Skip to main content

ತಂದೆ ತಾಯಿಗೆ ಒಳಿತು

ತಂದೆ ತಾಯಿಗೆ ಒಳಿತು
*السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه*
✍🏻 *ಎಂ.ಫಯಾಝ್*
*ಬೀಸಿರೋಡು(ಪಿಸಿ)*

*ಅಲ್ಲಾಹನಿಗೆﷻಆರಾಧಿಸಿರಿ. ಅವನಿಗೆ ಸಹದೇವತ್ವ ಕಲ್ಪಿಸಬೇಡಿರಿ. ಹೆತ್ತವರಿಗೆ ಹಿತ ಮಾಡಿರಿ"- ಕುರ್ಆನ್*
ಈ ಆಯತ್ನಲ್ಲಿರುವ "ಹಿತ' ಅಂದರೆ  ನಯವಿನಯ ದೊಂದಿಗೆ ಅವರ ಸೇವೆ,ಒರಟಾಗಿ ಮಾತಾಡದಿರುವುದು, ಅವರತ್ತ ಗೆರಾಯಿಸಿ ನೋಡದಿರುವುದು, ಅವರ ಧ್ವನಿಗಿಂತ ಧ್ವನಿ ಏರಿಸದಿರುವುದು ಇತ್ಯಾದಿ. *ಯಜಮಾನನ ಮುಂದೆ ಗುಲಾಮ ತೋರುವ ದೈನ್ಯತೆ ಪ್ರಕಾರ ಮಕ್ಕಳು ಹೆತ್ತವರಿಗೆ ದೈನ್ಯತೆ ತೋರುವುದು.*
(ಹ.ಇಬ್ನು ಅಬ್ಬಾಸ್)

ನೀವು ಅಲ್ಲಾಹನಿಗಲ್ಲದೆﷻ ಆರಾಧಿಸಬಾರದು ಹಾಗೂ ತಾಯಿತಂದೆಯರಿಗೆ ಸೌಜನ್ಯ ತೋರಬೇಕು ಎಂದು ನಿಮಗೆ *ಅಲ್ಲಾಹುﷻ* ವಿಧಿಯಿತ್ತಿರುವನು. *ನಿಮ್ಮ ಬಳಿ ಅವರಿಬ್ಬರು ಅಥವಾ ಅವರಲ್ಲಿ ಒಬ್ಬರು ಇದ್ದರೆ "'ಛೆ ಎಂಬ ಮಾತುಗಳೂ ಕೂಡಾ ನೀವು ಅವರಿಗೆ ಹೇಳಬಾರದು.* 'ಅವರೊಂದಿಗೆ ನಿದಾಕ್ಷಿಣ್ಯದಿಂದ ವರ್ತಿಸದಿರಿ. ಗೌರವಪೂರ್ವಕವಾಗಿ ಮಾತಾನಡಿರಿ ನಯವಿನಯದ ರೆಕ್ಕೆಯನ್ನು ಅವರಿಗೆ ತಗ್ಗಿಸಿಕೊಡಿರಿ. *ಇವರಿಬ್ಬರು ನನ್ನನ್ನು ಬಾಲ್ಯದಲ್ಲಿ ಸಲಹಿದ್ದಂತೆ ನೀನು ಇವರಿಗೂ ದಯೆತೋರು ಅಲ್ಲಾಹುವೇ ಎಂದು ಪ್ರಾರ್ಥಿಸಿರಿ.(ಕುರ್ ಆನ್)*

*ಅಲ್ಲಾಹನಿಗೆﷻ ಅನುಸರಿಸಿರಿ, ರಸೂಲರಿಗೂﷺ ಅನುಸರಿಸಿರಿ ಹಾಗೂ ನಮಾಝ್ ನೆಲೆಗೊಳಿಸಿರಿ, ಝಕಾತ್ ನೀಡಿರಿ ಮತ್ತು ನನಗೆ ಕೃತಜ್ಞರಾಗಿರಿ, ಹೆತ್ತವರಿಗೂ ಕೃತಜ್ಞರಾಗಿರಿ ಎಂದು ಅಲ್ಲಾಹನು ಈ ಮೂರು ಆಯತ್ಗಳಲ್ಲಿ ಎರಡೆರಡು ವಿಚಾರಗಳನ್ನು ಒಟ್ಟಿಗೆ ಸೇರಿಸಿ ಹೇಳಿರುತ್ತಾನೆ. ಇವು ಪರಸ್ಪರ ಪೂರಕವಾಗಿದ್ಧು ಒಂದನ್ನು ಬಿಟ್ಟರೆ ಇನ್ನೊಂದು ಸ್ವೀಕೃತವಲ್ಲ"*
(ಹ.ಇಬ್ನು ಅಬ್ಬಾಸ್.)

ಅಂದರೆ ಹೆತ್ತವರಿಗೆ ಕೃತಜ್ಞರಾಗದೆ ಅಲ್ಲಾಹನಿಗೆﷻ ಕೃತಜ್ಞರಾಗಲು ಸಾಧ್ಯವಿಲ್ಲ. "ಅಲ್ಲಾಹನﷻ ತೃಪ್ತಿ ಹೆತ್ತವರ ತೃಪ್ತಿ, ಅಲ್ಲಾಹನﷻ ಕ್ರೋಧ ಹೆತ್ತವರ ಕ್ರೋಧವನ್ನು ಅವಲಂಬಿಸಿದೆ" ಎಂಬ *ನಬಿ ﷺರವರ* ನುಡಿ ಕೂಡಾ ಇದನ್ನು ಸಾರುತ್ತಿದೆ.

*ಅಲ್ಲಾಹನಿಗೆﷻ ಅತ್ಯಂತ ಅಪ್ರಿಯವಾದ ಮಹಾಪಾಪಗಳೆಂದರೆ ಶಿರ್ಕ್ ಮತ್ತು ಹೆತ್ತವರಿಗೆ ಪೀಡನೆ"*

*ಅಲ್ಲಾಹನಿಗೆ ಅತ್ಯಂತ ಪ್ರಿಯವಾದುದು ಕ್ಲಪ್ತ ಸಮಯಕ್ಕೆ ನಮಾಝ್, ತಾಯಿ ತಂದೆಯವರಿಗೆ ಸೌಜನ್ಯ ಹಾಗೂ ಜಿಹಾದ್"*

*ತಂದೆ ತಾಯಿಯನ್ನು ಪೀಡಿಸುವವನಿಗೆ ಅಲ್ಲಾಹುﷻ ಮತ್ತು ಮಲಕುಗಳ ಶಾಪವಿದೆ.* ಅವನ ಯಾವುದೇ ಫರ್ಳ್-ಸುನ್ನತ್ ಆರಾಧನೆಗಳು ಅಸ್ವೀಕೃತ'
ದೀರ್ಘಾಯುಷ್ಯ ಹಾಗೂ ವಿಸ್ತೃತ ಅನುಕೂಲ ಬೇಕೆಂದಾದರೆ ಹೆತ್ತವರೊಂದಿಗೆ ಚೆನ್ನಾಗಿ ವರ್ತಿಸಿರಿ.
*ಒಬ್ಬನು ಬಂದು "ನನಗೆ ಜಿಹಾದ್ಗೆ ಸೇರಲು ಅನುಮತಿ ಕೊಡಿರಿ" ಎಂದು ಕೇಳಿಕೊಂಡಾಗ "ನಿನಗೆ ತಾಯಿ ತಂದೆಯರಿದ್ದಾರಾ"?*
*ಎಂದು ನಬಿಯವರುﷺ ಕೇಳಿದಾಗ.?* ಹೌದು ಎಂದರು.ಹೋಗು ಅವರ ಸೇವೆ ಮಾಡು, ಅದುವೇ ಜಿಹಾದ್' ಎಂದರು. "ಎಲ್ಲಾ ಪಾಪಗಳ ಶಿಕ್ಷೆಯನ್ನು ಪರಲೋಕಕ್ಕೆ ಮುಂದೂಡಲಾಗುತ್ತದೆ. *ಆದರೆ ಹೆತ್ತವರನ್ನು ನೋಯಿಸಿದ ಪಾಪಗಳ ಫಲ ಇಹದಲ್ಲೇ ದೊರೆಯುವುದು.*

*ಆದ್ದರಿಂದ ತಂದೆ ತಾಯಿಯನ್ನು ಅರ್ಥ ಮಾಡಿಕೊಂಡು ಉತ್ತಮ ರೀತಿಯಲ್ಲಿ ವರ್ತಿಸಿ,ಅವರ ಮನಸ್ಸಿಗೆ ನೋವನ್ನುಂಟು ಮಾಡದೆ,* ಎಲ್ಲಾ ಅತ್ಯಾವಶ್ಯ ಅನುಕೂಲಗಳನ್ನು ಮಾಡಿಕೊಟ್ಟು  ಉತ್ತಮ ಮಕ್ಕಳಾಗಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಬೇಕು.
*ಅಲ್ಲಾಹುﷻ ನಮಗೆಲ್ಲರಿಗೂ ತೌಫೀಖ್ ನೀಡಲಿ.*
*ಆಮೀನ್ ಯಾರಬ್ಬಲ್ ಆಲಮೀನ್.*

*ಮುಗಿಯಿತು...*

*ನಮ್ಮ ಹಬೀಬ್ ತ್ವಾಹ ರಸೂಲ್  ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಙಳ ಮೇಲೆ 3 ಸ್ವಲಾತ್ ಹೇಳುವ.*
*📿📿اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله.*📿
✍🏻 *ಎಂ.ಫಯಾಝ್*
*ಬೀಸಿರೋಡು(ಪಿಸಿ)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...