Skip to main content

ಐದು ಕಾರ್ಯಗಳನ್ನು ಐದು ಕಾರ್ಯಗಳಿಂದ ತಿಳಿಯಬಹುದು

ಐದು ಕಾರ್ಯಗಳನ್ನು ಐದು ಕಾರ್ಯಗಳಿಂದ ತಿಳಿಯಬಹುದು

1) ಮರದ ವಿಶಿಷ್ಟತೆ ತಿಳಿಯುವುದು ಅದರ ಫಲಗಳಿಂದ.

ಒಂದು ಮರವು ಫಲ ನೀಡುವಾಗ ಅದರ ಪ್ರಯೋಜನಗಳು ಉಪಕಾರವು ತಿಳಿಯಲ್ಪಡುತ್ತದೆ. ಆ ವ್ರಕ್ಷವು ಫಲ ನೀಡದೇ ಇರುವಾಗ ವ್ಯಕ್ತಿಯು ದುಃಖಿತನಾಗುತ್ತಾನೆ ಆ ಮರದಿಂದ ಯಾವುದೇ ಪ್ರಯೋಜನವಿಲ್ಲವೆಂದು.

2) ಒಂದು ಸ್ತ್ರೀಯ ನಿಜಸ್ವಭಾವವು ತಿಳಿಯುವುದು ತನ್ನ ಗಂಡನಿಗೆ ದಾರಿದ್ರ್ಯ ಸಂಭವಿಸಿದಾಗ.
ತನ್ನ ಪತಿಯು ತನ್ನನ್ನು ಐಶ್ವರ್ಯದಲ್ಲಿ ತೇಲಾಡಿಸುವಾಗ ಪತಿಯು ಅವಳಿಗೆ ಪ್ರಾಣಕ್ಕಿಂತ ಹೆಚ್ಚಾಗಿರುತ್ತಾಳೆ. ಎಲ್ಲಾ ರೀತಿಯ   ಸ್ನೇಹ ಪ್ರೀತಿಗಳನ್ನು ನೀಡುತ್ತಾಳೆ.
ಕೆಲವು ಸಮಯದ ನಂತರ ಪತಿಗೆ ದಾರಿದ್ರ್ಯ ಸಂಭವಿಸಿದಾಗ ಪತ್ನಿಯ ನಿಜಸ್ವಭಾವವು ಹೊರಗೆ ಬೀರುತ್ತಾಳೆ. ತನ್ನ             ಪತಿಯನ್ನು ಯಾವುದೇ ಮೌಲ್ಯವಿಲ್ಲದ  ವಸ್ತುವನ್ನಾಗಿ ಕಾಣುವಳು.

3) ಒಂದು ಗಂಡನ ನಿಜಸ್ವಭಾವ ತಿಳಿಯುವುದು ತನ್ನ ಪತ್ನಿಗೆ ರೋಗ ಬಾದಿಸಿದಾಗ.
ಆರೋಗ್ಯದಲ್ಸಿರುವಾಗ ಪತ್ನಿಗೆ ಬಹಳಷ್ಟು  ಸ್ನೇಹ ಪ್ರೀತಿಗಳನ್ನು ನೀಡುತ್ತಾನೆ. ಅವಳುಏನಾದರೂ ಅನಾರೋಗ್ಯದಿಂದ ಬಳಲು ಶುರುವಾದರೆ ಇವನಿಗೆ ಅವಳು ಹೊರೆಯಾಗುತ್ತಾಳೆ.

4) ಒಳ್ಳೆಯ ಸ್ನೇಹಿತನ ನಿಜಸ್ವಭಾವ ತಿಳಿಯುವುದು ನಮಗೆ ಆರ್ಥಿಕವಾಗಿ ಕಷ್ಟ ಸಂಭವಿಸಿದಾಗ.
ನಾವು ಸಾಲದಿಂದಲೋ ಕೆಲಸ ಕಾರ್ಯವಿಲ್ಲದೆ ಅಲೆದಾಡುತ್ತಿದ್ದರೆ ನಮ್ಮ ಸ್ನೇಹಿತರ ನಿಜರೂಪ ಬಯಲಾಗುತ್ತದೆ.

5) ಒಬ್ಬ ಸತ್ಯವಿಶ್ವಾಸಿಯನ್ನು ತಿಳಿಯುವುದು ಅವನಿಗೆ ಸಂಕಷ್ಟಗಳು ಎದುರಾದಾಗ.
ಯಾವುದೇ ಸಂಕಷ್ಟವಿಲ್ಲದೇ ಐಶಾರಾಮದಲ್ಲಿ ಜೀವಿಸುವಾಗ ದೇವರನ್ನು ನೆನೆಸುತ್ತಾ ಇರುತ್ತಾನೆ. ಸಂಕಷ್ಟಗಳು ಎದುರಾದಾಗ ದೇವರನ್ನು ದೂರಲಾರಂಭಿಸುತ್ತಾನೆ.

*NZ manipura *

➖➖➖➖➖➖➖➖➖➖➖

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...