Skip to main content

ಕುರ್ ಆನಿನ ಮಹಿಮೆ

ಕುರ್ ಆನಿನ ಮಹಿಮ
✍🏻 *ಎಂ.ಫಯಾಝ್*
*ಬೀಸಿರೋಡು(ಪಿಸಿ)*
🌿🌷🌿🌷🌿🌷🌿🌷🌿🌷🌿

*ಪ್ರವಾದಿ ಮುಹಮ್ಮದ್ ಮುಸ್ತಫಾﷺ ರವರಿಗೆ ಅಲ್ಲಾಹುﷻ ಅವತೀರ್ಣಗೊಳಿಸಿದ ದೇವವಾಣಿಯೇ ಪವಿತ್ರ ಕುರ್ಆನ್. ಅದು ಮುಸಲ್ಮಾನರಿಗೆ ಮಾತ್ರ ಸೀಮಿತವಾದ ಗ್ರಂಥವಲ್ಲ. ಸಕಲ ಮಾನವರಿಗೆ ಜೀವನ ಮತ್ತು ನಡವಳಿಕೆಗಳ ಕುರಿತು ನಿರ್ದೇಶಿತವಾದ ರೀತಿ ನೀತಿಗಳ ಸಮಾಹಾರ.*

ಕುರ್ಅನಿನ ನಿರ್ದೇಶನಗಳನ್ನು ಅಕ್ಷರಸ ಪಾಲಿಸಿದ ಅರಬ್ ಜನಾಂಗವು ಬಲು ದೊಡ್ದ ಸಾಧನೆಯನ್ನು ಮಾಡಿತು. ಕುರ್ಆನಿನಿಂದ ಸ್ಫೂರ್ತಿ ಪಡೆದು ಅಪರಿಮಿತ ಸಾಧನೆ, ಸಾಮರ್ಥ್ಯ, ತ್ಯಾಗ, ಸಚ್ಚಾರಿತ್ರ್ಯಗಳ ಬಲವನ್ನು ಪಡೆದು ಅರಬ್ ಭೂಕಂಡವನ್ನೇ ತನ್ನ ಆಡಳಿತ ವ್ಯವಸ್ಥೆಗೊಳಪಡಿಸಿತು. *ಈ ಜನಾಂಗವು ಕುರ್ಆನ್ ಅವತೀರ್ಣಗವಾಗುವ ಮುಂಚೆ ಅತ್ಯಂತ  ಅನಾಗರಿಕವೂ ಶೋಷಿತವೂ ಅಜ್ಞಾನಂಧಕಾರದಲ್ಲಿ ಮುಳುಗಿದ ಸಮೂಹ ಆಗಿತ್ತು*.

ಗುಂಪುಗಾರಿಕೆಯಲ್ಲಿ ಹರಿ ಹಂಚಾಗಿ ಛಿದ್ರ ಛಿದ್ರವಾಗಿ ಹೋಗಿದ್ದ ಅರಬ್ ಜನಾಂಗ ಪರಸ್ಪರ ಕಚ್ಚಾಡುತ್ತಿತ್ತು. ಸರ್ವ ಸಮ್ಮತವಾದ ಓರ್ವ ನಾಯಕನಿರಲಿಲ್ಲ. ರಟ್ವೆ ಬಲವೇ ಪ್ರಧಾನವಾಗಿತ್ತು. ಅಬಲರು ಸಬಲರ ದಾಸ್ಯದಲ್ಲಿ ಕೊಳೆಯುತ್ತಿದ್ಡರು. *ಹೆಣ್ಣಿ ನ ಬಾಳು ಪಶುವಿಗಿಂತಲೂ ಕೀಳಾಗಿತ್ತು. ಇಂತಹ ಜನತೆಯನ್ನು ಕೇವಲ ಕೆಲವೇ ದಶಕಗಳೊಳಗೆ ನಾಗರಿಕತೆಯ ಉತ್ತುಂಗಕ್ಕೇರಿಸಿ ಬಲಿಷ್ಠ ಹಾಗೂ ಮಾದರೀ ಯೋಗ್ಯ ಜನಾಂಗವನ್ನಾಗಿ ರೂಪಿಸಿದ ಮಹಾ ಶಕ್ತಿಯೇ ಪರಿಶುದ್ಧ ಕುರ್ಆನ್.*

ಕುರ್ಆನ್ ಯಾವುದೇ ಒಂದು ನಿರ್ದಿಷ್ಟ ವಿಷಯಕ್ಕೆ ಸೀಮಿತವಲ್ಲ . *ಆದರೆ ಅದರಲ್ಲಿ ಪ್ರತಿಪಾದಿಸದ ವಿಷಯವೂ ಇಲ್ಲ. ಕುರ್ಆನ್ ಒಂದು ವೇದಗ್ರಂಥವೇ? ಎಂಬ ಪ್ರಶ್ನೆಗೆ ಹೌದು ಎಂಬ ಉತ್ತರ ಸರಿಯಾಗುವಂತೆಯೇ ಅದೊಂದು ಚರಿತ್ರೆ ಗ್ರಂಥವೇ ಎಂಬ ಪ್ರಶ್ನೆಗೂ ಹೌದು ಎಂಬ ಉತ್ತರವೂ ಸರಿಯಾಗುತ್ತದೆ. ನೀತಿ ಗ್ರಂಥ, ತತ್ವಶಾಸ್ತ್ರ ಗ್ರಂಥ, ವಿಜ್ಞಾನ ಗ್ರಂಥ, ಸಂವಿಧಾನ ಗ್ರಂಥ ಹೀಗೆ ಯಾವ ದೃಷ್ಟಿಕೋನದಲ್ಲಿ ವೀಕ್ಷಿಸಿದರೂ ಕುರ್ಆನಿಗೆ ಸಲ್ಲುತ್ತದೆ.*

*ಈ ಬಗ್ಗೆ ಕೆಲವೊಂದು ಹದೀಸ್ಗಳು.*
*-------------------------------*

*ಅಲ್ಲಾಹುﷻ ಹೇಳುತ್ತಾನೆ.*
*ಕುರ್ ಆನಿನಲ್ಲಿ ಸತ್ಯ ವಿಶ್ವಾಸಿಗಳಿಗೆ ಅನುಗ್ರಹವಿದೆ ಶಮನವಿದೆ. (ಕುರ್ ಆನ್)*

*ಕುರ್ ಆನ್ ಪಾರಾಯಣ ಮಾಡಿರಿ. ಅದು ಅದನ್ನು ಓದಿದವರಿಗೆ ಪರಲೋಕದಲ್ಲಿ ಶಿಫಾರಸುದಾರನಾಗಿ ಬರುವುದು.*
*(ವ: ಅಬೂಉಮಾಮಾ. ಉ: ಮುಸ್ಲಿಮ್)*

*ಕುರ್ಆನ್ ಮತ್ತು ಇಹದಲ್ಲಿ ಅದರ ಪ್ರಕಾರ ಜೀವಿಸಿದವರನ್ನು ಪರಲೋಕದಲ್ಲಿ ಹಾಜರು ಪಡಿಸಲಾಗುವುದು. ಅಲ್-ಬಕರಾ ಮತ್ತು ಆಲು ಇಮ್ರಾನ್ ಸೂರಾಗಳು ಅವುಗಳನ್ನು ಪಾರಾಯಣ ಮಾಡಿದವರ ಪರವಾಗಿ ವಾದಿಸುವುದು.*
(ವ: ನವಾಸ್ ಬಿನ್ ಸಮ್ಅನ್. ಉ: ಮುಸ್ಲಿಮ್)

*ಕುರ್ ಆನ್ ಕಲಿತು, ಮತ್ತು  ಕಲಿಸಿದವನು ನಿಮ್ಮ ಪೈಕಿ ಅತ್ಯಂತ ಶ್ರೇಷ್ಠನು.*
*(ವ:ಉಸ್ಮಾನ್ ಬಿನ್ ಅಪ್ಫಾನ್. ಉ: ಬುಖಾರಿ)*

*ಕುರ್ ಆನನ್ನು ಚೆನ್ನಾಗಿ ಕಲಿತು ಅದನ್ನು ಪಾರಾಯಣ ಮಾಡುವವನು ಉನ್ನತವಾದ ಮಲಕುಗಳ ಜೊತೆಗಿರುವನು. ಬಹಳ ಪ್ರಯತ್ನ ಪೂರ್ವಕವಾಗಿ ಕುರ್ ಆನ್ ಓದುವವನಿಗೆ ಎರಡು ಪುಣ್ಯಗಳಿವೆ.*
*(ವ: ಆಇಶಾ. ಉ: ಬು.ಮು.)*

ಕುರ್ ಆನ್ ಪಾರಾಯಣ ಮಾಡುವ ಸತ್ಯವಿಶ್ವಾಸಿಯು ಮಾದಲದ ಹಣ್ಣಿನಂತೆ. ಅದರ ಪರಿಮಳವೂ ರುಚಿಯೂ ಶ್ರೇಷ್ಠ.
*ಕುರ್ ಆನ್ ಓದದ ವ್ಯಕ್ತಿ ಖರ್ಜೂರದಂತೆ. ಅದಕ್ಕೆ ಪರಿಮಳವಿಲ್ಲ. ಅದರ ರುಚಿ ಶ್ರೇಷ್ಠ. ಕುರ್ ಆನ್ ಓದುವ ವ್ಯಕ್ತಿಯು ರೈಹಾನ್ ಸಸ್ಯದಂತೆ. ಅದರ ಪರಿಮಳ ಹಿತಕರ. ಅದರೆ ರುಚಿ ಮಾತ್ರ ಕಹಿ.*
ಕುರ್ ಆನ್ ಓದದ ಕಪಟಿಯು ಕಾಟು ಸೌತೆಯಂತೆ. ಅದಕ್ಕೆ, ಪರಿಮಳವಿಲ್ಲ. ರುಚಿಯೂ ಕಹಿ.
(ವ: ಅಬೂಮೂಸಾ. ಉ: ಬು.ಮು. )

*ಅಲ್ಲಾಹುﷻ ಈ ಗ್ರಂಥದ ಮೂಲಕ ಕೆಲವರ ಸ್ಥಾನ ಏರಿಸುವನು, ಕಲವರನ್ನು ಕೆಳಗಿಳಿಸುವನು.*
*(ವ: ಉಮರ್ ಬಿನ್ ಖತ್ತಾಬ್. ಉ: ಮುಸ್ಲಿಮ್)*

ಓರ್ವ ವ್ಯಕ್ತಿ ಎರಡು ಹಗ್ಗಗಳಿಂದ ತನ್ನ ಕುದುರೆಯನ್ನು ಪಕ್ಕದಲ್ಲಿ ಕಟ್ವಿಹಾಕಿಕೊಂಡು,ಅಲ್-ಕಹ್ಫ್ ಸೂರಾ ಓದತೊಡಗಿದರು. *ಒಂದು ಕಾರ್ಮೋಡವು ಅವರ ಬಳಿ ಬಂದು ಆವರಿಸತೊಡಗಿತು. ಕುದುರೆಯು ನೆಗೆಯತೊಡಗಿತು. ಮರುದಿನ ಈ ವಿಷಯವನ್ನು ನಬಿﷺರವರಲ್ಲಿ* ಹೇಳಿದಾಗ
 "ಆ ಮೋಡವು ಮಲಕುಗಳ ಗುಂಪಾಗಿತ್ತು. ಕುರ್ಆನ್ ಪಾರಾಯಣವನ್ನು ಕೇಳಿ ಅವರು ಇಳಿದು ಬಂದಿದ್ದರು" ಎಂದರು.
(ವ: ಬರಾಅ. ಉ: ಬು.ಮು )

*ಕುರ್ ಆನ್ ನಿಂದ ಒಬ್ಬಾತ ಒಂದು ಅಕ್ಷರ  ಓದಿದರೂ ಅವನಿಗೆ ಪುಣ್ಯವಿದೆ,ಒಂದು ಪುಣ್ಯಕ್ಕೆ ಹತ್ತು ಪಟ್ಟು ಫಲ.* ಆಲಿಫ್ ಲಾಮ್ ಮೀಮ್ ಒಂದಕ್ಷರವಲ್ಲ ಮೂರಕ್ಷರ.
(ವ: ಇಬ್ನು ಮಸ್ಊದ್ ಉ: ತುರ್ಮುದಿ.)

*ಕುರ್ ಆನ್ನಿಂದ ಏನನ್ನೂ ಬಾಯಿಪಾಠ  ಮಾಡಿಕೊಳ್ಳದವನು ಖಾಲಿಮನೆಯಂತೆ.*
(ವ: ಇಬ್ನು ಅಬ್ಬಾಸ್. ಉ: ತುರ್ಮುದಿ)

*ಕುರ್ ಆನ್ ಪಾರಾಯಣ ಮಾಡಿದವನೊಂದಿಗೆ ಪರಲೋಕದಲ್ಲಿ  ಹೀಗೆನ್ನಲಾಗುವುದು,*
*ಇಹದಲ್ಲಿ ನೀನು ಸಾವಧಾನದಿಂದ ಕುರ್ಆನ್ ಓದಿರುವಂತೆಯೇ ಇಲ್ಲೂ ಸಾವಧಾನದಿಂದ ಓದುತ್ತಾ ಇರು. ಹಾಗೇ ಮೇಲೇರುತ್ತಾ ಹೋಗು. ನೀನು ಓದುವ ಕೊನೆಯ ಆಯತ್ ನಲ್ಲಿ ನಿನ್ನ ಸ್ಥಾನ.*
(ವ: ಅಬ್ದುಲ್ಲಾಹ್ ಬಿನ್ ಅಮ್ರ್ ಉ: ಅಬೂದಾವೂದ್ )

*ಅಲ್ಲಾಹುﷻವಿಗೆ ಸೃಪ್ಟಿಗಳಿಗಿಂತ ಎಷ್ಟು ಸ್ಥಾನವಿದೆಯೋ ಅಷ್ಟೇ ಸ್ಥಾನ ಅವನ ನುಡಿಗಳಿಗೆ ಸೃಷ್ಟಿಗಳ ನುಡಿಗಳಿಗಿಂತ ಇದೆ" ಹದೀಸ್.*

"ಕುರ್ ಆನಿನ ಒಂದಕ್ಷರ ಪಾರಾಯಣಕ್ಕೆ ಹತ್ತು ಪಟ್ಟು ಷುಣ್ಯವಿದೆ. ಅಲಿಫ್ ಲಾಮ್ ಮೀಮ್ ಒಂದಕ್ಷರವಲ್ಲ, ಮೂರಕ್ಷರ" ಹದೀಸ್

*ಸ್ವಹಾಬಿಯೊಬ್ಬರು ತನ್ನ ಕುದುರೆಯನ್ನು ಪಕ್ಕಕ್ಕೆ ಕಟ್ಟಿ ಹಾಕಿ ಅಲ್ ಕಹ್ಫ್ ಓದುತ್ತಿದ್ದರು. ಕಾರ್ಮೋಡವೊಂದು  ಆವರಿಸಿದಾಗ ಕುದುರೆ ನಗೆಯ ತೊಡಗಿತು.* ನಂತರ ಈ ವಿಷಯ ಹೇಳಿದಾಗ *ನಬಿﷺರವರು: "ಅದು ಪಾರಾಯಣದ ವೇಳೆ ದಟ್ಟೈಸಿ ಬರುವ ಶಾಂತಿಯ ಮಲಕುಗಳು" ಎಂದರು.* (ಬುಖಾರಿ, ಮುಸ್ಲಿಮ್)

*ಮಸೀದಿಯಲ್ಲಿ ಒಟ್ಟು ಸೇರಿ ಕುರ್ ಆನ್ ಅಧ್ಯಯನ ನಡೆಸುವವರಿಗೆ ಅಲ್ಲಾಹನ ವಿಶೇಷಾನುಗ್ರಹ ಇಳಿದು ಬರುವುದು. ಮಲಕುಗಳು ಅವರನ್ನು ಆವರಿಸುವರು. ಅಲ್ಲಾಹನು ತನ್ನ ನಿಕಟದಲ್ಲಿ ಇವರ ಪ್ರಶಂಶೆ ಮಾಡುತ್ತಿರುವನು" ಹದೀಸ್.*

"ಕುರ್ ಆನಿನಲ್ಲಿ ಸತ್ಯ ವಿಶ್ವಾಸಿಗಳಿಗೆ ಶಮನವಿದೆ. ಅನುಗ್ರಹವಿದೆ (ಕುರ್ ಆನ್)

*ಎರಡು ರೋಗ ಶಮನಗಳನ್ನು ಅವಲಂಬಿಸಿಕೊಳ್ಳಿ.* ಜೇನು ಮತ್ತು ಕುರ್ ಆನ್"(ಹದೀಸ್)

*ಕುರ್ ಆನ್ ಅತ್ಯಂತ ಶ್ರೇಷ್ಟ ಔಷಧಿ,*
*ವಿಷಬಾಧೆಯಾದ ವ್ಯಕ್ತಿಗೆ  ಸ್ವಹಾಬಿಗಳು ಫಾತಿಹಾ ಓದಿ ಶಮನಗೊಳಿಸಿದರು.* *ನಬಿﷺ* ರವರು ಅದನ್ನು ಅಂಗೀಕರಿಸಿದರು" (ಹದೀಸ್)

*ಕುರ್ಆನಿನಲ್ಲಿ ವಿಶೇಷ ಸೂರಾಗಳು*
*------------------------------------*
*ಫಾತಿಹಾ ಕುರ್ ಆನಿನ  ಮೂರಂಶದಲ್ಲಿ ಎರಡಂಶಕ್ಕೆ ಸಮ.(ಹದೀಸ್)*

"ಫಾತಿಹಾದಲ್ಲಿ ಸರ್ವ ರೋಗಗಳಿಗೆ ಶಮನವಿದೆ" (ಹದೀಸ್)

*ರಾತ್ರಿ ಮಲಗಲು ತಯಾರಾಗುವ ಮುಂಚೆ ಫಾತಿಹಾ ಮತ್ತು ಇಖ್ಲಾಸ್ ಓದಿದರೆ ಅನಾಹುತಗಳಿಂದ ರಕ್ಷಣೆ ದೊರೆಯುವುದು" (ಹದೀಸ್)*
ನಳನಳಿಸುತ್ತಿರುವ ಎರಡು ಸೂರಾಗಳು ಎಂಬ ವಿಶೇಷ ಹೆಸರಿಗೆ ಪಾತ್ರವಾಗುವ *ಅಲ್-ಬಕರಾ ಮತ್ತು ಆಲು ಇಮ್ರಾನ್  ಸೂರಾಗಳನ್ನು ಓದಿರಿ. ಅವರೆಡೂ ತಮ್ಮ ಪಾರಾಯಣಗಾರರನ್ನು ಪರಲೋಕದಲ್ಲಿ ಸುತ್ತುವರಿದು ರಕ್ಷಿಸುತ್ತದೆ.*

*ಕುರ್ಆನಿನಲ್ಲಿ ವಿಶೇಷ ಸೂರಾಗಳು*
*----------------------------------*
*"ಒಂದು ಆಯತ್ ಓದಿದರೂ ಕೂಡಾ  ಮಹ್ ಶರಾದಲ್ಲಿ ಅದು ಪ್ರಕಾಶವಾಗಿ ಪ್ರಯೋಜನಕ್ಕೆ ಬರುವುದು" (ಹದೀಸ್)*

"ಒಂದು ಸಲ ಯಾಸೀನ್ ಪಾರಾಯಣ. ಎರಡು ಬಾರಿ ಸಂಪೂರ್ಣ ಕುರ್ ಆನ್ ಪಾರಾಯಣಕ್ಕೆ ಸಮ" (ಹದೀಸ್)

*"ರಾತ್ರಿ ಯಾಸೀನ್ ಓದಿ ಮಲಗಿದವನು ಬೆಳಿಗ್ಗೆ ಎದ್ದಾಗ ಪಾಪ ಮುಕ್ತವಾಗಿರುತ್ತಾನೆ" , (ಹದೀಸ್)*

*'ಹಾಮೀಮ್ ಅದ್ಧುಖಾನ್ ರಾತ್ರಿ ಓದಿದವನಿಗೆ ಬೆಳಗ್ಗಿನ ತನಕ ಎಪ್ಪತ್ತು ಸಾವಿರ ಮಲಕುಗಳು ಪ್ರಾರ್ಥಿಸುವರು"(ಹದೀಸ್)*

'ಅಲ್-ಕಹ್ಫ್ ಸೂರಾ ತನ್ನ ಪಾರಾಯಣಗಾರರು ಮತ್ತು ನರಕದ ಮಧ್ಯೆ ತಡೆಗೊಳಿಡೆಯಾಗಿ ನಿಲ್ಲುವುದು" (ಹದೀಸ್)

*ಮೂವತ್ತು ಆಯತ್ಗಳಿರುವ ತಬಾರಕ ಸೂರಾ ಪಾರಾಯಣ ರೂಡಿ ಮಾಡಿಕೊಂಡವರಿಗೆ ವಾಪ ಮುಕ್ತಿ ದೊರೆಯುವ ತನಕ ಶಿಪಾರಸ್ಸು ಮಾತ್ರವೇ ಇರುವುದು" (ಹದೀಸ್)*

*'ಆಯತುಲ್ ಕುರ್ಸಿ' ಅಲ್ಲಾಹುﷻವಿನ ಗ್ರಂಥದ ಅತ್ಯಂತ ಗಣ್ಯ ಆಯತ್' (ಹದೀಸ್)*

ಪ್ರತೀ ರಾತ್ರಿ ಅಲ್-ವಾಕಿಅ ಓದಿದವರಿಗೆ ದಾರಿದ್ರ್ಯ  ಬರುವುದಿಲ್ಲ. (ಹದೀಸ್)

*ಝಿಲ್ ಝಾಲ್" ಸೂರಾದ ಪಾರಾಯಣ ಅರ್ಧ ಕುರ್ ಆನಿಗೆ ಸಮ. 'ಕಾಫಿರೂನ್' ನಾಲ್ಕನೇ ಒಂದಕ್ಕೊ ಇಖ್ಲಾಸ್  ಮೂರನೇ ಒಂದಕ್ಕೊ ಸಮ" (ಹದೀಸ್)*

ಅತ್ತಕಾಸುರ್ ಸೂರಾವನ್ನು ಒಮ್ಮೆ ಓದಿದರೆ ಸಾವಿರ ಅಯತ್ಗಳನ್ನು ಓದಿದ ಪುಣ್ಯವಿದೆ' (ಹದೀಸ್)

*ನಮಾಝಿನಲ್ಲಿ ಅಥವಾ ಇನ್ನಿತರ ವೇಳೆಯಲ್ಲಿ ನೂರು ಬಾರಿ ಇಖ್ಲಾಸ್ ಓದಿದವನನ್ನು ನರಕ ಮುಕ್ತನೆಂದು ದಾಖಲಿಸಲಾಗುವುದು"*
*(ಹದೀಸ್)*

*ಹದೀದ್, ವಾಕಿಅ, ಅರ್ರಹ್ಮಾನ್ ಸೂರಾಗಳ ಪಾರಾಯಣ ರೂಡಿಮಾಡಿಕೊಂಡವನು/ಳು ಆಕಾಶ ಭೂಮಿಗಳ ಮಧ್ಯೆ (ಇಹದಲ್ಲೇ) ಸ್ವರ್ಗಕ್ಕೆ ಅರ್ಹನಾದವನು ಎಂದು ಪ್ರಸಿದ್ಧನಾಗುತ್ತಾನೆ" (ಹದೀಸ್)*

"ಲಮ್ ಯಕುನ್' ಸೂರಾ ಓದುವವನನ್ನುದ್ಧೇಶಿಸಿ *ಅಲ್ಲಾಹುﷻ ಹೇಳುತ್ತಾನೆ* ನೀನು ತೃಪ್ತನಾಗುವ ರೀತಿಯಲ್ಲಿ ನಿನಗೆ ಸ್ವರ್ಗದಲ್ಲಿ ಅನುಕೂಲ ಕೊಡುತ್ತೇನೆ.

*"ವಲ್ ಆದಿಯಾತಿ' ಸೂರತ್ ಇಡೀ ಕುರ್ ಆನಿನ ಅರ್ಧಕ್ಕೆ ಸಮ. ಇಝಾಜಾಅ ಕಾಲಂಶಕ್ಕೆ ಸಮವಾಗಿರುತ್ತದೆ. (ಹದೀಸ್)*

*ಸಂಪೂರ್ಣ ಕುರ್ ಆನ್ ಓದಿ ಮುಗಿಸಿದಾಗ ಹತ್ತು ಸಾವಿರ ಮಲಕುಗಳು ಅವನಿಗಾಗಿ ಪ್ರಾರ್ಥಿಸುವರು" (ಹದೀಸ್)*

*ಅಲ್ಲಾಹುﷻ ನಮಗೆಲ್ಲರಿಗೂ ಕುರ್ಆನ್ ಪಾರಾಯಣ ಮಾಡಲು,ಪರಲೋಕದಲ್ಲಿ ವಿಜಯಿಗಳಾಗಲು ತೌಫೀಕ್ ನೀಡಲಿ ಆಮೀನ್ ಯಾರಬ್ಬಲ್ ಆಲಮೀನ್...*
*(ಮುಗಿಯಿತು....*)

*_ನಮ್ಮ ಹಬೀಬ್ ತ್ವಾಹ ರಸೂಲ್  ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಙಳ ಮೇಲೆ 10 ಸ್ವಲಾತ್ ಹೇಳುವ_*
*📿 اللَّهُمَّ صَلِّ عَلَى سَيِّدِنَا مُحَمَّدٍ النَّبِيِّ الأُمِّيِّ الْحَبِيبِ الْعَالِي الْقَدْرِ الْعَظِيمِ الْجَاهِ وَعَلَى آلِهِ وَصَحْبِهِ وَسَلِّمْ.📿📿*
✍🏻 *ಎಂ.ಫಯಾಝ್*
*ಬೀಸಿರೋಡು(ಪಿಸಿ)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...