Skip to main content

ಝಿಯಾರತ್ತ್ ಕೇಂದ್ರ.. ಪಾರಪಳ್ಳಿ ಮಖಾಂ, ಕೊಲ್ಲಂ ಕೊಯಿಲಾಂಢಿ, ಕಲ್ಲಿಕೋಟೆ ಜಿಲ್ಲೆ

*ಝಿಯಾರತ್ತ್ ಕೇಂದ್ರ*
       👉👉28
➖➖➖➖➖➖➖
ಪಾರಪಳ್ಳಿ ಮಖಾಂ.
ಕೊಲ್ಲಂ, ಕೊಯಿಲಾಂಡಿ.
ಕಲ್ಲಿಕೋಟೆ ಜಿಲ್ಲೆ
〰〰〰〰〰〰〰
ಕೇರಳದ ಪ್ರದಾನ ಝಿಯಾರತ್ತ್ ಕೇಂದ್ರದಲ್ಲಿ ಒಂದಾಗಿದೆ ಕೊಯಿಲಾಂಡಿಯ ಹತ್ತಿರದ ಕೊಲ್ಲಂ ಪಾರಪಳ್ಳಿ ಮಖಾಂಗಳು.
ಔಲಿಯಾಗಳ ಸಂಗಮಭೂಮಿಯಾಗಿ ಗುರುತಿಸಿರುವ ಸ್ಥಳವಾಗಿದೆ ಇದು. ಇಲ್ಲಿಯ ಮಸ್ಜಿದ್ ದೊಡ್ಡ ಬಂಡೆಕಲ್ಲಿನ ಮೇಲೆಯಾಗಿದೆ ನೆಲೆಗೊಂಡಿರುವುದು.
ಸಮುದ್ರದ ಮೂಲಕ ಈ ತೀರಕ್ಕೆ ಆಗಮಿಸಿದ ತಂಡದಲ್ಲಿ ಇದ್ದವರಾಗಿದ್ದಾರೆ ಈ ಬಂಡೆಕಲ್ಲುಗಳ ನಡುವೆ ಎತ್ತರಿಸಿ ಕಟ್ಟಿದ 16 ಮಕ್ಬರದಲ್ಲಿರುವುದು.

ಸುಪ್ರಸಿದ್ದ ಲೋಕ ಸಂಚಾರಿಯಾದ *ಇಬ್ನು ಬತ್ತುತ್ತ. ರ.* ರವರು ಈ ಮಸ್ಜಿದಿನಲ್ಲಿ ಸುಮಾರು 40 ದಿನಗಳು ವಾಸ್ತವ್ಯ ಮಾಡಿರುದಾಗಿ ಚರಿತ್ರೆ ಇದೆ.

*ತಮಿಮುಲ್ ಅನ್ಸಾರಿ. ರ., ಅಬ್ದುಲ್ಲಾ. ರ., ಅಬ್ದುಲ್ಲಾಹಿ ಇಬ್ನು ದಿನಾರ್. ರ., ಹಸನು ಇಬ್ನು ಅಹ್ಮದ್. ರ., ಹುಸೈನ್ ಅಲ್ ಫಾತಿಮಾ. ರ., ಅಬ್ದುರಹ್ಮಾನುಲ್ ಅನ್ಸಾರಿ. ರ., ಎಂಬವರು ಒಳಗೊಂಡ 11 ಸ್ವಹಾಬಿವರ್ಯರುಗಳ ಹಾಗು 3 ತಾಬಿಉಗಳ ಮಕ್ಬರಗಳಾಗಿದೆ ಇದು ಎಂದು ಹೇಳಲಾಗುತ್ತದೆ.*

ಪ್ರಧಾನ ಕಟ್ಟಡದೊಳಗೆ ಇರುವ ಮಕ್ಬರ ತಮಿಮುಲ್ ಅನ್ಸಾರಿ. ರ. ರವರದಾಗಿದೆಯಂತೆ. ಅಲ್ಲದೆ ಇಲ್ಲಿ ಹಲವಾರು ಮಹಾತ್ಮರುಗಳು  ಅಂತ್ಯವಿಶ್ರಮ ಗೊಳ್ಳುತ್ತಾರೆ.

ಇಲ್ಲಿಯ ಪ್ರಧಾನ ಮಸ್ಜಿದಿನ ಮುಂಭಾಗದ ಕಲ್ಲಿನ ಮೇಲೆ ಇರುವ ಕಾಲಿನ ಗುರುತು *ಆದಂ ನಬಿ ಅಲೈಸಲಾಂ* ಅವರದಾಗಿದೆಯೆಂದು ಹೇಳುತ್ತಾರೆ. ಇಲ್ಲಿಯದ್ದು ಎಡ ಕಾಲಿನ ಗುರುತಾದರೆ, ಬಲ ಕಾಲಿನ ಗುರುತು ಇರುವುದು ವೆಳ್ಳಿಯಾ0ಕಲ್ಲಿ ಎಂಬ ಸ್ಥಳದಲ್ಲಾಗಿದೆಯಂತೆ.

ಇಲ್ಲಿ ಅಂತ್ಯವಿಶ್ರಮ ಗೊಳ್ಳುತ್ತಿರುವ ಮಹಾನವರುಗಳು ಈ ಸ್ಥಳಕ್ಕೆ ತಲುಪಿದಾಗ ಅಪ್ಪು ಎಂಬ ಅಮುಸ್ಲಿಂ ಎಳೆನೀರು ಕೊಟ್ಟು ಬರಮಾಡಿಕೊಂಡರು. ಈ ಎಳೆನೀರು ಯಾರದೆಂದು, ಇದು ಕೊಡುವುದು ನಮ್ಮ ಭಯದಿಂದವಾಗಿದೆಯಾ? ಎಂದೆಲ್ಲ ಕೇಳಿ ತೃಪ್ತಿ ಆದ ಮೇಲೆಯಾಗಿದೆ ಅವರು ಎಳೆನೀರು ಕುಡಿದಿರುವುದು.
ಇವರ ಜೀವನ ವಿಶುದ್ಧಿಯನ್ನು, ಆತ್ಮೀಯತೆಯನ್ನು ಕಂಡು ಅವರು ಮುಸ್ಲಿಂ ಆದರು.

ಪಾರಪಳ್ಳಿ ಮಸ್ಜಿದ್ ಅಲ್ಲದೆ ಗುಡ್ಡದ ಮೇಲೆ ಪುರಾತನವಾದ ಎರಡು ಮಸ್ಜಿದುಗಳು ಇದೆ.
ಇದರ ಹೆಸರು ಔಲಿಯಾ ಪಳ್ಳಿ ಹಾಗು ಖಿಳ್ರ್ ಪಳ್ಳಿ ಎಂದಾಗಿದೆ.

ಔಲಿಯಾ ಮಸ್ಜಿದಿನ ಅಧೀನದಲ್ಲಿರುವ ಒಂದು ಬಂಡೆಕಲ್ಲಿನ ಎಡೆಯಿಂದ *ಶುದ್ಧಜಲದ* ಒಸರು ಬರುತ್ತಾ ಇದೆ.

ಸಮುದ್ರ ಕಿನಾರೆಯಲ್ಲಿರುವ ಈ ಒಸರಿನಿಂದ ಬರುತ್ತಿರುವ ನೀರಿಗೆ ಉಪ್ಪು ರಸವಿಲ್ಲದಿರುವುದು ಇಲ್ಲಿಯ ಅದ್ಭುತವಾಗಿದೆ.
ಈ ನೀರು ರೋಗ ಶಮನಕ್ಕೆ ಉಪಯೋಗಿಸುತ್ತಾರೆ.

ವಿನೋಧಯಾತ್ರೆಗಾಗಿಯೇ ದಿನನಿತ್ಯ ಹಲವಾರು ಅಮುಸ್ಲಿಮರು ಬರುತ್ತಾರೆ.  ಇಲ್ಲಿಯ ಕಡಲ ಕಿನಾರೆಗೆ ಅಪ್ಪಳಿಸಿ ಬರುವ ತೆರೆಗಳನ್ನು, ಪ್ರಕೃತಿ ರಮಣೀಯತೆಯಿಂದ ಕೂಡಿದ ಪರಿಸರ ಹಾಗು ಸಮುದ್ರ ತೀರದ ಸೌ0ದರ್ಯಯುತವಾದ ವಾತಾವರಣದ ಕಾರಣ ಇಲ್ಲಿಗೆ ಧಾರಾಳ ಸಂದರ್ಶಕರು ಬರುತ್ತಾರೆ.

ಕೊಯಿಲಾಂಡಿಯಿಂದ
3 ಕಿ. ಮೀ ಸಂಚರಿಸಿದರೆ ಕೊಲ್ಲಂ ಪಾರಪಳ್ಳಿ ಮಖಾಂಗೆ ತಲುಪುತ್ತದೆ.

✍ ಗಫೂರ್ ಬಾಯಾರ್
🥀🥀🥀🥀🥀🥀🥀

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...