Skip to main content

ಹಿಜರಿ ವರ್ಷದ ಬಗ್ಗೆ ನಿಮಗೆಷ್ಟು ಗೊತ್ತು

ಚರಿತ್ರೆ ಹೇಳುವ ಮುಹರ್ರಮ್
➖➖➖➖➖➖➖➖➖

ಹಿಜರಿ ವರ್ಷದ ಬಗ್ಗೆ ನಿಮಗೆಷ್ಟು ಗೊತ್ತು

🌷🌷🌷🌷🌷🌷🌷🌷🌷🌷

✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*

🌷🌷🌷🌷🌷🌷🌷🌷🌷🌷

ಹಿಜರಿ ವರ್ಷ ಆರಂಭಗೊಂಡಿದೆ. 1441 ನೇ ಹಿಜರಿ ವರ್ಷ ಕಾಲಿರಿಸಿದಾಗ ಹೊಸ ವರ್ಷದ ಶುಭಾಶಯ ಕೋರಿದ ನಮಗೆ ಹಿಜರಿ ಕ್ಯಾಲೆಂಡರ್'ನ ಕಥೆ ಗೊತ್ತಿದೆಯೇ ? ಬಹುತೇಕ ಪುಣ್ಯ ಕರ್ಮಗಳನ್ನು ಮಾಡುವ ನಮಗೆ ಅದರ ಹಿನ್ನೆಲೆ ಮತ್ತು ಇತಿಹಾಸ ತಿಳಿದಿರುವುದಿಲ್ಲ. ಅದನ್ನು ಕಲಿಯಲು ನಾವು ಮನಸ್ಸನ್ನು ಮಾಡುವುದಿಲ್ಲ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಿಜ್ರಾ ಹೋದ ಘಟನೆ ಯನ್ನು ಮುಂದಿಟ್ಟು ಹಿಜರಿ ವರ್ಷ ರಚಿಸಲಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಿಜ್ರಾ ಹೋದದ್ದು ರಬೀವುಲ್ ಅವ್ವಲ್ ತಿಂಗಳಲ್ಲಾಗಿದೆ. ಹಾಗಾದರೆ ಮುಹರ್ರಮ್ ಹಿಜರಿ ವರ್ಷದ ಮೊದಲ ತಿಂಗಳಾಗಲು ಕಾರಣ ವೇನು ? ಬಹುತೇಕರಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮುಹರ್ರಮ್ ನಲ್ಲಿಯೇ ಹಿಜರಿ ಹೊರಟ್ಟದ್ದೆಂಬ ಭಾವನೆ ಇದೆ.

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲ ಮತ್ತು  ಅಬೂಬಕ್ಕರ್ ಸಿದ್ದೀಖ್ ರಳಿಯಲ್ಲಾಹು ಅನ್ಹು ರವರ ಕಾಲದಲ್ಲಿ ಅಬ್ರಹತ್ ಸೈನ್ಯ ನಾಶ ವಾದ ಘಟನೆಯನ್ನು ಕೇಂದ್ರೀಕರಿಸಿ ಒಂದನೇ ಗಜ ವರ್ಷ,ಎರಡನೇ ಗಜ ವರ್ಷ ಎಂದು ವರ್ಷಗಳ ಲೆಕ್ಕ ಹಾಕುತ್ತಿದ್ದರು. ಇಸ್ಲಾಂ ಅರಬ್ ಜಗತ್ತು ಬಿಟ್ಟು ಹೊರ ಪ್ರಚಾರ ಪಡೆದಾಗ ಮುಸ್ಲಿಮರಿಗೆ ಪ್ರತ್ಯೇಕ ಕ್ಯಾಲೆಂಡರ್ ಅಗತ್ಯ ವಿದೆ ಎಂದು ಸ್ವಹಾಬಿಗಳು ಅಭಿಪ್ರಾಯ ಪಟ್ಟರು.

ಕ್ಯಾಲೆಂಡರ್ ರಚನೆಗೆ ಹಲವಾರು ಅಭಿಪ್ರಾಯಗಳು ಖಲೀಫಾ ಉಮರ್ ರಳಿಯಲ್ಲಾಹು ಅನ್ಹು ರವರ ಮುಂದೆ ಮಂಡಿಸಲ್ಪಟ್ಟರೂ,ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಿಜರಿ ಹೋದ ಘಟನೆ ಯನ್ನು ಆಧರಿಸಿ ಕ್ಯಾಲೆಂಡರ್ ರಚಿಸ ಬೇಕೆಂಬ ನಿಲುವಿಗೆ ಎಲ್ಲರೂ ಬದ್ಧರಾದರು.

ಹಿಜರಿ ವರ್ಷದ ಮೊದಲ ತಿಂಗಳು ಯಾವುದಾಗಬೇಕೆಂಬ ಚರ್ಚೆ ಬಂದಾಗ ಯುದ್ಧ ನಿಷಿದ್ಧ ವಾದ ತಿಂಗಳು ಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಮುಹರ್ರಮ್ ಇರಲಿ ಎಂಬ ಒಮ್ಮತಾಭಿಪ್ರಾಯ ಮಂಡಿಸಲಾಯಿತು‌. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಿಜ್ರಾ ಆರಂಭಿಸಿದ್ದಕ್ಕಿಂತಲೂ ಎರಡು ತಿಂಗಳು ಹನ್ನೊಂದು ದಿನ ಮೊದಲು ಮುಹರ್ರಮ್ ಬರುವುದಾದರು ಅದನ್ನು ಪರಿಗಣಿಸ ಬೇಕಿಲ್ಲ ಎಂಬ ಸ್ವಹಾಬಿಗಳ ಏಕ ಅಭಿಪ್ರಾಯ ಪ್ರಕಾರ ಮುಹರ್ರಮ್ ಹಿಜರಿ ವರ್ಷದ ಮೊದಲ ತಿಂಗಳಾಗಿ ಜಾರಿಗೆ ಬಂತು.

ವರ್ಷಕ್ಕೆ ಹನ್ನೆರಡು ತಿಂಗಳು ಗಳ ಲೆಕ್ಕ ಉಮರ್ ರಳಿಯಲ್ಲಾಹು ಅನ್ಹು ರವರ ಕಾಲದಲ್ಲಿ ಉಂಟಾದದ್ದಲ್ಲ.  ಭೂಮಿ, ಆಕಾಶ ಸೃಷ್ಟಿಸಿದಂದಿನಿಂದಲೂ ವರ್ಷಕ್ಕೆ ಹನ್ನೆರಡು ತಿಂಗಳುಗಳೇ ಇವೆ. ಉಮರ್ ರಳಿಯಲ್ಲಾಹು ಅನ್ಹು ರವರು ಅದನ್ನು ಕ್ಯಾಲೆಂಡರ್ ರೂಪಕ್ಕೆ ಇಳಿಸಿ ಹಿಜರಿ ತಿಂಗಳೆಂಬ ಹೆಸರಲ್ಲಿ ಜಾರಿಗೆ ತಂದರಷ್ಟೇ.

ಮುಹರ್ರಮ್ ತಿಂಗಳಿಗೆ ಅಪಾರ ಶ್ರೇಷ್ಠತೆ ಇದೆ. ರಮಳಾನ್ ಬಳಿಕ ಉಪವಾಸ ಆಚರಿಸಲು ಉತ್ತಮ ತಿಂಗಳು ಮುಹರ್ರಮ್ ಆಗಿದೆ.ಸ್ವಹಾಬಿ ಗಳ ಚರಿತ್ರೆ ಯಲ್ಲಿ ಅವರು ಮಕ್ಕಳಿಗೆ ಮುಹರ್ರಮ್ ಉಪವಾಸ ಆಚರಿಸಲು ಪ್ರೇರಣೆ ನೀಡುತ್ತಿದ್ದರೆಂದು ಕಾಣಬಹುದಾಗಿದೆ. ಪೂರ್ವಕಾಲದಲ್ಲಿಯೂ ಮುಹರ್ರಮ್ ತಿಂಗಳ ಉಪವಾಸಕ್ಕೆ ಮಹತ್ವ ಇತ್ತು. ಯಹೂದಿಗಳು ಮುಹರ್ರಮ್ ಹತ್ತರ ಉಪವಾಸ ಆಚರಿಸುತ್ತಿದ್ದರು.ರಮಳಾನ್ ಉಪವಾಸ ಜಾರಿಗೆ ಬರುವ ಮೊದಲು ಮುಹರ್ರಮ್ ಹತ್ತರ ಆಶುರಾ ದಿನದ ಉಪವಾಸ ಕಡ್ಡಾಯವಾಗಿತ್ತು. ರಮಳಾನ್ ಉಪವಾಸ ಕಡ್ಡಾಯ ವಾದ ಬಳಿಕ ಅದನ್ನು ಸುನ್ನತ್ ಮಾಡಲಾಯಿತು.

ಮುಹರ್ರಮ್ 9 ರ ತಾಸುಆ ಹಾಗೂ 10 ರ ಆಶುರಾ ದಿನದ ಉಪವಾಸ ಪ್ರತ್ಯೇಕ ಸುನ್ನತ್ ಇದೆ. ಒಂದು ವೇಳೆ ತಾಸುಆ ದಿನ ಉಪವಾಸ ಆಚರಿಸಲು ಸಾಧ್ಯವಾಗದವರು ಮುಹರ್ರಮ್ ಹನ್ನೊಂದರಂದು ಉಪವಾಸ ಆಚರಿಸಬಹುದಾಗಿದೆ.

ಇಸ್ಲಾಮಿನ ಇತಿಹಾಸ ದಲ್ಲಿ ನಡೆದ ಅನೇಕಾರು ಘಟನೆ ಗಳಿಗೆ ಮುಹರ್ರಮ್ ಸಾಕ್ಷಿ ಯಾಗಿ ನಿಲ್ಲುತ್ತದೆ. ಇತಿಹಾಸದ ಚರಿತ್ರೆ ಗಳು ಮುಹರ್ರಮ್ ತಿಂಗಳ ಒಡಲಲ್ಲಿ ಅಡಕವಾಗಿವೆ.ಆದಮ್ ನಬಿ ಅಲೈಹಿಸ್ಸಲಾಮರಿಂದ ಹಿಡಿದು  ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ತನಕ ಅಸಂಖ್ಯಾತ ಘಟನೆಗಳು ನಡೆದದ್ದು ಮುಹರ್ರಮ್ ತಿಂಗಳಲ್ಲಿ ಆಗಿವೆ..

*ಮುಹರ್ರಮ್ ಹೆಸರಲ್ಲಿ ಕೆಲವು ಕಡೆ "ಯಾ ಹುಸೈನ್" ಎಂದೇಳಿ ಶರೀರಕ್ಕೆ ಹಿಂಸೆ ಮಾಡುವ ಕೃತ್ಯ ಕಂಡು ಬರುತ್ತಿದೆ. ಇದು ಇಸ್ಲಾಮಿಕ ವಲ್ಲ. ಅದು ಕೆಲವು ಅಜ್ಞಾನಿಗಳು ಇಸ್ಲಾಮಿನ ಬಗ್ಗೆ ಅರಿವಿಲ್ಲದಂತೆ ನಡೆಸುವ ಕಾರ್ಯವಾಗಿದೆ. ಮುಹರ್ರಮ್ ಹತ್ತರಂದು ಪ್ರವಾದಿ ಪೌತ್ರ  ಹುಸೇನ್ ರಳಿಯಲ್ಲಾಹು ಅನ್ಹು ರವರ ಹತ್ಯೆ ಮಾಡಿದ ದಿನ ಎಂಬ ನೆಲೆಯಲ್ಲಿ ಅಂದು ದು:ಖಾಚರಣೆ ನಡೆಸಲು ಇಸ್ಲಾಂ ಕಲ್ಪಿಸಿಲ್ಲ.*

🌷🌹🌷🌹🌷🌹🌷🌹🌷🌹

🌳🌳🌳🌳🌳🌳🌳🌳🌳🌳

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...