ಈದ್ ದಿನ ಪಾಲಿಸ ಬೇಕಾದ ಉಪಯುಕ್ತ ಮಾಹಿತಿಗಳು
-ಇಸ್ಹಾಕ್ ಸಿ.ಐ.ಫಜೀರ್.
ಪರಿಶುದ್ಧ ರಮಳಾನ್ ಪರಿಸಮಾಪ್ತಿ ಗೊಂಡು
ಇನ್ನೇನು ಈದ್ ಆಚರಿಸಲು ವಿಶ್ವ ಮುಸಲ್ಮಾನರು ಅಣಿಯಾಗಿರುವರು
ಶವ್ವಾಲಿನ ಚಂದ್ರ ದರ್ಶನವಾಗುವುದರೊಂದಿಗೆ ರಮಳಾನ್ ಸಮಾಪ್ತಿಯಗುತ್ತದೆ.ಜಾಗತಿಕ ಮುಸಲ್ಮಾನರು ಆಚರಿಸುವ ಎರಡು ಹಬ್ಬಗಳಲ್ಲೊಂದಾಗಿದೆ'ಈದುಲ್ ಫಿತ್ರ್'
(ಚೆರೆ ಪರುನಾಲ್)ಶವ್ವಾಲಿನ ಚಂದ್ರ ದರ್ಶನದಿಂದ ಪೆರ್ನಾಲ್ ನಮಾಝ್ ನ ನಡುವೆ ಮಾಡ ಬೇಕಾದ ಸುನ್ನತ್ತಾದ ಕೆಲವು ಉಪಯುಕ್ತ ಮಾಹಿತಿ ಈ ಮೂಲಕ ತಿಳಿಸ ಬಯಸುತ್ತೇನೆ
ಅಲ್ಲಾಹನು ಸ್ವೀಕರಿಸಲಿ.ಅಮೀನ್
*▫ಚಂದ್ರ ದರ್ಶನದಿಂದ ಈದ್ ನಮಾಝ್ ತನಕ ತಕ್ಬೀರ್ ಹೇಳುವುದು.*
*▫ಪ್ರಭಾತದಲ್ಲಿ ಸ್ನಾನ ಮಾಡುವುದು.*
*▫ಹೊಸ ಅಥವಾ ಇರುವುದರಲ್ಲಿ ನವ್ಯ ಉಡುಪು ಧರಿಸುವುದು*
*▫ಅತ್ತರ್ ಸುಗಂಧ ಸಿಂಪಡಿಸುವುದು.*
*▫ಮಸೀದಿಗೆ ಹೋಗುವ ಮುನ್ನ* *ಮೂರು ಖರ್ಜೂರ ತಿನ್ನುವುದು.*
*▫ಈದ್ ನಮಾಝ್'ಗೆ ಹೋಗಲೊಂದು ಬರಲೊಂದು ಬೇರೆ ಬೇರೆ ದಾರಿ ಬಳಸುವುದು.*
*▫ಪರಸ್ಪರ ಹಸ್ತ ಲಾಘವ.ಬಳಿಕ*
*ತಕಬ್ಬಲ್ಲಾಹು ಮಿನ್ನಾ ವ ಮಿಂಕುಂ ಎಂದು ಹೇಳುವುದು.*
*▫ಕುಟುಂಬ ಹಾಗು ನೆರೆಹೊರೆಯವರನ್ನು ಮಿಲಾಕತ್ತು ಮಾಡುವುದು*
*▫ಕುಟುಂಬದಿಂದ ಅಗಲಿದವರ ಖಬರ್ ಝಿಯಾರತ್ ಮಾಡುವುದು ▫*
Comments