ಪ್ರತಿಫಲ
_ಓರ್ವ ಯಾತ್ರಿಕ ದಾರಿಯೊಂದರಲ್ಲಿ ನಡೆಯುತ್ತಿದ್ದಾಗ ಆತನಿಗೆ ತೀವ್ರ ಬಾಯಾರಿಕೆಯುಂಟಾಯಿತು. ನೀರನ್ನು ಅರಸುತ್ತಾ ನಡೆಯುತ್ತಿರಲು, ಆತನಿಗೆ ಬಾವಿಯೊಂದು ಕಂಡಿತು. ಬಾವಿಯೊಳಗೆ ಇಳಿದು ನೀರು ಕುಡಿದು ಹೊರ ಬಂದಾಗ ನಾಯಿಯೊಂದು ಬಾಯಾರಿಕೆಯಿಂದ ತನ್ನ ನಾಲಗೆಯನ್ನು ಹೊರಗೆ ಚಾಚಿ ಒದ್ದೆ ಮಣ್ಣನ್ನು ತಿನ್ನುವುದನ್ನು ಆತ ಕಂಡನು. ನನಗೆ ಉಂಟಾದಂತೆ ಈ ನಾಯಿಗೂ ತೀವ್ರ ದಾಹ ಉಂಟಾಗಿದೆ ಎಂದು ಅರಿತ ಆ ಯಾತ್ರಿಕ ಪುನಃ ಬಾವಿಗೆ ಇಳಿದು ತನ್ನ ಬೂಟಿನಲ್ಲಿ ನೀರನ್ನು ತುಂಬಿಸಿ, ಆ ಬೂಟನ್ನು ಬಾಯಲ್ಲಿ ಕಚ್ಚಿ ಹಿಡಿದು ಮೇಲಕ್ಕೆ ಹತ್ತಿ ಬಂದು ನಾಯಿಗೆ ನೀರನ್ನು ಕುಡಿಸಿದನು. ಅಲ್ಲಾಹನು ಆತನ ಈ ಕೆಲಸವನ್ನು ಮೆಚ್ಚಿ ಅವನಿಗೆ ಕ್ಷಮೆಯನ್ನು ನೀಡಿದನು.._
_ಆಗ ಅಲ್ಲಿ ನೆರೆದಿದ್ದ ಸ್ವಹಾಬಿಗಳು ಕೇಳಿದರು.._
*_"ಯಾ ರಸೂಲಲ್ಲಾಹ್ (ﷺ)...! (ಓ ಅಲ್ಲಾಹನ ಪ್ರವಾದಿ (ﷺ)ರವರೇ...!)_*
*_"ಈ ಪ್ರಾಣಿಗಳಿಗೆ ಉಪಕಾರ ಮಾಡಿದರೆ ನಮಗೆ ಪ್ರತಿಫಲ ಲಭಿಸುವುದೇ..?"_*
_ಪ್ರವಾದಿ (ﷺ)ರವರು ಉತ್ತರಿಸಿದರು.._
*_"ಹೌದು, ಯಾವ ಜೀವಿಗೆ ಒಳಿತು ಮಾಡಿದರೂ ಅದರ ಪ್ರತಿಫಲ ದೊರಕುವುದು.."_*
_(ಸಹೀಹ್ ಅಲ್ ಮುಸ್ಲಿಂ, ಹದೀಸ್ ಸಂಖ್ಯೆ-2244)_
_(ಅಬೂಹುರೈರಾ ರಲಿಯಲ್ಲಾಹು ಅನ್ಹರಿಂದ ವರದಿ)_
Comments