Skip to main content

"ತೌಬ"(ಪಶ್ಚಾತಾಪ) ✍🏼 ಅಲ್ ವಫಾ ಕೊಳಕೇರಿ

"ತೌಬ"(ಪಶ್ಚಾತಾಪ)

✍🏼  ಅಲ್ ವಫಾ ಕೊಳಕೇರಿ

ಮನುಷ್ಯ ತಿಳಿದೋ ತಿಳಿಯದೆಯೋ ಅದೆಷ್ಟೋ ಪಾಪಗಳನ್ನೆಸಗುತ್ತಾನೆ. ಪಾಪಗಳು ಸಂಭವಿಸುವುದು ಮನುಷ್ಯ ಸಹಜ. ಆದರೆ ನಿತ್ಯವೂ ಪಾಪ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅದರ ದಾಸನಾಗಿ ಬಿಡುವುದು ಸತ್ಯವಿಶ್ವಾಸಿಗೆ ತರವಲ್ಲ. ಏನಾದರೊಂದು ಪಾಪ ಕಾರ್ಯ ಸಂಭವಿಸಿದರೆ ಸಂಭವಿಸಿತೆಂದರೆ  ಕೂಡಲೇ ಮನಸಾರೆ ನೊಂದುಕೊಂಡು ಪಶ್ಚಾತಾಪ (ತೌಬ) ಪಟ್ಟು ಮುಂದೆ ಅಂತಹ ಪಾಪಗಳು ಸಂಭವಿಸದಂತೆ ಎಚ್ಚರ ವಹಿಸುವುದು ಸರಿಯಾದ ಸತ್ಯವಿಶ್ವಾಸಿಯ ಲಕ್ಷಣ.

"ಸತ್ಯ ವಿಶ್ವಾಸಿಗಳೇ ನೀವು ವಿಜಯಿಗಳಾಗಲಿಕ್ಕಾಗಿ ಅಲ್ಲಾಹನೊಂದಿಗೆ ಪಶ್ಚಾತಾಪ ಪಡಿರಿ " ಎಂಬ ಕುರ್ ಆನ್ ವಾಕ್ಯವು ಸತ್ಯವಿಶ್ವಾಸಿಯ ಪಾರತ್ರಿಕ ವಿಜಯಕ್ಕೆ 'ತೌಬ' ಅನಿವಾರ್ಯ ಎಂಬುವುದು ಸ್ಪಷ್ಟ ಪಡಿಸುತ್ತದೆ.

ಅಬೂ ಹುರೈರಾ (ರ)ರಿಂದ ವರದಿ : ಪ್ರವಾದಿ ﷺ ರು ಹೇಳುವುದನ್ನು ನಾನು ಕೇಳಿದೆ ; " ನಾನು ಪ್ರತಿದಿನ ಎಪ್ಪತ್ತಕ್ಕಿಂತಲೂ ಹೆಚ್ಚು ಸಲ ಅಲ್ಲಾಹನೊಂದಿಗೆ ಕ್ಷಮೆ ಕೇಳುತ್ತಿರುತ್ತೇನೆ." (ಬುಖಾರಿ)

ಪ್ರವಾದಿ ﷺ ರು ಪಾಪ ಸುರಕ್ಷಿತರು ಯಾವೊಂದು ಪಾಪವೂ ಪ್ರವಾದಿಯವರಿಂದ ಸಂಭವಿಸದು.ಹೀಗಿದ್ದೂ ಪ್ರತಿನಿತ್ಯ ಅದೇಕೆ ಅಷ್ಟೊಂದು ಬಾರಿ ಅಲ್ಲಾಹನೊಂದಿಗೆ ಕ್ಷಮೆಯಾಚಿಸುತ್ತಿದ್ದರು.?
ಅದು 'ತೌಬಾ'ದ ಮಹತ್ವವನ್ನು ಸಮುದಾಯಕ್ಕೆ ಎತ್ತಿ ತೋರಿಸುವುದಾಗಿತ್ತು..
●●●●●●●●●●●●●●●●●●
ತೌಬಾದ ತಯಾರಿಗಳು

ತೌಬಾ ಮಾಡಲು ಯಾವುದೇ ನಿರ್ಧಿಷ್ಟ ಪದಗಳು ಅಥವಾ ವಾಕ್ಯಗಳಿಲ್ಲ . ಪೈಗಂಬರ್ (ಸ) ತೌಬಾದ ಬಗ್ಗೆ ಹೀಗೆಂದರು: "ಪಾಪ ಮಾಡಿದ ಬಗ್ಗೆ ಖೇದ ಪಡುವುದೇ ತೌಬ,"

ತನ್ನಿಂದುಂಟಾದ ಪ್ರತಿಯೊಂದು ಪಾಪಗಳಿಗಾಗಿಯೂ ತೌಬ ಮಾಡುವುದು ಕಡ್ಡಾಯ .

ತೌಬಾಕ್ಕೆ ಮೂರು ವಿಧಗಳಲ್ಲಿ ತಯಾರಿ ಕೈಗೂಳ್ಳಬೇಕಾಗಿದೆ:

ಪಾಪಗಳ ನಿಂದ್ಯತೆ ,ಅಲ್ಲಾಹನ ಶಿಕ್ಷೆಯ ಭೀಕರತೆ , ಸದ್ರಿ ವಿಷಯದಲ್ಲಿ ತನ್ನ ದೌರ್ಭಲ್ಯ ಇತ್ಯಾದಿಗಳನ್ನು ನೆನಸುತ್ತಾ ತೌಬಾದ ತಯಾರಿ ನಡೆಸಿಕೊಂಡು ತೌಬಾ ಮಾಡಬೇಕಾಗಿದೆ .
●●●●●●●●●●●●●●●●●●

ತೌಬಾದ ಫರ್ಳ್ ( ಕಡ್ಡಾಯ ಘಟಕ)ಗಳು ಮೂರು ;

1. ಪಾಪಗಳಿಂದ ವಿರಮಿಸುವುದು
ತೌಬಾ ಮಾಡುವುದು ನಿಜವಾದ ತೌಬಾ ಆಗಬೇಕಾದರೆ ಪಾಪಗಳಿಂದ ವಿರಮಿಸುವುದು ಕಡ್ಡಾಯ. ಪಾಪಗಳನ್ನು ಮಾಡುತ್ತಲೇ ಅದಕ್ಕೆ ಪಶ್ಚಾತ್ತಾಪ ಪಡುವುದರಲ್ಲಿ ಅರ್ಥವಿಲ್ಲ.

ಪ್ರವಾದಿ ವರ್ಯ (ಸ)ರು ಹೇಳಿದರು: "ಪಾಪಗಳಿಂದ ಪಶ್ಚಾತ್ತಾಪ ಪಟ್ಟವನು ಪಾಪಗಳಿಲ್ಲದವನಂತೆ, ಪಾಪಗಳಲ್ಲೇ ಮುಳುಗಿ ಅದಕ್ಕೆ ಕ್ಷಮೆ ಕೇಳುವುದೆಂದರೆ, ಅವನ ಪ್ರಭುವಿನ ಪರಿಹಾಸ್ಯ ಮಾಡಿದಂತೆ "
_________________________
2. ಮಾಡಿದ ಪಾಪಗಳಿಗಾಗಿ ಖೇದ ಪಡುವುದು.
ಅಲ್ಲಾಹು ನಿಷಿಧ್ಧಗೂಳಿಸಿದ ಕಾರ್ಯವನ್ನು ಯಾವುದೇ ಲಜ್ಜೆಯಿಲ್ಲದೆ ತಾನು ಮಾಡಿ ಬಿಟ್ಟೆನಲ್ಲ ಎಂದು ವ್ಯಥೆ ಪಟ್ಟು ಅತ್ತು ಅಲ್ಲಾಹನಲ್ಲಿ ಕ್ಷಮೆಗಾಗಿ ಬೇಡುವುದು.
_________________________
3. ಸದ್ರಿ ಪಾಪ ಕೃತ್ಯಕ್ಕೆ ಮುಂದೊಮ್ಮೆಯೂ ಮರಳಲಾರೆನೆಂದು ಧ್ರಡ ನಿಶ್ಚಯ ತಾಳುವುದು.

          ನಿಜವಾದ ತೌಬಾ ಮಾಡಿದವನು ಆ ಬಳಿಕ ಮುಂದೊಮ್ಮೆಯೂ ಆ ಪಾಪ ಕೃತ್ಯವಸೆಗಲು ತಯಾರಾಗುವುದಿಲ್ಲ.
_________________________
ಈ ಮೂರು ಸಂಗತಿಗಳ ಪೈಕಿ ಯಾವುದಾದರೊಂದಕ್ಕೆ ದಕ್ಕೆ ಚ್ಯುತಿಯುಂಟಾದರೆ ತೌಬಾ ಸ್ವೀಕಾರರ್ಹವಲ್ಲ.

ಪಾಪಗಳು ಮನುಷ್ಯನಿಗೆ ಸಂಬಂಧಿಸಿದ ಪಾಪ ಕೃತ್ಯವೋ ಆತನಿಂದ ಕ್ಷಮೆ ಪಡೆದು ಅಥವಾ ಅವನ ಹಕ್ಕುಗಳಿಂದ ಮುಕ್ತವಾದ ಬಳಿಕವೇ ಈ ಮೇಲಿನ ಮೂರು ಫರ್ಳ್ ಗಳೊಂದಿಗೆ ತೌಬಾ ಮಾಡಬೇಕಾಗಿದೆ.
●●●●●●●●●●●●●●●●●● 
ಹಲ್ಲೆ,ಲೂಟಿ ,ಅನ್ಯಾಯ ,ಕೊಲೆ ಮುಂತಾದ ದೈಹಿಕ ಅಕ್ರಮಗಳನ್ನೇ ಸಗಿದ್ದರೆ ಪ್ರತಿಕಾರ ತೀರಿಸಲು ಅವನಿಗೆ ಅಥವಾ ಅವನ ವಾರಿಸುದಾರರಿಗೆ ತನ್ನ ದೇಹವನ್ನು ಸಮರ್ಪಿಸಬೇಕು ಅಥವಾ ಅವರಿಂದ ಕ್ಷಮೆ ಪಡಿಯಬೇಕು...
●●●●●●●●●●●●●●●●●●
ಪರನಿಂದನೆ, ಚಾಡಿ, ಸುಳ್ಳಾರೋಪ ಮುಂತಾದ ಮಾನಹಾನಿಕರ ಪಾಪಗಳನ್ನೇ ಸಗಿದ್ದರೆ ಅವುಗಳನ್ನು ಯಾರೊಡನೆ ಮಾಡಿರುವನೋ ಅವರಲ್ಲಿ  ತಾನು ಹೇಳಿರವುದೆಲ್ಲಾ ಸುಳ್ಳೆಂದು ಮನವರಿಕೆ ಮಾಡಿಸಿ ಯಾರ ಬಗ್ಗೆ ಹೇಳಿರುವನೋ ಅವರಲ್ಲಿ ಕ್ಷಮೆ ಯಾಚಿಸಬೇಕು. ಇದು ಅಸಾಧ್ಯವಾದರೆ,ಅಲ್ಲಾಹನ ದಯೆ ಹಾಗೂ ಪಾಪ ಮೋಚನೆಗಾಗಿ ಅವನಿಗೆ ಅಲ್ಲಾಹನೊಡನೆ ಪ್ರಾರ್ಥಿಸುತ್ತಿರಬೇಕು.
●●●●●●●●●●●●●●●●●●

ನಬಿﷺ ರು ಹೇಳಿದರು,: "ನೀನು   ದೂಷಣೆ ಮಾಡಿದವನಿಗಾಗಿ ಕ್ಷಮೆ ಯಾಚಿಸುವುದು ಆ ಪರದೂಷಣೆಗೆ ಪ್ರಾಯಶ್ಚತವಾಗಿದೆ " ಅಲ್ಲಾಹನೇ ನನಗೂ ಅವನಿಗೂ ನೀನು ಕ್ಷಮೆ ನೀಡು ಎಂದು ದುಆ ಮಾಡಬೇಕಾಗಿದೆ.
●●●●●●●●●●●●●●●●●●

ಯಾರು,ಎಲ್ಲಿ, ಎಂದು ಮರಣ ಹೊಂದುವರೆಂದು ಬಲ್ಲವರಾರು.?
ಇದನ್ನು ಅರಿತು ಪ್ರತಿಯೊಬ್ಬರೂ ಪಾಪ ಕಾರ್ಯಗಳಿಂದ ದೂರವಿದ್ದು ತೌಬಾವನ್ನು ಅಧಿಕ ಗೊಳಿಸಿ ಮರಣಕ್ಕೆ ಸಜ್ಜಾಗಿರುವುದು ಅವಶ್ಯಕ .
_________________________
【ಮರಣ ವೇಳೆಯಲ್ಲಿ (ರೂಹ್ ಗಂಟಲು ತಲುಪಿದರೆ ) ಹಾಗು ಪಶ್ಚಿಮ ದಿಕ್ಕಿನಿಂದ ಸೂರ್ಯ ಉದಯಿಸಿದ ಬಳಿಕ ತೌಬಾದ ಬಾಗಿಲು ಮುಚ್ಚಲಾಗುವುದು. ಆ ಬಳಿಕ ಮಾಡುವ ತೌಬಾ ಸ್ವೀಕಾರಾರ್ಹವಲ್ಲ】
_________________________
ತೌಬಾದ ಬಾಗಿಲನ್ನು ನಮ್ಮಿಂದ ಮುಚ್ಚಲಾಗಿ ಈ ಲೋಕಕ್ಕೆ ನಾವು ವಿದಾಯ ಹೇಳಬೇಕಾಗುವ ದೌರ್ಭಾಗ್ಯಕರ  ಸನ್ನಿವೇಶ ನಮಗೆದುರಾಗುವ ಮುನ್ನವೇ ಪಾಪ ಮುಕ್ತರಾಗಿ ಅಲ್ಲಾಹನ ಕಡೆಗೆ ಓಗೊಡಲು ನಾವು ಸಜ್ಜಾಗಿರೋಣ .
●●●●●●●●●●●●●●●●●●
ತೌಬಾವನ್ನು ಮತ್ತೆ - ನಾಳೆ ಎಂದು ಮುಂದೂಡದೆ ಸಿಕ್ಕಿದ ಸಮಯವೇ ಅಮೂಲ್ಯವೆಂದು ಅದನ್ನು ಸದುಪಯೋಗಪಡಿಸಿ ಸದಾ ಮರಣದ ತಯಾರಿಯಲ್ಲಿರಬೇಕಾದುದು ಸತ್ಯವಶ್ವಾಸಿಯ ಕರ್ತವ್ಯ ...
●●●●●●●●●●●●●●●●●●
ಗಮನಿಸಿ
【ತೌಬ ಸಾಮಾನ್ಯವಾಗಿ ತಂಬುರಾನೆ ಎಂಬ ಪದ ಬಳಕೆಯಿಂದ ಕೂಡಿದ್ದು ಆ ಪದ ಬಳಕೆಯನ್ನು ನಿರುತ್ಸಾಹಗೊಳಿಸಿ *ಅಲ್ಲಾಹ್* ಎಂಬ ನಾಮವನ್ನು ಉಚ್ಛರಿಸಬೇಕೆಂದು ಪಂಡಿತರ ಅಭಿಪ್ರಾಯವಾಗಿದೆ.】

✍🏼 ಶಿಹಾಬ್ ಅಲ್ ವಫಾ
         ಕೊಳಕೇರಿ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...