ಬಾಳ ಸಂಗಾತಿಗಾಗಿ ಸಾವನ್ನಪ್ಪುವ ಸಹಸ್ರಾಯುಷಿ ಗರುಡ
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞 00971 553499119
▪ *ಕಾಡಿನಲ್ಲಿ* ವನ್ಯ ಜೀವಿಗಳಿಗೆ ಸಿಂಹ ರಾಜನಾಗಿರುವಂತೆ ಪಕ್ಷಿ ಸಾಮ್ರಾಜ್ಯದ ರಾಜನಾಗಿರುತ್ತದೆ ರಣಹದ್ದು ಅಥವಾ ಗರುಡ. (Eagle)
▪ *ಪ್ರಾಥಮಿಕ* ಗೋಚರಕ್ಕೆ ಗಿಡುಗನಂತೆ ಕಾಣುವುದಾದರೂ ನಿಜವಾಗಿ ಗಿಡುಗ ಮತ್ತು ರಣಹದ್ದಾಗಿ ಅಜಗಜಾಂತರ ವ್ಯತ್ಯಾಸವಿದೆ. ಗಿಡುಗನನ್ನು ಕಂಡಲ್ಲಿ ಕೊಲ್ಲಲು ಸುನ್ನತ್ತಿದೆ. ಆದರೆ ಹದ್ದು ಅದರಲ್ಲಿ ಒಳಪಡುವುದಿಲ್ಲ. ಹಾರಾಟ ಶೈಲಿಯಲ್ಲಿ ಗಿಡುಗನಾಗಿ ಸಾಮೀಪ್ಯವಿರುವುದಾದರೂ ಜೀವನ ಶೈಲಿಯು ಸಂಪೂರ್ಣ ವ್ಯತ್ಯಾಸವಾಗಿರುತ್ತದೆ.
▪ *ಪಕ್ಷಿಗಳ ಪೈಕಿ* ಬಹಳ ಬಲಿಷ್ಠ ಮತ್ತು ದೃಡಕಾಯ ಶರೀರವುಳ್ಳ ಒಂದಾಗಿದೆ ಗರುಡ. ಎಂತಹಾ ದೊಡ್ಡ ಶವವನ್ನೂ ತನ್ನ ಕಾಲಿನ ಚೂಪಾದ ಉಗುರಿನಿಂದ ಸೀಳಿ ತಿನ್ನುವ ಮತ್ತು ಬೃಹದಾಕಾರದ ಆಡುಮರಿ, ಕರು ಅಂತೆಯೇ ಇನ್ನಿತರ ಜೀವಿಗಳನ್ನು ಮೇಲಕ್ಕೆ ಎತ್ತಿ ಕೊಂಡು ಹೋಗುವ ತಾಕತ್ತು ಕೂಡ ಇದಕ್ಕಿದೆ. ಪ್ರಪಂಚದ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಇದನ್ನು ಕಾಣ ಸಿಗುವ ಇದು ಸುಮಾರು ಒಂದು ಸಾವಿರ ವರ್ಷಗಳ ತನಕ ಬದುಕುತ್ತದೆ ಎಂದು ಹೇಳಲಾಗುತ್ತದೆ.
▪ *ಪಕ್ಷಿಗಳ* ರಿಝ್‌ಖ್ ನ (ಜೀವನೋಪಾಯ) ಅಧಿಕಾರ ನೀಡಲಾದ ಅಥವಾ ಆ ಬಗ್ಗೆ ನಿಯುಕ್ತರಾಗಿರುವ ಮಲಕ್‌ನ ನಿಜರೂಪ ಕೂಡ ಪಕ್ಷಿಗಳ ನೇತಾರ ರಣಹದ್ದಿನ ರೂಪವಾಗಿ ಹೋಲಿಕೆಯಿದೆ ಎಂಬುದು ಇದರ ಬೇರೊಂದು ವಿಶೇಷತೆಯಾಗಿದೆ. ಈ ಬಗ್ಗೆ ಪ್ರಖ್ಯಾತ ಪಂಡಿತ ಶೈಖ್ ಇಬ್ರಾಹೀಮ್ ಅಲ್ ಕಿರ್‌ಮಾನಿಯವರು ಉಲ್ಲೇಖಿಸಿದ್ದಾರೆ.
▪ *ಒಂದು* ದಿನದಲ್ಲಿ ನೂರಾರು ಮೈಲಿ ಸಂಚಾರ ಮಾಡಿದರೂ ಇದಕ್ಕೆ ಯಾವುದೇ ಆಯಾಸವಿಲ್ಲ. ಹೊಟ್ಟೆಬಾಕತನದಲ್ಲಿ ಬಕಾಸುರನಿಗೆ ಸಮಾನ. ಬ್ರಹದಾಕಾರದ ಶವವನ್ನು ಒಂಟಿಯಾಗಿಯೇ ತಿಂದು ಬಿಡುತ್ತದೆ. ಎಷ್ಟರ ತನಕವೆಂದರೆ, ತಿಂದು ತಿಂದು ಕೊನೆಗೆ ಕುಳಿತಲ್ಲಿಂದ ಅಲುಗಾಡಲು ಕೂಡ ಆಗದ ಪರಿಸ್ಥಿತಿಯಾಗುತ್ತದೆ. ಈ ಸಂದರ್ಭದಲ್ಲಿ ಹಂತ ಹಂತವಾಗಿ ಸ್ವಲ್ಪ ಸ್ವಲ್ಪ ಮೇಲಕ್ಕೆ ಕುಪ್ಪಳಿಸಿ ತನ್ನ ರೆಕ್ಕೆಗೆ ಗಾಳಿಯ ಒತ್ತಡ ಸಿಗುವ ತನಕ ಮೇಲಕ್ಕೆ ಜಿಗಿಯುತ್ತದೆ. ಕೊನೆಗೆ ತನ್ನ ಶ್ರಮ ಯಶಸ್ವಿಯಾದಾಗ ಒಮ್ಮೆಲೇ ಮೇಲಕ್ಕೆ ಹಾರುತ್ತದೆ. ಮೇಲೇರಿದ ನಂತರ ತನ್ನ ರೆಕ್ಕೆಯನ್ನು ಬಡಿಯದೆ ಹಾಗೆಯೇ ಹಾರಾಡುತ್ತದೆ. ಇಷ್ಟು ವೇಗವಾಗಿ ಹಾರಾಡುವ ಮತ್ತು ನೆಲಮಟ್ಟದಿಂದ ಬಹಳ ಎತ್ತರದಲ್ಲಿ ಹಾರಾಡುವ ಈ ಪಕ್ಷಿಗೆ ಸಮಾನವಾದ ಪಕ್ಷಿ ಬೇರೊಂದಿಲ್ಲ.
▪ *ಎಷ್ಟೋ* ಮೈಲಿ ದೂರದ ಅಂತರದಲ್ಲಿ ಆಕಾಶದಲ್ಲಿ ಹಾರಾಡುತ್ತಿರುವಾಗಲೂ ಕೆಳಗೆ ಭೂಮಿಯಲ್ಲಿ ತನ್ನ ಇಷ್ಟ ಆಹಾರವಾದ ಶವ ಮತ್ತು ಇತರ ವಸ್ತುಗಳನ್ನು ಕಾಣುವ ಅತಿ ಸೂಕ್ಷ್ಮ ಮತ್ತು ತೀಕ್ಷ್ಣವಾದ ನೇತ್ರ ಇದಕ್ಕಿದೆ. ಮಾತ್ರವಲ್ಲ ಸತ್ತ ಶವದ ವಾಸನೆ ಹತ್ತಾರು ಕಿಲೊಮೀಟರ್ ದೂರದಿಂದ ತಿಳಿಯುವ ಘ್ರಾಣ ಶಕ್ತಿಯನ್ನೂ ಅಲ್ಲಾಹನು ಇದಕ್ಕೆ ಕೊಟ್ಟಿದ್ದಾನೆ. ಆದರೆ ಇದರ ಬೇರೊಂದು ವಿಷೇಶತೆಯೆಂದರೆ, ಸುಗಂಧ ವಸ್ತುಗಳನ್ನು ಮೂಸಿದ ತಕ್ಷಣ ಇದು ಸಾಯುತ್ತದೆ. ಸುಬ್‌ಹಾನಲ್ಲಾಹ್..! ಇದೆಂತಹಾ ವಿಸ್ಮಯ ತುಂಬಿದ ಜೀವಜಗತ್ತು..?
▪ *ಸೂರ್ಯನ* ಬೆಳಕು ಚೆನ್ನಾಗಿ ಬೀಳುವ ಜನ ವಾಸವಿಲ್ಲದ ತೆರೆದ ಜಾಗವಾದ ಎತ್ತರದ ಪರ್ವತ ಮತ್ತು ಬೆಟ್ಟಗಳ ಮೇಲೆ ಇದು ಮೊಟ್ಟೆಯಿಡುತ್ತದೆ. ಯಾಕೆಂದರೆ, ಈ ಪಕ್ಷಿಗೆ ಮೊಟ್ಟೆಗೆ ಕಾವು ಕೊಡುವ ವಿದ್ಯೆ ಇಲ್ಲ. ಮೊಟ್ಟೆಗೆ ನೇರ ಸೂರ್ಯನ ಬಿಸಿಲು ಬೀಳುವಾಗ ಬಿಸಿಲಿನ ತಾಪದಿಂದ ಮೊಟ್ಟೆ ಒಡೆಯುತ್ತದೆ.
▪ *ಪಕ್ಷಿಗಳ* ರಾಜನಾದ ಗರುಡನನ್ನು ಇತರ ಎಲ್ಲಾ ಪಕ್ಷಿಗಳು ಬಹಳ ಗೌರವದಿಂದ ಕಾಣುತ್ತದೆ. ಮಾತ್ರವಲ್ಲ ಗರುಡನೆಂದರೆ ಇವುಗಳಿಗೆ ಎಲ್ಲಿಲ್ಲದ ಭಯ. ಕೆಲವು ಪಕ್ಷಿಗಳು ಒಂದು ಕಡೆ ಒಟ್ಟಾಗಿ ಒಂದು ಶವವನ್ನು ತಿನ್ನುತ್ತಿರುವ ವೇಳೆ ಅಲ್ಲಿಗೆ ಗರುಡ ಬಂದರೆ ಎಲ್ಲವೂ ದೂರ ಸರಿದು ಗರುಡನಿಗೆ ಬಿಟ್ಟು ಕೊಡುತ್ತದೆ.
▪ *ಇದು ಮೊಟ್ಟೆಯಿಟ್ಟರೆ* ರಾತ್ರಿ ವೇಳೆ ಇದರ ಮೊಟ್ಟೆಯನ್ನು ಬಾವಲಿಗಳು ಬಂದು ತಿನ್ನಲು ಸಾದ್ಯತೆ ಇರುವುದರಿಂದ ಅದರ ಮೇಲೆ ಆಲದ ಮರದ ಜಾತಿಗೆ ಸೇರಿದ ಪ್ಲಾಟನಾಸ್ ಎಂಬ ಮರದ ಎಲೆಗಳನ್ನು ತಂದು ಹಾಕುತ್ತದೆ. ಬಾವಲಿ ಯಾವಾಗಲೂ ಆ ಮರದ ಹತ್ತಿರ ಬರುವುದಿಲ್ಲ. ಮಾತ್ರವಲ್ಲ ಬಾವಲಿಗೆ ಆ ಮರ ಸ್ಪರ್ಶವಾದರೆ ಸಾಯುತ್ತದೆ.
▪ *ಗರುಡ* ಗಂಡಾದರೂ ಹೆಣ್ಣಾದರೂ ಯಾವಾಗಲೂ ಅದಕ್ಕೆ ಒಂದು ಸಂಗಾತಿ ಇದ್ದೇ ಇರುತ್ತದೆ. ಎಲ್ಲಾ ಸಂಚಾರಗಳು ಮತ್ತು ಬೇಟೆಯಾಡುವುದು ತನ್ನ ಸಂಗಾತಿಯೊಂದಿಗೆ ಆಗಿರುತ್ತದೆ. ಅಕಸ್ಮಾತ್ ಸಂಗಾತಿ ಸತ್ತರೆ ಅಥವಾ ಕಾಣೆಯಾದರೆ ದುಃಖ ಮತ್ತು ಬೇಸರ ಸಹಿಸಲಾಗದೆ ಕೊರಗಿ ಕೊರಗಿ ಇದೂ ಸಾಯುತ್ತದೆ.
▪ *ತಿಗಣಿ*, ಸೊಳ್ಳೆ, ಹುಳು ಇತ್ಯಾದಿ ಕ್ರಿಮಿ ಕೀಟಗಳ ತೊಂದರೆ ಮನೆಯಲ್ಲಿ ಇರುವುದಾದರೆ ಗರುಡನ ಗರಿಯನ್ನು ಸುಟ್ಟು ಮನೆಯಲ್ಲಿ ಕೆಲವು ದಿನಗಳ ಕಾಲ ಹೊಗೆ ಹಾಕುವುದಾದರೆ ಮತ್ತೆ ಒಮ್ಮೆಯೂ ಆ ಮನೆಯಲ್ಲಿ ಅದರ ತೊಂದರೆ ಇರುವುದಿಲ್ಲ.
▪ *ಹೆರಿಗೆಗೆ* ತಯಾರಿಯಾಗುವ ಮಹಿಳೆಯು ಮಲಗಿರುವ ಹಾಸಿಗೆಯಲ್ಲಿ ಗರುಡನ ಕೆಲವು ಗರಿಗಳನ್ನು ಹಾಸಿ ಅದರ ಮೇಲೆ ಅವಳನ್ನು ಮಲಗಿಸಿದರೆ ಹೆರಿಗೆ ತೊಂದರೆಯಿಲ್ಲದೆ ಬಹಳ ಸುಲಭವಾಗಿ ನಡೆಯುತ್ತದೆ.
▪ *ಕಣ್ಣಿನಲ್ಲಿ* ನಿರಂತರ ನೀರು ಬರುವ ಖಾಯಿಲೆ ಇರುವವರು ಇದರ ಪಿತ್ತಕೋಶವನ್ನು ತನ್ನೀರು ಮಿಶ್ರಣ ಮಾಡಿ ಜಜ್ಜಿ ಆ ನೀರನ್ನು ಕಣ್ಣಿನ ಸುತ್ತಲೂ ಒಂದು ವಾರದ ತನಕ ಸವರಿದರೆ ಅದು ಸಂಪೂರ್ಣ ಮಾಯವಾಗುತ್ತದೆ.
▪ *ಸಂಧಿವಾತ* ಇರುವವನು ಇದರ ಕಾಲಿನ ಹಿಮ್ಮಡಿನ್ನು ತನ್ನ ಕಾಲಿಗೆ ಕಟ್ಟಿ ನಡೆದರೆ ಸಂಧಿವಾತ ಬೆಟ್ಟ ಹತ್ತುತ್ತದೆ.
▪ *ಗರುಡನ* ಯಕೃತ್ತನ್ನು (Liver) ಚೆನ್ನಾಗಿ ಸುಟ್ಟು ತಿಂದರೆ ಲೈಂಗಿಕ ಶಕ್ತಿ ಗಗನಕ್ಕೇರುತ್ತದೆ.
▪ *ಒಬ್ಬನು* ಗರುಡನ ಹೃದಯವನ್ನು ತೋಳದ ಚರ್ಮದಲ್ಲಿ ಸುತ್ತಿ ತನ್ನ ಜೇಬಿನಲ್ಲೋ ಅಥವಾ ಶರೀರದ ಇತರ ಯಾವುದಾದರು ಭಾಗಕ್ಕೆ ಕಟ್ಟಿ ಇಟ್ಟು ಕೊಂಡರೆ ಯಾವುದೇ ವನ್ಯಜೀವಿ ಅವನತ್ತ ಬಾರದು.
▪ *ಒಬ್ಬನಿಗೆ* ಗರುಡನೊಂದು ತನ್ನ ಅಧೀನದಲ್ಲಿ ತನ್ನ ಸಾಕುಪ್ರಾಣಿಯಂತೆ ತನಗೆ ಅನುಸರಿಸುವ ಕನಸು ಕಂಡರೆ ಅಧಿಕಾರದ ಗತ್ತುಗೆಗೆ ಏರುವುದರ ಸೂಚನೆಯಾಗಿದೆ.
▪ *ಗರುಡನ* ಮರಿಯೊಂದು ತನಗೆ ಲಭಿಸಿದ ಕನಸು ಬಿದ್ದರೆ ಒಂದು ಉತ್ತಮ ಗುಣದ ಮತ್ತು ದೊಡ್ಡವನಾಗುವಾಗ ಪ್ರಖ್ಯಾತನಾಗುವ ಒಂದು ಮಗು ಹುಟ್ಟುವುದರ ನಿಶಾನೆಯಾಗಿದೆ.
▪ *ತಾನು* ಗರುಡನಾಗಿ ರೂಪಾಂತರಗೊಂಡದ್ದನ್ನು ಕನಸಲ್ಲಿ ಕಂಡರೆ ಆಯುಷ್ಯ ಜಾಸ್ತಿಯಾಗುವುದರ ನಿಶಾನೆಯಾಗಿದೆ.
▪ *ಒಬ್ಬನಿಗೆ* ಗರುಡನ ಕೂಗು ಕೇಳಿದ ಕನಸು ಕಂಡರೆ ಅವನು ನಂತರದ ಕೆಲವು ದಿನಗಳಲ್ಲಿ ಮಿತ್ರರಲ್ಲಿ ಯಾರಾಗಿಯೋ ಗಲಾಟೆ ಮಾಡುವನು ಎಂಬುದರ ನಿಶಾನೆಯಾಗಿದೆ.
*▪ ಗರುಡನನ್ನು* ಕನಸು ಕಾಣುವುದು ಕೆಲವೊಮ್ಮೆ ನೂತನವಾದಿ ಅಥವಾ ಸನ್ಮಾರ್ಗವಾದ ಪವಿತ್ರ ಇಸ್ಲಾಮಿನಿಂದ ಹಾದಿ ತಪ್ಪುವುದರ ನಿಶಾನೆಯಾಗಿದೆ ಎಂದು ಕೆಲವು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
▪ *ಖಲೀಲುಲ್ಲಾಹಿ* ಇಬ್‌ರಾಹೀಮ್ (ಅ)ರ ಕಠಿಣ ಶತ್ರು ಹಾಗು ಸೇಚ್ಚಾಧಿಪತಿಯೂ ಆದ ಮೂರ್ಖ ನಮ್‌ರೂದನು ಇಬ್‌ರಾಹೀಮ್ (ಅ) ರವರು ಹೇಳುತ್ತಿರುವ ಅಲ್ಲಾಹನನ್ನು ಹುಡುಕಿ ಆ ಅಲ್ಲಾಹನ ಮೇಲೆ ಆಕ್ರಮಣ ಮಾಡಲು ಆಕಾಶಯಾನ ಮಾಡಿದ್ದು ಈ ರಣಹದ್ದಿನ ಮೂಲಕವಾಗಿತ್ತು. ಎಲ್ಲಾ ಸಿದ್ಧತೆಗಳು ಮತ್ತು ಸೌಕರ್ಯಗಳಿದ್ದ ವಾಹನ ಮಾದರಿಯ ಮರದ ಪೆಟ್ಟಿಗೆಯಲ್ಲಿ ಕುಳಿತ ನಮ್‌ರೂದ್ ಮತ್ತು ಅವನ ಅಂಗರಕ್ಷಕನಾದ ಬಿಲ್ಲು ವಿದ್ಯೆಗಾರನನ್ನು ವಿಶೇಷವಾಗಿ ತರಬೇತಿ ಕೊಡಲ್ಪಟ್ಟ ನಾಲ್ಕು ಬ್ರಹದಾಕಾರದ ರಣಹದ್ದುಗಳು ಆಕಾಶದತ್ತ ಕೊಂಡೊಯ್ದ ಘಟನೆ ಬಹಳ ದೀರ್ಘವಾದ್ದರಿಂದ ಓದುಗರ ಗಮನ ಅತ್ತ ಸೆಳೆಯುವುದಿಲ್ಲ.
▪ *ಪವಿತ್ರ* ಕುರ್‌ಆನಿನ ಅಧ್ಯಾಯ "ಇಬ್‌ರಾಹೀಮ್" ನ ನಲುವತ್ತಾರನೆಯ ಸೂಕ್ತದ ತಫ್‌ಸೀರಿನಲ್ಲಿ ಎಲ್ಲಾ ಉಲಮಾಗಳು ಈ ಘಟನೆಯನ್ನು ಉಲ್ಲೇಖಿಸಿದ್ದಾರೆ.
▪ *ದುಷ್ಟನಾದ* ಚಕ್ರವರ್ತಿ ಬುಖ್ತ್‌ನಸ್‌ರ್‌ನಿಗೆ ಅಲ್ಲಾಹುವಿನ ತೌಹೀದನ್ನು ಮತ್ತು ಖುದುರತನ್ನು ಮನವರಿಕೆ ಮಾಡಿಕೊಡಲು ಅವನು ಅಧಿಕಾರದಲ್ಲಿದ್ದಾಗಲೇ ಸುಮಾರು ಏಳು ವರ್ಷಗಳ ತನಕ ಆತನನ್ನು ಅಲ್ಲಾಹನು ರೂಪ ಬದಲಾವಣೆ ಮಾಡಿ ರೂಪಾಂತರ ಗೊಳಿಸಿದ್ದನು. ಈ ಏಳು ವರ್ಷಗಳಲ್ಲಿ ವನ್ಯಮೃಗಗಳ ನಾಯಕನಾದ ಸಿಂಹವಾಗಿಯೂ, ಪಕ್ಷಿಗಳ ನಾಯಕನಾದ *ರಣಹದ್ದುವಾಗಿಯೂ,* ಜಾನುವಾರುಗಳ ನಾಯಕನಾದ ಎತ್ತಾಗಿಯೂ ರೂಪಾಂತರಗೊಂಡಿದ್ದನೆಂದು ಕೆಲವು ಚರಿತ್ರೆ ಗ್ರಂಥಗಳು ವಿವರಿಸುತ್ತದೆ. ಆದರೆ ಈ ಸಮಯದಲ್ಲಿ ಶಾರೀರಿಕ ಮತ್ತು ಪ್ರಾಕೃತಿಕ ಬದಲಾವಣೆಯಾಗಿದ್ದರೂ ಬುದ್ದಿಯನ್ನು ಮಾತ್ರ ಅಲ್ಲಾಹನು ಬದಲಾವಣೆ ಮಾಡಿರಲಿಲ್ಲ.
▪ *ಏಳು ವರ್ಷ* ಕಳೆದು ಅವನ ನಿಜ ರೂಪವಾದ ಮನುಷ್ಯ ರೂಪಕ್ಕೆ ಬಂದಾಗ ಅವನಲ್ಲಿ ಅಲ್ಲಾಹನ ತೌಹೀದ್‌ನ ಬಗ್ಗೆ ಕೇಳಲಾಯಿತು. ಆಗ ಅವನು *"ಆಕಾಶ ಭೂಮಿಗಳ ಒಡೆಯನಾದ ಅಲ್ಲಾಹನು ಮಾತ್ರ ನಿಜವಾದ ಇಲಾಹ್."* ಎಂದು ಉತ್ತರಿಸಿದನು. ಈ ಕಾರಣದಿಂದ ಬುಖ್‌ತ್‌ನಸ್‌ರ್ ಇಸ್ಲಾಮಾಗಿ ಮರಣ ಹೊಂದಿದನೆಂದು ಕೆಲವು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ. ಆದರೆ "ಅಲ್ಲಾಹನ ಗ್ರಂಥಗಳನ್ನು ಸುಟ್ಟ, ಬೈತುಲ್ ಮುಖದ್ದಸಿಗೆ ಬೆಂಕಿ ಹಾಕಿದ, ಹಲವಾರು ಪ್ರವಾದಿಗಳನ್ನು ಕೊಂದ ಈ ದುಷ್ಟನ ತೌಬವನ್ನು ಅಲ್ಲಾಹನು ಸ್ವೀಕರಿಸಲಿಲ್ಲ." ಎಂದು ಮತ್ತು ಕೆಲವು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ. ಅದುವೇ ಬಲವಾದ ಅಭಿಪ್ರಾಯವಾಗಿದೆ.
▪ *ಇಸ್ಲಾಮಿನಲ್ಲಿ* ಇದು ಭಕ್ಷ ಯೋಗ್ಯವಲ್ಲ. ತಿನ್ನುವುದು ನಿಷಿದ್ಧವಾಗಿದೆ.
▪ಸಂಗ್ರಹ: ಇಮಾಮ್ಬ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ಅಬ್‌ಷೀಹಿಯ *ಮುಸ್‌ತತ್‌ರಫ್* ಮತ್ತು ಇಮಾಮ್ ಖಝ್ವೀನಿಯ *ಅಜಾಯಿಬುಲ್ ಮಖ್‌ಲೂಖಾತ್* ಎಂಬ ಮೂರು ಗ್ರಂಥಗಳು.

Comments