Skip to main content

*ಝಿಯಾರತ್ತ್ ಕೇಂದ್ರ* 🌷2⃣9⃣🌷 ➖➖➖➖➖➖ ✍ಗಫೂರ್ ಬಾಯಾರ್. ➖➖➖➖➖➖➖ ರಾಫಿಉ ಇಬ್ನು ಹಬೀಬ್ ರ. ಇಚ್ಚಿಲಂಗೋಡು, ಬಂದ್ಯೋಡು. ಉಪ್ಪಳ.

*ಝಿಯಾರತ್ತ್ ಕೇಂದ್ರ*
    🌷2⃣9⃣🌷
➖➖➖➖➖➖

✍ಗಫೂರ್ ಬಾಯಾರ್.
➖➖➖➖➖➖➖
ರಾಫಿಉ ಇಬ್ನು ಹಬೀಬ್ ರ. ಇಚ್ಚಿಲಂಗೋಡು, ಬಂದ್ಯೋಡು. ಉಪ್ಪಳ.
〰〰〰〰〰〰〰
🕌 ಹಿಜರಿ ವರ್ಷ 37ರಲ್ಲಿ ಮದೀನದಿಂದ ಮಾಲಿಕ್ ಇಬ್ನು ದೀನಾರ್ ರ. ರವರ ಸಂಘದೊಂದಿಗೆ ಆಗಮಿಸಿದ *ರಾಫಿಉ ಇಬ್ನು ಹಬೀಬ್ ರ.* ಎಂಬ ಮಹಾನವರು, ಮಾಲಿಕ್ ಇಬ್ನು ದೀನಾರ್ ರ. ರವರ ಸಹೋದರ ಪುತ್ರರಾಗಿದ್ದಾರೆ.

ಮಹಾನವರು ಇಚ್ಚಿಲಂಗೋಡು ಆಸ್ಥಾನವಾಗಿ ದೀನಿ ಪ್ರಬೋಧನೆ ನಡೆಸಿದರು. ಅಂದು ಅಲ್ಲಿಯ ಜನರು ಕೊಟ್ಟ ಸ್ಥಳದಲ್ಲಿ ತನ್ನ ಪರ್ಣಶಾಲೆ ಮತ್ತು ಪ್ರಭೋದನೆ ಪ್ರವರ್ತನೆಗಳಿಗೂ, ಆರಾಧನೆಗೂ ಕೇಂದ್ರ ಸ್ಥಳವನ್ನಾಗಿ ಮಾಲಿಕ್ ಇಬ್ನು ದೀನಾರ್ ಎಂಬ ಹೆಸರಿನಲ್ಲಿ ಮಸ್ಜಿದ್ ನಿರ್ಮಿಸಿದರು.

ಹಿಜರಿ 73ರ ಜಮಾದುಲ್ ಆಖಿರ್ 17ಕ್ಕೆ ಮಹಾನವರು ವಫಾತಾದರು.

ಉಮರ್ ರ. ಉಸ್ಮಾನ್ ರ. ಅಲಿ ರ. ಅಬ್ದುಲ್ಲ ರ. ಅಬ್ದುದುರಹ್ಮಾನ್ ರ. ಮೊದಲಾದ ಪ್ರಮುಖರು ಪಕ್ಕದಲ್ಲಿರುವ ಮಖ್ಬರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಾರೆ.

5 ವರ್ಷಕ್ಕೊಮ್ಮೆ ನಡೆಯುವ ಉರೂಸು ಸೂರ್ಯೋದಯದಿಂದ ಮರುದಿನ ರಾತ್ರಿವರೆಗೆ ಮುಂದುವರಿಯುದರಿಂದ *ಉದಯಾಸ್ತಮಾನ ಉರೂಸು* ಎಂಬ ಹೆಸರಿನಲ್ಲಿ ತಿಳಿಯಲ್ಪಡುತ್ತದೆ.

ದಾರಿ: ಮಂಗಳೂರಿಂದ ಕಾಸರಗೋಡಿಗೆ ಹೋಗುವ ದಾರಿಯಲ್ಲಿ ಸಿಕ್ಕುವ ಬಂದ್ಯೋಡಿನಿಂದ ಎಡಕ್ಕೆ 8 ಕಿಲೋ ಮೀ ಸಂಚರಿಸಿದರೆ ಇಚ್ಚಿಲಂಗೋಡು ಮಖಾಂ ತಲುಪುತ್ತದೆ.

✍ ಗಫೂರ್ ಬಾಯಾರ್
🍁🍁🍁🍁🍁🍁🍁

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...