ಯತೀಮರ ಸಂರಕ್ಷಣೆಯಿಂದ ನಿನ್ನ ಹ್ರದಯ ಮ್ರದುವಾಗುತ್ತದೆ. ನಿನ್ನ ಮನಸ್ಸಿಗೆ ಶಾಂತಿ ಸಮಾಧಾನ, ನೆಮ್ಮದಿ ಲಭಿಸುತ್ತದೆ. ನಿನ್ನ ಉದ್ದೇಶಗಳು ಈಡೇರುತ್ತದೆ.
ಅನಾಥರ ಸಂರಕ್ಷಣೆಯಿಂದ ನಿನ್ನ ಹ್ರದಯ ಮ್ರದುವಾಗುತ್ತದೆ. ನಿನ್ನ ಮನಸ್ಸಿಗೆ ಶಾಂತಿ ಸಮಾಧಾನ, ನೆಮ್ಮದಿ ಲಭಿಸುತ್ತದೆ. ನಿನ್ನ ಉದ್ದೇಶಗಳು ಈಡೇರುತ್ತದೆ.
ಸಹೋದರಾ... ನೀನು ಕಲ್ಲು ಹ್ರದಯಿಗಳಲ್ಲಿ ಸೇರಿದವನಾಗಿದ್ದರೆ ನೀನು ಯತೀಮುಗಳಿಗೆ ಒಳಿತು ಮಾಡುವುದರಿಂದ ನಿನ್ನ ಹ್ರದಯ ಕರುಣೆ ಇರುವ ಮ್ರದು ಹ್ರದಯವಾಗುತ್ತದೆ. ಯತೀಮುಗಳಿಗೆ ಒಳಿತು ಬಯಸುವುದು, ಒಳಿತು ಮಾಡುವುದು, ಸಹಾಯ ಹಸ್ತ ಚಾಚುವುದು ಮನಸ್ಸು ಮ್ರದುವಾಗುವ ನಿಮಿತ್ತಗಳಲ್ಲೊಂದಾಗಿದೆ. ಇದು ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ರವರು ನಿರ್ದೇಶಿಸಿದ ಫಲಪ್ರದ ಚಿಕಿತ್ಸೆಯಾಗಿದೆ.
ಅಬುದ್ದರ್ದಾಹ್ ರ.ಅ ವರದಿ ಮಾಡುವ ಹದೀಸಿನಲ್ಲಿದೆ : "" ನೆಬಿ ಸ.ಅ ರವರ ಬಳಿ ಒಬ್ಬ ವ್ಯಕ್ತಿ ಆಗಮಿಸಿ ತನ್ನ ಮನೋವೇದನೆಯನ್ನು ತಿಳಿಸಿದರು. ಓ ಪ್ರವಾದಿವರ್ಯರೇ, ನನ್ನ ಹ್ರದಯ ಕಲ್ಲು ಹ್ರದಯವಾಗಿದೆ, ಕಠಿಣ ಹ್ರದಯಿಯಾಗಿರುವೆ ನಾನು. ಪ್ರವಾದಿ ಸ.ಅ ಅವನೊಂದಿಗೆ ಕೇಳಿದರು : ನೀನೊಬ್ಬ ಕರುಣೆ ಇರುವ ವ್ಯಕ್ತಿಯಾಗಲು ಬಯಸುವೆಯಾ? ನಿನ್ನ ಹ್ರದಯ ಮ್ರದುವಾಗಲು ಬಯಸುವೆಯಾ? ನಿನ್ನ ಉದ್ದೇಶಗಳೇನಿವೆಯೋ ಅದು ಈಡೇರಲು ಇಷ್ಟ ಪಡುತ್ತೀಯೋ? ಹಾಗಾದರೆ ನೀನು ಅನಾಥ ಸಂರಕ್ಷಕನಾಗು, ಅನಾಥರ ಮೇಲೆ ಕರುಣೆ ತೋರುವವನಾಗು, ಪ್ರೀತಿ ವಾತ್ಸಲ್ಯದಿಂದ ಅನಾಥ ಮಕ್ಕಳ ತಲೆ ನೇವರಿಸುವವನಾಗು, ನೀನು ಸೇವಿಸುವಂತಹ ಆಹಾರ ಪಾನೀಯವನ್ನು ಅನಾಥರಿಗೆ ನೀಡುವವನಾಗು. ಹಾಗಾದರೆ ನೀನು ಮ್ರದು ಹ್ರದಯಿಯಾಗುವಿ, ನಿನ್ನ ಹ್ರದಯದ ಕಾಠಿಣ್ಯತೆ ಇಲ್ಲದಾಗುತ್ತದೆ, ನಿನ್ನ ಉದ್ದೇಶಗಳು ಈಡೇರಲ್ಪಡುವುದು.""
ಓ ಮುಸ್ಲಿಂ ಸಹೋದರಾ... ನಿಜವಾಗಿಯೂ ಯತೀಮ್ ಮಕ್ಕಳ ಮೇಲೆ ಕರುಣೆ ತೋರಿದರೆ ಮನಸ್ಸು ಹಗುರವಾಗುತ್ತದೆ, ನಿರ್ಮಲ ಮನಸ್ಸು ನಿನ್ನದಾಗುತ್ತದೆ, ನಿನ್ನ ಬಯಕೆಗಳು ಈಡೇರುತ್ತವೆ.
ಒಬ್ಬಾತ ಒಂದು ಯತೀಮ್ ಮಗುವಿಗೆ ಕರುಣೆ ತೋರುವಾಗ, ಆ ಮಗುವಿನ ಅಗತ್ಯತೆಗಳನ್ನು ಪೂರೈಸುವಾಗ ಆತ ಆ ಮಗುವಿನ ತಂದೆಯ ಸ್ಥಾನದಲ್ಲಿ ನಿಲ್ಲುತ್ತಾನೆ. ಒಂದು ಮಗುವಿನ ನಿಜವಾದ ತಂದೆಗೆ ಪ್ರಕ್ರತಿದತ್ತವಾಗಿ ಆ ಮಗುವಿನ ಮೇಲೆ ಕರುಣೆ, ಪ್ರೀತಿ, ವಾತ್ಸಲ್ಯ ಇರುತ್ತದೆ. ಆದರೆ ಇಲ್ಲಿ ಒಬ್ಬಾತ ತನ್ನ ಮಗನಲ್ಲದ ಯತೀಮ್ ಮಗುವಿನ ಮೇಲೆ ಪ್ರೀತಿ, ವಾತ್ಸಲ್ಯ, ಸ್ನೇಹ ಕರುಣೆ ತೋರಿಸುವಾಗ ಈತನಿಗೆ ತನ್ನ ಮಗನಲ್ಲದ ಮಗುವಿಗೆ ಕರುಣೆ ಪ್ರೀತಿ ತೋರಿಸಿದ ಒಂದು ವಿಶೇಷತೆ ಹೆಚ್ಚಿಗೆ ಲಭಿಸುತ್ತದೆ. ಈವಾಗ ಈತ ಎರಡು ವಿಶೇಷತೆಗಳನ್ನು ಪಡೆದಿರುತ್ತಾನೆ. ಒಂದು ಒಬ್ಬ ತಂದೆ ಮಗನೊಂದಿಗೆ ತೋರಿಸುವ ಕರುಣೆ, ಮತ್ತೊಂದು ಮಗನಲ್ಲದ ಮಗುವಿನೊಂದಿಗೆ ತೋರಿಸುವ ಕರುಣೆ. ಖಂಡಿತವಾಗಿಯೂ ಈಗ ಈತ ತನ್ನ ಹ್ರದಯವನ್ನು ಮ್ರದುಗೊಳಿಸುವ ಕಾರಣಗಳಲ್ಲೊಂದನ್ನು ನಿರ್ವಹಿಸಿದ ಕಾರಣ ಈತನ ಹ್ರದಯ ಮ್ರದು ಹ್ರದಯವಾಗಿರುತ್ತದೆ. ಕರುಣೆಯ ಒರತೆ ಈತನ ಹ್ರದಯದಲ್ಲಿ ಸ್ರಷ್ಟಿಯಾಗಿರುತ್ತದೆ. ನಿಸ್ಸಂಶಯ ಇದು ಪ್ರವಾದಿ ಸ.ಅ ರವರು ಕಲಿಸಿದ ಉತ್ತಮ ಪ್ರಯೋಜನಕಾರಿ ಚಿಕಿತ್ಸೆಯಾಗಿದೆ. ಕಾರಣ ಮ್ರದು ಹ್ರದಯಿ, ಅಥವಾ ಉತ್ತಮ ಸ್ವಭಾವದವನಾಗಿದ್ದರೆ ಮಾತ್ರ ಯತೀಮುಗಳೊಂದಿಗೆ ಕರುಣೆ ತೋರಿಸಲು ಸಾಧ್ಯ. ಕಲ್ಲು ಹ್ರದಯಿ ಅಥವಾ ಕೆಟ್ಟ ಸ್ವಭಾವದವನಾದರೆ ಖಂಡಿತವಾಗಿಯೂ ಯತೀಮುಗಳೊಂದಿಗೆ ಕರುಣೆ ತೋರಿಸಲು ಸಾಧ್ಯವಿಲ್ಲ.
ಯತೀಮುಗಳೊಂದಿಗೆ ಕರುಣೆ ತೋರಿಸಿದರೆ ಅತನ ಉದ್ದೇಶಗಳು ಕೂಡಾ ಈಡೇರುವುದು ಎಂದು ಈ ಮೇಲೆ ತಿಳಿಸಿದ ಹದೀಸಿನಲ್ಲಿ ಕಾಣಬಹುದು. ನಿಶ್ಚಯವಾಗಿಯೂ ಯತೀಮುಗಳಿಗೆ ಕರುಣೆ ತೋರಿಸುವುದರಿಂದ ಉದ್ದೇಶಗಳ ಈಡೇರುವಿಕೆಗೆ ನಿಮಿತ್ತವಾಗುತ್ತದೆ. ಕಾರಣ ಯಾವನೇ ಒಬ್ಬ ವ್ಯಕ್ತಿಯು ತನ್ನ ಮಗುವಲ್ಲದ ಬೇರೊಂದು ಯತೀಂ ಮಗುವಿನ ಹ್ರದಯದಲ್ಲಿ ಸಂತೋಷವನ್ನುಂಟು ಮಾಡಿ ಕರುಣೆ ತೋರಿಸಿದರೆ ನಿಸ್ಸಂಶಯ ಅಲ್ಲಾಹು ಆತನನ್ನು ಕೈ ಬಿಡಲಾರ. ಕಾರಣ ಅಲ್ಲಾಹನು ಕರುಣೆ ಇರುವವನಾಗಿದ್ದಾನೆ ಹಾಗು ಕರುಣೆ ತೋರಿಸುವ ಎಲ್ಲರನ್ನು ಇಷ್ಟಪಡುವವನೂ ಆಗಿದ್ದಾನೆ. ಪ್ರವಾದಿ ಸ.ಅ ಹೇಳಿದರು : ""ಕರುಣೆ ತೋರುವವರಿಗೆ ಪರಮ ಕಾರುಣಿಕನಾದ ಅಲ್ಲಾಹನು ಕರುಣೆ ತೋರುವನು. ಭೂಮಿಯಲ್ಲಿರುವವರಿಗೆ ನೀವು ಕರುಣೆ ತೋರಿರಿ. ಆಕಾಶದಲ್ಲಿರುವವರು ನಿಮಗೆ ಕರುಣೆ ತೋರುವರು.""
ಆದುದರಿಂದ ಸಹೋದರಾ.... ನೀನು ಯತೀಮರಿಗೆ ಕರುಣೆ ತೋರುವವನಾಗು. ಹಾಗಾದರೆ ಅಲ್ಲಾಹನು ನಿನ್ನ ಇಹಪರ ಲೋಕದ ಕಾರ್ಯವನ್ನು ಉತ್ತಮಗೊಳಿಸುವನು. ಅಲ್ಲಾಹನು ನಿನ್ನ ಇಹಪರ ವಿಜಯಗೊಳಿಸುವನು.
ಯತೀಮರಿಗೆ ಹೇಗೆ ಒಳಿತು ಮಾಡಬಹುದು. ಯಾವ್ಯಾವ ರೀತಿ ಕರುಣೆ ತೋರಬಹುದು. ಕೆಲವೊಂದು ಉದಾಹರಣೆಗಳನ್ನು ಇಲ್ಲಿ ಕೊಡುತ್ತಿದ್ದೇನೆ.
1- ಯತೀಮರಿಗೆ ಆಹಾರ ಪಾನೀಯ ನೀಡುವುದು, ಅವರಿಗೆ ವಸ್ತ್ರಗಳನ್ನು ನೀಡುವುದು, ಅವರ ಅಗತ್ಯತೆಗಳನ್ನು ಪೂರೈಸುವುದು.
2- ತಲೆ ನೇವರಿಸುವುದು, ಅವರೊಂದಿಗೆ ಪ್ರೀತಿ ವಾತ್ಸಲ್ಯವನ್ನು ತೋರ್ಪಡಿಸುವುದು. ಹೀಗೆ ಮಾಡುವುದರಿಂದ ಯತೀಮರ ಮೇಲೆ ತುಂಬಾ ಪ್ರಭಾವ ಬೀಳುತ್ತದೆ. ""ಪ್ರಮುಖ ಸ್ವಹಾಬಿವರ್ಯರಾದ ಇಬ್ನು ಉಮರ್ ರ.ಅ ರವರು ಯತೀಂ ಮಕ್ಕಳನ್ನು ಕಂಡರೆ ಅವರ ತಲೆ ನೇವರಿಸಿ ಅವರಿಗೆ ಏನಾದರೂ ಕೊಡುತ್ತಿದ್ದರು.""
3- ಒಬ್ಬ ತಂದೆ ತನ್ನ ಸ್ವಂತ ಮಗುವಿನ ಕಲಿಕೆ, ವಿದ್ಯಾಭ್ಯಾಸಕ್ಕೆ ಯಾವ ರೀತಿ ಪ್ರೋತ್ಸಾಹ ನೀಡುತ್ತಾನೋ, ಖರ್ಚು ಮಾಡುತ್ತಾನೋ ಆ ರೀತಿ ಯತೀಂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡುವುದು. ಅವರ ಕಲಿಯುವಿಕೆಗೆ ಪ್ರೋತ್ಸಾಹಿಸುವುದು.
4- ಯತೀಮನ ಸಂಪತ್ತಿನಲ್ಲಿ ಜಾಗ್ರತೆ ಪಾಲಿಸುವುದು. ಯತೀಮನ ಸಂಪತ್ತನ್ನು ಸಂರಕ್ಷಿಸಲು ಯಾರೊಂದಿಗೆ ವಸಿಯ್ಯತ್ ಮಾಡಲ್ಪಟ್ಟಿದೆಯೋ ಅವರು ಯತೀಮನ ಸಂಪತ್ತು ನಾಶಹೊಂದದಂತೆ ಅಥವಾ ನಾಶಗೊಳಿಸದಂತೆ ಜಾಗ್ರತೆ ಪಾಲಿಸುವುದು. ಯತೀಮ್ ದೊಡ್ಡವನಾದ ಮೇಲೆ ಅವನ ಸಂಪತ್ತನ್ನು ಮರಳಿಸುವುದು.
5- ಯತೀಮನ ಆರೈಕೆ, ಪಾಲನೆ ಇಖ್ಲಾಸಿನೊಂದಿಗೆ ನಿರ್ವಹಿಸುವುದು. ಯತೀಮನ ಕುಟುಂಬಸ್ಥರು, ನೆರೆಕರೆಯವರು, ಊರಿನವರು, ಸಂಘ ಸಂಸ್ಥೆಗಳು ಅಥವಾ ಆರೈಕೆ, ಪಾಲನೆ, ಪೋಷಣೆ ಮಾಡಲು ಯಾರೊಂದಿಗೆ ವಸಿಯ್ಯತ್ ಮಾಡಲ್ಪಟ್ಟಿದೆಯೋ ಅವರು ಮಗುವನ್ನು ಉತ್ತಮ ರೀತಿಯಲ್ಲಿ ಬೆಳೆಸುವುದು.
6- ಯತೀಂ ಮಗುವಿನ ಗುಣ ನಡತೆಯಲ್ಲಿ ಏನಾದರೂ ತಪ್ಪು ಗೋಚರಿಸಿದ್ದಲ್ಲಿ ತಿದ್ದಿ ಕೊಡುವುದು.
ಯತೀಮನ ಸೊತ್ತಿನಲ್ಲಿ ಜಾಗ್ರತೆ ಪಾಲಿಸು....
ಸಹೋದರಾ.....ಯತೀಮ್ ಮಗುವಿಗೆ ಸಂಪತ್ತು ಇದ್ದರೆ ಆ ಸಂಪತ್ತನ್ನು ನೋಡಿಕೊಳ್ಳಲು ಯಾರೊಂದಿಗೆ ವಸಿಯ್ಯತ್ ಮಾಡಲ್ಪಟ್ಟಿದೆಯೋ ಆತನು ಯತೀಮನ ಸಂಪತ್ತಿನಲ್ಲಿ ಜಾಗ್ರತೆ ಪಾಲಿಸುವುದು ಅನಿವಾರ್ಯತೆಯಾಗಿದೆ. ಯತೀಮನ ಸಂಪತ್ತನ್ನು ಅಕ್ರಮಿಸುವುದು, ಯತೀಮನ ಭೂಮಿಯನ್ನು ಕಬಳಿಸುವುದು ಪಾಪವಾಗಿದೆ.
ಅಲ್ಲಾಹನು ಕುರಾನಿನಲ್ಲಿ ಯತೀಮರ ಸಂಪತ್ತನ್ನು ಕಬಳಿಸುವವರ ಕುರಿತು ಎಚ್ಚರಿಸಿದ್ದಾನೆ : ನಿಶ್ಚಯವಾಗಿಯೂ ಯತೀಮರ ಸಂಪತ್ತನ್ನು ಅಕ್ರಮವಾಗಿ ತಿನ್ನುವವರು ಅವರ ಹೊಟ್ಟೆಯಲ್ಲಿ ಬೆಂಕಿಯನ್ನು ತುಂಬಿಸುವವರಾಗಿದ್ದಾರೆ. ಅವರು ನರಕದಲ್ಲಿಯಾಗಿರುವರು.
ಅಸ್ಸುದ್ದಿ ರಹಿಮಹುಲ್ಲಾಹ್ ಹೇಳುತ್ತಾರೆ : ಯತೀಮರ ಸಂಪತ್ತನ್ನು ಅಕ್ರಮವಾಗಿ ತಿನ್ನುವವನನ್ನು ಅಂತ್ಯದಿನದಲ್ಲಿ ಕೊಂಡು ಬರಲಾಗುತ್ತದೆ. ಬೆಂಕಿಯ ಜ್ವಾಲೆಗಳು ಆತನ ಬಾಯಿ, ಕಿವಿ, ಮೂಗು ಹಾಗು ಕಣ್ಣುಗಳ ಮೂಲಕ ಹೊರಬರುತ್ತಿರುತ್ತದೆ. ಯತೀಮರ ಸಂಪತ್ತನ್ನು ಅಕ್ರಮವಾಗಿ ತಿನ್ನುತ್ತಿದ್ದುದನ್ನು ದುನ್ಯಾವಿನಲ್ಲಿ ನೋಡಿದವರು ಪರಲೋಕದಲ್ಲಿ ಆತನನ್ನು ಆವಾಗ ತಿಳಿಯುತ್ತಾರೆ.""
ಒಬ್ಬ ಮನುಷ್ಯನು ನರಕ ಪ್ರವೇಶಿಸುವುದು ಅತಿದೊಡ್ಡ ಅವಮಾನವಾಗಿದೆ.
ಯತೀಮನಿಗೆ ಪ್ರಾಯಪೂರ್ತಿ ಬುದ್ದಿಯಾದರೆ ಸಂಪತ್ತನ್ನು ಆತನಿಗೆ ಮರಳಿಸಬೇಕು. ಇದು ಅಲ್ಲಾಹನ ಆದೇಶವಾಗಿದೆ.
ಸಹೋದರಾ... ಖಂಡಿತವಾಗಿಯೂ ಯತೀಮನ ಸೊತ್ತನ್ನು ತಿನ್ನುವುದು, ಆತನ ಸಂಪತ್ತು, ಭೂಮಿಯನ್ನು ಕಬಳಿಸುವುದು ಅತಿ ಘೋರ ಅಪರಾಧವಾಗಿದೆಯೆಂದೂ ಅದರ ಶಿಕ್ಷೆಯೂ ನರಕವಾಗಿದೆಯೆಂದೂ ನೀನು ತಿಳಿದಿರುವಿ.. ಆದುದರಿಂದ ಯತೀಮನ ಸೊತ್ತನ್ನು ತನ್ನಲ್ಲಿ ಸೂಕ್ಷಿಸಲು ವಹಿಸಲ್ಪಟ್ಟಿದೆಯಾದರೆ ಅದನ್ನು ಕಬಳಿಸಲು ಚಿಂತಿಸದಿರು.
✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Comments