Skip to main content

ಅಂತ್ಯ ದಿನವು ಸಮೀಪಿಸುತ್ತಿದೆ

ಅಂತ್ಯ ದಿನವು ಸಮೀಪಿಸುತ್ತಿದೆ
✍🏻 ಎಂ.ಫಯಾಝ್
         ಬೀಸಿರೋಡು(ಪಿಸಿ)
ಈ ಕಾಣುವ ಜಗತ್ತಿಗೆ ಒಂದಲ್ಲ ಒಂದು ದಿನ ಅಂತ್ಯವೂ ಸಮೀಪಿಸಲಿದೆ.
ಆಗ ಲೋಕದಲ್ಲಿರುವ ಎಲ್ಲಾ ವಸ್ತುಗಳು ನಶಿಸಿ ಹೋಗಲಿದೆ. ಸೃಷ್ಟಿಕರ್ತನಾದ ಅಲ್ಲಾಹನುﷻ ಮಾತ್ರ ಮರಣ ಮರಣ ಹೊಂದದೆ ಭಾಕಿಯಾಗುವನು. ಮನುಷ್ಯನು, ಮೃಗಗಳು, ಜನಗಳು ಸರ್ವವಸ್ತುಗಳು ಮಲಕುಗಳು, ಈ ಲೋಕವನ್ನು ಇನ್ನೊಂದು ಲೋಕವನ್ನಾಗಿ ಮಾರ್ಪಡಿಸುವ ದಿನವಾಗಿದೆ ಅಂತ್ಯ ದಿನ.

ಅದಕ್ಕೆ ಸೂಚನೆಯಾಗಿ ಮುಸ್ಲಿಂ (ರ.ಅ) ಅನಸ್ (ರ.ಅ ) ರಿಂದ  ವರದಿ ಮಾಡಿದ ಒಂದು ಹದೀಸಿನಲ್ಲಿ ಹೀಗೆ ಕಾಣಬಹುದು.
"ನಿಶ್ಚಯವಾಗಿಯೂ ನೆಬಿ ﷺ ಅವರು ಹೇಳಿದರು". ನನ್ನನ್ನು ಕಿಯಾಮತ್ ದಿನವನ್ನು ಈ ರೀತಿ ಕಳುಹಿಸಲ್ಪಟ್ಟಿದೆ. ನೆಬಿ ﷺ ರವರು ಅವರ ತೋರುಬೆರಳನ್ನು ನಡುಬೆರಳನ್ನ ಜೋಡಿಸಿ ತೋರಿಸಿಕೊಟ್ಟರು. ಈ ಹದೀಸಿನಿಂದ ವ್ಯಕ್ತವಾಗುವುದು ಅಂತ್ಯ ದಿನವೂ ಅತಿವೇಗದಲ್ಲಿ ಇದೆಯೆಂದು ಅದರ ಸೂಚನೆಗಳು ಪ್ರತ್ಯೇಕವಾಗುತ್ತಲೇ ಇದೆ.
ಕಾರಣ ಪ್ರವಾದಿﷺ ರವರು ಪ್ರವಾದಿ ಶೃಂಖಲೆಯಲ್ಲಿ ಕೊನೆಯವರಾಗಿದ್ದಾರೆ.
ನೆಬಿﷺ ಅವರ ನಂತರ ಬೇರೆ ನೆಬಿ ﷺರವರ ಆಗಮನ ಎಲ್ಲಾ ಪ್ರವಾದಿ ಶೃಂಖಲೆಯ ಅಂತಿಮವು ಕಿಯಾಮತ್ ದಿನದ ಸೂಚನೆಗಳಾಗಿದೆ.

ಲಾಹ್ ಹಕ್ಕ್,ಹಸನ್ ಎಂಬ ಎರಡು ಮಹಾತ್ಮರು ಹೇಳುತ್ತಾರೆ. ಕಿಯಾಮತ್ ದಿವಸದ ಮೊದಲನೆಯ ಸೂಚನೆ ನೆಬಿﷺ ಅವರಾಗಿದ್ದಾರೆ. ಇದರಿಂದ ನಮಗೆ ಮನದಟ್ಟಾಗುವುದು. ಅಂತ್ಯ ದಿನದ ಸೂಚನೆಗಳಲ್ಲಿ ಒಳ್ಳೆಯ ಕಾರ್ಯವು ಕೆಟ್ಟ ಕಾರ್ಯವು ಸಂಭವಿಸಬಹುದು ಎಂಬುದಾಗಿದೆ. ಪ್ರವಾದಿಯವರಿಗೆ ದಿವ್ಯ ಸಂದೇಶವಾಣಿ ಲಭಿಸಿದ ಅಂದಿನಿಂದಲೂ ಪಿಶಾಚಿಗಳು ಆಕಾಶ ಭಾಗಗಳಲ್ಲಿ ಸಂಚರಿಸಿ ಮಲಕು ಗಳಿಂದ ಮಾತುಗಳನ್ನು ಕದ್ದು ಕೇಳಿ ಜ್ಯೋತಿಷ್ಯ ರಿಗೆ ತಲುಪಿಸುತ್ತಿದ್ದವು. ಅಂದಿನಿಂದ ಪಿಶಾಚಿಗಳನ್ನು ಆಕಾಶದಿಂದ ಭೂಮಿಗೆ ಬಡಿದೊಡಿದ್ದು ಅದರ ಫಲವಾಗಿದೆ.
ನೆಬಿﷺ ರವರು ಇಸ್ಲಾಮಿ ಪ್ರಬೋಧನೆ ಮಾಡಲು ಮಕ್ಕಾ ಮುಶ್ರಿಕ್ಗಳ ಬಳಿ ಹೋದಾಗ ಅವರು ನೆಬಿﷺ ರವರಲ್ಲಿ ಕೇಳಿದರು. ನೀನು ನೆಬಿ ﷺ ಎಂಬುದಕ್ಕೆ ಯಾವ ಪುರಾವೆ ಇದೆ.?

ತಕ್ಷಣ ನೆಬಿ ﷺ ರವರು ತನ್ನ ಅದ್ಭುತ ಸಿದ್ಧಿಯಾದ ಮುಅಜಿಝತ್ತಿನಿಂದ ಚಂದ್ರನಿಗೆ ಬೆರಳು ತೋರಿಸುತ್ತಾ ಹೇಳಿದರು. ನೀನು ಎರಡು ಭಾಗವಾಗಬೇಕು.
ನೆಬಿ ﷺ ರವರು ಹೇಳುವ ಆ ಕ್ಷಣದಲ್ಲಿ ಆಬೂಖುಬೈಸ್  ಪರ್ವತದ ತುದಿಯಲ್ಲಿ ಚಂದ್ರನು ಹೋಳಾದನು.

ನೆಬಿ ﷺರವರು ಹೇಳುವ ತಕ್ಷಣವೇ ಚಂದ್ರನು ಎರಡು ಭಾಗಗಳಾಗಿ ಮಾರ್ಪಟ್ಟ ಈ ವಿಷಯವನ್ನು ಕುರ್ ಆನ್ ಒತ್ತಿಹೇಳುತ್ತಿದೆ. ಅಂತ್ಯ ದಿನವೂ ಅತೀ ಶೀಘ್ರದಲ್ಲಿ ಇದೆ.ಚಂದ್ರನು ಎರಡು ಭಾಗಗಳಾದವು. (ಕುರ್ ಆನ್)

ಮೂಕ ಪ್ರಾಣಿಗಳಾದ ಜೀವಿಗಳು ಮನುಷ್ಯನಲ್ಲಿ ಮಾತಾಡುವ ಕಾಲ ಬಂದು ಒದಗುವುದು.ಪ್ರವಾದಿ ﷺ ರವರು ಇಹಲೋಕ ತ್ಯಜಿಸುವ ಸಂಭವವೂ, ಝಾನೂರೈನ್  ಉಸ್ಮಾನ್ಬ್ ನು ಅಫ್ಫಾನ್ ಕೊಲೆಯಾದ ಸಂಭವವೂ,
ಅಲೀ (ರ.ಅ) ರಿಂದಲೂ ಮುಅವಿಯ (ರ.ಅ) ರಿಂದ ನಡೆದ ಯುದ್ದವೂ, ಮಕ್ಕಳು ಅಧಿಕಾರ ರಂಗಕ್ಕೆ ಪ್ರವೇಶಿಸುವುದು, ಹುಸೈನ್ (ರ.ಅ) ಕರ್ಬಲದಲ್ಲಿ ಕೊಲೆಯಾದ ಸಂಭವವೂ, ಮದೀನವನ್ನು ಅಪವಿತ್ರ ಮಾಡುವ ಕಾಲವು ಇದೆಲ್ಲವೂ ಅಂತ್ಯ ದಿನದ ಸೂಚನೆಗಳಾಗಿದೆ.

ಲೋಕವಸಾನ ಉಂಟಾಗುವುದಕ್ಕಿಂತ ಮುಂಚೆ ಖುರಸಾನಿನಿಂದ ಶಕ್ತವಾದ ಬಿರುಗಾಳಿ ಬೀಸಲಿದೆ. ಆದ್ ಸಮೂಹವನ್ನು ಅಲ್ಲಾಹನು ನಶಿಸಲು ಬೇಕಾಗಿ ಕಳುಹಿಸಿದ ಗಾಳಿಯ ಹಾಗೆ ಆಗಿರುತ್ತದೆ. ಆದಕಾರಣ ಪರ್ವತಗಳು ಅಡಿಮೇಲಾಗುತ್ತದೆ. ವನ್ಯಮೃಗಗಳು ಆಗ ಹೆದರಿ ಓಡಲಾರಂಭಿಸುತ್ತದೆ. ಅದರ ಭೀಕರವಾದ ಶಕ್ತಿಯನ್ನು ಕಂಡು ಮನುಷ್ಯನು ಭಾವಿಸುತ್ತಾನೆ. ಲೋಕವಸಾನ ಸಂಭವಿಸಬಹುದು ಎಂದು ಅವರು ಅಲ್ಲಾಹು ﷻ ವಿನಲ್ಲಿ  ಸವಿನಯದಿಂದ ಪ್ರಾರ್ಥಿಸುತ್ತಾರೆ.

ಲೋಕವಸಾನ ಸಂಭವಿಸುವ ನಿಗದಿತ ಸಮಯವನ್ನು ಯಾರಿಗೂ ತಿಳಿಸಲಿಲ್ಲ. ಅಲ್ಲಾಹುವಿನ ರಸೂಲ್ ನಬಿ ಮಹಮ್ಮದ್ ಮುಸ್ತಫಾﷺ ರವರಲ್ಲಿ ಮಕ್ಕಾ ನಿವಾಸಿಗಳು ಕೇಳಿದರು ಯಾವಾಗ ಅಂತ್ಯದಿನವು ಸಂಭವಿಸಬಹುದು.?
ಪರಿಶುದ್ದ ಕುರ್ ಆನ್ ಅದಕ್ಕೆ ಉತ್ತರ ಕೊಟ್ಟದ್ದು ಹೀಗೆ.

ಪ್ರವಾಜಗರೇﷺ ಮಕ್ಕಾ ನಿವಾಸಿಗಳು ಅಂತ್ಯ ದಿನ ಯಾವಾಗ ಸಂಭವಿಸುತ್ತದೆ ಎಂದು ಕೇಳುವರು. ನೆಬಿ ﷺ ರವರೇ ತಾವುಗಳು ಅವರಲ್ಲಿ ಹೇಳಿರಿ ನಿಶ್ಚಯವಾಗಿಯೂ ಅದು ಯಾವಾಗ ಸಂಭವಿಸುತ್ತದೆ ಎಂಬುದರ ಸಂಪೂರ್ಣ ಮಾಹಿತಿಯು ನನ್ನ ಅಲ್ಲಾಹು ﷻ ವಿನ ಬಲಿಯಾಗಿದೆ.ಅದರ ಸಮಯವನ್ನು ಆವನಲ್ಲದೆ ಇನ್ಯಾರೂ ತಿಳಿದವರಾಗಿಲ್ಲ. ಆಕಾಶ ಭೂಮಿಗಳು (ಅದರ ಭೀಕರತೆಯ ಕಾರಣಗಳಿಂದ) ಅದು ಭಯಾನಕ ಹೊರೆಯಾಗಿದೆ.ಅದು ನಿಮಗೆ ಆದಷ್ಟು ಬೇಗ ಬರಲಿದೆ.

ಆದ್ದರಿಂದ ಅಲ್ಲಾಹು ﷻನನ್ನು ಮರೆತು ಕ್ರಿಕೆಟ್ ಹಾಗೂ ಸಿನಿಮಾ,ಸೀರಿಯಲ್ ಸ್ಟಾರ್ಗಳನ್ನು Follow ಮಾಡಿ ಈಮಾನ್ ಕಳೆದುಕೊಳ್ಳುತ್ತಿರುವ ಯುವಸಮೂಹದ ಯುವಕಯುವತಿಯರೇ, ಅಂತ್ಯದಿನವೂ ಸಮೀಪಿಸುತ್ತಾ ಇದೆ.ನಾವು ನಮ್ಮ ಈಮಾನನ್ನು ಇನ್ನಾದರೂ ಸಂರಕ್ಷಿಸಿಕೊಳ್ಳಲೇಬೇಕಾಗಿದೆ..
ನಾವು Follow ಮಾಡಬೇಕಾಗಿರುವುದು ಅಲ್ಹ್ಲಾಹನ ರಸೂಲ್ﷺ ರವರನ್ನೇ ಹೊರತು ಕ್ರಿಕೆಟ್ ಹಾಗೂ ಸಿನಿಮಾ,ಸೀರಿಯಲ್ ಸ್ಟಾರ್ಗಳನ್ನಲ್ಲ.
ಇನ್ನಾದರೂ ಬದಲಾಗುವ

ಅಲ್ಹ್ಲಾಹನು ತೌಫೀಕ್ ನೀಡಲಿ.
ಆಮೀನ್ ಯಾರಬ್ಬಲ್ ಆಲಮೀನ್...

(ಮುಗಿಯಿತು)

ನನಗೂ ಹಾಗೂ ನನ್ನ ಕುಟುಂಬದವರಿಗೂ,ಮಿತ್ರರಿಗೂ,ಬಂಧು ಬಳಗದವರಿಗೂ ಪ್ರತ್ಯೇಕವಾಗಿ ದುಆ ಮಾಡಬೇಕಾಗಿ ದುಆ ವಸೀಯ್ಯತ್ತಿನೊಂದಿಗೆ

✍🏻 ಎಂ.ಫಯಾಝ್
         ಬೀಸಿರೋಡು(ಪಿಸಿ)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...