Skip to main content

ಝಿಯಾರತ್ತ್ ಕೇಂದ್ರ🕌 👉006⃣👈🏽 ☪ಸಯ್ಯಿದುನಾ ಮುಹಮ್ಮದ್ ಇಬ್ನ್ ಇದ್ರಿಸ್ ಅಲ್ ಇಮಾಂ ಶಾಫಿಈ (ರಅ)☪

🕌ಝಿಯಾರತ್ತ್  ಕೇಂದ್ರ🕌
         👉006⃣👈🏽

☪ಸಯ್ಯಿದುನಾ ಮುಹಮ್ಮದ್ ಇಬ್ನ್  ಇದ್ರಿಸ್ ಅಲ್ ಇಮಾಂ ಶಾಫಿಈ (ರಅ)☪

📚ಜ್ಞಾನ ವಿಹಾಯುಸ್ಸಿನ ಅತ್ಯುನ್ನತ ಪ್ರತಿಭೆ, ಆತ್ಮೀಯ ನಭೋಮಂಡಲದ ಮಹಾ ರಾಜರು.📚
➖➖➖➖➖➖➖➖
   ✍ಗಫೂರ್ ಬಾಯಾರ್�

ಅವರ ಕಾಲಾವಧಿ ಕಳೆದು 1233 ವರ್ಷಗಳು ಕಳೆಯಿತು. ರಜಬ್ 29 ರಂದಾಗಿದೆ ವಫಾತ್ತ್ ದಿವಸ.
" ಈ ಭೂಲೋಕ ಸಂಪೂರ್ಣವಾಗಿ ವಿಜ್ಞಾನದಿಂದ ತುಂಬಿಸುವ ಒಂದು ಖುರೈಶಿ ವಿದ್ವಾಂಸರು ಬರಲಿದ್ದಾರೆ. ಎಂಬ ಪ್ರವಾದಿ (ಸಅ)ರವರ ದೀರ್ಘ ದರ್ಶನದ ಅಮೂಲ್ಯವಾದ ನಿಧಿಯಾಗಿದ್ದಾರೆ ಸಯ್ಯಿದುನಾ ಇಮಾಂ ಶಾಫಿಈ (ರ)ರವರು.

ಉತ್ತಮ ಶತಮಾನದಲ್ಲೇ ಜನನ,
[ಹಿಜ್ರ 150-204].

ಮುತ್ತು ನಬಿ (ಸಅ) ರವರ ನಾಲ್ಕನೆಯ ಪಿತಾಮಹಾನರಾದ ಅಬ್ದು ಮನಾಫ್ (ರ) ಇಮಾಂ ರವರ ಹತ್ತನೆಯ ಪಿತಾಮಹರಾಗಿದ್ದಾರೆ.
ಪಲೆಸ್ತೀನ್ ನ " ಗಸ್ಸ "
(ಈಗಿನ ಹೆಸರು ಗಾಝ) ದಲ್ಲಿ ಅವರ ಜನನ. ಅಸ್ಖಲಾನಿಯಲ್ಲೂ, ಯೆಮೆನಿನಲ್ಲಿಯೂ
ಶೈಶವ ಕಾಲವನ್ನು ಕಳೆದರು.

ಮಹಾ ಪಂಡಿತರಾದ ಅಬ್ದುಲ್ ರಹ್ಮಾನ್ ಇಬ್ನು ಮಹದಿ (ರ)ರವರ ನಿರ್ದೇಶನದ ಪ್ರಕಾರ ಕರ್ಮಶಾಸ್ತ್ರಕ್ಕೆ ಒಂದು ವಾಸ್ತವ ಶಾಸ್ತ್ರವಾಗಿ
" ಅರ್ ರಿಸಾಲ "  ಎಂಬ ಗ್ರಂಥ ರಚಿಸಿದರು.

📚ಉಸೂಲುಲ್ ಫಿಖ್ಹ್ ನ
[ ಕರ್ಮಶಾಸ್ತ್ರ ನಿಧಾನ ಶಾಸ್ತ್ರ]
ಸ್ಥಾಪಕರಾಗಿ ಅರಿಯಲ್ಪಟ್ಟರು.

🕌ಇಮಾಂ ಮುಸ್ನಿ (ರ) ರವರು ಹೇಳುತ್ತಾರೆ;

" ಇಮಾಮಿನ " ಅಲ್ ರಿಸಾಲ " 500 ಸಲ ನಾನು ಪಾರಾಯಣ ಮಾಡಿದ್ದೇನೆ.
ಒಂದೊಂದು ಸಲ ಪಾರಾಯಣ ಮಾಡುವಾಗಲೂ, ಒಂದೊಂದು ಹೊಸ ಹೊಸ ವಿವರಗಳು ನನಗೆ ಅದರಿಂದ ಲಭಿಸುತ್ತಿತ್ತು.

🕌 ಇಮಾಂ ಅಹ್ಮದ್ ಬಿನ್ ಹಂಬಲ್ (ರ)ರವರು ಹೇಳುತ್ತಾರೆ;

" ಪೆನ್ನು ಮತ್ತು ಶಾಯಿ ಮುಟ್ಟಿದ ಯಾರೆಲ್ಲ ಇದ್ದಾರೆಯೋ ಅವರೆಲ್ಲರಿಗೂ ಇಮಾಂ ಶಾಫಿಈ (ರ) ಭಾದ್ಯತೆ ಇಲ್ಲದಿರಲಿಕ್ಕಿಲ್ಲ."

🕌ಪ್ರಸಿದ್ದ ಹದೀಸ್ ಪಂಡಿತರಾದ ಇಬ್ನು ಖುಸೈಮ(ರ)ರೊಂದಿಗೆ ಒಬ್ಬರು ಒಂದು ಪ್ರಶ್ನೆ ಕೇಳಿದರು;
ಇಮಾಂ ಶಾಫಿಈ (ರ) ರವರ ದೃಷ್ಟಿಯಲ್ಲಿ ಒಳಗೊಳ್ಳದ ಏನಾದರು ಹದೀಸುಗಳು ನಿಮ್ಮ ದೃಷ್ಟಿಗೆ ಬಿದ್ದಿದೆಯಾ?
ಇಬ್ನು ಖುಸೈಮ (ರ) ಉತ್ತರಿಸಿದರು;
ಇಲ್ಲ.... ಇಲ್ಲವೇ.... ಇಲ್ಲ....

🕌ಯಹ್ಯಾ ಇಬ್ನು ಸಹೀದುಲ್ ಖಥಾನ್ (ರ) ರವರು ಹೇಳುತ್ತಾರೆ;

" ಇಮಾಂ ಶಾಫಿಈ (ರ) ರವರಿಗೆ ಅಲ್ಲಾಹು ತಿಳಿದು ಕೊಟ್ಟ ವಿಜ್ಞಾನವು, ಅದರಿಂದ್ದ ಸರಿಯಾದ ಮಾರ್ಗದಲ್ಲಿ ಚಲಿಸಲು ಅಲ್ಲಾಹು ಅವರಿಗೆ ಅನುಗ್ರಹ ಕೊಟ್ಟದ್ದು, ಆ ಕಾರಣದಿಂದಾಗಿ 40 ವರ್ಷವಾಗಿ ಶಾಫಿಈ ಇಮಾಮ್ (ರ)ರವರಿಗೆ  ಬೇಕಾಗಿ ಪ್ರಾರ್ಥಿಸದೆ ಒಂದು ನಮಾಝು ಕೂಡಾ ನಾನು ನಿರ್ವಹಿಸಲಿಲ್ಲ.

🕌ಹಂಬಲಿ ಇಮಾಂ ಶಾಫಿಈ ಇಮಾಮ್ (ರ)ತವರಿಗೆ  ಬೇಕಾಗಿ ಮಾಡುತ್ತಿರುವ ಪ್ರಾರ್ಥನೆಯ ಅದಿಕ್ಯ ನೋಡಿದ, ಮಗನು ಕೇಳಿದರು;

ಯಾರಾಗಿದ್ದಾರೆ ಅಪ್ಪ ಅವರು?
ಇಷ್ಟಕ್ಕೂ ಮಹತ್ವವಿರುವ ಇಮಾಂ ಶಾಫಿಈ (ರ) ಯವರು.

ಇಮಾಂ ಅಹ್ಮದ್ ಇಬ್ನು ಹಂಬಲ್ (ರ) ರವರು ಮಗನ ಹತ್ತಿರ ವಿವರಿಸುತ್ತಾರೆ;

" ಮಗನೇ ಇಮಾಂ ಶಾಫಿಈ (ರ) ರವರು ಭೂಮಿಗೆ ಸೂರ್ಯನ ಪ್ರಕಾಶ ಆಗಿದ್ದರು. ಮನುಷ್ಯರಿಗೆ ಐಶ್ವರ್ಯದ ಹಾಗೆ ಆಗಿದ್ದರು.

🕌 ಹಿಜ್ರ; 204 ರಲ್ಲಿ ಈಜಿಪ್ಟ್ ನಲ್ಲಿ ವಫಾತ್ತ್ ಆದರು.

ಮಖ್ಬರ ಕೈರೋ ಈಜಿಪ್ಟಿನಲ್ಲಿ ಇದೆ.

🕌ಆ ಮಹಾತ್ಮರ ಬರ್ಕತ್ತಿನಿಂದ ನಮ್ಮ ಈಮಾನ್ ಹಾಗೂ ಇಲ್ಮು
ಉಳ್ಳವರಾಗಿ ನಮನ್ನು ಅನುಗ್ರಹಿಸು ಅಲ್ಲಾಹ್....

ನಮ್ಮಿಂದ ಮರಣ ಹೊಂದಿದರಿಗೆ ಮಗ್ಫಿರತ್ತ್, ಮರ್ಹಮತ್ತ್ ನೀಡಿ ಅನುಗ್ರಹಿಸು ಅಲ್ಲಾಹ್....
ಆಮೀನ್....

ಕನ್ನಡಕ್ಕೆ; ಗಫೂರ್ ಬಾಯಾರ್✍🏾
📚📚📚📚📚📚📚📚

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...