Skip to main content

ಪುರುಷರಿಗೆ ನಿಷಿದ್ದವಾದ ಉಡುಗೆ

ಪುರುಷರಿಗೆ ನಿಷಿದ್ದವಾದ ಉಡುಗೆ

*السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه*
✍🏻 *ಎಂ.ಫಯಾಝ್*
*ಬೀಸಿರೋಡು(ಪಿಸಿ)*

🚫🔘🚫🔘🚫🔘🚫🔘🚫🔘🚫🔘

*ನಬಿﷺರವರು ಬಲಗೈಯ್ಯಲ್ಲಿ ರೇಷ್ಮೆ ವಸ್ತ್ರವನ್ನು ಎಡಗೈಯಲ್ಲಿ ಚಿನ್ನವನ್ನು ಹಿಡಿದುಕೊಂಡು ಇವೆರಡೂ ನನ್ನ ಸಮುದಾಯದ ಷುರುಷರಿಗೆ ಹರಾಂ ಎಂದರು.*
(ಹದೀಸ್ ಅಬೂದಾವೂದ್)

*ಇನ್ನೊಂದು ಹದೀಸ್ ನಲ್ಲಿ ಹೀಗಿದೆ:*
ಇಹದಲ್ಲಿ ರೇಷ್ಮೆ ಧರಿಸಿದವನಿಗೆ ಪರಲೋಕದಲ್ಲಿ ಭಾಗ್ಯ ಸಿಗುವುದಿಲ್ಲ. ಇಲ್ಲಿ ಮದ್ಯಪಾನ ಮಾಡಿದವನಿಗೆ ಅಲ್ಲಿನ(ಸ್ವರ್ಗದ) ಮದ್ಯಪಾನದ ಭಾಗ್ಯ ದೊರೆಯುವುದಿಲ್ಲ. ಚಿನ್ನ, ಬೆಳ್ಳಿಯ ಪಾತ್ರೆಯಲ್ಲಿ ಅನ್ನಪಾನ ಮಾಡಿದವನಿಗೆ ಅಲ್ಲಿ ಅದರ ಭಾಗ್ಯವಿಲ್ಲ. ಸ್ವರ್ಗದವರ ಉಡುಗೆ ರೇಷ್ಮೆಯದ್ಧು, ಅವರ ಪಾತ್ರೆಗಳು ಚಿನ್ನದ್ದು.

*ಸ್ವರ್ಗದವರ ಉಡುಗೆ-ತೊಡುಗೆ ರೇಷ್ಮೆ ಮತ್ತು ಚಿನ್ನವಾಗಿರುವಾಗ ಅದರ ಭಾಗ್ಯ ಇವರಿಗೆ ಇಲ್ಲ ಅಂದರೆ ಅದಕ್ಕೆ ಪ್ರವೇಶದ ಭಾಗ್ಯವೇ ಇಲ್ಲವೆಂದಾಗುತ್ತದೆ ಎಂದಿದ್ದಾರೆ ಇಬ್ನು ಝುಬೈರ್ ರಳಿಯಲ್ಲಾಹು ಅನ್ಹು.*

ಇಲ್ಲಿ ರೇಷ್ಮೆ ಧರಿಸಿದವನಿಗೆ ಅಲ್ಲಿ ಬೆಂಕಿಯ ವಸ್ತ್ರ ಉಡಿಸಲಾಗುವುದು ಎಂದೂ ಹದೀಸ್ ನಲ್ಲಿದೆ.

*ಅಲ್ಲಾಹನನ್ನುﷻ ಭೇಟಿ ಹಾಗೂ ಅವನ ವಿಚಾರಣೆಯ ಅರಿವುಳ್ಳವರು ಅಲ್ಲಾಹುﷻ ಮತ್ತು ಪರಲೋಕದಲ್ಲಿ ವಿಶ್ವಾಸವಿಡುವವರು ಚಿನ್ನ ಮತ್ತು ರೇಷ್ಮೆಯನ್ನು ಧರಿಸಬಾರದು ಎಂದು ಹದೀಸ್ ಗಳಲ್ಲಿದೆ.*

ನಜ್ರಾನದಿಂದ ಬಂದ ವ್ಯಕ್ತಿಯೊಬ್ಬನ ಕೈ ಬೆರಳಲ್ಲಿ ಚಿನ್ನದ ಉಂಗುರವನ್ನು ಕಂಡಾಗ *ನಬಿﷺರವರು* ಅವನಿಂದ ಮುಖ ತಿರುಗಿಸಿದರು. ನೀನು ಕೈಯಲ್ಲಿ ಬೆಂಕಿಯ ಕೆಂಡ ಇಟ್ಬುಕೊಂಡು ನನ್ನ ಬಳಿ ಬಂದಿರುವೆ ಎಂದರು.
(ಹದೀಸ್)

*ಒಮ್ಮೆ ನಬಿﷺರವರು ಒಬ್ಬನ ಬೆರಳಲ್ಲಿ ಚಿನ್ನದ ಉಂಗುರ ಕಂಡಾಗ ಅದನ್ನು ಕಿತ್ತು ದೂರಕ್ಕೆ ಎಸೆದರು. ಯಾರಾದರೂ ಬೆಂಕಿಯ ಕೆಂಡವನ್ಶು ಕೈಯಲ್ಲಿಟ್ಟುಕೊಳ್ಳುತ್ತಾರಾ? ಎಂದರು. ನಬಿﷺರವರು ಹೋದ ನಂತರ, ನೀನು ಆ ಉಂಗುರವನ್ನು ಹೆಕ್ಕಿ ಕೊಳ್ಳು, ಬೇರೆ ಪ್ರಯೋಜನ ಪಡೆಯಬಹುದಲ್ಲವೇ" ಎಂದು ಜನರು ಹೇಳಿದರು. "ಅಲ್ಲಾಹನﷻ ರಸೂಲರುﷺ ಎಸೆದುದನ್ನು ನಾನು ಹೆಕ್ಕಿಕೊಳ್ಳಲಾರೆ' ಎಂದರು ಆ ವ್ಯಕ್ತಿ.*
*ಹದೀಸ್ (ಮುಸ್ಲಿಮ್)*

ಸ್ತ್ರೀಯರಂತೆ ನಟಿಸುವ ಷುರುಷರನು, ಷುರುಷರಂತೆ ನಟಿಸುವ ಸ್ತ್ರೀಯರನ್ನು *ಅಲ್ಲಾಹುﷻ* ಶಪಿಸಿರುತ್ತಾನೆ.
ಹದೀಸ್ (ಬುಖಾರಿ).

*ಸ್ತ್ರೀಯರ ಉಡುಗೆ ಹಾಕಿಕೊಳ್ಳುವ ಷುರುಷನನ್ನು, ಷುರುಷನ ಉಡುಗೆ ಧರಿಸುವ ಸ್ತ್ರೀಯರನ್ನು ನಬಿﷺರವರು ಶಪಿಸಿರುವರು.*
*ಹದೀಸ್ (ಅಬೂದಾವೂದ್)*

ಬಿಲ್ಲನ್ನು ಎದೆಗೇರಿಸಿ ಕೊಂಡು ನಡೆದು ಬಂದ ಓರ್ವಮಹಿಳೆಯೊಂದಿಗೆ *ನಬಿﷺರವರು* ಷುರುಷರಂತೆ ವರ್ತಿಸುವ ಸ್ತ್ರೀಯರ ಮೇಲೆ ಅಲ್ಲಾಹನ ಶಾಪವಿದೆ ಎಂದರು.
ಹದೀಸ್(ತ್ವಬ್ ರಾನೀ)

*ಕೈ ಕಾಲುಗಳಿಗೆ ಮೆಹಂದಿ ಹಚ್ಚಿಕೊಂಡು ಸ್ತ್ರೀಯರಂತೆ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಬಿﷺರವರು ಊರಿನಿಂದ ಹೊರ ಹಾಕಿಸಿದರು.*
(ಅಬೂದಾವೂದ್)

*ಶೈಖ್ ಜೀಲಾನಿಯವರು(ಖ.ಸಿ) ಆಧ್ಯಾತ್ಮ ತಿರುಗಾಟದಲ್ಲಿದ್ದ ಕಾಲದಲ್ಲಿ ಒಮ್ಮೆ ವಿಪರೀತ ಬಾಯಾರಿಕೆಯಾಯಿತು. ಅಷ್ಟರಲ್ಲಿ ಮೇಲಿನಿಂದ ಒಂದು ಮೋಡದಲ್ಲಿ ಬೆಳ್ಳಿಯ ಪಾತ್ರೆಯೊಂದು ಕಾಣಿಸಿ ಕೊಂಡಿತು. "ಅಬ್ದುಲ್ ಕಾದಿರ್! ನಿಮಗೆ ನಾನು ನಿಷಿದ್ದಗಳನ್ನು ತೆರವು ಮಾಡಿರುತ್ತೇವೆ, ಆದ್ದರಿಂದ ಈ ಪಾತ್ರೆಯಲ್ಲಿರುವ ನೀರನ್ನು ಕುಡಿಯಿರಿ" ಎಂಬ ಕರೆಯೂ ಕೇಳಿ ಬಂತು. ಶೈಖ್ ಜೀಲಾನಿ(ಖ.ಸಿ)ರವರು ಹೇಳಿದರು. ಅಲ್ಲಾಹುﷻವಿನ ರಸೂಲರಿಗೇﷺ ನಿಷೇಧಗಳನ್ನು ತೆರವುಗೊಳಿಸಲಾಗಿರಲಿಲ್ಲ.* ನಾನು ಅವರಿಗಿಂತ ಮೇಲಾಗಿಲ್ಲ ನೀನು ಶೈತಾನ! ತೊಲಗಾಚೆ ಎಂದಾಗ ಪಾತ್ರೆ ಮಾಯವಾಗಿತ್ತು.ಅದೆಷ್ಟೋ ಅಧ್ಯಾತ್ಮದವರನ್ನು ತಂತ್ರದಿಂದ ಬೀಳಿಸಿದ್ದೇವೆ.ನಿಮ್ಮನ್ನು ಸಾಧ್ಯವಾಗಿಲ್ಲ ಎಂದನು ಶೈತಾನ್!.

*ರೇಷ್ಮೆ ವಸ್ತ್ರದ ಬಳಕೆ ಕೇವಲ ಉಡಲು ಮಾತ್ರವಲ್ಲ, ಹಾಸಲು, ಹೊದೆಯಲು, ತಲೆದಿಂಬಿನೊಳಗೆ ಹಾಕಿಕೊಳ್ಳಲು ಬಳಸುವುದು ಕೂಡಾ ನಿಷಿದ್ಧ. ರೇಷ್ಮೆಯೊಂದಿಗೆ ಬೇರೆ ನೂಲು ಮಿಶ್ರಿತವಾಗಿದ್ದರೆ ತೂಕದಲ್ಲಿ ರೇಷ್ಮೆ ನೂಲು ಹೆಚ್ಚು ಇದ್ದರೆ ನಿಷಿದ್ಧ, ಸಮಾನವಾದರೆ ಅಥವಾ ಬೇರೆ ನೂಲಿಗಿಂತ ಕಡಿಮೆ ಇದ್ದರೆ ನಿಷಿದ್ಧವಲ್ಲ. ಮನೆ ಅಥವಾ ಮಸ್ಜಿದ್ಗಳಿಗೆ ಅಲಂಕಾರದ, ಕಿಟಕಿ ಬಾಗಿಲುಗಳ ಪರದೆ ಮುಂತಾದವುಗಳಿಗೂ ಕೂಡಾ ರೇಷ್ಮೆ ಬಟ್ಟೆ ನಿಷಿದ್ಧ.*

ಗೌಪ್ಯ ಪಾಲನೆಗೆ ಬೇರೆ ವಸ್ತ್ರ ಸಿಗದೆ ಇರುವಾಗ ರೇಷ್ಮೆ ವಸ್ತ್ರ ಮತ್ತು ನಜಸ್ ಇರುವ ಬೇರೆ ವಸ್ತ್ರಗಳ ನಡುವೆ ಅಯ್ಕೆ ಮಾಡಬೇಕಾದ ಪರಿಸ್ಥಿತಿಯುಂಟಾದರೆ ರೇಷ್ಮೆಯನ್ನು ತ್ಯಜಿಸಿ ಮಲಿನ ವಸ್ತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. *ನಮಾಝ್ ಗೆ ಗೌಪ್ಯ ಪಾಲನೆಗೆ ಮಾತ್ರ ಮಲಿನ ವಸ್ತ್ರವನ್ನು ಆಯ್ಕೆ ಮಾಡದೆ ರೇಷ್ಮೆ ವಸ್ತ್ರವನ್ನು ಆಯ್ಕೆ ಮಾಡಿ ಕೊಳ್ಳಬೇಕು.* ಆದರೂ ಅಗತ್ಯದ ಗೌಪ್ಯ ಪಾಲನೆಗಿಂತ ಹೆಚ್ಚಿನದ್ದನ್ನು ಕತ್ತರಿಸಿ ಕೊಳ್ಳಬೇಕು (ಬೆಲೆಗೆ ಖೋತಾ ಬಾರದಿದ್ದರೆ) ಎಂದು ಇಮಾಮ್ ಅಸ್ನವಿ(ರ) ಹೇಳಿದ್ದಾರೆ.

*ಮಣಿಗಂಟಿಗಿಂತ ಕೆಳಕ್ಕೆ ಉಡುವಸ್ತ್ರವನ್ನು ಷುರುಷರು ಅಹಂಭಾವದಿಂದ ಇಳಿಸುವುದು ಹರಾಂ. ಅಹಂಭಾವ ಇಲ್ಲವಾದರೆ ಕರಾಹತ್. ಷುರುಷನಿಗೆ ಬೆಳ್ಳಿಯ ಉಂಗುರವೊಂದು ಮಾತ್ರ ಸುನ್ನತ್.* ಉಳಿದ ಯಾವುದೇ ವಿಧ ಚಿನ್ನ-ಬೆಳ್ಳಿ ಒಡವೆಗಳು ನಿಷಿದ್ಧ. ಚಿನ್ನದ ಲೇಪನ ಹಚ್ಚಿದ ಉಂಗುರ ಅಥವಾ ಇನ್ಯಾವುದೇ ಒಡವೆ ನಿಷಿದ್ಧ. ಲೇಪನ ಎಷ್ಟೇ ತೆಳುವಾದರೂ ಸರಿ.

*ಮಹಿಳೆಯರಿಗೂ ಚಿನ್ನ-ಬೆಳ್ಳಿಯ ಪಾತ್ರೆ ಮುಂತಾದ ಬಳಕೆಯ ವಸ್ತುಗಳು ನಿಷಿದ್ಧ. ಚಿನ್ನ ಅಥವಾ ಬೆಳ್ಳಿಯ ಕೀಲಿ, ಕನ್ನಡಿಯ ಅಂಚು, ಕನ್ನಡಕ, ಪಾತ್ರೆ, ಲೋಟ, ಚಮಚ ಮುಂತಾದ ಯಾವುದೇ ವಸ್ತುವನ್ನು ಬಳಸಿಕೊಳ್ಳುವುದು ಸ್ತ್ರೀಯರಿಗೂ ನಿಷಿದ್ದ. ಸುರುಮದ ಕೋಲು, ಹಲ್ಲಿಗೆ ಹಾಕುವ ಕೋಲು ಮುಂತಾದ್ದು ಕೂಡಾ ಚಿನ್ನ-ಬೆಳ್ಳಿಯದ್ದಾಗಿದ್ದರೆ' ಸ್ತ್ರೀಯರಿಗೂ ನಿಷಿದ್ಧವಾಗಿದೆ. ಇಂತಹ ವಸ್ತುಗಳನು ಚಿನ್ನ, ಬೆಳ್ಳಿಯಿಂದ ಮಾಡಿಟ್ಬುಕೊಳ್ಳುವುದದು ಕೂಡಾ ನಿಷಿದ್ಧ*.

*(ಮುಗಿಯಿತು....*)

*ನಮ್ಮ ಹಬೀಬ್ ತ್ವಾಹ ರಸೂಲ್  ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಙಳ ಮೇಲೆ 3 ಸ್ವಲಾತ್ ಹೇಳುವ.*
*📿📿اَللَّهُمَّ صَلِّ عَلَى سَيِّدِنَا مُحَمَّدٍ وَعَلَى آلِهِ وَصَحْبِهِ وَسَلِّم*📿
✍🏻 *ಎಂ.ಫಯಾಝ್*
*ಬೀಸಿರೋಡು(ಪಿಸಿ)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...