ಬಿಳಿಯರಿಗೆ ನಡುಕ ಹುಟ್ಡಿಸಿದ ನಾಯಕ
---------------------------------------
📝 *ಶರೀಫ್ ಎ.ಪಿ. ಹೊಸತೋಟ*
*8105914587*
🍃🍃🍃🍃🍃🍃🍃🍃🍃🍃🍃
*ಬಿಳಿಯರಿಗೆ ಭಾರತದಲ್ಲಿ ಸವಾಲಾಗಿ ಅವರೊಂದಿಗೆ ಯಾವುದೇ ಮುಲಾಜು ತೋರದೇ ತಮ್ಮ ನಿಲವು ವ್ಯಕ್ತಪಡಿಸಿ ಬ್ರಿಟಿಷ್ ಮೇಧಾವಿಗಳೊಂದಿಗೆ ಸಮರ ಸಾರುವಲ್ಲಿ ಭಾರತದ ಸೂಫೀಪಂಥದ ನಾಯಕರು ನಿರತರಾಗಿದ್ದರು.*
ಅವರ ಪೈಕಿ ಸ್ವರ್ಣ ಲಿಪಿಗಳಲ್ಲಿ ಬರೆದಿಡಬೇಕಾದ ಅಗ್ರಗಣ್ಯ ನಾಯಕರಾಗಿದ್ದಾರೆ ವೆಳಿಯಂಗೋಡ್ ಉಮರ್ ಖಾಲ಼ೀ(ರ) ಎಂಬ ಮಹಾ ಶಕ್ತಿ.
ಸಮಾಜ ಸೇವಾ ಧೋರಣೆ ಅವರ ಹುಟ್ಟು ಗುಣ. ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದೆಯಾದರೂ ಬ್ರಿಟಿಷ್ ವಿರುದ್ಧ ಸೇನಾನಿಯಾಗಿ ಇತಿಹಾಸ ಪರದೆಗಳಲ್ಲಿ ಅಮರರಾದರುಕಾವ್ಯ-ಕವಿತೆ, ಯಾತ್ರೆಗಳ ಮೂಲಕ ವಿದೇಶೀ ಆಧಿಪತ್ಯದ ವಿರುದ್ಧ ಜನರನ್ನು ಜಾಗೃತಿ ಮೂಡಿಸಿದರು. ಟಿಪ್ಪುಸುಲ್ತಾನರ ಪತನದ ನಂತರ ಬಿಳಿಯರ ಅಡಿಪಾಯ ಇನ್ನಷ್ಟು ಗಟ್ಟಿಯಾಗುತ್ತಿದ್ದಂತೆ ಮುಸಲ್ಮಾನರೊಂದಿಗೆ ಕೀಳರಿಮೆಯ ಮನೋಭಾವ ತಾಳಿದರು. ಮಲಬಾರಿನ ಉದ್ಯೋಗಗಳಲ್ಲಿ ಹೆಚ್ಚಿನದ್ದೂ ಮಾಪಿಳೆಗಳಾಗಿದ್ದರು. 1772 ಮತ್ತು 1822 ರ ಕಾಲಘಟ್ಟದ ನಡುವೆ ಸುಮಾರು 82 ಕಾಳಗಗಳು ನಡೆದಿದೆ. ಉಮರ್ ಖಾಲ಼ೀ(ರ) ರನ್ನು ಆ ಕಾಲಘಟ್ಟದ ಅತ್ಯಂತ ದೊಡ್ಡ ಬ್ರಿಟಿಷ್ ವಿರೋಧಿಗಳಲ್ಲಿ ಒಬ್ಬರೆಂದು ಅಂದಿನ ಸದರ್ ಅದಾಲತ್ ನ್ಯಾಯಾಲಯದ ಜಡ್ಜ್ ಮದ್ರಾಸ್ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಕನೋಲೀ ಸಾಹೇಬನ ಕಾಲದಲ್ಲಿ ಬ್ರಿಟಿಷ್ ವಿರೋಧಿಗಳನ್ನು ಬಂಧಿಸಲೂ, ಗಡಿಪಾರು ಮಾಡಲೂ ಯೋಜನೆ ಹಾಕಿದ ನಂತರ ತಮ್ಮ ಬ್ರಿಟಿಷ್ ವಿರೋಧಿ ನಿಲುವು ಇನ್ನಷ್ಟು ಗಟ್ಟಿಯಾಯಿತು. ತೆರಿಗೆ ಕೇಳಲು ಬಂದ ನಿಂಬೂ ಸಾಹೇಬನೊಂದಿಗೆ *ಅಲ್ಲಾಹನ ಭೂಮಿಗೆ ತೆರಿಗೆ ವಿಧಿಸಲು ಏನು ಅರ್ಹತೆ..?* ಎಂದು ಪ್ರಶ್ನಿಸಿ ಕಂದಾಯ ನೀಡದೆ ಅವರನ್ನು ಮರಳಿ ಕಳುಹಿಸಿ ಅಸಹಕಾರ ಆಶಯವನ್ನು ಮೊದಲಬಾರಿಗೆ ತೋರ್ಪಡಿಸಿದ ನಾಯಕರೆನಿಸಿದರು.ಸಶೇಷ ಅವರನ್ನು ಬಂಧಿಸಿ ಸೆರೆಮನೆಗೆ ಕರೆದುಕೊಂಡು ಹೋದಾಗ ನಿಂಬೂಸಾಹೇಬನ ಮುಖಕ್ಕೆ ಉಗುಳಿ ಅವಮಾನಿಸುವ ಧೈರ್ಯ ತೋರಿರುವುದು ಉಲ್ಲೇಖನೀಯ. ಅಂತೆಯೇ ತುಕಡಿಯ ಆದೇಶದ ಮೇರೆಗೆ ನಿಂಬೂ ಸಾಹೇಬರು ಅವರನ್ನು ಸೆರೆಮನೆಯಲ್ಲಿರಿಸಿದರೂ ಮರುದಿನ ಸೆರೆಮನೆಯಲ್ಲಿ ಮಹಾನರನ್ನು ಕಾಣುತ್ತಿಲ್ಲ..ಬೀಗ ತೆಗಿಯದಯೇ ಮಹಾನರು ಜೈಲಿನಿಂದ ಪರಾರಿಯಾಗಿ ನಂತರ ಕೋಡಂಜೇರಿ ಮಸೀದಿಯಲ್ಲಾಗಿತ್ತು ಪ್ರತ್ಯಕ್ಷವಾದದ್ದು.ಈ ಸುದ್ದಿಯು ಆಧ್ಯಾತ್ಮಿಕ ನಾಯಕ ಉಮರ್ ಖಾಲಿ(ರ) ರವರ ಪವಾಡವಾಗಿ ಪ್ರಚುರಪಡೆಯಲಾಯಿತು.ಸರ್ಕಾರದ ವಿರುದ್ದ ಯುದ್ದ ಸಾರಿದರು ಎಂಬ ಪ್ರಕರಣದಲ್ಲಿ 1819 ಡಿಸೆಂಬರ್ 18 ಮಹಾನರನ್ನು ಕಾರಾಗೃಹಕ್ಕೆ ಕರೆದುಕೊಂಡು ಹೋಗುವ ದಾರಿ ಮದ್ಯೆ ನೂರಾರು ಸಂಖ್ಯೆಯ ಸಾರ್ವಜನಿಕರು ತಡೆಯಲು ಯತ್ನಿಸಿದಾಗ 'ಓ ನನ್ನ ಮುಸ್ಲಿಂ ಅಮುಸ್ಲಿಂ ಸಹೋದರರೇ..ನಾವೆಲ್ಲರೂ ದೇವ ದಾಸರಾಗಿದ್ದೇವೆ , ಇಸ್ಲಾಂ ಶಾಂತಿಯನ್ನು ಬಯಸುತ್ತದೆ, ಆದ್ದರಿಂದಲೇ ನನ್ನ ಹೆಸರಿನಲ್ಲಿ ಯಾರೂ ಯಾವುದೇ ಹಿಂಸೆಗೆ ಮುಂದಾಗಬಾರದು'. ಎಂದರು.ಜೈಲುವಾಸ ಒಂದು ಅನುಗ್ರಹವಾಗಿದೆ.
ಸೆರೆಮನೆಯಿಂದ ಆತ್ಮೀಯ ಗುರು ಮಂಬುರಂ ತಙಳರಿಗೆ ಕಳುಹಿಸಿದ ಪತ್ರಗಳು ಅದಕ್ಕೆ ಅವರು ಕಳುಹಿಸಿದ ಪ್ರತ್ಯುತ್ತರಗಳು ಇತಿಹಾಸ ಪ್ರಸಿದ್ದವಾದದ್ಧಾಗಿದೆ.ಸೆರೆಮನೆಯಿಂದ ಕ್ಷಮಾಪಣೆ ಹೇಳಲೂ, ಕಂದಾಯ ಪಾವತಿಸುವಂತೆಯೂ ಒತ್ತಾಯಿಸಿದರೂ ಮಹಾನರು ತಲೆಬಾಗಲಿಲ್ಲ.
ಗಾಂಧೀಜಿಯ ಅಸಹಕಾರ ಚಳುವಳಿಗಿಂತಲೂ ದಶಕಗಳ ಮುಂಚೆಯೇ ಮಲಬಾರಿನ ಒಂದು ಗ್ರಾಮದಲ್ಲಿ ಕಂದಾಯ ನೀಡದೆ ಅಸಹಕಾರ ನಿಲುವು ವ್ಯಕ್ತಪಡಿಸಿರುವುದು ಮಹಾನರ ಪ್ರಸಕ್ತಿಯಾಗಿದೆ.
ಹೀಗೆ ತಮ್ಮ ಜೀವನದ ಸಿಂಹಪಾಲು ಭಾಗವನ್ನು ಬ್ರಿಟಿಷ್ ವಿರುದ್ಧ ಹೋರಾಟದಲ್ಲಿ ತೊಡಗಿದರು.
ಆದರೂ *ಇಂತಹ ನಿಷ್ಕಳಂಕ ಹೋರಾಟಗಾರರನ್ನು ಈ ಸಂದರ್ಭ ಸ್ಮರಿಸದಿರುವುದು ವಿಷಾದನೀಯ. ಇಂತಹ ಮುಸ್ಲಿಂ ಸ್ವಾತಂತ್ರ್ಯ ಸೇನಾನಿಗಳ ಸ್ಮರಿಸದ ಸ್ವಾತಂತ್ರ್ಯ ದಿನಾಚರಣೆ ನಿಜಕ್ಕೂ ಅರ್ಥಹೀನ.*
📒📒📒📒📒📒
*Team Writers*
*ANVARUL HUDA KODAGU*
ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...
Comments