Skip to main content

ಇಖ್ಲಾಸ್ ಸೂರತ್

*🏮ಒಂದ್ನಿಮಿಷ ಓದಿ ನೋಡಿ, ಯಾರೂ ಇದರಿಂದ ವಂಚಿರಾಗದಿರಿ...🏮*

*🎈ಇಖ್ಲಾಸ್ ಸೂರತ್("ಖುಲ್ ಹುವಲ್ಲಾಹ್ ಅಹದ್") ಓದಿದರೆ ಸಿಗುವ ಲಾಭಗಳು ಹಲವು...🎈*

*✍🏻ಸಾಲಿಮ್ ಮುಈನಿ ಸಖಾಫಿ ಗಂಡಿಬಾಗಿಲು*

1. ಇಖ್ಲಾಸ್ ಸೂರತ್ ಒಮ್ಮೆ ಪಾರಾಯಣ ಮಾಡಿದರೆ ಖುರ್-ಆನಿನ ಮೂರರಲ್ಲೊಂದು ಭಾಗ ಪಾರಾಯಣ ಮಾಡಿದಂತೆ.

2. 50 ವರ್ಷಗಳ ಸಣ್ಣ ಪಾಪಗಳೆಲ್ಲಾ ಅಲ್ಲಾಹು ಮಾಫಿ ಮಾಡುವನು.

3. ಸೂರತುಲ್‌ ಇಖ್ಲಾಸ್ ನೊಂದಿಗಿನ ಸ್ನೇಹ, ಗೌರವ ಸ್ವರ್ಗ ಪ್ರವೇಶಕ್ಕೆ ಪ್ರತ್ಯೇಕ ಶಕ್ತಿ, ರಹದಾರಿಯಾಗಲಿದೆ.

4.ಅಲ್ಲಾಹನ ಸ್ನೇಹಕ್ಕೆ ಕಾರಣವಾಗಲಿದೆ.

5. ಪ್ರಾರ್ಥನೆ ಸ್ವೀಕರಿಸಲ್ಪಡುವುದು.

6. ದಾರಿದ್ರ್ಯದಿಂದ‌ ಶಾಸ್ವತ ಮೋಚನೆ ಸಿಗಲಿದೆ.

7. ಮಯ್ಯಿತ್ ನಮಾಝ್ ನಿರ್ವಹಿಸಲು ಮಲಕುಗಳು ಹಾಜರಾಗುವರು.

8. ಕಬರಿನ ಅತಿ ರೂಕ್ಷವೂ, ಕಠಿಣ ಕಠೋರವಾದ ಹಿಡಿತದಿಂದ ರಕ್ಷೆ ಲಭಿಸುವುದು.

9. ಸ್ವರ್ಗದಲ್ಲಿ ಅನೇಕ‌ ಗಗನಚುಂಬಿ ‌ಕಟ್ಟಡಗಳು ಲಭಿಸುವುದು.

10. ಸತ್ಕರ್ಮಗಳು ಹೆಚ್ಚೆಚ್ಚು ಮಾಡುವ ಅವಕಾಶ ಸಿಗುತ್ತೆ.

11. ನೆರೆಹೊರೆಯವನಿಗೂ ಕೂಡಾ ದಾರಿದ್ರ್ಯದಿಂದ ಮುಕ್ತಿ ಸಿಗುವುದು.

12. ಆಶುರಾ ದಿನದಂದು ಓರ್ವ 1000 ಬಾರಿ ಓದಿದರೆ ಅಲ್ಲಾಹನ ದರ್ಶಿಸಲು ಸುಲಭ ದಾರಿ ಸಿಗುವುದು.

13. ಫರ್ಳ್ ನಮಾಝ್ ಬಳಿಕ 10" ಬಾರಿ ಓದುವುದು ರೂಢಿ ಮಾಡಿದರೆ ಸ್ವರ್ಗ ಕವಾಟದ ಪೈಕಿ ಅವನಿಗೆ ಇಷ್ಟವಾದ ಕವಾಟದ ಮೂಲಕ ಪ್ರವೇಶಿಸುವ ಅವಕಾಶ ಲಭಿಸುವುದು.

14. "ಸ್ವಿರಾತ್" ಎಂಬ ಸೇತುವೆಯಲ್ಲೂ ರಕ್ಷೆ ಲಭಿಸಲಿದೆ.

15. ಮರಣ ವೇಳೆ ಅಲ್ಲಾಹನ ರಹ್ಮತ್, ಅನುಗ್ರಹಕ್ಕೆ ಕಾರಣವಾಗಲಿದೆ.

16. ಓರ್ವ ಬೆಳಿಗ್ಗೆ 3 ಬಾರಿ ಓದಿದರೆ ಮಾಟ,‌ ಮಂತ್ರ, ಶತ್ರು ಹಾವಳಿ ಮುಂತಾದ ಸಕಲ ಸಂದಿಗ್ಧ ವಿಷಮ ಪರಿಸ್ಥಿತಿಯಿಂದಲೂ ಹಗಲು ವೇಳೆ ಅವನಿಗೆ ಕಾವಲು ಲಭಿಸಲಿದೆ, ಸಂಜೆ ವೇಳೆ ಓದಿದರೆ ರಾತ್ರಿಯಿಡೀ ಕಾವಲು ಲಭಿಸಲಿದೆ.

17. ಆರ್ಥಿಕವಾಗಿ ಅಭಿವೃದ್ಧಿ ಪ್ರಾಪ್ತಿಯಾಗುವುದು.

18. ಮ'ಅಶರಾ ಲೋಕದಲ್ಲಿ ಯಥೇಚ್ಛ ಸಹಾಯಕರವಾಗುತ್ತೆ.

19.ಜೀವಿತಾವಧಿಯಲ್ಲಿ ಓರ್ವ ಒಂದು ಲಕ್ಷ ಬಾರಿ ಇಖ್ಲಾಸ್ ಸೂರತ್ ಓದಿದರೆ ಪರಲೋಕದಲ್ಲಿ ವಿಚಾರಣೆ ವೇಳೆ ಮನುಷ್ಯರ ಮೇಲಿರುವ ಸಕಲ ಭಾದ್ಯತೆಗಳಿಂದ ಮುಕ್ತಿ ನೀಡಿ ಸ್ವಸ್ಥವಾಗಿ ಸ್ವರ್ಗ ಪ್ರವೇಶಿಸಲು ಅಲ್ಲಾಹು ಅವಕಾಶ ನೀಡುವನು.

*ಅಲ್ಲಾಹು ಇದನ್ನು ರೂಢಿ ಮಾಡಲು ನಮಗೆ‌‌ ತೌಫೀಖ್ ನೀಡಲಿ, ಆಮೀನ್.*

*➰ಸಾಧ್ಯವಾದಷ್ಟು ಶೇರ್ ಮಾಡಿ ಈ ಪುಣ್ಯ ಕರ್ಮದಲಿ ಭಾಗಿಗಳಾಗಿರಿ...➰➰*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...