ವುಳೂವಿನ ಬಳಿಕ ನಮಾಝ್
ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಮ್ಮೆ ಸುಬ್ ಹಿ ನಮಾಝಿನ ಸಂದರ್ಭ ಸ್ವಹಾಬಿವರ್ಯರಾದ ಬಿಲಾಲ್(ರ) ರವರನ್ನು ಕರೆದು ಕೇಳಿದರು. "ಓ ಬಿಲಾಲ್ ರವರೇ, ನೀವು ಮುಸ್ಲಿಮರಾದ ಬಳಿಕ ಮಾಡಿದ ಅತ್ಯಂತ ಪ್ರತಿಫಲದಾಯಕವಾದ ಸತ್ಕರ್ಮ ಯಾವುದೆಂದು ಹೇಳುವಿರಾ?. ಕಾರಣ, ಸ್ವರ್ಗದಲ್ಲಿ ನನ್ನ ಮುಂಭಾಗದಿಂದ ನಡೆಯುವಂತೆ ನಿಮ್ಮ ಹೆಜ್ಜೆಗಳ ಶಬ್ಧವನ್ನು ನಾನು ಕೇಳುತ್ತಿದ್ದೇನೆ!". ಆಗ ಬಿಲಾಲ್(ರ) ರವರು ಹೇಳುತ್ತಾರೆ; "ನಾನು ಅಂತಹ ಸತ್ಕರ್ಮವನ್ನೇನೂ ಮಾಡಿಲ್ಲ. ಆದರೆ ರಾತ್ರಿಯಾಗಲಿ, ಹಗಲಾಗಲಿ, ಯಾವುದೇ ಸಂದರ್ಭದಲ್ಲಾದರೂ ಸರಿ. ನಾನು ವುಳೂ (ಅಂಗಶುದ್ಧಿ) ಮಾಡುವುದಾದರೆ ಅದರ ನಂತರ ನನ್ನ ಮೇಲೆ ಸುನ್ನತ್ತಾಗಿರುವ ಎರಡು ರಕ್ ಅತ್ ನಮಾಝನ್ನು ಮಾಡದೇ ನಾನು ವುಳೂ ನಿರ್ವಹಿಸುತ್ತಿರಲಿಲ್ಲ".(ಮಿಶ್ಕಾತ್)
ವುಳೂವಿನ ಬಳಿಕವಿರುವ, ನಾವೆಲ್ಲರೂ ನಗಣ್ಯವಾಗಿ ತಳ್ಳುವ ಎರಡು ರಕ್ ಅತ್ ಸುನ್ನತ್ ನಮಾಝಿನ ಪುಣ್ಯವಿದು. ಇಂತಹ ಅದೆಷ್ಟು ಪ್ರತಿಫಲದಾಯಕವಾದ ಸತ್ಕರ್ಮಗಳನ್ನು ನಾವು ಕೈ ಬಿಡುತ್ತಿದ್ದೇವಲ್ಲವೇ?.
*ಜುನೈದ್ ಸಖಾಫಿ ಜೀರ್ಮುಕ್ಕಿ*
Comments