ಮದ್ಯಪಾನ ನಿಷಿದ್ದ
ಎಂ.ಫಯಾಝ್*
*ಬೀಸಿರೋಡು(ಪಿಸಿ)
*ಓ ಸತ್ಯವಿಶ್ವಾಸಿಗಳೇ ನಿಶ್ಚಯವಾಗಿಯೂ ಮದ್ಯ, ಜೂಜು, ವಿಗ್ರಹಗಳು, ಸಮಸ್ಯೆ ಪರಿಹಾರಾರ್ಥ ಎಸೆಯುವ ಬಿಲ್ಲುಗಳು ಮ್ಲೇಚ್ಛ ಪ್ರವೃತ್ತಿಗಳಾಗಿವೆ. (ಆದುದರಿಂದ) ಅವುಗಳೆಲ್ಲವನ್ನು ತೊರೆಯಿರಿ. ನೀವು ವಿಜಯಿಗಳಾಗಬಹುದು. (ಪವಿತ್ರ ಕುರ್ಆನ್)*
ಮದ್ಯವು ಅಮಲು ಪದಾರ್ಥವಾಗಿದೆ. *ಪ್ರವಾದಿ(ﷺ)ರವರು ಅಮಲು ಉಂಟುಮಾಡುವ ಪದಾರ್ಥಗಳೆಲ್ಲವೂ ನಿಷಿದ್ದವಾಗಿದೆಯೆಂದು ಹೇಳಿರುವರು.*
(ಬುಖಾರಿ, ಮುಸ್ಲಿಮ್, ಅಬೂದಾವೂದ್, ತಿರ್ಮುದಿ)
*ಪ್ರವಾದಿ(ﷺ ) ಹೇಳಿದರು: ನಶೆಯುಂಟುಮಾಡುವ ಪದಾರ್ಥಗಳೆಲ್ಲವೂ ಮದ್ಯವಾಗಿದೆ. ಎಲ್ಲಾ ಮದ್ಯಗಳು ನಿಷಿದ್ಧವಾಗಿದೆ. (ಅಹ್ಮದ್, ಅಬೂಯಹ್عಲ)*
ನಶೆಯ ಪ್ರತಿಯೊಂದು ವಸ್ತು (ದೇಹದಲ್ಲಿ ಆಲಸ್ಯ ಹಾಗೂ ಅವಯವಗಳಿಗೆ ಕೇಡುಂಟುಮಾಡುವ) ಹಾಗೂ ಪಾನೀಯಗಳನ್ನು *ಪ್ರವಾದಿ(ﷺ )ರವರು ನಿಷೇಧಿಸಿರುವರು. (ಅಬೂದಾವೂದ್)*
*ಅಬೂಹುರೈರಾ(ರ)ರವರಿಂದ ವರದಿ: ಪ್ರವಾದಿ(ﷺ )ರವರು ಹೇಳಿದರು: ಒಬ್ಬನು ಸತ್ಯವಿಶ್ವಾಸಿಯಾಗಿದ್ದುಕೊಂಡು ವ್ಯಭಿಚರಿಸಲಾರ, ಸತ್ಯವಿಶ್ವಾಸಿಯಾಗಿದ್ದುಕೊಂಡು ಮದ್ಯಪಾನ ಮಾಡಲಾರ, ಸತ್ಯವಿಶ್ವಾಸಿಯಾಗಿದ್ದುಕೊಂಡು ಮೋಸಮಾಡಲಾರ.*
*(ಬುಖಾರಿ, ಮುಸ್ಲಿಮ್)*
ಮದ್ಯಪಾನಿಯಿಂದ ಸತ್ಯವಿಶ್ಚಾಸದ ಪ್ರಕಾಶವನ್ನು ಕಸಿದುಕೊಳ್ಳಲಾಗುವುದು. (ತ್ವಬರಾನಿ)
*ಮದ್ಯಪಾನವನ್ನು ರೂಢಿಯಾಗಿಟ್ಬುಕೊಂಡವನು ಪಶ್ಚಾತ್ತಾಪ ಪಡದೆ ಮೃತಪಟ್ಟರೆ ಅವನೋರ್ವ ವಿಗ್ರಹಾರಾಧಕನಂತೆ ಅಲ್ಲಾಹನನ್ನುﷻ ಎದುರುಗೊಳ್ಳುವುದು (ಸ್ವಹೀಹ್ ಸನದಿನೊಂದಿಗೆ ಅಹ್ಮದ್ ನಿವೇದಿಸಿದ ಹದೀಸ್) ಸರಿಸುಮಾರು ಇದೇ ಅರ್ಥವಿರುವ ಹದೀಸನ್ನು ಇಬ್ನ್ ಹಿಬ್ಬಾನ್ ಕೂಡ ನಿವೇದಿಸಿದ್ದಾರೆ. (ಮದ್ಯಪಾನದ ಹವ್ಯಾಸವನ್ನಿಟ್ಟುಕೊಂಡವನು ವಿಗ್ರಹರಾಧಕನಂತೆ ಪಾಪಿಯಾಗಿದ್ದಾನೆ)*
ಮದ್ಯವು ನಿಷೇಧಿಸಲ್ಟಟ್ಟಾಗ ಸ್ವಹಾಬಿಗಳು ಅದು ವಿಗ್ರಹಾರಾಧನೆಯಂತಹ ಕೆಡುಕಾಗಿರುವುದರಿಂದ ನಿಷೇಧಿಸಲ್ಪಟ್ಟಿದೆಯೆಂದು ಸಾರಿದರು.
(ಇಬ್ನ್ ಅಬ್ಬಾಸ್(ರ)ರವರಿಂದ ತ್ವಬರಾನಿ ನಿವೇದನೆ)
*ಅಲ್ಲಾಹುﷻ ಮತ್ತು ಅಂತ್ಯದಿನದಲ್ಲಿ ವಿಶ್ಚಾಸವಿರಿಸುವ ಒಬ್ಬನು ಮದ್ಯ ಸೇವಿಸದಿರಲಿ ಮತ್ತು ಮದ್ಯವನ್ನೊಳಗೊಂಡ ಭೋಜನ ಕೂಟದಲ್ಲಿ ಪಾಲ್ಗೊಳ್ಳದಿರಲಿ. (ತ್ವಬರಾನಿ)*
ಮದ್ಯಪಾನಿಯ ನಲುವತ್ತು ದಿನಗಳ ನಮಾಝನ್ನು *ಅಲ್ಲಾಹನುﷻ* ಸ್ವೀಕಸುವುದಿಲ್ಲ.ಆದರೆ ಅವನು ಪಶ್ಚಾತಾಪಪಟ್ಟು ಮರಳಿದರೆ *ಅಲ್ಲಾಹನುﷻ* ಅದನ್ನು ಸ್ವೀಕರಿಸುತ್ತಾನೆ.ಪುನಃ ಕುಡಿದರೆ ಅವನ ನಲುವತ್ತು ದಿನಗಳ ನಮಾಝನ್ನು *ಅಲ್ಲಾಹನುﷻ* ಸ್ವೀಕರಿಸಲಾರ, ಮಾತ್ರವಲ್ಲದೆ ಅವನ ತೌಬಾವನ್ನೂ ತಿರಸ್ಕರಿಸುವನು. ಇಂತವರಿಗೆ *ಅಲ್ಲಾಹನುﷻ* ನಹ್ರುಲ್ ಖಬಾಲ್ನಿಂದ ಕುಡಿಸುವನು.
(ಇಬ್ನು ಉಮರ್ ರವರಿಂದ ನಿವೇದನೆ) ನಹ್ರುಲ್ ಖಬಾಲ್ ಎಂದರೇನು ಎಂಬ ಪ್ರಶ್ನೆಗೆ ಇಬ್ನು ಉಮರ್ ಅದು ನರಕವಾಸಿಗಳ ಕೀವು ಮಿಶ್ರಿತ ರಕ್ತ ಎಂದು ಉತ್ತರಿಸಿದರು. ಈ ಹದೀಸನ್ನು ಸ್ವಹೀಹ್ ಸನದಿನೊಂದಿಗೆ ತ್ವಬರಾನಿಯವರು ಕೂಡಾ ಉಲ್ಲೇಖಿಸಿದ್ದಾರೆ.
ಮದ್ಯವು ಎಲ್ಲಾ ಕೆಡುಕುಗಳ ಕೀಲಿಕೈಯಾಗಿದೆ. ಅದನ್ನು ಸೇವಿಸಿದಾಗ ಮನುಷ್ಯ ಸರಿ-ತಪ್ಪುಗಳ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ.ನಶೆಯೇರಿದಾಗ ತಾನೇನು ಮಾಡುತ್ತಿದ್ದೇನೆಂದು ಆತನು ಅರಿತಿರುವುದಿಲ್ಲ. *ಆದುದರಿಂದಲೇ ಇಸ್ಲಾಮ್ ಈ ಕೆಡುಕಿನ ಮುಂದಾಲೋಚನೆಗಾಗಿ ಕರೆ ನೀಡಿದೆ.*
*ಮದ್ಯಪಾನಿಗೆ ಛಡಿಯೇಟು ನೀಡಿರಿ ಪುನಃ ಸೇವಿಸಿದಿರೆ ಛಡಿಯೇಟನ್ನೇ ನೀಡಿರಿ.ಮೂರನೇ ಬಾರಿಯೂ ಹೀಗೆಯೇ ಮಾಡಿರಿ.ನಾಲ್ಕನೇ ಬಾರಿ ಪುನರಾವರ್ತಿಸಿದರೆ ಅವನನ್ನು ವಧಿಸಿ ಬಿಡಿರಿ.*
*(ಅಬೂದಾವೂದ್,ಇಬ್ನು ಹಿಬ್ಬಾನರು ತಮ್ಮ ಸ್ವಹೀಹ್ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.)*
ಮದ್ಯಪಾನಿಗೆ ಛಡಿಯೇಟು ನೀಡಿರಿ.ನಾಲ್ಕನೇ ಬಾರಿ ಪುನರಾವರ್ತಿಸಿದರೆ ಅವನನ್ನು ಕೊಂದುಬಿಡಿರಿ.(ತಿರ್ಮುದಿ)
*ಮದ್ಯವನ್ನು ತಯಾರಿಸಿದವನು,ಕುಡಿದವನು,ಕುಡಿಸಿಸಿದವನು,ಅದನ್ನು ಹೊತ್ತುಕೊಂಡು ನಡೆದವನು ಮಾರಾಟಗಾರನು ಅದರ ಬೆಲೆಯನ್ನು ಪಡೆದು ಉಪಯೋಗಿಸಿಕೊಂಡವನು,ಅದಕ್ಕೆ ಬೇಕಾದ ವಸ್ತುಗಳನ್ನು ತಂದು ಕೊಟ್ಟವನು,ಅದನ್ನು ಮಾರಿದವರು ಇವರೆಲ್ಲರನ್ನೂ ಅಲ್ಲಾಹನﷻ ಪ್ರವಾದಿ ನಬಿﷺ ರವರು ಶಪಿಸಿರುವರು.(ತಿರ್ಮುದಿ)*
ಕೇವಲ ಒಂದು ತೊಟ್ಟು ಮದ್ಯ ಬಾವಿಯೊಂದಕ್ಕೆ ಬಿದ್ದು ಅದು ಮಲಿನಗೊಂಡ ನಂತರ ಅದೇ ಸ್ಥಾನದಲ್ಲಿ ಒಂದು ಮಿನಾರ ತಲೆಯೆತ್ತಿದರೆ ನಾನು ಅದರಲ್ಲಿ ಆಝಾನ್ ಮೊಳಗಿಸಲಾರೆ.ಸಮುದ್ರವೊಂದಕ್ಕೆ ಒಂದು ತೊಟ್ಟು ಮದ್ಯವು ಬಿದ್ದು ಆನಂತರ ಸಮುದ್ರವು ಬತ್ತಿಹೋಗಿ ಪ್ರಸ್ತುತ ಜಾಗದಲ್ಲಿ ಹುಲ್ಲು ಬೆಳೆದರೆ ಆ ಹುಲ್ಲನ್ನು ಮೇಯಲು ನನ್ನ ಜಾನುವಾರುಗಳನ್ನೂ ಕೂಡಾ ಬಿಟ್ಟು ಬಿಡುವುದಿಲ್ಲವೆಂದು ಹಝ್ರತ್ ಅಲಿ(ರ) ಹೇಳಿರುವರು.
*ನನ್ನ ಬೆರಳು ಅಪ್ಪಿತಪ್ಪಿ ಪಾತ್ರೆಯೊಳಗೆ ಮುಳುಗಿದರೆ ಅನಂತರ ನಾನು ಅದನ್ನು ಉಪಯೋಗಿಸಲಾರೆ.ಕತ್ತರಿಸಿ ಹಾಕುತ್ತೇನೆಂದು ಇಬ್ನು ಉಮರ್(ರ) ಹೇಳಿರುವರು.*
*ಟಿಪ್ಪಣಿ:* ದ್ರಾಕ್ಷೆ ಮತ್ತಿತರ ವಸ್ತುಗಳಿಂದ ತಯಾರಿಸಿದ ಮದ್ಯದ ಒಂದು ತೊಟ್ಟು ಗಂಟಲಿಗಿಳಿಯುವುದು ನಿಷಿದ್ಧವಾಗಿದೆ.ಮಾತ್ರವಲ್ಲದೆ,ಅದು ಮಹಾಪಾಪ ಎಂಬ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಮದ್ಯಪಾನ ಹಲಾಲ್ ಎಂದು ಭಾವಿಸಿದವನು ಸತ್ಯ ನಿಷೇಧಿಗಳಲ್ಲಿ ಸೇರಿದವನಾಗುತ್ತಾನೆ.
*ನಶೆಯೇರಿಸುವ ಪ್ರತಿಯೊಂದು ವಸ್ತು ಕೂಡಾ ನಿಷಿದ್ಧವಾಗಿದೆ.ಆಫೀಮು,ಚರಸ್, ಭಂಗಿ,ಹಷೀಷ್,ಬ್ರೌನ್ ಶುಗರ್, ಅಮಲು ತರಿಸುವ ಇಂಜೆಕ್ಷನ್ ಇವೆಲ್ಲವೂ ಅದೇ ಯಾದಿಯಲ್ಲಿ ಒಳಪಡುತ್ತದೆ.*
*ಮುಗಿಯಿತು...*
*ನಮ್ಮ ಹಬೀಬ್ ತ್ವಾಹ ರಸೂಲ್ ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಙಳ ಮೇಲೆ 3 ಸ್ವಲಾತ್ ಹೇಳುವ.*
*📿📿اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله.*📿
✍🏻 *ಎಂ.ಫಯಾಝ್*
*ಬೀಸಿರೋಡು(ಪಿಸಿ)*
Comments