Skip to main content

4 ಮಝ್ಹಬ್ ಮತ್ತು ತರಾವಿಹ್ ನಮಾಝ್

4 ಮಝ್ಹಬ್ ಮತ್ತು ತರಾವಿಹ್ ನಮಾಝ್

ಇಸ್ಲಾಮಿನ ಕರ್ಮಶಾಸ್ತ್ರದ 4 ಮಹಾ ಪಂಡಿತರಾದ ಇಮಾಮ್ ಅಬೂ ಹನೀಫಾ ರದಿಯಲ್ಲಾಹು ಅನ್ಹು, ಇಮಾಮ್ ಶಾಫೀ ರದಿಯಲ್ಲಾಹು ಅನ್ಹು, ಇಮಾಮ್ ಮಾಲಿಕ್ ರದಿಯಲ್ಲಾಹು ಅನ್ಹು, ಇಮಾಮ್ ಅಹ್ಮದ್ ಬಿನ್ ಹಂಬಲ್ ರದಿಯಲ್ಲಾಹು ಅನ್ಹು ರವರ ಮಝ್ಹಬ್ ಪ್ರಕಾರ ತರಾವಿಹ್ 20 ರಕಾತ್ ಆಗಿತ್ತು. ಕೆಲವೊಂದು ಜನರು ಈ ಮಹಾ ವಿಧ್ವಾಂಸರಿಗಿಂತ ಅಧಿಕ ಜ್ಞಾನ ಹೊಂದಿದವರ ಹಾಗೆ ವರ್ತಿಸುವುದು ವಿಪರ್ಯಾಸವೇ.. ಸರಿ.
ಪರಮ ಗಣ್ಯನೂ, ಔದಾರ್ಯಪೂರ್ಣನೂ  ಆದ ಅಲ್ಲಾಹನು ನಮೆಗಲ್ಲರಿಗೂ ಧೀನಿ ಜ್ಞಾವನನ್ನು ಕಲಿಯಲು ಮತ್ತು ಅದನ್ನು ಅನುಸರಿಸಿ ಜೀವಿಸಲು ಭಾಗ್ಯವನ್ನು ಕರುಣಿಸಲಿ ಆಮೀನ್.

*ಶಾಫಿ'ಈ ಮದ್ಸ'ಹಬ್ ಮತ್ತು ತರಾವೀಹ್*

ಇಮಾಮ್ ಶಾಫಿಈ(ರಳಿಯಲ್ಲಾಹು ಅನ್ಹು) ಹೇಳುತ್ತಾರೆ,
ನನಗೆ ಅತ್ಯಂತ ಪ್ರಿಯವಾದುದು 20 ರಕ್ಅತ್ ಆಗಿದೆ. ಏಕೆಂದರೆ ಉಮರ್ (ರಳಿಯಲ್ಲಾಹು ಅನ್ಹು) ರವರಿಂದ ವರದಿಯಾದದು ಅದುವಾಗಿದೆ.
ಮಕ್ಕಾದಲ್ಲೂ ಅದೇ ಪ್ರಕಾರ ನಿರ್ವಹಿಸುತ್ತಿದ್ದರು. (ಕೊನೆಯಲ್ಲಿ) ಅವರು 3 ರಕ್ಅತ್ ವಿತ್ರ್ ನಮಾಝ್ ಮಾಡುತ್ತಿದ್ದರು.
(ಅಲ್ ಉಮ್ಮ್ 166/1)

ಇಮಾಮ್ ನವವಿ (ರಳಿಯಲ್ಲಾಹು ಅನ್ಹು) ರವರು ಹೇಳುತ್ತಾರೆ,
ರಮಾಝಾನಿನ ಎಲ್ಲಾ ರಾತ್ರಿಗಳಲ್ಲೂ 20 ರಕ್ಅತ್ ತರಾವೀಹ್ ನಮಾಝ್ ನಿರ್ವಹಿಸುವುದು ಸುನ್ನತ್ತಾಗಿದೆ.
(ತಹ್'ಖೀಖ್  227)

ಇನ್ನೊಂದು ಗ್ರಂಥದಲ್ಲಿ ಇಮಾಮ್ ನವವಿ (ರಳಿಯಲ್ಲಾಹು ಅನ್ಹು) ಹೇಳುತ್ತಾರೆ,
ತರಾವೀಹ್ ನಮಾಝ್ 20 ರಕ್ಅತ್ ಆಗಿದೆ.
(ಶರಹುಲ್ ಮುಹದ್ಸಬ್)

ಇಮಾಮ್ ಅರ್'ದಬೀಲೀ (ರಳಿಯಲ್ಲಾಹು ಅನ್ಹು) ರವರು ಹೇಳುತ್ತಾರೆ,
ತರಾವೀಹ್ ನಮಾಝ್ ೨೦ ರಕ್ಅತ್ ಆಗಿದೆ
(ಅನ್ವಾರ್ 80/1)

ಇಮಾಮ್ ರಂಲೀ (ರಳಿಯಲ್ಲಾಹು ಅನ್ಹು) ಹೇಳುತ್ತಾರೆ,
ತರಾವೀಹ್ ನಮಾಝ್ 20 ರಕ್ಅತ್ ಆಗಿದೆ
(ನಿಹಾಯ 126/2)

ಇಮಾಂ ರಾಫಿಈ (ರಳಿಯಲ್ಲಾಹು ಅನ್ಹು) ಹೇಳುತ್ತಾರೆ,
ತರಾವೀಹ್ ನಮಾಝ್ 20 ರಕ್ಅತ್ ಆಗಿದೆ.
(ಶರಹುಲ್ ಕಬೀರ್ 264/4)

*ಹನಫಿ  ಮದ್ಸ'ಹಬ್ ಮತ್ತು ತರಾವೀಹ್*

ಇಮಾಮ್ ಅಲಿಯ್ಯಿಲ್ ಫರ್'ಗಾನಿ ಹೇಳುತ್ತಾರೆ,
ರಮಝಾನಿನಲ್ಲಿ ಜಮಾಅತ್ತಾಗಿ 5 ತರ್'ವೀಹತ್ (2೦) ರಕ್ಅತ್ ತರಾವೀಹ್ ನಮಾಝ್ ಮಾಡುವುದು ಸುನ್ನತ್ತಾಗಿದೆ.
(ಹಿದಾಯ ೭೦/೧)

ಇಮಾಮ್ ಅಬ್ಬದುಲ್ಲಾಹಿನ್ನಸಪೀ (ರಳಿಯಲ್ಲಾಹು ಅನ್ಹು) ಹೇಳುತ್ತಾರೆ
ರಮಝಾನಿನಲ್ಲಿ ಇಶಾನಮಾಜಿನ ನಂತರ 20 ರಕ್ಅತ್ ತರಾವೀಹ್ ನಿರ್ವಹಿಸಿವುದು ಸುನ್ನತ್ತಾಗಿದೆ.
(ಕಂಝುದ್ದಖಾಇದ್ 71/2)

ಇಮಾಮ್ ಸರಕ್ಸೀ (ರಳಿಯಲ್ಲಾಹು ಅನ್ಹು) ಹೇಳುತ್ತಾರೆ
ತರಾವೀಹ್ ನಮಾಝ್ ಹನಫಿ ಮದ್ಸಹಬ್ ನಲ್ಲಿ ವಿತ್ರ್ ಸೇರದೆ 20 ರಕ್ಅತ್ ಆಗಿದೆ.
(ಮಬ್'ಸೂತ್ 144/2)

ಇಮಾಮ್ ಕಾಸಾನಿ (ರಳಿಯಲ್ಲಾಹು ಅನ್ಹು) ಹೇಳುತ್ತಾರೆ,
ತರಾವೀಹ್ ರಕ್ಅತ್ ಗಳ ಸಂಖ್ಯೆ 20 ಆಗಿರುತ್ತದೆ.
(ಬುದಾಇಉಸ್ಸನಾಇಅ್ 28/1)

ಇನ್ನು ಅಬಿದೀನ್ (ರಳಿಯಲ್ಲಾಹು ಅನ್ಹು) ಹೇಳುತ್ತಾರೆ,
ತರಾವೀಹ್ ನಮಾಝ್ ಇಪ್ಪತ್ತು ರಕ್ಅತ್ ಆಗಿದೆ.
(ರದ್ದುಲ್ ಮುಖ್ತಾರ್ 495/2)

*ಮಾಲಿಕೀ ಮದ್ಸಹಬ್ ಮತ್ತು ತರಾವೀಹ್*

ಅಲ್ಲಮಾ ಅಬ್ದುರ್ರಹ್ಮಾನುಲ್ ಜಝರೀ (ರಳಿಯಲ್ಲಾಹು ಅನ್ಹು)  ಹೇಳುತ್ತಾರೆ,
ಮಾಲಿಕೀಗಳು ತರಾವೀಹ್ನ ಸಂಖ್ಯೆ 20 ರಕ್ಅತ್ ಎಂದು ಹೇಳಿದ್ದಾರೆ.
► ಅಲ್ ಫಿಖ್ಹ್ ಅಲಲ್ ಮದ್ಸಾಹಿಬಿಲ್ ಅರ್ಬಅ 342/1

ಉಸ್ಮಾನುಲ್ ಜಲಲೀ (ರಳಿಯಲ್ಲಾಹು ಅನ್ಹು) ಹೇಳುತ್ತಾರೆ,
ತರಾವೀಹ್ ನಮಾಝ್ 20 ರಕ್ಅತ್ ಆಗಿದೆ.
► ಸಿರಾಜುಸ್ಸಾಲಿಕ್ 129/1

ಇಮಾಮ್ ಅಹ್ಮದುಬ್ನು ಮುಹಮ್ಮದ್ (ರಳಿಯಲ್ಲಾಹು ಅನ್ಹು) ರವರು ಹೇಳುತ್ತಾರೆ,
ತರಾವೀಹ್ ನಮಾಝ್ 20 ರಕ್ಅತ್ ಆಗಿದೆ.
► ಬಲ್ಗತು ಸ್ಸಾಲಿಖ್ 146/1

ಇಮಾಮ್ ಅಬುಳ್ಳಿಯಾಅ್ ಖಲೀಲ್ (ರಳಿಯಲ್ಲಾಹು ಅನ್ಹು) ಹೇಳುತ್ತಾರೆ,
ತರಾವೀಹ್ ವಿತ್ರ್ ಸಹಿತ 23 ರಕ್ಅತ್ ಆಗಿದೆ.
► ಶರಹುಲ್ ಖಬೀರ್ 315/1

ಅಲ್ಲಾಮ ಮುಹಮ್ಮದುಬ್ನು ಅಹ್ಮದುಲ್ ಮಾಲಿಕಿ (ರಳಿಯಲ್ಲಾಹು ಅನ್ಹು) ಹೇಳುತ್ತಾರೆ,
23 ರಕ್ಅತ್ ತರಾವೀಹ್ ನಮಾಝ್ ಪ್ರಪಂಚದಾದ್ಯಂತ ನೆಲೆಗೊಂಡಿದೆ.

► ಇಮಾಮ್ ಖಲೀಲ್ (ರಳಿಯಲ್ಲಾಹು ಅನ್ಹು) ರವರು ತನ್ನ ಜವಾಹಿರುಲ್ ಇಖ್ಲೀಲ್ 74/1 ರಲ್ಲಿ
► ಇಮಾಮ್ ಇಬ್ನುಅಬೀಝೈದಿಲ್ ಖೈರುವಾನಿ ತನ್ನ ರಿಸಾಲ 407/1
► ಇಮಾಮ್ ಅಹ್ಮದುಲ್ ಮಾಲಿಕಿ ತನ್ನ ಹಾಶಿಯತುಸ್ಸನಿಯ್ಯ 191/1,
► ಇಮಾಮ್ ಅಬ್ದುಲ್ ಅಝೀಝ್ ಅಲ್ ಇಹ್ಸಾನೀ ತಬ್ಯೀನುಲ್ ಮಸಾಲಿಕ್ 504 ರಲ್ಲೂ ಸ್ಪಷ್ಟಪಡಿಸಿದ್ದಾರೆ.

*ಹಂಬಲೀ ಮದ್ಸಹಬ್ ಮತ್ತು ತರಾವೀಹ್*

ಇಮಾಮ್ ಇಬ್ನುಖುದಾಮ(ರಳಿಯಲ್ಲಾಹು ಅನ್ಹು) ರವರು ಹೇಳುತ್ತಾರೆ,
ಅಹ್ಮದುಬ್ನು ಹಂಬಲ್ (ರಳಿಯಲ್ಲಾಹು ಅನ್ಹು) ರವರ ಬಳಿ ಪ್ರಬಲವಾದುದು 20 ರಕ್ಅತ್ ಆಗಿದೆ.
► ಮುಗ್ನೀ 167/2

ಮುಹಮ್ಮದ್ ಖುದಾಮ (ರಳಿಯಲ್ಲಾಹು ಅನ್ಹು)  ರವರು ಹೇಳುತ್ತಾರೆ,
ತರಾವೀಹ್ ನಮಾಝ್ 20 ರಕ್ಅತ್ ಆಗಿದೆ.

ಇಮಾಮ್ ಅಬ್ದುಲ್ಲಾಹಿ ಇಬ್ನು ಖುದಾಮ (ರಳಿಯಲ್ಲಾಹು ಅನ್ಹು) ರವರು ಹೇಳುತ್ತಾರೆ,
20 ರಕ್ಅತ್ ತರಾವೀಹ್ ನಮಾಝ್ ಜಮಾಅತ್ತಾಗಿ ನಿರ್ವಹಿಸುವುದು ಸುನ್ನತ್ತಾಗಿದೆ.

ಶೈಖುಲ್ ಇಸ್ಲಾಮ್ ಅಬನ್ನಜಾ ಶರಪುದ್ದೀನ್ (ರಳಿಯಲ್ಲಾಹು ಅನ್ಹು) ರವರು ಹೇಳುತ್ತಾರೆ,
ತರಾವೀಹ್ ನಮಾಝ್ ರಮಝಾನಿನಲ್ಲಿ 20 ರಕಅತ್ ಆಗಿದೆ.

► ಇಮಾಮ್ ಅಬ್ದುರ್ರಹ್ಮಾನ್ ಮಖ್ದಸೀ ತನ್ನ ಉಮ್ದ 64
► ಇಮಾಮ್ ಮನ್ಸೂರ್ ಇಬ್ನು ಯೂಸುಫ್ (ರಳಿಯಲ್ಲಾಹು ಅನ್ಹು) ರವರು ತನ್ನ ಕಶ್ಯಾಫುಲ್ ಖಿನಾಅತ್ 425/1
► ಇಮಾಮ್ ಮಜ್ದುದ್ದೀನ್(ರಳಿಯಲ್ಲಾಹು ಅನ್ಹು) ರವರು ತನ್ನ ಮುಹರ್ರರ್ 90/1
►ಅಲ್ಲಮಾ ಮುಸ್ತಫಾ ಸುಯೂತ್ವೀ (ರಳಿಯಲ್ಲಾಹು ಅನ್ಹು)  ತನ್ನ ಮತ್ವಾಲಿಬ್ ಉಲಿನ್ನುಹಾ 516/1 ರಲ್ಲೂ ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ 4 ಮದ್ಸಹಬಿನ ಇಮಾಮರುಗಳು ಹಾಗು ಅವರ ಗ್ರಂಥಗಳಲ್ಲಿಯೂ ತರಾವೀಹ್ ನಮಾಝ್ 20 ರಕ್ಅತ್ ಆಗಿದೆಯೆಂದು ಸ್ಪಷ್ಟಪಡಿಸಿಲಾಗಿದೆ.
ಮದ್ಸಹಬಿನ ಯಾವುದೇ ಒಂದು ಗ್ರಂಥದಲ್ಲಿ ತರಾವೀಹ್ ಹನ್ನೊಂದು ರಕ್ಅತ್ ಎಂದು ಹೇಳಿದ್ದಾಗಿ ತೋರಿಸಿಕೊಡಲುs ಅಂತ್ಯದಿನದವರೆಗೆ ನೂತನವಾದಿಗಳ ಯಾವುದೇ ಒಬ್ಬ ಮೌಲವಿಗೆ ಸಾಧ್ಯವಿಲ್ಲ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...