Skip to main content

ಜುಮಾ ದಿನದ ಮಹತ್ವ

ಜುಮಾ ದಿನದ ಮಹತ್ವ

✍🏻 ಎಂ.ಫಯಾಝ್ ಬೀಸಿರೋಡು.(ಪಿಸಿ)

ಅಲ್ಲಾಹುﷻ ಹೇಳುತ್ತಾನೆ "(ಜುಮಾ)" ನಮಾಝ್ ಮುಗಿದರೆ ಭೂಮಿಯಲ್ಲಿ ಚದುರಿಹೋಗಿರಿ. ಅಲ್ಲಾಹು ﷻವಿನ ಔದಾರ್ಯದಿಂದ ಹುಡುಕಿರಿ. ಅಲ್ಲಾಹನನ್ನು ಧಾರಾಳ ಸ್ಮರಿಸಿರಿ. ನೀವು ಜಯಶಾಲಿಗಳಾಲು. (62:10)
ಸೂರ್ಯ ಉದಯಿಸಿದ ದಿನಗಳ ಪೈಕಿ ಅತ್ಯಂತ ಶ್ರೇಷ್ಠವಾದ ದಿನವು ಶುಕ್ರವಾರವಾಗಿದೆ. ಆ ದಿನದಂದು ಆದಂ ನಬಿ ಅಲೈಹಿಸ್ಸಲಾಂ ರವರ ಸೃಷ್ಟಿಯಾಯಿತು.ಅವರನ್ನು ಸ್ವರ್ಗಕ್ಕೆ ಕಳುಹಿಸಿದ್ದು ಅದೇ ದಿನ.ಅಲ್ಲಿಂದ ಹೊರ ಕಳುಹಿಸಲ್ಪಟ್ಟದ್ದೂ ಅದೇ ದಿನ.
ವರದಿ; ಅಬೂಹುರೈರಾ. ಉಲ್ಲೇಖ : ಮುಸ್ಲಿಂ

ಒಬ್ಬರು ಚೆನ್ನಾಗಿ ಉಝೂ ಮಾಡಿ ನಂತರ ಜುಮಾಕ್ಕೆ ಹೋಗಿ ಖುತ್ಬಾ ಆಲಿಸಿ, ಮೌನವಾಗಿದ್ದರೆ ಹಿಂದಿನ ಜುಮಾದಿಂದ ಅದುವರೆಗಿನ ಅವನ ಪಾಪಗಳು ಪರಿಹಾರವಾಗುವುದು.

ಅಬೂ ಹುರೈರ ರಳಿಯಲ್ಲಾಹು ಅನ್ಹು ರವರು ಹೇಳಿದರು: ಅವರು ಮತ್ತು ಇಬ್ನ್ ಉಮರ್ ರಳಿಯಲ್ಲಾಹು ಅನ್ಹುರವರು, ನಬಿ ಮುಹಮ್ಮದ್ ಮುಸ್ತಫಾﷺ ರವರು ಮಿಂಬರಿನ ಮೆಟ್ಟಲಲ್ಲಿ ನಿಂತುಕೊಂಡು ಹೀಗೆನ್ನುವುದನ್ನು ಕೇಳಿದ್ದಾರೆ: "ಜುಮಾವನ್ನು ಉಪೇಕ್ಷಿಸುವವರು ತಮ್ಮ ಗೈರು ಹಾಜರಾತಿಯನ್ನು ಕೊನೆಗೊಳಿಸಲಿ.ಇಲ್ಲವಾದಲ್ಲಿ ಅಲ್ಲಾಹುﷻ ಅವರ ಹೃದಯಕ್ಕೆ ಮುದ್ರೆಯೊತ್ತುವನು. ನಂತರ ಅವನು ಅಶ್ರದ್ದರ ಕೂಟಕ್ಕೆ ಸೇರುವನು. ವರದಿ ಅಬೂ ಹುರೈರ ರಳಿಯಲ್ಲಾಹು ಅನ್ಹು.

ನೀವು ಪ್ರತಿಯೊಬ್ಬರೂ ಜುಮಾಕ್ಕೆ ಹೋಗುವಾಗ ಸ್ನಾನ ಮಾಡಿಕೊಂಡಿರಬೇಕು.
ಜುಮಾ ದಿನದ ಸ್ನಾನ ಪ್ರಾಯ ಪೂರ್ತಿಯಾದ ಎಲ್ಲರಿಗೂ ಕಡ್ಡಾಯ. ಜುಮಾ ದಿನದಂದು ಒಬ್ಬರು ವುಝೂ ಮಾಡಿದರೆ ಅದು ಅವನಿಗೆ ಧಾರಾಳ.ಸ್ನಾನ ಮಾಡಿದರೆ ಮತ್ತಷ್ಟು ಶ್ರೇಷ್ಠವಾದ ಕಾರ್ಯವಾಗಿದೆ.

ನಬಿ ಮುಹಮ್ಮದ್ ಮುಸ್ತಫಾﷺ  ರವರು ಹೇಳಿದರು
ಜುಮಾ ದಿನದಂದು ಒಬ್ಬರು ಸಾಧ್ಯವಿದ್ದಷ್ಟು ಶುದ್ದವಾಗುವವರೆಗೆ ಸ್ನಾನ ಮಾಡಿ, ಎಣ್ಣೆಯನ್ನು ಹಚ್ಚಿ,ಸುಗಂಧ ದ್ರವ್ಯ ಲೇಪಿಸಿ ನಂತರ ಜುಮಾಕ್ಕೆ ಹೊರಟರೆ ಹಾಗೂ (ಸಾಲಿನಲ್ಲಿ ಕುಳಿತ) ಇಬ್ಬರ ನಡುವೆ ಬೇರ್ಪಡಿಸದೆ ಇದ್ದು ತನಗೆ ವಿಧಿಯಿರುವಷ್ಟು ನಮಾಝ್ ಮಾಡಿದರೆ ಹಾಗೂ ಇಮಾಮರ ಖುತ್ಬಾದ ವೇಳೆ ಮಾತನಾಡದೇ ಮೌನವಾಗಿ ಖುತ್ಬಾವನ್ನು ಆಲಿಸಿದರೆ ಇನ್ನೊಂದು ಜುಮಾದವರೆಗಿನ ಅವನ ಪಾಪಗಳು ಪರಿಹಾರವಾಗದೇ ಇರುವುದಿಲ್ಲ.

ಶುಕ್ರವಾರದಂದು ಜನಾಬತ್ ಸ್ನಾನದಂತೆ ಸ್ನಾನ ಮಾಡಿ ಮಸೀದಿಗೆ ಮೊದಲ ತಾಸಿನಲ್ಲಿ ಹೋದರೆ ಒಂದು ಒಂಟೆಯ ದಾನಮಾಡಿದವನಂತೆ ಆಗುವನು. ಎರಡನೇ ತಾಸಿನಲ್ಲಿ ಹೋದರೆ ಒಂದು ದನವನ್ನು ದಾನ ಮಾಡಿದವನಂತೆಯೂ ಮತ್ತು  ಮೂರನೇ ತಾಸಿನಲ್ಲಿ ಹೋದವನು ಕೊಂಬುಗಳಿರುವ ಒಂದು ಆಡನ್ನು ದಾನ ಮಾಡಿದವನಂತೆಯೂ ಆಗುವನು.ನಾಲ್ಕನೇ ತಾಸಿನಲ್ಲಿ ಹೋದರೆ ಕೋಳಿಯನ್ನು ದಾನ ಮಾಡಿದವನಂತೆಯೂ ಹಾಗೂ ಐದನೇ ತಾಸಿನಲ್ಲಿ ಹೋದವನು ಒಂದು ಮೊಟ್ಟೆಯನ್ನು ದಾನ ಮಾಡಿದವನಂತೆಯೂ ಆಗುವನು. ಇನ್ನು ಇಮಾಮರು ಬಂದರೆ ಅಲ್ಲಾಹುﷻವಿನ ಮಲಕುಗಳು ಖುತ್ಬಾ ಆಲಿಸಲು ಹಾಜರಾಗುವರು.
ವರದಿ; ಅಬೂ ಹುರೈರ ರಳಿಯಲ್ಲಾಹು ಅನ್ಹು..

ಅಬೂ ಹುರೈರ ರಳಿಯಲ್ಲಾಹು ಅನ್ಹು ರವರು ಹೇಳಿದರು.
ನಬಿ ಮುಹಮ್ಮದ್ ಮುಸ್ತಫಾ ﷺ ರವರು ಶುಕ್ರವಾರವನ್ನು ಪ್ರಶಂಶಿಸುತ್ತಾ ಹೀಗೆಂದರು. 'ಆ ದಿನದಂದು ಒಂದು ಸಮಯವಿದೆ. ನಮಾಝ್ ಮಾಡುತ್ತಾ ಯಾವನೇ ಮುಸ್ಲಿಮ್ ದಾಸನು ಅಲ್ಲಾಹುವಿನಲ್ಲಿ ದುಆ ಮಾಡಿದರೆ ಆ ಸಮಯಕ್ಕೆ ಹೊಂದಿಕೆಯಾಗಿಬಿಟ್ಟರೆ ಅವನು ಕೇಳಿದ್ದನ್ನು ಅಲ್ಲಾಹು  ಕೊಡದೇ ಇರಲಾರನು, ಎಂದು ತನ್ನ ಕೈಯ ಮೂಲಕ ಸಂಜ್ಞೆ ಮಾಡಿ ಆ ಸಮಯ ಸ್ವಲ ಮಾತ್ರ ಇರುವುದು ಎಂದು ಹೇಳಿದರು.
ನಬಿ ಮುಹಮ್ಮದ್ ಮುಸ್ತಫಾﷺ  ರವರು  ಹೇಳಿದರು. ನಿಮ್ಮ ದಿನಗಳ ಪೈಕಿ ಅತ್ಯಂತ ಶ್ರೇಷ್ಠವಾದ ದಿನ ಅದು ಜುಮಾ ದಿನವಾಗಿದೆ. ಆ ದಿನ ನೀವು ನನಗೆ ಧಾರಾಳ ಸ್ವಲಾತ್ ಹೇಳಿರಿ. ನಿಜವಾಗಿಯೂ ನಿಮ್ಮ ಸ್ವಲಾತ್ಗಳನ್ನು ನನಗೆ ಪ್ರದರ್ಶಿಸಲಾಗುತ್ತದೆ.
ವರದಿ:ಅವ್ ಸ್ ಬಿನ್ ಅವ್ ಸ್ ರಳಿಯಲ್ಲಾಹು ಅನ್ಹು.
ಆದ್ದರಿಂದ ನಾವು ಸಾಧ್ಯವಾದಷ್ಟು ಬೇಗ ಮಸೀದಿಗೆ ತೆರಳಿ ಸೂರತುಲ್ ಕಹ್ಫ್ ಹಾಗೂ ಝಿಕ್ರ್ ಸ್ವಲಾತ್ ಅಧಿಕಗೊಳಿಸಬೇಕು. ಅಲ್ಲಾಹುﷻವಿನ ಇಷ್ಟ ದಾಸರಾಗಬೇಕು
ಅಲ್ಲಾಹುﷻ ತೌಫೀಖ್ ನೀಡಲಿ ಆಮೀನ್ ಯಾಬ್ಬಲ್ ಆಲಮೀನ್.

ನಬಿ ಮುಹಮ್ಮದ್ ಮುಸ್ತಫಾﷺ ರವರ ಸಮುದಾಯದಲ್ಲಿ ಮೊದಲ ಬಿದ್ ಅತ್ ಉಂಟಾಗುವುದು ಜುಮಾದ ದಿವಸದಲ್ಲಾಗಿದೆ.
ಅದು ಜುಮಾ ದಿವಸದಲ್ಲಿ ಮಸೀದಿಗೆ ಹೋಗದವರು, ಅಥವಾ ಮಸೀದಿಗೆ ತಡವಾಗಿ ಬರುವವರಾಗಿದ್ದಾರೆ ಎಂದು  ಹುಜ್ಜತುಲ್ ಇಸ್ಲಾಮ್ ಅಬೂ ಹಾಮಿದಿಲ್ ಗಝ್ಝಾಲಿ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ.

ಆದ್ದರಿಂದ ಪ್ರೀತಿಯ ಎಲ್ಲಾ ಸಹೋದರರೇ ಯುವಕರೇ ಜುಮಾ ದಿನದಂದು ಸಮಯಕ್ಕೆ ಸರಿಯಾಗಿ ಜುಮಾಕ್ಕೆ ಬಾರದೇ ಹರಟೆ ಹೊಡೆದು ಇಮಾಮರು ನಮಾಝ್ ಮಾಡುವಾಗ ಮಸೀದಿಗೆ  ಬರುವವರಿದ್ದಾರೆ.ಆ ರೀತಿ ನಾವುಗಳಾಗಬಾರದು.ಖುತ್ಬಾದ ಸಮಯಕ್ಕೆ ಬಾರದೆ ಕೇವಲ ನಮಾಝಿಗೆ ಬಂದರೆ ನಮ್ಮ ಜುಮಾ ಖಂಡಿತವಾಗಿಯೂ ಪೂರ್ತಿಯಾಗುವುದಿಲ್ಲ.
ಆದ್ದರಿಂದ ಬೀದಿಯಲ್ಲಿ ಹರಟೆ ಹೊಡೆಯುವುದನ್ನು ಬಿಟ್ಟು ಜುಮಾದ ಕೃತ್ಯ ಸಮಯಕ್ಕೆ ನಾವೆಲ್ಲರೂ  ಅಲ್ಲಾಹುﷻವಿನ    ಭವನದತ್ತ ಧಾವಿಸೋನ ಇಂಷಾಅಲ್ಲಾಹ್....

ಅಲ್ಲಾಹುﷻ ನಮ್ಮೆಲ್ಲರ ಇಹಪರ ಜೀವನವನ್ನು ಸಲಾಮತ್ ಮಾಡಲಿ.
ನಮ್ಮೆಲ್ಲರನ್ನು ಅಲ್ಲಾಹುﷻ ಸಜ್ಜನರ ಸಾಲಿನಲ್ಲಿ ಸೇರಿಸಲಿ.ಆಮೀನ್  ಯಾರಬ್ಬಲ್ ಆಲಮೀನ್

(ಮುಗಿಯಿತು)

ನಮ್ಮೆಲ್ಲರ ಹಬೀಬ್  ರಸೂಲ್ ನಬಿ ಮುಹಮ್ಮದ್ ಮುಸ್ತಫಾﷺ ತಂಗಳ ಮೇಲೆ 10 ಸ್ವಲಾತ್ ಹೇಳುವ.
اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله.

✍🏻 ಎಂ.ಫಯಾಝ್ ಬೀಸಿರೋಡು.(ಪಿಸಿ)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...