Skip to main content

ಮುತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸ್ವಲ್ಲಮ್ ರವರ ಸಮುದಾಯದ ಆಯುಷ್ಯ

ನಾವು ಮೂರ್ಖರೊ.. ??

ಮೂಸಾ ನಬಿ (ಅ) ರೊಂದಿಗೆ ಒಮ್ಮೆ ಅವರ ಅನುಯಾಯಿಗಳು ಸಂಕಟ ಹೇಳುತ್ತಾರೆ...  "ಅವರ ಮಕ್ಕಳು ಬಾಲ್ಯದಲ್ಲಿಯೇ ಮರಣ ಹೊಂದುತ್ತಾರೆ ಆದ್ದರಿಂದ ನಮ್ಮ ಮಕ್ಕಳಿಗಾಗಿ ಪ್ರಾರ್ಥಿಸಿ ಎಂದು..

ಸಾವಿರ  ವರ್ಷಗಳ ಲೆಕ್ಕದಲ್ಲಿ ಜೀವಿಸುತ್ತಿದ್ದ ಕಲೀಮುಲ್ಲಾಹಿ ಅವರ ಪೀಳಿಗೆಯಲ್ಲಿ ಮಕ್ಕಳು 300/400 ವರ್ಷಗಳಾದಾಗ ಮರಣ ಹೊಂದೂದಾಗಿತ್ತು ಅವರನ್ನು  ಚಿಂತೆಗೀಡಾಗಿಸಿದ್ದು..

ಸಮಸ್ಯೆಗಳನ್ನು ಕೇಳಿದ ಮೂಸಾನಬಿ (ಅ) ನಕ್ಕರು..
ಪ್ರವಾದಿವರ್ಯರೇ..  ದೀರ್ಘಾಯುಸ್ಸಿಗಾಗಿ ಪ್ರಾರ್ಥನೆ ಮಾಡಲು ಹೇಳಿದಾಗ ಯಾಕೆ ನಗುತ್ತಿದ್ದೀರಾ ?
ಮೂಸಾನಬಿ (ಅ ) ಹೇಳಿದರು..
"ನಾನು ಹೇಗೆ ನಗದೇ ಇರಲಿ.. ?!
300 ವರ್ಷದಲ್ಲೊ 400 ವರ್ಷದಲ್ಲೊ ಮರಣ ಹೊಂದುವ ಮಕ್ಕಳಿಗೆ ದೀರ್ಘಾಯುಸ್ಸಿಗಾಗಿ ಪ್ರಾರ್ಥಿಸಲೋ ನೀವು ಹೇಳುತ್ತಿರೋದು..
ಹಾಗಿದ್ದರೆ ನನ್ನ ನಂತರ ಪ್ರಾವಾದಿಯೊಬ್ಬರು ಬರಲಿದ್ದಾರೆ..
ಅಲ್ಲಾಹನ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸ್ವಲ್ಲಮ್  ಅವರ ಅನುಯಾಯಿಗಳಿಗೆ ಕೇವಲ 100 ವರ್ಷಕ್ಕಿಂತ ಕಡಿಮೆ ಇರೋದು..  ಅದು ನೆನೆದು ನಿಮ್ಮ ಸಮಸ್ಯೆ ಕೇಳಿದಾಗ ನಗು ಬಂತು ಎಂದು..
ಆಗ ಅನುಯಾಯಿಗಳು ಕೇಳಿದರು.. ಹಾಗಿದ್ದರೆ ಪ್ರವಾದಿ ಮುಹಮ್ಮದ್ (ಸ. ಅ) ಅವರ ಅನುಯಾಯಿಗಳು ವಾಸಕ್ಕಾಗಿ ಮನೆ ನಿರ್ಮಿಸುತ್ತಾರಾ ಎಂದು ?
ಆಗ ಕೂಡಾ ಮೂಸಾ ನಬಿ (ಅ ) ನಕ್ಕರು..  ಮತ್ತೆ ಹೇಳಿದರು...  ಮನೆ ಮಾಡುತ್ತಾರಾ ಎಂದೇ.. ?
ದೊಡ್ಡ ದೊಡ್ಡ ಮನೆಗಳೇ ಅವರು ನಿರ್ಮಿಸೋದು..

ಈಗ ನಗುವಿನ ಸರದಿ ಅನುಯಾಯಿಗಳದ್ದಾಗಿತ್ತು...
ಅವರು ಹೇಳಿದರಷ್ಟೇ..
"ಕಲೀಮುಲ್ಲಾಹಿಯವರೇ... ಅವರಷ್ಟು ಮೂರ್ಖರೇ.. ?"
"ಒಂದು ಮರದ ನೆರಳಲ್ಲಿ ವಿಶ್ರಮಿಸುವಷ್ಟು ಸಮಯ ಮಾತ್ರ ಅಲ್ಲವೇ ಅವರಿಗೆ ಇರೂದು.. ಎಂದು "

ಮಲಯಾಳಂ ನಿಂದ..
ಕನ್ನಡಕ್ಕೆ : ಸಲೀಂ ಗೂಡು ಕಕ್ಕಿಂಜೆ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...