ಯಾ ಶೈಖ್ ಅಬೂಬಕ್ಕರ್, ತಮ್ಮ SYS ಗೆ ಪ್ರವಾದಿವರ್ಯರ ಸಮ್ಮತವಿದೆ
✍ *ಉರ್ಣಿ ಸಖಾಫಿ*
2004ರಲ್ಲಿ ಕೇರಳದಲ್ಲಿ ನಡೆದ ಸುನ್ನೀ ಯುವಜನ ಸಂಘ (SYS) ಗೋಲ್ಡನ್ ಜೂಬ್ಲಿ ಮಹಾ ಸಮ್ಮೇಳನಕ್ಕೆ ಮದೀನದ ಪ್ರಧಾನ ಮುದರ್ರಿಸರೂ ಆದ ಖ್ಯಾತ ಸೂಫೀವರ್ಯ, ಅಂತಾರಾಷ್ಟ್ರ ವಿದ್ವಾಂಸ ಶೈಖ್ ಮುಹಮ್ಮದ್ ಮಾಲಿಕ್ (ಖಸಿ) ರವರನ್ನು ಶೈಖುನಾ ಸುಲ್ತಾನುಲ್ ಉಲಮಾ ಆಹ್ವಾನಿಸಿದರು. ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈವಸಲ್ಲಮರ ಸಮ್ಮತವಿಲ್ಲದೆ ಮದೀನದಿಂದ ಹೊರಹೋಗಲು ನನಗೆ ಸಾದ್ಯವಿಲ್ಲ, ಆದ್ದರಿಂದ ನಿಮ್ಮ ಸಮ್ಮೇಳನಕ್ಕೆ ನನಗೆ ಬರಲಾಗುತ್ತಿಲ್ಲವೆಂದು ಶೈಖ್ ಮಾಲಿಕ್ ರವರು ಹೇಳಿದರು. ನಿರಾಶೆಯೊಂದಿಗೆ ಸುಲ್ತಾನುಲ್ ಉಲಮಾ ಹಿತಿರುಗಿದರು.
ಎಸ್ ವೈ ಎಸ್ ಗೋಲ್ಡನ್ ಜೂಬ್ಲಿ ಸಮ್ಮೇಳನ ಬಂದೇಬಿಟ್ಟಿತು. ಸಮ್ಮೇಳಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಮದೀನದಿಂದ ಶೈಖ್ ಮುಹಮ್ಮದ್ ಮಾಲಿಕ್ ರವರ ಫೋನ್: *ಯಾ ಶೈಖ್ ಅಬೂಬಕ್ಕರ್, ನಿಮ್ಮ SYS ಸಮ್ಮೇಳನಕ್ಕೆ ಮುಹಮ್ಮದ್ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈವಸಲ್ಲಮರ ಸಮ್ಮತ ಲಬಿಸಿದೆ, ನಿಮ್ಮ ಸಮ್ಮೇಳನಕ್ಕೆ ನಾನು ಬರುತ್ತೇನೆ...!*
ಅಲ್ ಹಂದುಲಿಲ್ಲಾ, ಅವುಲಿಯಾ ಜಗತ್ತಿನ ಶ್ರೇಷ್ಟರೂ ಆದ ಶೈಖ್ ಮುಹಮ್ಮದ್ ಮಾಲಿಕ್ ರವರ ಮಾತುಕೇಳಿ ಬಾರತೀಯ ಸುನ್ನಿಗಳಿಗೆ ಬಹಳ ಸಂತೋಷವಾಯಿತು.
ಶೈಖ್ ಮುಹಮ್ಮದ್ ಮಾಲಿಕ್ (ಖಸಿ) ರವರ ನೇತ್ರತ್ವದಲ್ಲಿ ಚರಿತ್ರೆ ಪ್ರಸಿದ್ದವಾದ ಎಸ್ ವೈ ಎಸ್ ಗೋಲ್ಡನ್ ಜೂಬ್ಲಿ ಮಹಾ ಸಮ್ಮೇಳನ ಬಾರೀ ಜನಪ್ರವಾಹದೊಂದಿಗೆ ಸಮಾಪ್ತಿಗೊಂಡಿತು.
ನೀವು ಸುನ್ನಿಯಾ..? ನಿಮಗೆ ಪ್ರಾಯ ಮೂವತ್ತನಾಲ್ಕು ತುಂಬಿದೆಯಾ..? ನೀವು ಕರ್ನಾಟಕ ರಾಜ್ಯಕ್ಕೆ ಸೇರಿದವನಾ..? ಹಾಗಾದರೆ ನೀವು ಕೂಡಲೇ ಎಸ್ ವೈ ಎಸ್ ಎಂಬ ಧಾರ್ಮಿಕ ಯುವ ಸಂಘಟನೆಯೊಂದಿಗೆ ಸೇರಿಕೊಳ್ಳಿ.
*ಕರ್ನಾಟಕ ರಾಜ್ಯ SYS ಆಗೋಸ್ತ್ 25 ರಿಂದ 30 ರ ತನಕ ರಾಜ್ಯಾದ್ಯಂತ ತನ್ನ ಸದಸ್ಯತ್ವ ಅಭಿಯಾನವನ್ನು ನಡೆಸುತ್ತಿದೆ. ಮೂವತ್ತನಾಲ್ಕು ವಯಸ್ಸು ಪ್ರವೇಶಿಸಿದ ಎಲ್ಲಾ ಸುನ್ನೀ ಯುವಕರು ಈ ಆದರ್ಶ ಸಂಘದಲ್ಲಿ ಭಾಗಿಯಾಗಬೇಕು.*
ಕಳೆದ ಅರುವತ್ತೈದು ವರ್ಷಗಳ ಮುಂಚೆ ಸ್ಥಾಪಿತವಾದ ಸುನ್ನೀ ಯುವಜನ ಸಂಘ (SYS) ಎಂಬ ಈ ಸಂಘಟನೆಯು ಮುಸ್ಲಿಂ ಯುವಮನಸ್ಸುಗಳಲ್ಲಿ ಇಸ್ಲಾಮೀ ಚಿಂತನೆಯನ್ನು ತುಂಬಿಸಿ, ತಖ್ವ ಮತ್ತು ಈಮಾನ್ ಮೂಲಕ ಇಲಾಹೀ ಆದರ್ಶವನ್ನು ಕಲಿಸಿಕೊಡುತ್ತಿದೆ.
ತಖ್ವ, ಇಲ್ಮ್, ಆರಾಧನೆ, ಸೇವನೆ ಈ ನಾಲ್ಕು ಕಾರ್ಯಗಳನ್ನು ಲಕ್ಷವಿಟ್ಟು ಕಾರ್ಯಾಚರಿಸುತ್ತಿರುವ SYS ಎಂಬ ಮಹಾ ಸಂಘಟನೆಯು ದೇಶಾದ್ಯಂತ ಬಾರೀ ವೇಗವಾಗಿ ಮುನ್ನುಗ್ಗುತ್ತಿದೆ. ಸೇವಾ ರಂಗದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ.
*ಅಲ್ಲಾಹನ ಅವುಲಿಯಾಗಳೂ, ಶ್ರೇಷ್ಟ ವಿದ್ವಾಂರೂ, ಖ್ಯಾತ ಸೂಫೀವರ್ಯರೂ, ನಿಷ್ಕಲಂಕ ಉಲಮಾಗಳೂ ಈಗೇ ಎಲ್ಲರಿಂದಲೂ ಆಶಿರ್ವಾದ ಪಡೆದ SYS ನೊಂದಿಗೆ ನೀವೂ ಕೈ ಜೋಡಿಸಿ.*
**********************************
ಆಗೋಸ್ತ್ 25 ರಿಂದ 30 ರ ವರೆಗೆ
SYS ಕರ್ನಾಟಕ ರಾಜ್ಯ ಸದಸ್ಯತ್ವ ಅಭಿಯಾನ
▪▪▪▪▪▪▪▪▪▪
Comments