ ಇಶಾ) ಯಾತ್ರೆಯಲ್ಲಿ ಎರಡು ರಕಾಅತ್ಗಳಾಗಿ ನಿರ್ವಹಿಸುವ ಅನುಕೂಲವೇ ಕ್ವಸ್ರ್.

ಕ್ವಸ್ರ್ ನ ನಿಯಮಗಳು

1.) ತಕ್ಬೀರತುಲ್ ಇಹ್ರಾಮಿನಲ್ಲಿ ಸಾಮಾನ್ಯ ನಮಾಝಿನ ನಿಯ್ಯತ್ತಿನ ಜೊತೆಗೇ ಕ್ವಸ್ರ್ ಮಾಡಿ ನಿರ್ವಹಿಸುತ್ತೇನೆ ಎಂದು ಸೇರಿಸಿಕೊಳ್ಳುವುದು.

2.) ಪೂರ್ತಿಯಾಗಿ ನಮಾಝ್ ನಿರ್ವಹಿಸುವವರನ್ನು ಅನುಸರಿಸಿ ನಮಾಝ್ ಮಾಡಬಾರದು.

3.) ನಮಾಝ್ ಮುಗಿಯುವ ತನಕ ಯಾತ್ರೆಯಲ್ಲಿರಬೇಕು.
ಯಾತ್ರೆಯಲ್ಲೇ ಕಳಾ ಆದ ನಮಾಝನ್ನು ಯಾತ್ರೆಯಲ್ಲೇ ಕಳಾ ತೀರಿಸುವುದಾದರೆ ಅದನ್ನು ಕ್ವಸ್ರ್ ಮಾಡಬಹುದು.
ಸುಬಹ್ ನಮಾಝಿಗೆ ಜಂಉ ಮತ್ತು ಕ್ವಸ್ರ್ ಇಲ್ಲ.
ಅದೇ ಪ್ರಕಾರ ಮಗ್ರಿಬ್ ಮತ್ತು ಅಸರಿನ ಜೊತೆ ಜಂಉ ಇರುವುದಿಲ್ಲ.
ಪ್ರಸ್ತುತ ನಿಬಂಧನೆಗಳಿಗೆ ಬಧ್ಧನಾದರೆ ಜಂಉ ಮಾಡುವುದರೊಂದಿಗೆ ಕ್ವಸ್ರ್ ಕೂಡಾ ಮಾಡಬಹುದು.
ಯಾತ್ರೆಯಲ್ಲಿ ಫರ್ಳ್ ನಮಾಝಿನಲ್ಲಿ ಖಿಬ್ಲಾದ ವಿಷಯದಲ್ಲಿ ವಿನಾಯಿತಿ ಇಲ್ಲ. ಆದರೆ ಯಾತ್ರಿಕರಿಗೆ ಸುನ್ನತ್ ನಮಾಝಿನಲ್ಲಿ ಖಿಬ್ಲಾದಿಂದ ವಿನಾಯಿತಿ ಇದೆ. ಆದರೆ ತಕ್ಬೀರತುಲ್ ಇಹ್ರಾಮಿನ ವೇಳೆ ಖಿಬ್ಲಾಕ್ಕೆ ಮುಖ ಮಾಡಿರಬೇಕು. ಆನಂತರ ಅವನು ಸಾಗುತ್ತಿರುವ ದಿಕ್ಕಿಗೆ ಮುಖ ಮಾಡಿಕೊಂಡು ನಮಾಝ್ ನಲ್ಲಿದ್ದುಕೊಂಡೇ ಮುಂದುವರಿಯಬಹುದಾಗಿದೆ. ಅಲ್ಲದೇ ಹೋಗುವ ದಾರಿ ಯಾವ  ದಿಕ್ಕಿಗೆ ಇದೆಯೋ ಆ ದಿಕ್ಕಿಗೆ ಮುಖ ಮಾಡಬಹುದೇ ಹೊರತು ಬೇರೆ ದಿಕ್ಕಿಗೆ ಮುಖ ಮಾಡಬಾರದು.
ಯುದ್ದದ ಸಂಧರ್ಭದಲ್ಲಿ ಅಥವಾ ಅಗ್ನಿ ಅನಾಹುತ ನೆರೆ, ವನ್ಯಮೃಗಗಳ ಭಯ ಇಂತಹ ಮುಂತಾದ ಸಂಧರ್ಭದಲ್ಲಿ ಖಿಬ್ಲಾಕ್ಕೆ ಮುಖ ಮಾಡುವುದು ಖಡ್ಡಾಯವಿಲ್ಲ. ಅದೇ ರೀತಿ  ಖಿಬ್ ಲಾದ ಕಡೆಗೆ ತಿರುಗಲು ಅಸಾಧ್ಯವಾದ ರೋಗಿಗಳಿಗೆ ಕಡ್ಡಾಯವಿಲ್ಲ.

ರೋಗಿಯ ಜಂಉ
--------------------
(ಐದು ಹೊತ್ತಿಗೆ ವುಳೂ ಮಾಡಿ ನಮಾಝ್ ನಿರ್ವಹಣೆಗೆ ಪ್ರಯಾಸವಾಗುವ ರೋಗಿಗಳಿಗೆ  ಲುಹ್ರ್ ಮತ್ತು ಅಸರನ್ನು ಒಟ್ಟಿಗೆ ಹಾಗೂ ಮಗ್ರಿಬ್ ಇಶಾ ಒಟ್ಟಿಗೆ ಜಂಉ ಮಾಡಬಹುದಾಗಿದೆ. ಮೊದಲಿನ ಸಮಯದಲ್ಲಿ ಜಂಉ ಮಾಡುವುದಾದರೆ ಪ್ರಯಾಣಿಕರ ಈ ವಿಧಾನದ ಜಂಉಗೆ ಮೇಲೆ ಹೇಳಲಾದ 5, 6, 7, 8 ಎಂಬ ನಿಬಂಧನೆಗಳನ್ನು  ಪಾಲಿಸಬೇಕಾಗುತ್ತದೆ.
ಮುಂದೂಡುವ ಜಂಉ ಮಾಡುವುದಾದರೆ ಇಲ್ಲೇ ಮೇಲೆ ವಿಳಂಬ ಜಂಉನಲ್ಲಿ ಹೇಳಲಾದ 1 ಮತ್ತು 2ನೇ ನಿಬಂಧನೆಗಳನ್ನು ಪಾಲಿಸಬೇಕು.
ಇದರಿಂದ ರೋಗಿಗೆ ತುಂಬಾ ಅನುಕೂಲವಾಗುತ್ತದೆ. ಅಸರ್ ಹೊತ್ತಲ್ಲಿ ವುಳೂ ಮಾಡಿ ಲುಹ್ರ್ ಮತ್ತು ಅಸರ್ ನಮಾಝ್ ಮಾಡಿ ನಂತರ ಮತ್ತು ಮಗ್ರಿಬ್ ನ ಸಮಯವಾದಾಗ ಅದೇ ವುಳೂವಿನಲ್ಲಿ ಮಗ್ರಿಬ್ ಮತ್ತು ಇಶಾ ನಮಾಝ್ ಮಾಡಿದರೆ ಒಂದೇ ವುಳೂವಿನಲ್ಲಿ ನಾಲ್ಕು ನಮಾಝ್ಗಳನ್ನು ನಿರ್ವಹಿಸಬಹುದಾಗಿದೆ.

ವಾಹನದಲ್ಲಿ ನಮಾಝ್
--------------------------

ರೈಲಿನಲ್ಲಿ,ಅಥವಾ ವಿಮಾನದಲ್ಲಿ ನಮಾಝ್ ಮಾಡುವಾಗ ಖಿಬ್ ಲಾದ ದಿಕ್ಕುಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಇನ್ನು ದಿಕ್ಕು ಕಂಡರೂ ರೈಲಿನ ಅಥವಾ ವಿಮಾನದ ಚಲಾವಣೆಯಿಂದ ಒಂದೇ ದಿಕ್ಕಿನಿಂದ ನಮಾಝ್ ನಿರ್ವಹಿಸಲು ಸಾಧ್ಯವಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಸಾಧ್ಯವಾಗುವ ದಿಕ್ಕಿಗೆ ಮುಖ ಮಾಡಿ ನಿಂತು ಅಥವಾ ಕುಳಿತುಕೊಂಡು ಸಾಧ್ಯವಾಗುವ ರೀತಿಯಲ್ಲಿ ನಮಾಝ್ ಮಾಡಬೇಕು.
ಸುಜೂದ್ ಮಾಡಲು ಸಾಧ್ಯವಾಗದಿದ್ದರೆ ರುಕೂಗಿಂತ ಸ್ವಲ್ಪ ಜಾಸ್ತಿ ಬಗ್ಗಿ ಸನ್ನೆ ಮಾಡಿ ಸುಜೂದ್ ಮಾಡಬೇಕು.
ನಂತರ ಅನುಕೂಲವಾದಾಗ ಆ ನಮಾಝನ್ನು ಪುನರಾವರ್ತಿಸಬೇಕು.(ತುಹ್ಫ1:493)
ಈ ರೀತಿ ನಮಾಝ್ ನಿರ್ವಹಿಸಬೇಕು.
ಎಲ್ಲರೂ ನಮ್ಮನ್ನು  ನೋಡುತ್ತಿದ್ದಾರೆ ಈ ನಮಾಝ್ ಮತ್ತೆ ನಿರ್ವಹಿಸಲಿಕ್ಕಿದೆಯಲ್ಲವೇ ಸಧ್ಯಕ್ಕೆ ಈಗ ನಿರ್ವಹಿಸುವುದು ಬೇಡಾ ಎಂಬ ಭಾವನೆಯನ್ನು ಬಿಡಬೇಕು. ಕಾರಣ ಆಯಾವಕ್ತಿನ ನಮಾಝಿನ ಮಾನ್ಯತೆಯನ್ನು ಪರಿಗಣಿಸಿ ನಮಾಝ್ ನಿರ್ವಹಿಸುವುದು ವಕ್ತಿನ ಕಡ್ಡಾಯವೆಂಬುವುದನ್ನು ಮರೆಯಬಾರದು.
ಸಾಧ್ಯವಾಗುವ ರೀತಿಯಲ್ಲಿ ನಮಾಝ್ ನಿರ್ವಹಿಸಬೆಕು.
ಟ್ರೈನಲ್ಲಿ ನಮಾಝ್ ಮಾಡುವಾಗ ಯಾರಿಗೂ ತೊಂದರೆಗಳುಂಟಾಗುವುದಿಲ್ಲ.
ಅದೇ ರೀತಿ ಮುಸ್ಲಿಂ ಸಹೋದರರು ಇದ್ದರೆ ಅವರಿಗೂ ನಮಾಝಿನ ಗೌರವ ಮನಸ್ಸಿನಲ್ಲಾಗುತ್ತದೆ.ಹಾಗೂ ಅವರಿಗೂ ಒಂದು ಪಾಠವಾಗುತ್ತದೆ.
ವಿಮಾನ,ರೈಲು ಹೊರತುಪಡಿಸಿ ಬೇರೆ ವಾಹನದಲ್ಲಿ ಯಾತ್ರೆಮಾಡುವವರು ಮಸೀದಿಯಿದ್ದರೆ ಕ್ಲಪ್ತ ಸಮಯಕ್ಕೆ ನಮಾಝ್ ನಿರ್ವಹಿಬೇಕು.
ಜಂಉ,ಕ್ವಸ್ರ್ ಮಾಡಿ ನಮಾಝ್ ನಿರ್ವಹಿಸುವವರು ಮೇಲೆ ಭಾಗ ಒಂದು ಹಾಗೂ ಎರಡರಲ್ಲಿ ತಿಳಿಸಿದ ಹಾಗೆ ನಮಾಝನ್ನು ನಿರ್ವಹಿಸಬೇಕು.

(ಮುಗಿಯಿತು.)

ನಮ್ಮೆಲ್ಲರ ಹಬೀಬ್ ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಗಳ ಮೇಲೆ 10 ಸ್ವಲಾತ್ ಹೇಳುವ.
اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله..

✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...