Skip to main content

*ಝಿಯಾರತ್ತ್ ಕೇಂದ್ರ* 👉23 〰〰〰〰〰〰〰 *'ರಾಮಂತಳಿ ಶುಹದಾಗಳ್'* ಮಕ್ಬರ. ರಾಮಂತಳಿ, ಕಣ್ಣೂರು

*ಝಿಯಾರತ್ತ್ ಕೇಂದ್ರ*
             👉23
〰〰〰〰〰〰〰
*'ರಾಮಂತಳಿ ಶುಹದಾಗಳ್'*
ಮಕ್ಬರ. ರಾಮಂತಳಿ, ಕಣ್ಣೂರು
〰〰〰〰〰〰〰

ಕೇರಳದ ಚರಿತ್ರೆ ಪ್ರಸಿದ್ಧ ಏಳ್ಮಲೆ  ಎಂಬ ಸ್ಥಳದ ಉತ್ತರ ಭಾಗದಲ್ಲಿ ಪೋರ್ಚುಗೀಸರು ಮುಸ್ಲಿಮರ ಮೇಲೆ ದಾಳಿ ಮಾಡುತ್ತಿದ್ದರು. ಅವರ ಆರಾಧಾನಾಲಯಗಳ ಮೇಲೆಯೂ ಆಕ್ರಮಣ ನಡೆದಿತ್ತು. ಆ ಸಂದರ್ಭದಲ್ಲಿ ದಾಳಿಕೋರರ ವಿರುದ್ಧ ಹೋರಾಡಿ ಹುತಾತ್ಮರಾದವರಲ್ಲಿ 20 ಮಂದಿ *ರಾಮಂತಳಿ ಶುಹದಾಗಳ್'* ಎಂದು ಚರಿತ್ರೆ ಪ್ರಸಿದ್ಧರಾದರು.

ತಮ್ಮ ಕುಟುಂಬ, ಧಾರ್ಮಿಕ ಸ್ಥಳಗಳ ಮೇಲೆ ಗುರಿಯಿಟ್ಟು ಪೋರ್ಚುಗೀಸರು ನಿಷ್ಕರುಣೆಯಿಂದ ದಾಳಿ ಮಾಡುತ್ತಿದ್ದರು. ಮುಸ್ಲಿಂ ಯುವಕರು ಸಂಘಟಿತರಾಗಿ 'ಧರ್ಮಯುದ್ಧ' ಕ್ಕೆ ಅಣಿಯಾದರು.  ಆದರೆ ಬಲಶಾಲಿಯಾದ ಆಯುಧಬಲ, ಸೇನಾಬಲ ಇದ್ದ ಶತ್ರುಗಳ ಮುಂದೆ ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದ ಮುಸ್ಲಿಂ ಸಂಘದ 20 ಜನರಿಗೆ  'ಹುತಾತ್ಮ ಭಾಗ್ಯ'  ಅನಿವಾರ್ಯವಾಯಿತು!

ಪೋರ್ಚುಗನ್ ರಾಜನ ನಿರ್ದೇಶನ ಪ್ರಕಾರ A.D. 1498 (ಹಿಜರಿ ವರ್ಷ 904) ಲ್ಲಾಗಿತು ಪೋರ್ಚುಗೀಸ್  ನಾವಿಕಸೇನಾ ಪ್ರಮುಖನಾದ *ವಾಸ್ಕೊ ಡ ಗಾಮ* ಮತ್ತು ಸಂಗಡಿಗರು ಕಲ್ಲಿಕೋಟೆಯ ಸಮೀಪದ *ಕಾಪ್ಪಾಡ್* ಎಂಬ ಸ್ಥಳದಲ್ಲಿ ಹಡಗಿನಿಂದ ಇಳಿದಿರುವುದು. ವ್ಯಾಪಾರ, ಅಧಿಕಾರವಾಗಿತ್ತು  ಅವರ ಗುರಿ.
ಕಲ್ಲಿಕೋಟೆ ಹಾಗೂ ಇತರೆಡೆಗಳ *ಅರಬಿ* ವ್ಯಾಪಾರಿಗಳನ್ನು ಓಡಿಸಿ  ವಾಣಿಜ್ಯಪ್ರದೇಶಗಳನ್ನು ಹಂತಹಂತವಾಗಿ  ಪೋರ್ಚಿಗೀಸರು ತಮ್ಮದಾಗಿಸಿಕೊಂಡರು. ಕೆಲವೆಡೆ ಅದು ಪೋರ್ಚುಗೀಸ್- ಮುಸ್ಲಿಂ  ಹೋರಾಟವಾಗಿಯೂ ಮಾರ್ಪಾಡಾಯಿತು.
ಆ ಕಡೆಯಲ್ಲೆಲ್ಲಾ
ಅವರು ಮುಸ್ಲಿಮರನ್ನು ನಿಷ್ಕರುಣೆಯಿಂದ ಕಗ್ಗೊಲೆ ಮಾಡಿದರು. ಮಸೀದಿಗಳನ್ನು ಕೂಡ ಹೊಡೆದುರಳಿಸಿದರು. ಕಲ್ಲಿಕೋಟೆ ಒಂದರಲ್ಲಿಯೇ   4000 ಮುಸ್ಲಿಮರು ಅವರಿಂದ ಹತರಾಗಿದ್ದಾರೆಂದು ಇತಿಯಾಸದಲ್ಲಿ ದಾಖಲಾಗಿದೆ.

ಪ್ರಮುಖ ಮುಸ್ಲಿಂ ಕೇಂದ್ರಗಳಾದ ಪೊನ್ನಾನಿ, ಕೊಚ್ಚಿ, ಚಾಲಿಯಂ, ಕಲ್ಲಿಕೋಟೆ, ಕಣ್ಣೂರು ಮುಂತಾದ ಸ್ಥಳಗಳು  ಪೋರ್ಚುಗೀಸರಿಂದ ಆಕ್ರಮಣಗಳನ್ನು ಬಲವಾಗಿ ಎದುರಿಸಬೇಕಾಯಿತು.

ಕಲ್ಲಿಕೋಟೆಯ ಸಾಮೂತಿರಿ ರಾಜನು ಪೋರ್ಚುಗೀಸರೊಂದಿಗೆ ಮೊದಮೊದಲು ಸೌಹಾರ್ದದಲ್ಲಿ ಇದ್ದರೂ, ಅವರ ವಂಚನೆ ತಿಳಿದ ಮೇಲೆ  ಅವರ ವಿರುದ್ಧ ತಿರುಗಿ ಬೀಳುತ್ತಾನೆ.  ಯುದ್ಧಗಳನ್ನೂ ಮಾಡುತ್ತಾನೆ. ಆದರೆ ಕೆಲವು ಸಂದರ್ಭಗಳಲ್ಲಿ ಅವರೊಂದಿಗೆ  ರಾಜನು ಒಪ್ಪಂದಗಳನ್ನು ಮಾಡುತ್ತಾನೆ.

ಏಳ್ಮಲೆಯ ರಾಮಂತಳಿ ಎಂಬ ಸ್ಥಳದ ಹೋರಾಟದಲ್ಲಿ  20 ಮುಸ್ಲಿಮರೂ ಶಹೀದಾದರು. ಅದರಲ್ಲಿ 3 ಶಹೀದುಗಳ ಮಯ್ಯಿತುಗಳು ಕಾಣ ಸಿಕ್ಕದಿರುದರಿಂದ ಇಲ್ಲಿ ಇರುವ ಮಕ್ಬರದಲ್ಲಿ ದಫನ್ ಮಾಡಲಿಲ್ಲ. 17 ಹುತ್ಮಾತರುಗಳನ್ನು ಒಂದೇ ಖಬರಿನಲ್ಲಿ ದಫನ್ ಮಾಡಲಾಗಿದೆ. ಅವರೇ ರಾಮಂತಳಿ ಶುಹದಾಗಳು!

ಇಲ್ಲಿಗೆ ಜನರು ಝಿಯಾರತ್ತಿಗೆ ನಿತ್ಯವೂ ಬರುತ್ತಾರೆ. ಪಯ್ಯನೂರ್- ಏಳ್ಮಲೆ ದಾರಿಯಾಲ್ಲಿ 7 ಕಿ.ಮಿ ದೂರವಾಗಿದೆ ರಾಮಂತಳಿ ಮಖಾಮ್.

✍ಗಫೂರ್ ಬಾಯಾರು
🎯🎯🎯🎯🎯🎯🎯

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...