ಜೀವನ ಕಾಲದಲ್ಲಿ ಹಬೀಬರೊಂದಿಗೆ ಸ್ವರ್ಗವನ್ನೆ ಬೇಡಿಕೊಂಡ ಸ್ವಹಾಬಿವರ್ಯರು
*ಹದೀಸ್👇🏻*
*حَدَّثَنِي رَبِيعَةُ بْنُ كَعْبٍ الأَسْلَمِيُّ، قَالَ كُنْتُ أَبِيتُ مَعَ رَسُولِ اللَّهِ صلى الله عليه وسلم فَأَتَيْتُهُ بِوَضُوئِهِ👈 وَحَاجَتِهِ فَقَالَ لِي " سَلْ " . فَقُلْتُ أَسْأَلُكَ مُرَافَقَتَكَ👈 فِي الْجَنَّةِ . قَالَ " (أَوَغَيْرَ ذَلِكَ ") . قُلْتُ هُوَ ذَاكَ . قَالَ " فَأَعِنِّي عَلَى نَفْسِكَ بِكَثْرَةِ السُّجُودِ "*
_🌹ರಬೀಅತ್ ಬಿನ್ ಕಅ್'ಬ್ ರವರಿಂದ :ಅವರು ಹೇಳುತ್ತಾರೆ ನಾನು ಒಂದು ರಾತ್ರಿ ಪ್ರವಾದಿ(ಸ)ರವರ ಜತೆಯಲ್ಲಿ ತಂಗಿದೆ. ಪ್ರವಾದಿ(ಸ)ಯವರ ವುಳೂ ಮತ್ತು ಶುಚೀಕರಣಕ್ಕೆ ಅಗತ್ಯವಾದ ನೀರು ತಂದುಕೊಟ್ಟಾಗ *ಅವರು ನಿನಗೆ ಅಗತ್ಯವಿರುವುದನ್ನು ಕೇಳು ಎಂದರು?* ನಾನು ಹೇಳಿದೆ ಸ್ವರ್ಗದಲ್ಲಿಯೂ ನಾನು ತಮ್ಮೊಂದಿಗೆ ವಾಸಿಸಬೇಕು._
_*ಆಗ ಪ್ರವಾದಿಯವರು ಬೇರೇನೂ ಕೇಳಲಿಕ್ಕಿಲ್ಲವೇ?* ಎಂದು ಪ್ರಶ್ನಿಸಿದಾಗ ನಾನು ನನಗೆ ಅಷ್ಟೇ ಸಾಕು ಎಂದು ಉತ್ತರಿಸಿದೆ. ಪ್ರವಾದಿ ಹೇಳಿದರು. ಸುಜೂದನ್ನು ಹೆಚ್ಚಿಸುವ ಮೂಲಕ ಈ ಕಾರ್ಯದಲ್ಲಿ ನೀನು ನನಗೆ ಸಹಾಯ ಮಾಡು._
*📔Scan Page👇🏻*
*(ಮುಸ್ಲಿಮ್ 2206)*
*‼Note‼*
_ಸ್ವರ್ಗ ನೀಡುವುದು ಮಾನವ ಸಾಮರ್ಥ್ಯಕ್ಕೆ ಒಳಪಟ್ಟ ವಿಷಯವೇ? ಖಂಡಿತಾ ಅಲ್ಲ. ಆದರೂ ಸ್ವಹಾಬಿಯಾದ ರಬೀಅತ್ (ರ) ಪ್ರವಾದಿ(ಸ) ರವರೊಂದಿಗೆ ಸ್ವರ್ಗವನ್ನು ಕೇಳುತ್ತಾರೆ. ಮಾನವ ಸಾಮರ್ಥ್ಯಕ್ಕೆ ಮಿಗಿಲಾದ ಈ ಕಾರ್ಯವನ್ನು ಪ್ರವಾದಿ(ಸ) ಯವರೊಂದಿಗೆ ಕೇಳಿದರೆ ಮುಶ್ರಿಕ್ ಆಗುವುದಿಲ್ಲ ಎನ್ನುವುದು ರಬೀಅತ್(ರ) ವಿಶ್ವಾಸವಾಗಿತ್ತು._ _ಪ್ರವಾದಿ(ಸ)ರವರು ಈ ಘಟನೆಯ ಮೂಲಕ ಎಲ್ಲಾ ಯಾಚನೆಗಳು ಆರಾಧನೆಯಾಗುವುದಿಲ್ಲವೆಂದು ನಮಗೆ ಕಲಿಸಿಕೊಡುತ್ತಾರೆ. ಸಹಾಯಾಭ್ಯರ್ಥನೆಗಳೆಲ್ಲವೂ ಆರಾಧನೆಯಾಗುತ್ತಿದ್ದರೆ ಪ್ರವಾದಿ(ಸ) ರವರು ರಬೀಅತ್(ರ) ರೊಂದಿಗೆ ನಿಮಗೆ ಬೇಕಾದುದನ್ನು ಕೇಳಿರಿ ಎಂದು ಹೇಳುತ್ತಿರಲಿಲ್ಲ._
_ರಬೀಅತ್ ಭೌತಿಕವಾದ ಯಾವುದಾದರೊಂದನ್ನು ಕೇಳಬಹುದೆಂಬ ಕಲ್ಪನೆ ಹೀಗೆ ಹೇಳಲು ಪ್ರವಾದಿ(ಸ)ಯವರನ್ನು ಪ್ರೇರೇಪಿಸಿತೆ? ಅನಿರೀಕ್ಷಿತ ಬೇಡಿಕೆಯನ್ನು ಮುಂದಿಟ್ಟ ರಬೀಅತ್ (ರ)ರವರಿಗೆ ಪ್ರವಾದಿ(ಸ)ರವರು ಮಾನವ ಸಾಮರ್ಥ್ಯಕ್ಕೆ ಮಿಗಿಲಾದ ಕಾರ್ಯಗಳನ್ನು ಕೇಳುವುದು ಶಿರ್ಕೆಂದು ಉಪದೇಶಿಸುತ್ತಿರಲಿಲ್ಲವೇ?_ _ಪ್ರವಾದಿ(ಸ) ರವರು ಹಾಗೆ ಉಪದೇಶಿಸಲು ಮುಂದಾಗಿಲ್ಲ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಮಾನವ ಸಾಮರ್ಥ್ಯದ ಮಿತಿಯ ಆಚೆಗಿರುವ ಕಾರ್ಯಗಳನ್ನು ಇಸ್ಲಾಮಿನಲ್ಲಿ ವಿರೋಧವಿಲ್ಲವೆನ್ನುವುದು ಪ್ರಮಾಣಗಳಿಂದ ಸಾಬೀತಾದ ಸಂಗತಿಯಾಗಿದೆ._
*✍🏻Straight Path Ahlu Sunnah*
❣☘❣☘❣☘❣☘❣
Comments