Skip to main content

ಚಿಕ್ಕಸತ್ಕರ್ಮˌದೊಡ್ಡ ಪ್ರತಿಫಲ

ಚಿಕ್ಕಸತ್ಕರ್ಮˌದೊಡ್ಡ ಪ್ರತಿಫಲ
〰〰〰〰〰〰〰〰〰
💢ಎಂ.ಕೆ.ಸಿನಾನ್ ಅಜಿಲಮೊಗರು💢

ನಾವು ನಬಿ (ಸ.ಅ) ರ ಉಮ್ಮತ್...
ಯಾವ ಉಮ್ಮತಿಗೂ ನೀಡದಂತಹ ಸ್ಥಾನವನ್ನು ಅಲ್ಲಾಹು ನಮಗೆ ನೀಡಿದ್ದಾನೆ.........
ಅಲ್ಲಾಹನ ಬಳಿˌಚಿಕ್ಕ ಸತ್ಕರ್ಮವನ್ನು ಮಾಡಿದರೆˌದೊಡ್ಡ ಪ್ರತಿಫಲವುˌ ನಬಿ(ಸ.ಅ)ರ ಉಮ್ಮತ್ತಿಯಾದ ನಮಗಿದೆ........!

ಮೂಸಾ ನಬಿ (ಅ.ಸ)ರ ಉಮ್ಮತಿಗಳ ವಸ್ತ್ರದಲ್ಲಿ ಮೂತ್ರವಾದರೆˌ ಆ ವಸ್ತ್ರವನ್ನು ಮರು ಉಪಯೋಗಿಸುವಂತಿಲ್ಲˌಅಥವಾ ಮೂತ್ರಸ್ಪರ್ಶವಾದಂತಹ ವಸ್ತ್ರದ ಆ ಭಾಗವನ್ನು ಕತ್ತರಿಸಬೇಕು..........

ಆದರೆˌ
ನಬಿ (ಸˌಅ) ರ ಉಮ್ಮತಿಯಾದ ನಮ್ಮ ವಸ್ತ್ರದಲ್ಲಿ ಮೂತ್ರವಾದಲ್ಲಿ ಅದನ್ನು ಶುಚಿತ್ವಗೊಳಿಸಿದರೆ ಸಾಕು..
ಕತ್ತರಿಸಬೇಕೆಂದಿಲ್ಲˌಮರುಪಯೋಗವು ಮಾಡಬಹುದು.
(ಬೇರೆ ಉಮ್ಮತ್ಗೆ ನೀಡಿದಂತಹ ಕಷ್ಟ ನಿಯಮವನ್ನು ಅಲ್ಲಾಹನು ನಮಗೆ ನೀಡಿಲ್ಲ)

*ನಮಗಿರುವಂತಹ ಆಫರ್ ಗಳು ಬೇರೆ ಯಾವ ಉಮ್ಮತಿಗೂ ಇರಲಿಲ್ಲ......*
ಅದರಲ್ಲಿ *ಕೆಲವೊಂದನ್ನು*ನೋಡಿ........
👇

*ಯಾರಾದರುˌ*
*ನಾಲ್ಕು ಆಯತ್ ಉಳ್ಳˌಕೇವಲ ಐದು ಸೆಕೆಂಡ್ ಗಳಲ್ಲಿ ಓದಿ ಮುಗಿಸಬಹುದಾದಂತಹ ಸೂರತುಲ್ ಇಖ್ಲಾಸನ್ನು ಮೂರು ಬಾರಿ ಪರಾಯಣ ಮಾಡಿದರೆˌಒಂದು ಖತಂ ಓದಿದ ಪ್ರತಿಫಲವಿದೆ.........*

👉 *ಯಾರಾದರುˌಇಶಾ ನಮಾಝ್ ಮಾಡಿˌಮಲಗಿ ಸುಬಹ್ ನಮಾಝನ್ನು ಮಾಡಿದರೆˌರಾತ್ರಿ ಮಲಗಿ ನಿದ್ರಿಸಿದರೂಕೂಡ ಅಲ್ಲಾಹನಬಳಿ ನಿದ್ರಿಸದೆˌಇಬಾದತ್ ಮಾಡಿದ ಪ್ರತಿಫಲವಿದೆ....*

👉 *ಮುಹರ್ರಂನ ಒಂದು ಸುನ್ನತ್ ಉಪವಾಸವನ್ನು ಅನುಷ್ಠಿಸಿದರೆˌಒಂದು ವರ್ಷ ಸುನ್ನತ್ ಉಪವಾಸ ಆಚರಿಸಿದ ಪ್ರತಿಫಲವಿದೆ......*

👉 *ಒಬ್ಬಂಟಿಯಾಗಿ ನಮಾಝ್ ಮಾಡುವುದಕ್ಕಿಂತˌಜಮಾಅತ್ತಾಗಿ ನಮಾಝ್ ನಿರ್ವಹಿಸಿದರೆˌಇಪ್ಪತ್ತೇಳು ಪಟ್ಟು ಹೆಚ್ಚು ಪ್ರತಿಫಲ............*

👉 *ನಲವತ್ತು ದಿವಸ ಯಾರಾದರುˌಜಮಾಅತ್ತಾಗಿ ನಮಾಝ್ ನಿರ್ವಹಿಸಿದರೆˌಅವನನ್ನು ನರಕದಿಂದ ವಿಮೋಚಿಸಲಾಗುವುದು......*

👉 *ಮಸೀದಿಗೆ ಮನೆಯಿಂದ ನಡೆಯುವ ಒಂದೊಂದು ಹೆಜ್ಜೆಗೆ ಅವನ ಒಂದೊಂದು ಪಾಪವನ್ನು ಮನ್ನಿಸಲಾಗುವುದು.......*

👉 *ಇಸ್ಲಾಮಿಕ ಆಶಯ ಆದರ್ಶವನ್ನು ಕಲಿಸುವಂತಹ ತರಗತಿಯಲ್ಲಿ ಪಾಲ್ಗೊಳ್ಳುವುದು ಸಾವಿರ ರಕಅತ್ ನಮಾಝ್ ಮಾಡುವುದಕ್ಕಿಂತ ಶ್ರೇಷ್ಠ...*

👉 *ಅತ್ಯಂತ ಸುಲಭವಾದ ಕಾರ್ಯವಾಗಿದೆ ನೀರು ಕುಡಿಯುವುದುˌನೀರು ಕುಡಿಯುವಾಗ ಈ ಕೆಳಗಿನ ಒಂದೊಂದು ಕಾರ್ಯಕ್ಕೆ ಒಂದೊಂದು ಪ್ರತಿಫಲ,*
🎍ಬಿಸ್ಮಿ ಹೇಳಬೇಕು
🎍ಕುಳಿತುಕೊಂಡು ಕುಡಿಯಬೇಕು
🎍ಬಲ ಕೈಯಿಂದ ಕುಡಿಯಬೇಕು
🎍3 ಬಾರಿಯನ್ನಾಗಿಸಿ ಕುಡಿಯಬೇಕು
🎍ನೀರನ್ನು ನೋಡಿ ಕುಡಿಯಬೇಕು
🎍ಅಲ್ಹಂದುಲಿಲ್ಲಾಹ್ ಎಂದು ಹೇಳಬೇಕು

👉 *ಯಾರಾದರು ದಿನನಿತ್ಯ ಹತ್ತು ಸ್ವಲಾತ್ ಹೇಳಿದರೆ*
*ಅವನು ಮರಣ ಹೊಂದುವಾಗ ಬಾಯಾರಿಕೆಯನ್ನು ತಾಳಲಾಗದಾಗ ಜಿಬ್ರೀಲ್ (ಅ.ಸ)ಬಂದು ನೀರನ್ನು ಕೊಡುವರು,*
👉 *ದಿನನಿತ್ಯ ಹತ್ತು ಸ್ವಲಾತ್ ಹೇಳಿದರೆˌ ಕಬರ್ ನಲ್ಲಿ ಅವನು ಹೇಳಿದಂತಹ ಸ್ವಲಾತ್ ಕಬ್ರಿನಲ್ಲಿ ಕೇಳಲ್ಪಡುವ ಪ್ರಶ್ನೆಗೆ ಉತ್ತರಿಸುತ್ತದೆˌ*
👉 *ದಿನನಿತ್ಯ ಹತ್ತು ಸ್ವಲಾತ್ ಹೇಳಿದರೆˌ ಮೀಕಾಈಲ್(ಅ.ಸ) ಹವ್ಲುಲ್ ಕೌಸರ್ ಪಾನೀಯವನ್ನು ನೀಡುವರುˌ*
👉 *ದಿನನಿತ್ಯ ಹತ್ತು ಸ್ವಲಾತ್ ಹೇಳಿದರೆˌಸ್ವಿರಾತ್ ಎಂಬ ಸೇತುವೆಯಲ್ಲಿ ಮಿಂಚಿನಂತೆ ಜಿಬ್ರೀಲ್ (ಅ.ಸ) ಅವನನ್ನು ಕರೆದು ಕೊಂಡುಹೋಗುವರು..*

👉 *ಪ್ರವಾದಿ (ಸ.ಅ)ರೊಂದಿಗೆ ಯುಧ್ಧದಲ್ಲಿ ಭಾಗವಹಿಸಿ ದೀನುಲ್ ಇಸ್ಲಾಂಗೆ ಬೇಕಾಗಿ ಪ್ರಾಣತ್ಯಾಗವನ್ನು ಮಾಡಿದಂತಹ ಸ್ವಹಾಬಿಗಳಿಗೆ ಒಂದು ಶಹೀದ್ ನ ಫ್ರತಿಫಲವಾದರೆˌನೂತನವಾದಿಗಳು ತುಂಬಿರುವ ಈ ಕಾಲದಲ್ಲಿ ಪ್ರವಾದೀ ಚರ್ಯೆಯನ್ನು ಅನುಸರಿಸುವವನಿಗೆ ನೂರು ಶಹೀದ್ ನ ಪ್ರತಿಫಲ.......*

*💢ಎಂ.ಕೆ.ಸಿನಾನ್ ಅಜಿಲಮೊಗರು💢*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...