ನಾವು ಎಷ್ಟು ಸ್ವಲಾತ್ ಹೇಳಿದರೂ ಕೆಲವೊಮ್ಮೆ ನಮ್ಮ ಉದ್ದೇಶ ಈಡೇರುವುದಿಲ್ಲ ಯಾಕೆ
✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)
ನಾನು ದಿನನಿತ್ಯ ಸ್ವಲಾತ್ ಹೇಳುವೆನು.ನಾನು ನಿನ್ನೆ 4444 ನಾರಿಯತ್ ಸ್ವಲಾತ್ ಇಬ್ ರಾಹೀಂ ಸ್ವಲಾತ್ ಹಾಗೂ ಸ್ವಲಾತುತ್ತಾಜ್,ಅಹ್ ಲಮು ಸ್ವಲಾತ್ ಹಾಗೂ ಇತರ ಎಲ್ಲಾ ಸ್ವಲಾತನ್ನು ಹೇಳಿರುವೆನು.
ಆದರೂ ನಾನುದ್ದೇಶಿಸಿದ ಯಾವ ಕಾರ್ಯನೂ ಆಗ್ತಾ ಇಲ್ಲಾ. ಯಾಕೆ ಎಂದು ಮನಸ್ಸಿನಲ್ಲಿ ಗೊಂದಲ ಪಡುವವರಿಗೆ..
ನಾವು ಸ್ವಲಾತ್ ಹೇಳುವಾಗ ಬರೀಭೂಲೋಕದ ಕಾರ್ಯ ನೆರವೇರಲು ಮಾತ್ರ ಸ್ವಲಾತ್ ಹೇಳಬಾರದು. ಪರಲೋಕ ವಿಜಯಕ್ಕಾಗಿಯು ಸ್ವಲಾತ್ ಹೇಳಬೇಕು.ಒಳ್ಳೆಯ ಇಖ್ಲಾಸಿನೊಂದಿರಬೇಕು.
ನಮಾಝ್ ದಿನನಿತ್ಯ ಕಳಾ ಮಾಡದೇ ನಿರ್ವಹಿಸಬೇಕು.ಸುಳ್ಳು,ವಂಚನೆ,ವ್ಯಭಿಚಾರ ಮತ್ತೊಬ್ಬರ ಬಗ್ಗೆ ಗೀಬತ್ ಫಿತ್ನ ಫಸಾದ್ ಮುಂತಾದವುಗಳಿಂದ ದೂರವಿರಬೇಕು. ಆಲಿಂಗಳನ್ನು ಅಪಹಾಸ್ಯ ಮಾಡಬಾರದು.ತಪ್ಪು ಮಾಡದ ನಿರಪರಾಧಿಗಳನ್ನು ಅಪರಾಧಿಗಳಾಗಿ ಮಾಡಬಾರದು. ಅಲ್ಲಾಹನಿಗೆ ಇಷ್ಟವಿಲ್ಲದ ಯಾವುದೇ ಕಾರ್ಯದಲ್ಲೂ ತೊಡಗಬಾರದು.ಬಿದ್ಅತ್ ನಿಂದ ಬಿದ್ಅತ್ ಗಾರನಿಂದ ದೂರವಿರಬೇಕು.
ಯಾರಿಗೂ ನೋವಾಗುವಂತಹ ಮಾತನ್ನಾಡಬಾರದು.ಸನ್ಮನಸ್ಸಿನಿಂದ ಜೀವಿಸಬೇಕು,ತಪ್ಪು ಮಾಡಿದವರಿಗೆ ಮತ್ತೊಬ್ಬರ ಮುಂದೆ ಫಳೀಹತ್ ಮಾಡದೇ ಗೊತ್ತಾಗುವ ರೀತಿಯಲ್ಲಿ ಅವರಿಗೆ ಒಳ್ಳೆಯದನ್ನು ಹೇಳಿಕೊಡಬೇಕು.
ಎಲ್ಲರೊಂದಿಗೆ ಪ್ರೀತಿಯಿಂದಿರಬೇಕು. ತಂದೆ ತಾಯಿಯನ್ನು ನೋವಿಸುವವರಾಗಬಾರದು.ಇಸ್ಲಾಮಿನ ಶರೀಅತನ್ನು ಅನುಸರಿಸಬೇಕು.ಶರೀಅತಿಗೆ ವಿರುದ್ಧವಾಗಿರಬಾರದು.ಎಲ್ಲವೂ ದೀನೀ ಚೌಕಟ್ಟಿನಲ್ಲಿರಬೇಕು.
ನಮ್ಮ ಎಲ್ಲಾ ಗುಣ ನಡತೆಗಳು ಅಲ್ಲಾಹುﷻ ವಿಗೂ ಹಾಗೂ ನಬಿ ಮುಹಮ್ಮದ್ ಮುಸ್ತಫಾ ﷺ ತಂಗಳವರಿಗೂ ಇಷ್ಟವಾಗುವ ರೀತಿಯಲ್ಲಿರಬೇಕು.
ಈ ರೀತಿ ಇದ್ದರೆ ಮಾತ್ರ ನಾವು ಉದ್ದೇಶಿಸಿದ ಇಹದ ಕಾರ್ಯವೆಲ್ಲವೂ ತಕ್ಷಣ ನೆರವೇರುತ್ತದೆ.
ಇಹದ ಉದ್ದೇಶವಿಟ್ಟು ಮಾತ್ರ ಸ್ವಲಾತ್ ಹೇಳಿಯೂ ಈಡೇರದಿದ್ದರೆ ಇಂಷಾಅಲ್ಲಾಹ್ ಅವರು ಹೇಳಿದ ಎಲ್ಲಾ ಸ್ವಲಾತಿಗೂ ಪರಲೋಕದಲ್ಲಿ ಪುಣ್ಯ ಸಿಗುವುದಂತೂ ಖಂಡಿತಾ ಅದರಲ್ಲಿ ಯಾರೂ ಸಂಶಯಪಡಬೇಕಾಗಿಲ್ಲ.
ಅಲ್ಲಾಹುﷻ ನಮ್ಮೆಲ್ಲರ ಪರಲೋಕ ಜೀವನವನ್ನು ಸಲಾಮತ್ ಮಾಡಲಿ.ಆಮೀನ್ ಯಾರಬ್ಬಲ್ ಆಲಮೀನ್.
✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)
Comments