Skip to main content

ಪ್ರವಾದಿ ಸುಲೈಮಾನ್ ನೆಬಿ ಅಲೈಹಿಸ್ಸಲಾಮರ ಹೆಸರಲ್ಲಿ ಉದ್ಧರಿಸಲಾದ ಒಂದು ಅದ್ಭುತ ಚರಿತ್ರೆ..

ನಾವು ಮರೆತರೂ ನಮ್ಮನ್ನು ಮರೆಯದ ಒಬ್ಬನಿದ್ದಾನೆ...ಅವನನ್ನು ಪ್ರೀತಿಸಿರಿ.

   *ಎಲ್ಲರ ಪ್ರೀತಿಗೆ ಕೊನೆಯಿದ್ದರೂ ಒಬ್ಬನ ಪ್ರೀತಿಗೆ ಕೊನೆಯಿಲ್ಲ....ಅವನನ್ನು ಭಯಪಡಿರಿ...*

    *ಸಮಯವಿರುವವರು ಓದಿರಿ....ದಯವಿಟ್ಟು ಇದೊಂದು ಕವರ್ ಸ್ಟೋರಿ ಅಲ್ಲ.....ತುಂಬಾ ಆಶ್ಚರ್ಯಕರವಾದ ಒಂದು ಚರಿತ್ರೆ....*

   *ಬ್ಯುಝಿ ಇರುವವರು ಓದಬಾರದು....ಕಾರಣ....ನಿಮಗೆ ಯಾವಾಗಲೂ ಬ್ಯೂಝಿಯೇ ......???*

    *ಇದೊಂದು ನಿಮಗೆ ಇಷ್ಟವಾಗಿದ್ದರೆ ಇತರರಿಗೂ ರವಾನಿಸಿರಿ....*

  *ನಮಗೆ ರವಾನಿಸಿದ ಪ್ರತಿಫಲವಾದರೂ ಸಿಗಲಿ....*

*ಲೇಖಕ: ಅಬೂಫಾಳಿಲ್*

ಪ್ರವಾದಿ ಸುಲೈಮಾನ್ ನೆಬಿ ಅಲೈಹಿಸ್ಸಲಾಮರ ಹೆಸರಲ್ಲಿ ಉದ್ಧರಿಸಲಾದ ಒಂದು ಅದ್ಭುತ ಚರಿತ್ರೆ....

   ಸುಲೈಮಾನ್ ನೆಬಿ ಅಲೈಹಿಸ್ಸಲಾಮ್ ಒಮ್ಮೆ ಕಡಲಿನ ಸನಿಹದಲ್ಲೇ ಕುಳಿತುಕೊಂಡಿದ್ದ ಸಮಯ ಒಂದು ಚಿಕ್ಕ ಇರುವೆಯನ್ನು ಕಂಡರು.... ಅದು ಒಂದು ಗೋಧಿ ಬೀಜವನ್ನು ಹಿಡಿದು ಬೀಸುತ್ತಿರುವ ಅಲೆಗಳಿದ್ದ ಸಮುದ್ರದ ಸಮೀಪ ತಲುಪಿದಾಗ ಕಂಡ ದ್ರಶ್ಯ ಅತ್ಯಂತ ಅದ್ಭುತಗೊಳಿಸಿತು ಸಮುದ್ರದಿಂದ ಒಂದು ಕಪ್ಪೆ ಬಾಯಿ ತೆರೆದು ಹೊರಗೆ ಬರುತ್ತದೆ. ಇರುವೆ ಕಪ್ಪೆಯ ಬಾಯಿಯ ಒಳಗೆ ನುಸುಳುತ್ತದೆ. ಕಪ್ಪೆಯು ಬಾಯಿ ಮುಚ್ಚುತ್ತದೆ. ನಂತರ ಸಮುದ್ರದ ಒಳಗೆ ಹೋಗಿ ಮರೆಯುತ್ತದೆ! ಸುಲೈಮಾನ್ ನೆಬಿ ಅಲೈಹಿಸ್ಸಲಾಮರಿಗೆ ಏನೂ ಅರ್ಥವಾಗುತ್ತಿಲ್ಲ. ಅವರು ಅಲ್ಲಿ ಕಾದು ಕುಳಿತರು ತುಂಬಾ ಸಮಯ ಕಳೆದಾಗ ನಂತರವೂ ಕಪ್ಪೆ ಸಮುದ್ರದ ಹೊರಗೆ ಬರುತ್ತದೆ. ಬಾಯಿ ತೆರೆಯುತ್ತದೆ. ಒಳಗೆ ಎಲ್ಲೊ ಅಡಗಿಸಿಟ್ಟಿದ್ದ ಇರುವೆಯನ್ನು ಹೊರಗೆ ಹಾಕುತ್ತದೆ ತನ್ನ ಲಕ್ಷ್ಯ ಸ್ಥಾನಕ್ಕೆ ನಡೆಯುತ್ತಾ ಸಾಗುತ್ತದೆ! ಇರುವೆ ಮತ್ತು ಇತರ ಜೀವ ಜಾಲಗಳ ಭಾಷೆ ಗೊತ್ತಿರುವ ಸುಲೈಮಾನ್ ನೆಬಿ ಅಲೈಹಿಸ್ಸಲಾಮ್ ಆ ಇರುವೆಯಲ್ಲಿ ಕಾರ್ಯ ಅನ್ವೇಷಿಸಿದರು. ಆವಾಗ ಇರುವೆ ಯಾವುದೇ ಮರೆಯಿಲ್ಲದೆ ಹೇಳಿತು. ನೆಬಿಯವರೇ! *[ಅಲೈಹಿಸ್ಸಲಾಮ್]* ತಾವು ಕಾಣುವ ಈ ಆಳವಾದ ಸಮುದ್ರದ ಅಡಿಯಲ್ಲಿ ಒಳಗೆ ಪೊಳ್ಳಾದ ಒಂದು ಪಾರೆಯಿದೆ ಆ ಪಾರೆಯ ಒಳಗೆ ಕಣ್ಣು ಕಾಣದ ಜೀವಿಸುವ ಒಂದು ಹುಳು ಇದೆ. ಅಲ್ಲಾಹನು ಅಲ್ಲಿಯಾಗಿದೆ ಅದನ್ನು ಸ್ರಿಷ್ಠಿಸಿದ್ದು. ಜೀವನ ಮಾರ್ಗ ಹುಡುಕಿ ಹೋಗಲು ಅದಕ್ಕೆ ಸಾಧ್ಯವಿಲ್ಲ. ಆದುದರಿಂದ ಅನ್ನವನ್ನು ತಲುಪಿಸಿ ಕೊಡಲು ನನ್ನನ್ನು ಅಲ್ಲಾಹನು ನಿಯೋಗಿಸಿದ್ದಾನೆ. ಅಲ್ಲಿಗೆ ತಲುಪಲು ಕಪ್ಪೆಯನ್ನು ನನಗೆ ಅನುವಾಗಿ ಕೊಟ್ಟನು. ಕಪ್ಪೆ ನನಗೆ ಯಾವ ಉಪದ್ರವೂ ನೀಡಲ್ಲ ಬಾಯಿಯಲ್ಲಿ ಹತ್ತಿ ಕುಳಿತರೆ ಅದು ಬಾಯಿ ಮುಚ್ಚುತ್ತದೆ. ನಂತರ ನನ್ನನ್ನು ಕರೆದುಕೊಂಡು ನೇರ ಪಾರೆಯ ಹತ್ತಿರ ಹೋಗುತ್ತದೆ.‌ ಪಾರೆಯಲ್ಲಿ ಚಿಕ್ಕದೊಂದು ದ್ವಾರವಿದೆ. ಆ ದ್ವಾರಕ್ಕೆ ಬಾಯಿ ಹಾಕಿ ನಾನು ಅದರೊಳಗೆ ಹೋಗುವಷ್ಟು ಸೌಕರ್ಯ ಮಾಡಿ ಕೊಡುತ್ತದೆ. ನಾನು ಅಲ್ಲಿ ಇಳಿದು ಪಾರೆಯ ಒಳಗೆ ಹೋಗುವೆನು. ಹುಳುವಿಗೆ ಆಹಾರವನ್ನು ಕೊಟ್ಟು ತಿರುಗಿ ಕಪ್ಪೆಯ ಬಾಯಿಯೊಳಗೆ ಕೂರುವೆನು. ಅದರ ನಂತರ ಅದು ನನ್ನನ್ನು ಕರೆಗೆ ಮುಟ್ಟಿಸಿ ಹೋಗುತ್ತದೆ. ಇದಾಗಿದೆ ಸಂಭವ. *" ಇರುವೆಯ ವಿಷಯವನ್ನು ಕೇಳಿ ಅದ್ಭತಗೊಂಡು ಸುಲೈಮಾನ್ ನೆಬಿ ಅಲೈಹಿಸ್ಸಲಾಮ್ ಇರುವೆಯೊಂದಿಗೆ ಕೇಳಿತು: " ಆ ಹುಳು ಯಾವುದಾದರೂ ಮಂತ್ರಿಸುವುದನ್ನು ನೀನು ಕೇಳಿದಿಯಾ....?" ಇರುವೆ ಹೇಳಿತು: " ಹೌದು, ಅದು ಈ ರೀತಿ ಹೇಳುತ್ತಿತ್ತು ಈ ಆಳವಾದ ಸಮುದ್ರದ ಅಡಿ ಭಾಗದ ಪಾರೆ ಕಲ್ಲಿನಲ್ಲಿ ಕಳೆಯುವ ನನಗೆ ಅನ್ನವನ್ನು ನೀಡಲು ಮರೆಯದ ಅಲ್ಲಾಹನೇ ನಿನ್ನ ವಿಶ್ವಾಸಿಗಳಾದ ದಾಸರಿಗೆ ಕಾರುಣ್ಯವನ್ನು ನೀಡಲು ಒಮ್ಮೆಯೂ ಅವರನ್ನು ನೀನು ಮರೆಯದಿರು...."* ಕೋಟ್ಯಂತರ ಜೀವಿಗಳಿರುವ ಎಡೆಯಲ್ಲೋ ಯಾವುದೊ ಆಳವಾದ ಸಮುದ್ರದ ಅಡಿಯಲ್ಲಿ ಒಂದು ಪಾರೆಯ ಒಳಗೆ ಕುಳಿತು ಕೊಂಡು ಗಾಢ ಕತ್ತಲಿನಲ್ಲಿ ಜೀವನ ಸಾಗಿಸುವ ಯಾವುದೊ ಕಣ್ಣು ಕಾಣದ ಒಂದು ಚಿಕ್ಕ ಹುಳುವನ್ನು ಸಹ ಮರೆಯದವನಾಗಿದ್ದಾನೆ ನನ್ನ  ಯಜಮಾನನಾದ ಅಲ್ಲಾಹು ನಾನೆಷ್ಟು ಭಾಗ್ಯಶಾಲಿ.....

ಗಾಢವಾದ ಕತ್ತಲಿನಲ್ಲಿ ಕಳೆಯುವ ಆ ಹುಳುವನ್ನು ಮರೆಯದ ಅಲ್ಲಾಹನು ಸ್ರಿಷ್ಠಿಗಳಲ್ಲಿ ಶ್ರೇಷ್ಠ ರಾದ ನನ್ನನ್ನು ಮರೆಯುವನಾ...ಎಂಬ ಚಿಕ್ಕದೊಂದು ಸಂಶಯ ಸಹ ಮಹಾ ಪಾತಕವಲ್ಲ...ಹೇಗೆ ಅವನು ನನ್ನನ್ನು ಮರೆಯುವನು...? ನನಗೆ ಅಲ್ಲಾಹನು ಮಾತ್ರವಿರುವುದು. ಅಲ್ಲಾಹನಿಗೆ ನಾನು ಮಾತ್ರವಲ್ಲ ಸರ್ವವೂ ಇದೆ. ನನಗೊಬ್ಬನನ್ನು ಮಾತ್ರ ನೆನೆದರೆ ಸಾಕು ಅವನು ಲೋಕದಲ್ಲಿರುವ ಎಲ್ಲವನ್ನು ನೆನೆಯಬೇಕು. ಕಳೆದು ಹೋದ, ಕಳೆಯುತ್ತಿರುವ, ಇನ್ನೂ ಬರುವ ಸಕಲ ಜೀವಿಗಳನ್ನು ನೆನೆಯಬೇಕು. ಆದರೂ ನನ್ನನ್ನು ಚಿಕ್ಕ ರೀತಿಯಲ್ಲಿಯೂ ಮರೆಯಲ್ಲ...! ಸದಾ ಸಮಯವೂ ನನ್ನನ್ನು ನೆನೆಯುತ್ತಾ.....ಆದರೆ ನಾನು? ನನಗೆ ಅವನನ್ನು ಮಾತ್ರ ನೆನೆಯುತ್ತಾ ಕುಳಿತರೆ  ಸಾಕು! ಆದರೂ ಸಹ ನಮಗೆ ಅವನನ್ನು ನೆನೆಯಲು ಸಮಯವಿಲ್ಲ...ನೆನೆಯುವುದೆಲ್ಲವೂ ಅವನಲ್ಲದವುಗಳನ್ನು...ಕೋಟ್ಯಂತರ ಕೆಲಸವಿದ್ದರೂ ನಮ್ಮನ್ನು ಸದಾ ಸಮಯ ನೆನೆಯುತ್ತಿರುವ ಕಾರುಣ್ಯವಂತರಲ್ಲಿ ಅತ್ಯಂತ ದೊಡ್ಡ ಕಾರುಣ್ಯವಂತನಾದ ನಮ್ಮ ಜೀವ ನಾಥನನ್ನು ನೂರಲ್ಲ ಸರಿ ನೋಡಿದರೆ ಒಂದು ಕೆಲಸ ಸಹ ಇಲ್ಲದ ನನಗೆ ನೆನೆಯಲು ಸಮಯವಿಲ್ಲ ಎಂದು ಹೇಳುವ ನಾನಲ್ಲವೇ ಅತ್ಯಂತ ದೊಡ್ಡ ನೀಚ! ನನ್ನಲ್ಲಿ ಏನಾದರೂ ಇದೆಯಾ ಎಲ್ಲವೂ ಕೇಳಿ ಬೇಡಿದ್ದಲ್ಲವೇ ಕೇಳದೆ ಕೊಟ್ಟದ್ದಲ್ಲವೇ ಆದರೆ ಅವನು ನನ್ನಲ್ಲಿ ಎಲ್ಲವನ್ನು ಕೇಳಲಿಲ್ಲ ನಿನ್ನ ಒಳಿತಿಗಾಗಿ ಶ್ರಮಿಸು ಎಂದು ಹೇಳಿದ್ದ ಆದರೂ ಅದನ್ನು ಕೇಳದ ರೀತಿಯಲ್ಲಲ್ಲವೇ ನಾನು ಸಾಗುತ್ತಿರುವುದು...! ನಂತರವೂ ಸುಲೈಮಾನ್ ನೆಬಿ ಅಲೈಹಿಸ್ಸಲಾಮ್ ರಲ್ಲಿಗೆ ನಿಮ್ಮ ಮನಸ್ಸನ್ನು ಕೊಂಡೊಯ್ಯುತ್ತಿದ್ದೇನೆ ನುಸ್ಹತುಲ್ ಮಜಾಲಿಸ್ ಎಂಬ ಗ್ರಂಥದಲ್ಲಿ  ಅಬ್ದುರ್ರಹ್ಮಾನ್ ಬಿನ್ ಅಬ್ದಿಸ್ಸಲಾಮ್ ಅಸ್ಸ್ವಾಪೂರೀ ರಳಿಯಲ್ಲಾಹು ಅನ್ಹು ಉದ್ಧರಿಸಿದ ಒಂದು ಚರಿತ್ರೆ ಹೇಳಲೆ: ಒಮ್ಮೆ ಒಂದು ಚಿಕ್ಕ ಇರುವೆಯೊಂದಿಗೆ ಸುಲೈಮಾನ್ ನೆಬಿ ಅಲೈಹಿಸ್ಸಲಾಮ್ ಕೇಳಿದರು: "  ಒಂದು ವರ್ಷದ ನಿನ್ನ ಆಹಾರ ಎಷ್ಟು? " ಇರುವೆ ಹೇಳಿತು ಒಂದು ಗೋಧಿ " ಉತ್ತರ ಕೇಳಿದಾಗ ಚಿಕ್ಕದೊಂದು ಪರೀಕ್ಷಣೆಗೆ ಬೇಕಾಗಿ ಅವರು ಇರುವೆಯನ್ನು ಒಂದು ಕುಪ್ಪಿಯೊಳಗೆ ಹಾಕಿ ಮುಚ್ಚಿದರು. ಅದರಲ್ಲಿ ಒಂದು ಗೋಧಿ ಹಾಕಿದರು. ಹಾಗೆ ಕುಪ್ಪಿ ಒಂದು ವರ್ಷದವರೆಗೆ ಸೂಕ್ಷಿಸಿಟ್ಟರು. ವರ್ಷ ಒಂದು ಕಳೆದಾಗ ಕುಪ್ಪಿಯ ಮುಚ್ಚನ್ನು ತೆರೆದು ನೋಡಿದರು. ನೋಡಿದಾಗ ಇರುವೆಯ ಜೀವಕ್ಕೆ ಯಾವುದೆ ತೊಂದರೆಯಾಗಿಲ್ಲ. ಆದರೆ ಗೋಧಿಯ ಬೀಜದ ಅರ್ಧ ಮಾತ್ರವೇ ಮುಗಿದಿರುವುದು. ಬಾಕಿ ಅರ್ಧವನ್ನು ತಿನ್ನದೆ ಹಾಗೆ ಇಟ್ಟಿತ್ತು. ಸುಲೈಮಾನ್ ನೆಬಿ ಅಲೈಹಿಸ್ಸಲಾಮ್ ಇರುವೆಯಲ್ಲಿ ಕಾರ್ಯ ಅನ್ವೇಷಿಸಿದಾಗ ಅದು ಹೇಳಿತು: " ತಾವು ನನ್ನನ್ನು ಬಂದಿಸುವುದಕ್ಕಿಂತ ಮುಂಚೆ ನನ್ನೆಲ್ಲಾ ಕಾರ್ಯವನ್ನು ಅಲ್ಲಾಹನಲ್ಲಿ ಅರ್ಪಿಸುತ್ತಿದ್ದೆ. ಬಂದನದಲ್ಲಿ ಹಾಕಿದಾಗ ನಾನು ತಮ್ಮಲ್ಲಿ ಎಲ್ಲವನ್ನು ಅರ್ಪಿಸಿದೆ. ಆವಾಗ ನನಗೆ ಭಯವಾಯಿತು ತಾವು ನನ್ನನ್ನು ಮರೆತು ಹೋಗಿದ್ದರೆ ಎಂದು. ಆದುದರಿಂದ ನಾನು ಅರ್ಧ ಮಾತ್ರವೇ ತಿಂದು ಬಾಕಿ ಅರ್ಧವನ್ನು ಮುಂದಿನ ವರ್ಷಕ್ಕೆ ಇಟ್ಟದ್ದು ನಾವು ಮರೆತರೂ ನಮ್ಮನ್ನು ಮರೆಯದ ಪರಮ ಕಾರುಣ್ಯವಯನಾದ ಅಲ್ಲಾಹು. ನಾವು ಅಲ್ಲಿಗೆ ಕೊಡುವುದು ಕಡಿಮೆಯಾದರೂ ನಮಗೆ ತರುವುದಕ್ಕೆ ಯಾವುದೇ ಕೊರತೆ ಕಾಣಿಸದ ಪರಮ ದಯಾಳುವಾದ ಅಲ್ಲಾಹು. ಆ ದಯಾಳುವಾದ ಅಲ್ಲಾಹನಿಗೆ ಸಾವಿರ ಸಾವಿರ ಸ್ತುತಿ ಸ್ತೋತ್ರಗಳು......

ಅಲ್ ಹಂದು ಲಿಲ್ಲಾಹ್ ಅಲ್ ಹಂದುಲಿಲ್ಲಾಹ್ ಅಲ್ ಹಂದುಲಿಲ್ಲಾಹ್

➖➖➖➖➖➖➖➖➖➖➖➖➖➖➖➖➖➖➖➖

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...