ಅನರ್ಹರಿಗೆ ಅಧಿಕಾರ ಕೊಡಬಾರದು
ಅಬೂಮೂಸಲ್ ಅಶ್ಅರೀ(ರ) ಹೇಳಿದರು.
"ನಾನು ಮತ್ತು ನನ್ನ ಪಿತೃ ಸೋದರನ ಇಬ್ಬರು ಮಕ್ಕಳು ನಬಿಯವರﷺ ಮನೆಗೆ ಹೋದೆವು.ನಮ್ಮಲ್ಲಿ ಒಬ್ಬನು ಅಲ್ಲಾಹನﷻ ರಸೂಲರೇﷺ! ಅಲ್ಲಾಹನುﷻ ತಮಗೆ ವಹಿಸಿಕೊಟ್ಟಿರುವ ಕಾರ್ಯಗಳ ಪೈಕಿ ಕೆಲವು ಕಾರ್ಯಗಳ ಅಧಿಕಾರವನ್ನು ನಮಗೆ ವಹಿಸಿಕೊಡಿರಿ"ಎಂದರು.
ಇನ್ನೊಬ್ಬನೂ ಹಾಗೇ ಹೇಳಿದನು.
ಆಗ ನಬಿಯವರುﷻ: ಅಲ್ಲಾಹನಾಣೆ! ಕೇಳಿಕೊಂಡು ಬಂದವರಿಗೋ ಆಸೆ ಇರುವವರಿಗೋ ನಾವು ಅಧಿಕಾರ ಕೊಡುವುದಿಲ್ಲ"ಎಂದರು.
(ಉ:ಬು.ಮು)
*ಕಲಿಯಿರಿ ಮತ್ತೊಬ್ಬರಿಗೂ ಕಲಿಸಿರಿ.*
*✍🏻ಎಂ.ಫಯಾಝ್ ಬೀಸಿರೋಡು.*
Comments