🎓🎓 ಮಾಸ್ಟರ್ ಮೈಂಡ್ 🎓🎓
ಹೆಬ್ಬಾವಿನ ಸವಾಲಿಗೆ ನಾನು ಕೊಟ್ಟ ಉತ್ತರ
ಅವತ್ತೊಂದು ದಿನ ರಾತ್ರಿ 11 ಗಂಟೆ ಕಳೆದಿತ್ತು.ನಾನು ನಿದ್ರೆಯಲ್ಲಿದ್ದೆ. ತಂದೆಯವರು ಹೊರಗಡೆಯ ವಾಶ್ ರೂಮ್ ನಿಂದ ಮನೆಯೊಳಗೆ ಪ್ರವೇಶಿಸುವಾಗ ಮೇಲ್ಗಡೆಯಿಂದ ಏನೇೂ ಹೇೂದಂತೆ ಕಂಡಿತು.
ಕತ್ತಲೆ ಕವಿದಿದ್ದರಿಂದ ಅದು ಏನೆಂದು ತಿಳಿಯದಾದಾಗ ನಿದ್ದೆಯಿಂದ ಎದ್ದು ನಾನು ನೆರೆ ಮನೆಯವರನ್ನೆಲ್ಲಾ ಕರೆದೆ. ಅವರಲ್ಲೊಬ್ಬರು ಟಾರ್ಚ್ ಹಿಡಿದು ಮನೆಯ ಮೇಲ್ಬಾಗ ಹತ್ತಿ ನೇೂಡಿದರು. ಆಶ್ಚರ್ಯವಂಬಂತೆ ಮನೆಯ ಮೇಲ್ಛಾವಣಿಯಲ್ಲಿ ಒಂದು ಡೊಡ್ಡ ಹೆಬ್ಬಾವು ಅಂಗಾತ ಮಲಗಿತ್ತು.
ತಕ್ಷಣವೇ ಹಾವು ಹಿಡಿಯಬಲ್ಲ ಪರಿಣತ ಅಲ್ಲಿಗಾಗಮಿಸಿದ ಮತ್ತು ಅದನ್ನು ತನ್ನ ಕೈಯಲ್ಲಿಡಿದು ನಮ್ಮ ಮನೆಯ ಎದುರುಗಡೆ ತಂದಾಕಿದ.
ಹಾವು ಸುರುಟಿ ಕೊಂಡಿತ್ತು ಮತ್ತು ತಲೆ ಮಾತ್ರ ಹೊರ ಕಾಣುವಂತಿತ್ತು.ನಾವೆಲ್ಲ ಮನೆಯ ಜಗಲಿಯಲ್ಲಿ ನಿಂತು ಹಾವನ್ನೇ ನೇೂಡುತ್ತಿದ್ದೆವು.
ಅಷ್ಟರಲ್ಲಿ ನಮ್ಮನ್ನೇ ನೇೂಡುತ್ತಿದ್ದ ಹಾವು ಏನೇೂ ಒಂದು ವಿಷಯ ಹೇಳುವಂತೆ ಭಾಸವಾಯಿತು.
ಓ ಮನುಜಾ ಇಂದು ನಾನು ನಿಮ್ಮ ಮನೆಗೆ ಬಂದಾಗ ನೀವೆಲ್ಲರೂ ಹೆದರಿ ನನ್ನಿಂದ ರಕ್ಷಣೆ ಪಡೆಯಲು ನೆರೆಮನೆಯವರನ್ನು ಕರೆದಿರಿ ಹಾಗೂ ನನ್ನನ್ನು ಹಿಡಿಯಲು ಪರಿಣತನೂ ಬಂದು ನಿಮಗೆ ನೆರವಾದನು.
ಆದರೆ , ಒಂದು ವೇಳೆ ನಾಳೆ ನೀನು ಮರಣ ಹೊಂದಿ ಆರಡಿ ಮಣ್ಣಿನಡಿಯ ಖಬ್ರ್ ನಲ್ಲಿ ನಿನ್ನನ್ನಿಟ್ಟರೆ ಅಲ್ಲಿ ಇದೇ ನಾನು ನಿನ್ನ ಖಬ್ರ್ ನೊಳಗೆ ಬಂದು ನಿನ್ನ ಎದೆಯ ಮೇಲೆ ಕುಳಿತರೆ ನಿನ್ನ ನೆರವಿಗೆ ಯಾರಿದ್ದಾರೆ ಎಂದು ಹಾವು ಕೇಳಿದಾಗ ನಾನು ಹೇಳಿದ ಉತ್ತರ ಒಂದು ಮಾತ್ರ.....
ಹೌದು ನನ್ನ ರಕ್ಷಣೆಗೆ SSF ಇದೆ.ಜೀವಿತಾವದಿಯಲ್ಲಿ ನನ್ನಲ್ಲಿ ಸಂಭವಿಸಿದ ಪ್ರಮಾದಗಳಿಗೆ ಶಿಕ್ಷೆಯಾಗಿ ನೀನು ನನ್ನ ಬಳಿ ಬಂದರೆ.ನನ್ನ ಮೇಲೆ ತಹ್ಲೀಲ್ ಸಮರ್ಪಿಸಿ, ಕುರ್ ಆನ್ ಹದಿಯಾ ಮಾಡಿ ಭಕ್ತಿನಿರ್ಭರವಾಗಿ ಪ್ರಾರ್ಥಿಸಿ ನನ್ನನ್ನು ಶಿಕ್ಷೆಯಿಂದ ರಕ್ಷಿಸಲು ನೂರಾರು SSF ನ ಕಾರ್ಯಕರ್ತರು ನನ್ನೊಂದಿಗಿದ್ದಾರೆ ಎಂದು ಹೇಳಿದಾಗ ಹಾವು ಮರುತ್ತರವಿಲ್ಲದೆ ಮೌನಕ್ಕೆ ಜಾರಿದಂತೆ ನನಗನಿಸಿತು.
SSF ಕ್ಯಾಂಪಸ್ ಪ್ರತಿಭೆ ಮುಹ್ಸಿನ್ ನಮ್ಮನ್ನಗಲಿ ಒಂದು ವರ್ಷ.
ಅಲ್ಲಾಹನು ಖಬ್ರ್ ಸಂತೇೂಷಮಯಗೊಳಿಸಲಿ - ಆಮೀನ್
✍ Musthafa Master Ullal
======================
ನಮ್ಮನ್ನಗಲಿ ಒಂದು ವರ್ಷವಾದ ಮರ್ಹೂಂ ಮುಹ್ಸಿನ್ ಖಬ್ರ್ ಬಳಿ ಇಂದು ಬೆಳಿಗ್ಗೆ ನಡೆದ ಅನುಸ್ಮರಣಾ ಮಜ್ಲಿಸ್ @ ಕೆ.ಸಿ ನಗರ. 10-10-2019 👇👇



Comments