Skip to main content

*ಝಿಯಾರತ್ತ್ ಕೇಂದ್ರ* 👉👉 30 ➖➖➖➖➖➖➖ ✍ ಗಫೂರ್ ಬಾಯಾರ್ ➖➖➖➖➖➖➖ ಮುಂದುವರಿದ ಭಾಗ 02 〰〰〰〰〰〰〰 *"ನೂರುಲ್ ಉಲಮಾ ಎಂ.ಎ. ಉಸ್ತಾದ್"* ಮಖಾಂ ದೇಳಿ,

*ಝಿಯಾರತ್ತ್ ಕೇಂದ್ರ*
👉👉   30
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
    ಮುಂದುವರಿದ ಭಾಗ 02
〰〰〰〰〰〰〰
*"ನೂರುಲ್ ಉಲಮಾ ಎಂ.ಎ. ಉಸ್ತಾದ್"* ಮಖಾಂ ದೇಳಿ,
ಕಾಲ್ನಾಡ್ ಕಾಸರಗೋಡು.
〰〰〰〰〰〰〰

ಕೃತ್ಯನಿಷ್ಠೆಗಳ, ಕರ್ಮಕೌಶಲ್ಯಗಳ ಯುವತ್ವವಾಗಿತ್ತು ಮಹಾನರ  ವಫಾತಿನ ವರೆಗಿನ ಜೀವನ.

ಸಮಸ್ತದ ಪ್ರಥಮ ಕಾಲದ ಪಂಡಿತರೊಂದಿಗಿರುವ ಸಂಬಂಧ ಮಹಾನವರನ್ನು ದೀನೀ ವಿಷಯದಲ್ಲಿ ಕರ್ಮ ನಿರತರಾಗಲು ಕಾರಣವಾಯಿತು.

ಮದ್ರಸ ರೀತಿಯಲ್ಲಿ, ಸಮನ್ವಯ ಧಾರ್ಮಿಕ ವಿದ್ಯಾಭ್ಯಾಸವನ್ನು ಆವಿಷ್ಕರಿಸಿದರು.

ಸುನ್ನೀ ಯುವ ಜನಸಂಘಕ್ಕೂ ಸುನ್ನಿ ವಿದ್ಯಾರ್ಥಿ ಸಂಘಕ್ಕೂ ಆಶಯಗಳನ್ನು ವಿತರಿಸಿ, ಎಲ್ಲಾ ಅರ್ಥದಲ್ಲಿಯೂ ಜನರನ್ನು ಸಂಸ್ಕರಿಸಲು ಪ್ರಚೋದನೆ ನೀಡಿದರು.

ಸೊಷಿಯಲಿಸಂ'ಅನ್ನು  ವಿದ್ಯಾಸಂಪನ್ನರು ತಿಳಿಯುವ ಮೊದಲೇ ಅದರ ಕುರಿತು ಒಂದು ಇಸ್ಲಾಮಿಕ ಗ್ರಂಥವನ್ನು ಮಲಯಾಳಂ ಭಾಷೆಯಲ್ಲಿ ರಚಿಸಿರುವುದು ತನ್ನ ದೂರದೃಷ್ಟಿಯ ಅಗಾಧವಾದ ಪಾಂಡಿತ್ಯಕ್ಕೆ ಒಂದು ಉದಾಹರಣೆ ಮಾತ್ರವಾಗಿದೆ.

ಸುನ್ನೀ ಸಂಘ ಶಕ್ತಿಗಳ ವಿರುದ್ಧ ಬರುತ್ತಿದ್ದ ಅಪಪ್ರಚಾರಕ್ಕೆ ಪತ್ರ ಮುಖಾಂತರ ನಿರಂತರ ಉತ್ತರ ಬರೆಯುತ್ತಿದ್ದರು.

ವ್ಯವಸ್ಥಾಪಿತವಾಗಿ ಕೇರಳದ ಪ್ರಥಮ ಮಾದರಿ ಸ್ಥಾಪನೆಯಾಗಿ *"ಜಾಮಿಯಾ ಸಅದಿಯಾ ಅರಬೀಯಾ"* ಇಂದು ಪ್ರಜ್ವಲಿಸುತ್ತಿದೆ. ಅಲ್ಲದೇ ಸೌದಿ ಅರೇಬಿಯಾದಲ್ಲಿ ಇಂದಿಗೂ ನಿರಂತರವಾಗಿ ಉಮ್ರಾ ಯಾತ್ರಿಕರಿಗೆ ಪವಿತ್ರವಾದ ಹಜ್ ಮತ್ತು ಉಮ್ರಾ ನಿರ್ವಹಣೆಗೆ ಉತ್ತಮ ಮಾರ್ಗದರ್ಶನ ನೀಡುವ ಸಲುವಾಗಿ *"ಜಾಮಿಯಾ  ಸಅದಿಯಾ ಅರಬಿಯಾ"* ವತಿಯಿಂದ ಹಜ್ & ಉಮ್ರಾ ನಿರ್ವಹಿಸಲು ವಿವಿಧ ರಾಜ್ಯಗಳಿಂದ ಬರುವ ಯಾತ್ರಿಕರಿಗೆ ಗ್ರೂಪು (ಹಮ್ಲಾ) ವನ್ನು ರಚಿಸಲು ಪ್ರಥಮ ಹೆಜ್ಜೆ ಮುಂದಿಟ್ಟವರು *"ನೂರುಲ್ ಉಲಮಾ, ಎಂ.ಎ ಅಬ್ದುಲ್ ಖಾದರ್ ಮುಸ್ಲಿಯಾರ್" ನ:ಮ* ರವರಾಗಿದ್ದಾರೆ.

ಒಂದು ಶತಮಾನದೊಳಗೆ ದೀನಿ ರಂಗದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ ಅದ್ಬುತ ಪ್ರತಿಭೆಯಾಗಿದ್ದರು  ಮಹಾನರು.

ಅಗಾಧ ಪಾಂಡಿತ್ಯವನ್ನು ಹೊಂದಿದ ಪ್ರಮುಖ  ಸೂಫಿವರ್ಯರಾದ *"ನೂರುಲ್ ಉಲಮಾ ಎಂ.ಎ. ಉಸ್ತಾದರು* ತನ್ನ ಅಂತ್ಯಯಾತ್ರೆಯ ನಂತರ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಕೂಡಾ ಮುಂಚಿತವಾಗಿ ಬರೆದಿಟ್ಟು ಧನ್ಯರಾಗಿ ವಫಾತ್ ಆಗಲು ಮಹಾನರಿಗೆ ಭಾಗ್ಯ ಲಭಿಸಿತ್ತು.

ಮಹಾನುಭಾವರಾದ ಈ ಆತ್ಮೀಯ ಗುರು ಅರಬಿ, ಮಲಯಾಳಂ ಭಾಷೆಗಳಲ್ಲಿ ಬೃಹತ್ತಾದ 40 ರಷ್ಟು ಗ್ರಂಥಗಳನ್ನು ಸಮುದಾಯಕ್ಕೆ ಸಮರ್ಪಿಸಿದ್ದಾರೆ.

2015 ಫೆಬ್ರವರಿ 17, ರಬೀವುಲ್ ಆಖಿರ್ 28'ರಂದು ಈ ಲೋಕದಿಂದ ನಮ್ಮನ್ನಗಲಿ  ಶಾಶ್ವತ ಲೋಕಕ್ಕೆ ಯಾತ್ರೆಯಾದರು.

ತನ್ನ ಜೀವನದ ದೀಪ್ತವಾದ ನೆನಪುಗಳು ನೆಲೆಗೊಳ್ಳುವ ಸಅದಿಯ್ಯಾ ಮಸ್ಜಿದ್'ನ ಅಂಗಳದಲ್ಲಿ ಮಹಾನರು ಇಂದು ಅಂತ್ಯವಿಶ್ರಮಗೊಳ್ಳುತ್ತಿದ್ದಾರೆ. ಇಂದಿಗೂ ದಿನ ಬೆಳಗಾದಂತೆ ನೂರಾರು ಯಾತ್ರಿಕರು ಮಹಾನುಭಾವರ ಪುಣ್ಯ ಮಖ್ಬರ ಸಂದರ್ಶಿಸಲು ಬರುತ್ತಿದ್ದಾರೆ.

ದಾರಿ; ಕಾಸರಗೋಡು-ಕಾಲ್ನಾಡು-ದೇಳಿ ದಾರಿಯಾಗಿ ಜಾಮಿಯಾ ಸಅದಿಯಾ ಅರಬೀಯಾ.
ಅಲ್ಲದೇ ಕಾಸರಗೋಡು- ಮೇಲ್ಪರಂಬ ದಾರಿಯಾಗಿಯೂ ಜಾಮಿಯಾ ಸಾದಿಯಾ ಅರಬಿಯಾಕ್ಕೆ ಹೋಗಲು ಸುಗಮ ದಾರಿಯಿದೆ.

🔹ಮುಗಿಯಿತು.

✍  ಗಫೂರ್ ಬಾಯಾರ್
🕌🕌🕌🕌🕌🕌🕌

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...