Skip to main content

ಆತ್ಮ ಸಂಶುದ್ಧಗೊಳಿಸುವ ವಸಂತ ಕಾಲ ಪವಿತ್ರ ರಂಝಾನ್ - ಭಾಗ - 02

ಆತ್ಮ ಸಂಶುದ್ಧಗೊಳಿಸುವ ವಸಂತ ಕಾಲ ಪವಿತ್ರ ರಂಝಾನ್ - ಭಾಗ - 02

ರಮಳಾನ್ ತಿಂಗಳ ಪ್ರಮುಖ ಆರಾಧನೆಯಾಗಿದೆ ನೋಂಬು ಅಥವಾ ಉಪವಾಸ. ಆಹಾರ ಪಾನೀಯಗಳನ್ನು ತೊರೆದು ಸಂಪೂರ್ಣ ಶರೀರವನ್ನು  ಕೆಡುಕುಗಳಿಂದ ಮುಕ್ತಗೊಳಿಸಿ ದಿನದ ಬಹು ಪಾಲು ಭಾಗವನ್ನು ಅಲ್ಲಾಹನ ಸ್ಮರಣೆಯಲ್ಲಿ ಲೀನವಾಗಿಸಿ ಶರೀರವನ್ನು ಸಂಶುದ್ಧಗೊಳಿಸುವ ಉದಾತ್ತವಾದ ಒಂದು ಪ್ರಕ್ರಿಯೆಯಾಗಿದೆ ಉಪವಾಸ. ಪ್ರವಾದಿ ಸ.ಅ ಹೇಳುತ್ತಾರೆ : "" ಉಪವಾಸವು ನರಕವನ್ನು ತಡೆಯುವ ಗುರಾಣಿಯಾಗಿದೆ. ಆದುದರಿಂದ ಉಪವಾಸ ಆಚರಿಸಿದ ವ್ಯಕ್ತಿಯು ಕೆಟ್ಟ ಮಾತನ್ನಾಡದಿರಲಿ, ನೀಚ ಕ್ರತ್ಯಗಳನ್ನೆಸಗದಿರಲಿ. ಯಾವನಾದರೂ ಒಬ್ಬ ಉಪವಾಸಿಗನೊಂದಿಗೆ ಜಗಳಕ್ಕೆ ನಿಂತರೆ ಅಥವಾ ಕೆಟ್ಟ ಮಾತನ್ನು ಹೇಳಿದರೆ ಅವನೊಡನೆ ನಾನು ಉಪವಾಸಿಗನೆಂದು ಎರಡು ಸಲ ಹೇಳಲಿ. ಅಲ್ಲಾಹನಾಣೆ ಖಂಡಿತವಾಗಿಯೂ ಉಪವಾಸಿಗನ ಬಾಯಿಯಿಂದ ಹೊರಡುವ ವಾಸನೆಯು ಅಲ್ಲಾಹನ ಬಳಿ ಕಸ್ತೂರಿಯ ಪರಿಮಳಕ್ಕಿಂತಲೂ ಸುವಾಸನೆ ಭರಿತವಾಗಿದೆ. ಅಲ್ಲಾಹನು ಹೇಳುತ್ತಾನೆ. ಉಪವಾಸಿಗನು ಆಹಾರ ಪಾನೀಯಗಳನ್ನು ಮತ್ತು ತನ್ನ ದೇಹೇಚ್ಛೆಗಳನ್ನು ನನಗಾಗಿ ಮಾತ್ರ ಉಪೇಕ್ಷಿಸಿರುವನು. ಉಪವಾಸವು ನನ್ನದು ಆಗಿದೆ. ಅದರ ಪ್ರತಿಫಲ ನೀಡುವವನು ನಾನಾಗಿದ್ದೇನೆ.
ಮತ್ತೊಂದು ಹದೀಸಿನಲ್ಲಿ ಕಾಣಬಹುದು : "" ಆದಂ ಸಂತತಿಯ ಸರ್ವ ಸತ್ಕರ್ಮಗಳ ಪ್ರತಿಫಲಗಳನ್ನು ಇಮ್ಮಡಿಗೊಳಿಸಲಾಗುತ್ತದೆ. ಒಂದು ಸತ್ಕರ್ಮಕ್ಕೆ ಹತ್ತು ಪ್ರತಿಫಲ. ಮಾತ್ರವಲ್ಲ ಏಳುನೂರು ಪ್ರತಿಫಲದ ತನಕ ಇಮ್ಮಡಿಗೊಳಿಸಲಾಗುತ್ತದೆ. ಅಲ್ಲಾಹನು ಹೇಳುತ್ತಾನೆ : ಉಪವಾಸ ಒಂದನ್ನು ಬಿಟ್ಟು, ಉಪವಾಸ ನನ್ನದು ಆಗಿದೆ. ಅದರ ಪ್ರತಿಫಲ ನೀಡುವವನು ನಾನಾಗಿದ್ದೇನೆ. ಉಪವಾಸಿಗನು ತನ್ನ ದೇಹೇಚ್ಛೆಗಳನ್ನು ಮತ್ತು ಆಹಾರ ಪಾನೀಯಗಳನ್ನು ನನಗಾಗಿ ವರ್ಜಿಸಿದ್ದಾನೆ."" ಈ ಹದೀಸಿನಲ್ಲಿ ಉಪವಾಸದ ಮಹತ್ವವನ್ನು ತಿಳಿಸಲಾಗಿದೆ. ಎಲ್ಲಾ ಸತ್ಕರ್ಮಗಳಿಗೂ ಪ್ರತಿಫಲ ನೀಡುವವನು ಅಲ್ಲಾಹನೇ ಆಗಿದ್ದಾನೆ. ಆದರೆ 'ಉಪವಾಸ ನನ್ನದು, ಅದರ ಪ್ರತಿಫಲ ನೀಡುವವನು ನಾನು' ಎಂದು ಅಲ್ಲಾಹನು ಪ್ರತ್ಯೇಕವಾಗಿ ಹೇಳಿದುದರ ಅರ್ಥ "ಉಪವಾಸವು ಅಲ್ಲಾಹನ ಬಳಿ ಅತ್ಯಂತ ಶ್ರೇಷ್ಟತೆ ಇರುವ ಆರಾಧನೆಯಾಗಿದೆ. ಅದಕ್ಕೆ ಅಲ್ಲಾಹನು ಲೆಕ್ಕವಿಲ್ಲದಷ್ಟು ಅಪಾರ ಪ್ರತಿಫಲವನ್ನು ನೀಡುವನು" ಎಂದಾಗಿದೆ.
ಉಪವಾಸಿಗನಿಗೆ ಅಲ್ಲಾಹನು ಉನ್ನತ ಪದವಿಯನ್ನು ನೀಡಿದ್ದಾನೆ. ನೆಬಿ ಸ.ಅ ಹೇಳಿದರು : "" ನಿಶ್ಚಯವಾಗಿಯೂ ಸ್ವರ್ಗದಲ್ಲೊಂದು ಕವಾಟವಿದೆ. ಆ ಕವಾಟಕ್ಕೆ ರಯ್ಯಾನ್ ಎಂಬ ಹೆಸರಿದೆ. ಉಪವಾಸಿಗರು ಮಾತ್ರ ಆ ಕವಾಟದ ಮೂಲಕ ಸ್ವರ್ಗ ಪ್ರವೇಶಿಸುತ್ತಾರೆ. ಉಪವಾಸಿಗರಲ್ಲದ ಬೇರೆ ಯಾರೂ ಆ ಕವಾಟದ ಮೂಲಕ ಪ್ರವೇಶಿಸುವುದಿಲ್ಲ. ಉಪವಾಸಿಗರು ಎಲ್ಲಿ ಎಂದು ಕರೆಯಲಾಗುತ್ತದೆ. ಆಗ ಉಪವಾಸಿಗರು ಆ ರಯ್ಯಾನ್ ಎಂಬ ಕವಾಟದ ಮೂಲಕ ಸ್ವರ್ಗ ಪ್ರವೇಶಿಸುತ್ತಾರೆ. ತಕ್ಷಣ ಆ ಕವಾಟವನ್ನು ಮುಚ್ಚಲಾಗುತ್ತದೆ. ಬೇರೆ ಯಾರಿಗೂ ಆ ಕವಾಟದ ಮೂಲಕ ಸ್ವರ್ಗ ಪ್ರವೇಶಿಸಲಾಗುವುದಿಲ್ಲ""
ರಮಳಾನ್ ತಿಂಗಳಿನಲ್ಲಿ ಸುನ್ನತ್ತಾದ ಒಂದು ಸತ್ಕರ್ಮವನ್ನು ನಿರ್ವಹಿಸಿದರೆ ಇತರ ತಿಂಗಳುಗಳಲ್ಲಿ ಒಂದು ಕಡ್ಡಾಯ ಕರ್ಮ ನಿರ್ವಹಿಸಿದ ಪ್ರತಿಫಲವಾಗಿದೆ.ಒಂದು ಕಡ್ಡಾಯವಾದ ಕಾರ್ಯ ನಿರ್ವಹಿಸಿದರೆ ಇತರ ತಿಂಗಳುಗಳಲ್ಲಿ ಎಪ್ಪತ್ತು ಕಡ್ಡಾಯ ಕರ್ಮ ನಿರ್ವಹಿಸಿದ ಪ್ರತಿಫಲವಾಗಿದೆ ಎಂದು ಪ್ರವಾದಿ ಸ.ಅ ಹೇಳಿದರು. "" ರಮಳಾನ್ ತಿಂಗಳ ಮತ್ತು ಉಪವಾಸಿಗನ ಮಹತ್ವವನ್ನು ಇನ್ನೂ ಧಾರಾಳವಾಗಿ ಕಾಣಬಹುದು. ಪ್ರವಾದಿ ಸ.ಅ ಹೇಳುತ್ತಾರೆ :  ಅಂತ್ಯದಿನದಲ್ಲಿ ಪಕ್ಷಿಗಳಂತೆ ರೆಕ್ಕೆಗಳಿರುವ ಒಂದು ವಿಭಾಗ ಜನರು ಸ್ವರ್ಗೋದ್ಯಾನದಲ್ಲಿ ಹಾರಿ ಸಂಚರಿಸುತ್ತಿರುವರು. ಆಗ ಇತರ ಸ್ವರ್ಗವಾಸಿಗಳು ಇವರೊಂದಿಗೆ ಕೇಳುವರು ನೀವು ಯಾರು? ನಾವು ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ರವರ ಅನುಯಾಯಿಗಳು. ಮಹಶಾರಾದಲ್ಲಿ ನಿಮಗೆ ವಿಚಾರಣೆ ನಡೆಯಿತೇ? ಸ್ವಿರಾತ್ ಸೇತುವೆ ದಾಟಿ ಸ್ವರ್ಗ ಪ್ರವೇಶಿಸಿದ್ದೇ? ಇಲ್ಲ. ನಾವು ವಿಚಾರಣೆ ಎದುರಿಸಿಲ್ಲ. ಸ್ವಿರಾತ್ ಸೇತುವೆ ಕಂಡೇ ಇಲ್ಲ. ಹಾಗಾದರೆ ನಿಮಗೆ ಇಷ್ಟೊಂದು ಉನ್ನತ ಪದವಿ ಲಭಿಸಲು ಕಾರಣವೇನು? ನಾವು ಅಲ್ಲಾಹನಿಗಾಗಿ ದುನ್ಯಾವಿನಲ್ಲಿ ರಹಸ್ಯವಾಗಿ ಉಪವಾಸ ಆಚರಿಸಿದೆವು. ಅಲ್ಲಾಹನು ನಮ್ಮನ್ನು ರಹಸ್ಯವಾಗಿ ಸ್ವರ್ಗಕ್ಕೆ ತಲುಪಿಸಿರುವನು."" ಉಪವಾಸವು ರಹಸ್ಯ ಆರಾಧನೆಯಾಗಿದೆ. ಉಪವಾಸಿಗನು ಒಂಟಿಯಾಗಿರುವಾಗಲೂ ಜನರೊಂದಿಗೆ ಬೆರೆತಿರುವಾಗಲೂ ಉಪವಾಸಿಗನ ಮನಸ್ಸಿನ ಭಾವನೆ ಒಂದೇ ರೀತಿಯಿರುತ್ತದೆ. ಇತರರಿಗೆ ಉಪವಾಸಿಗನು ಉಪವಾಸ ಆಚರಿಸಿರುವನೊ ಇಲ್ಲವೋ ಎಂದು ತಿಳಿಯುವುದಿಲ್ಲ. ಆದುದರಿಂದ ಇಲ್ಲಿ ಅಹಂಕಾರ, ಹೊಗಳುವಿಕೆ, ಕಾಪಟ್ಯ ಯಾವುದಕ್ಕೂ ಸ್ಥಾನವಿಲ್ಲ. ಉಪವಾಸಿಗನು ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಸುಬಹ್ ಬಾಂಗ್ ನ ಸಮಯದಿಂದ ಸೂರ್ಯಾಸ್ತಮಾನದವರೆಗೆ ಅನ್ನ ಪಾನೀಯ, ಲೈಂಗಿಕ ಸುಖ ಇತ್ಯಾದಿಗಳನ್ನು ವರ್ಜಿಸಿ ಉಪವಾಸ ಆಚರಿಸುತ್ತಾನೆ.......

ಮುಂದುವರಿಯುವುದು ಇಂಶಾ ಅಲ್ಲಾಹ್...

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...