Skip to main content

ಮರಣದ ಕಠಿಣತೆ

ಮರಣದ ಕಠಿಣತೆ
كلّ نفسٍ ذائقة الموت
〰〰〰〰〰〰〰〰〰
ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು. ಕಬ್ಬಿಣದ ಮುಳ್ಳುಗಳಿಂದ ತುಂಬಿದ ಹಾಸಿಗೆಯಲ್ಲಿ ಒಬ್ಬನನ್ನು ಮಲಗಿಸಿ ನಂತರ ಅವನ ಕಾಲನ್ನು ಹಿಡಿದು ಎಳೆದರೆ ಹೇಗಿರಬಹುದು ಆ ರೀತಿಯಾಗಿದೆ ಮರಣದ ವೇದನೆ.
⚪⚪⚪⚪⚪⚪⚪⚪⚪
ಇಸ್ರಾಯೀಲ್ ನ ಒಂದು ತಂಡ ಯಾತ್ರೆಯಲ್ಲಿ ಸಾಗುತ್ತಿರುವಾಗ ಒಂದು ಖಬರ್ ಸ್ಥಾನ ಕಂಡಿತು. ಅವರು ಆ ಖಬರ್ ಸ್ಥಾನಕ್ಕೆ ಹೊಗಿ ಮರಣ ಹೊಂದಿದವರ ಮಗ್ಫಿರತ್ಗಾಗಿ ದುವಾ ಮಾಡಿದರು. ಆ ಸಂದರ್ಭದಲ್ಲಿಒಂದು ಖಬರ್ ಸೀಳಾಗಿ ಅದರೊಳಗಿಂದ ಒಂದು ವ್ಯಕ್ತಿ ಹೊರಬಂದರು. ಅವರ ಹಣೆಯಲ್ಲಿ ಸುಜೂದಿನ ಕಲೆ ಇತ್ತು. ಅವರು ಹೇಳಿದರು ನಾನು ಮರಣ ಹೊಂದಿ ನೂರು ವರ್ಷಗಳಾಯಿತು ಆದರೊ ನನ್ನ ಮರಣದ ವೇದನೆ ಇನ್ನೂ ಹೊಗಿಲ್ಲ ನೀವೆಲ್ಲರೂ ನನಗೆ ಆ ವೇದನೆ ಹೂಗಲು ಅಲ್ಲಾಹನೊಂದಿಗೆ ಪ್ರಾರ್ಥಿಸಿರಿ ಎಂದು ಹೇಳಿ ಆ ವ್ಯಕ್ತಿ ಖಬ್ ರಿನ ಒಳಗೆ ಹೂಯಿತು.
⚫⚫⚫⚫⚫⚫⚫⚫⚫
ಇಬ್ರಾಹೀಮ್ ನೆಬಿ ಅಲೈಹಿಸ್ಸಲಾಂ ರವರಲ್ಲಿ ಅಲ್ಲಾಹನು ಅವರ ಮರಣದ ಅನುಭವವನ್ನು ಕೇಳಿದಾಗ ಖಲೀಲುಲ್ಲಾಹಿ ಇಬ್ರಾಹೀಂ ಅಲೈಹಿಸ್ಸಲಾಂ ಹೇಳಿದರು. ಅದು ತುಂಬಾ ಕಷ್ಟವಾಗಿತ್ತು. ಕಬ್ಬಿಣದ ಸಲಾಕೆಯಿಂದ ಶರೀರದ ತುದಿಯವರೆಗೆ ತಿವಿದು ನಂತರ ಅದನ್ನು ಹೂರೆಗೆ ಎಳೆದ ಅನುಭವವಾಗಿದೆ ಎಂದಾಗ ಅಲ್ಲಾಹನು ಹೇಳಿದನು ಅದು ಸುಲಭದ ಮರಣವಾಗಿದೆ.
🔴🔴🔴🔴🔴🔴🔴🔴🔴
ಮೂಸಾ ನೆಬಿ ಅಲೈಹಿಸ್ಸಲಾಂ ರವರಲ್ಲಿ ಅಲ್ಲಾಹನು ಮರಣದ ಅನುಭವ ಕೇಳಿದಾಗ ಕಲೀಮುಲ್ಲಾಹಿ ಮೂಸಾ ಅಲೈಹಿಸ್ಸಲಾಂ ಹೇಳಿದರು. ಜೀವಂತವಿರುವ ಆಡನ್ನು ಝಬಹ್ ಮಾಡದೆ ಅದರ ಸಿಪ್ಪೆಯನ್ನು ಎಳೆದರೆ ಆಗುವ ಅನುಭವ ಹೇಗಿರುತ್ತದೂ ಆ ಅನುಭವ ಆಗಿದೆ ಎಂದು ಹೇಳಿದಾಗ ಅಲ್ಲಾಹು ಹೇಳುತ್ತಾನೆ ಅದು ಸುಲಭದ ಮರಣವಾಗಿದೆ.
🔵🔵🔵🔵🔵🔵🔵🔵🔵
ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮರಾಣಾಸನ್ನ ವೇಳೆ ನೋವಿನಿಂದ ಅಝ್ರಾಯೀಲ್ ಅಲೈಹಿಸ್ಸಲಾಂರವರಲ್ಲಿ ಹೇಳುತ್ತಾರೆ ಅಝ್ರಾಯೀಲರೆ ಜ್ವರದಿಂದ ನನ್ನ ಶರೀರ ನೋವಿನಿಂದ ಕೂಡಿದೆ ಸ್ವಲ್ಪ ಮ್ರುದುವಾಗಿ ನನ್ನ ರೂಹನ್ನು ಹಿಡಿಯಿಯಿರಿ. ಆ ಸಂದರ್ಭದಲ್ಲಿ ಅಝ್ರಾಯೀಲ್  (ಅ) ಹೇಳುತ್ತಾರೆ ನೆಬಿಯವರೇ ನಿಮ್ಮ ರೂಹಿನ ಹಾಗೆ ಯಾರ ರೂಹನ್ನು ಕೂಡಾ ನಾನು ಹಿಡಿಯಲಿಲ್ಲ. ಆದರೆ ಶರೀರದಿಂದ ರೂಹನ್ನು ಬೇರ್ಪಡಿಸುವುದು ಅದು ತುಂಬಾ ಕಷ್ಟದ ಕೆಲಸವಾಗಿದೆ. ಈ ರಂಗವನ್ನು ನೋಡುತ್ತಿದ್ದ ಜಿಬ್ರೀಲ್ ಅಲೈಹಿಸ್ಸಲಾಮರು ದು:ಖ ಸಹಿಸಲಾಗದೆ ತನ್ನ ಮುಖವನ್ನು ಹಿಂದೆ ತಿರುಗಿಸಿದರು.

ಮರಣದ ತೀವ್ರತೆಯಿಂದ ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಆ ಪವಿತ್ರ ಪ್ರಜ್ವಲಿಸುವ ಮುಖವು ಕೆಂಪಾಗಿತ್ತು. ಒಂದು ಪಾತ್ರೆಯ ನೀರನ್ನು ತನ್ನ ಕೈಯಲ್ಲಿ ತೆಗೆದು ಹಲವು ಬಾರಿ ಮುಖಕ್ಕೆ ಹಾಕುತ್ತಿದ್ದರು.

ಮರಣದ ವೇಳೆ ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು "ಮರಣ ತುಂಬಾ ಕಠಿಣವಾಗಿದೆ ಮರಣ ತುಂಬಾ ಕಠಿಣವಾಗಿದೆ" ಎಂದು ಹೇಳುತ್ತಿದ್ದರು. ಆ ಕಠಿಣತೆಯ ಸಂದರ್ಭದಲ್ಲಿ ಕೂಡಾ ನಮ್ಮ ಬಗ್ಗೆ ವಿಶೇಷವಾಗಿ ಗಮನಹರಿಸಿದ ಒಬ್ಬರೇ ಒಬ್ಬ ನಾಯಕರು ಕಾರುಣ್ಯದ ಕಡಲು ರಹ್ಮತುಲ್ಲಿಲ್ ಆಲಮೀನ್ ತ್ವಾಹಾ ರಸೂಲಲ್ಲಾಹ್ " ಓ ಪ್ರೇಮ ಬಾಜನರೇ ತಮಗಿದೋ ಸಾವಿರ ಸಾವಿರ ಸಲಾಂ😭"
🌴🌴🌴🌴🌴🌴🌴🌴🌴
ಅಲ್ಲಾಹುವಿನ ಪ್ರವಾದಿಗಳಿಗೆಯೇ ಈ ಸ್ತಿತಿಯಾದರೆ ಅದೂ ಕೂಡಾ ಉಲುಲ್ ಅಝ್ಮ್ ಗಳಲ್ಲಿ ಒಳಪಟ್ಟವರು  ಅದರಲ್ಲೂ "ಖಲೀಲುಲ್ಲಾಹ್" "ಕಲೀಮುಲ್ಲಾಹ್" ಎಂಬ ಉನ್ನತ ಮಟ್ಟದ ಬಿರುದು ಲಭಿಸಿದವರು ಎಲ್ಲಕ್ಕಿಂತಲೂ ಮಿಗಿಲಾಗಿ ವಿಶ್ವವೇ ಉಂಟಾಗಲು ಕಾರಣಕರ್ತರಾದ ಲೊಕದ ಕನ್ಮಣಿ ರಹ್ಮತುಲ್ಲಿಲ್ ಆಲಮೀನ್ ಸೆಯ್ಯಿದುನಾ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಕೂಡಾ ಮರಣದ ಸಂದರ್ಭದಲ್ಲಿ ಕಠಿಣತೆ ಆಗಿದ್ದರೆ ನಮ್ಮ ಸ್ತಿತಿ...❓
🍁🍁🍁🍁🍁🍁🍁🍁🍁
ಒಂದು ಸಣ್ಣ ಮುಳ್ಳು ಚುಚ್ಚಿದರೆ ಅಥವಾ ಇರುವೆ, ಜೇನು ನೊಣ ಮುಂತಾದ ಸಣ್ಣ ಸಣ್ಣ ಜಂತುಗಳು ಕಚ್ಚಿದಾಗ ನಾವು ಅಸಹ್ಯವಾದ ನೋವಿನಿಂದ ಚೀರಾಡುತ್ತೇವೆ ಆದರೆ ಎಷ್ಟೋ ಪಟ್ಟು ನೋವಿನ ಅನುಭವವಾಗುವ ಮರಣದ ಸಂದರ್ಭದಲ್ಲಿ ಮನುಷ್ಯನು ಒಂದೇ ಒಂದು ಅಂಗಾಂಗ ಕೂಡ ಅಲುಗಾಡಿಸುವುದಿಲ್ಲ ಅದಕ್ಕೆ ಕಾರಣ ಮರಣ ಸಂದರ್ಭದಲ್ಲಿ  ಅಝ್ರಾಯೀಲ್ ಅಲೈಹಿಸ್ಸಲಾಂ ಪ್ರತ್ಯಕ್ಶರಾಗುವಾಗ ಅವರಿಗೆ ಕೆಲವು ಸಹಾಯಕ ಮಲಕುಗಳು ಇರುತ್ತಾರೆ. ಅಝ್ರಾಯೀಲ್ ಅಲೈಹಿಸ್ಸಲಾಂ ಆತ್ಮವನ್ನು ಶರೀರದಿಂದ ಬೇರ್ಪಡಿಸುವಾಗ ಆ ಸಹಾಯಕ ಮಲಕುಗಳು  ಶರೀರದ ಪ್ರತೀಯೊಂದು ಅವಯವಗಳನ್ನು ಹಿಡಿದಿರುತ್ತಾರೆ ಆ ಹಿಡಿತದಿಂದ ಸ್ವಲ್ಪವೂ ಕೂಡಾ ಸಡಿಲಗೊಳಿಸಲು ಸಾಧ್ಯವಿಲ್ಲ. ಮಲಕುಗಳ ಹಿಡಿತ ಅಷ್ಟೊಂದು ಶಕ್ತಿಯುತವಾಗಿ ಇರುತ್ತದೆ ಈ ಕಾರಣದಿಂದಾಗಿದೆ ಮನುಷ್ಯನು ಸ್ವಲ್ಪ ಕೂಡಾ ಅಲುಗಾಡದೆ ಇರುವುದು. ಒಂದು ವೇಳೆ ಮಲಕುಗಳೇನಾದರೂ ಆ ರೀತಿ ಹಿಡಿಯದಿದ್ದರೆ ಮನುಷ್ಯನು ಸಕರಾತಿನ ತೀವ್ರತೆಯಿಂದ ನೂವು ಸಹಿಸಲಾಗದೆ ಕಾಡುಗಳಿಗೂ ಮೈದಾನಗಳಿಗೂ ಓಡುತ್ತಿದ್ದನು ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ.
🍃🍃🍃🍃🍃🍃🍃🍃🍃
ಅಝ್ರಯೀಲ್ (ಅ) ಎಲ್ಲಾ ಜೀವಜಾಲಗಳ ಆತ್ಮವನ್ನು ಹಿಡಿದ ನಂತರ ಅಲ್ಲಾಹು ಮತ್ತು ಮಲಕುಲ್ ಮೌತ್ ಅಝ್ರಾಯೀಲ್ (ಅ) ಮಾತ್ರ ಬಾಕಿಯಾಗುತ್ತಾರೆ ಅಲ್ಲಾಹು ಅಝ್ರಾಯೀಲ್ (ಅ) ರ ಆತ್ಮವನ್ನು ಅವರೊಂದಿಗೆಯೇ ಹಿಡಿಯಲು ಆಜ್ನಾಪಿಸುತ್ತಾನೆ (ಅಲ್ಲಾಹು ಆತ್ಮಹತ್ಯೆಯನ್ನು ಸಮ್ಮತ ಗೊಳಿಸಿದ್ದು ಅಝ್ರಾಯೀಲ್ (ಅ) ರಿಗೆ ಮಾತ್ರ). ಅಝ್ರಾಯೀಲ್ (ಅ) ತನ್ನ ಆತ್ಮವನ್ನು ತಾನೇ ಹಿಡಿಯಲಾರಂಬಿಸುತ್ತಾರೆ. ರೂಹ್ ಗಂಟಲವರೆಗೆ ತೆಗೆದು ನಂತರ ಹೇಳುತ್ತಾರೆ. "ಮರಣಕ್ಕೆ ಇಷ್ಟೊಂದು ಕಠಿಣತೆ ಇದೆಯೆಂದು ನನಗೆ ಗೊತ್ತಿರುತ್ತಿದ್ದರೆ ಒಂದೇ ಒಂದು ಜೀವಿಯ ಆತ್ಮವನ್ನು ನಾನು ಹಿಡಿಯುತ್ತಿರಲಿಲ್ಲ". ಎಷ್ಟೋ ಅತ್ಮವನ್ನು ಕಿತ್ತು ಕೊಂಡು ಹೊದ ಮಲಕುಲ್ ಮೌತ್ ಅಝ್ರಾಯೀಲ್ (ಅ) ರವರಿಗೆ ಕೂಡಾ ಮರಣದ ಕಠಿಣತೆಯ ಪೂರ್ಣರೂಪ ಗೊತ್ತಿಲ್ಲ ಅದು ಅನುಭವಿಸುವಾಗಲೇ ಎಲ್ಲರಿಗೂ ಅದರ ಕಠಿಣತೆ ಪೂರ್ಣವಾಗಿ ಗೊತ್ತಾಗುವುದು. "ಮರಣದ ರುಚಿಯನ್ನು ಎಲ್ಲರಿಗೂ ಸವಿಯಲಿಕ್ಕಿದೆ" (ಖುರ್ ಆನ್) ಇದರಲ್ಲಿ ಯಾರಿಗೂ ಸಂಶಯವಿಲ್ಲ. ಆದರೆ ಎಷ್ಟೇ ನೋವಿದ್ದರೊ ಕೂಡಾ ಸತ್ಯ ವಿಶ್ವಾಸಿಯ ಪಾಲಿಗೆ ಮರಣವೆಂಬೂದು ಹೂ ಪುಷ್ಬ💐 ಇದ್ದಂತೆ ಕಾರಣ ನಂತರ ಅವನು ಸುಖಾಡಂಬರಗಳ ಲೊಕಕ್ಕೆ ಪಾದಾರ್ಪನೆ ಗೆಯ್ಯುವ ತವಕದಲ್ಲಿರುತ್ತಾನೆ.
⚜⚜⚜⚜⚜⚜⚜⚜⚜
ಪವಿತ್ರ ಖುರ್ ಆನಿನ ಹದಿಮೂರನೇ ಅಧ್ಯಾಯ ಸೂರತುರ್ರಹ್ದ್ ನಿತ್ಯ ಪಾರಾಯಣ ಮಾಡುವವರಿಗೆ ಮರಣದ ಸಂದರ್ಭದಲ್ಲಿ ಅದರ ಕಠಿಣತೆಯಿಂದ  ರಿಯಾಯಿತಿ ದೊರಕುತ್ತದೆ.
ಅಲ್ಲಾಹು ಪಾರಾಯಣ ಮಾಡಲು ತೌಫೀಖ್ ನೀಡಲಿ. ಸೌಮ್ಯವಾಗಿ ರೂಹ್ ಹಿಡಿಯುವವರ ಕೂಟದಲ್ಲಿ ನಮ್ಮೆಲ್ಲರನ್ನು ಸೇರಿಸಲಿ "ಆಮೀನ್"
➖➖➖➖/السلام علیکم ورحمة الله وبركاته😊

*ದೈನಂದಿನ ಹದೀಸ್-08/06/2017*
******************************
ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಅಲ್ಲಾಹನು(ದೇವಚರರೊಂದಿಗೆ)ಹೇಳುತ್ತಾನೆ - ನನ್ನ ದಾಸ ಒಂದು ದುಷ್ಕರ್ಮ ಮಾಡಬಯಸಿದ್ದು, ಅದನ್ನು ಮಾಡುವ ವರೆಗೆ ನೀವು ಅದನ್ನು ಬರೆಯಬಾರದು. ಅವನು ಅದನ್ನು ಮಾಡಿಬಿಟ್ಟರೆ ನೀವು ಅವನ ಖಾತೆಯಲ್ಲಿ ಅದನ್ನಷ್ಟೇ ಬರೆಯಿರಿ. ಇನ್ನು, ನನ್ನನ್ನು ಸ್ಮರಿಸಿ ಆತನು ಆ ದುಷ್ಕರ್ಮ ಮಾಡದೆ ಇದ್ದರೆ ಅವನ ಖಾತೆಯಲ್ಲಿ ಒಂದು ಪುಣ್ಯ ಬರೆಯಿರಿ. ಅವನು ಒಂದು ಸತ್ಕರ್ಮ ಮಾಡಬಯಸಿದ್ದು ಅದನ್ನು ಮಾಡದೆ ಇದ್ದರೆ ಅವನ ಖಾತೆಯಲ್ಲಿ ಒಂದು ಪುಣ್ಯವನ್ನು ಬರೆಯಿರಿ. ಇನ್ನು, ಅವನು ಒಂದು ಸತ್ಕರ್ಮ ಮಾಡಬಯಸಿ, ಅದನ್ನು ಮಾಡಿದರೆ ಅವನ ಖಾತೆಯಲ್ಲಿ ಹತ್ತರಿಂದ ಏಳ್ನೂರು ಪಟ್ಟು ವರೆಗೆ ಪುಣ್ಯ ಬರೆಯಿರಿ.   *(ಸಹೀಹ್ ಬುಖಾರಿ)*                                                                   🏼 *ಈದ್ ಗೆ ಹೊಸ ಉಡುಪು ಖರೀದಿಸುವ ಮೊದಲು...*👌🏼

👉🏿 *ಹಝ್ರತ್ ಉಮ್ಮು  ಝಫರ್(ರ) ಎಂಬ ಮಾತೆಯ ಉನ್ನತ  ಚಾರಿತ್ತ್ಯ  ಇಸ್ಲಾಮೀ ಇತಿಹಾಸದ ಪುಟಗಳಲ್ಲಿ ಕಂಗೊಳಿಸುತ್ತಿದೆ. ಅನಾರೋಗ್ಯದ ಮಧ್ಯೆಯೂ ಅವರು ಕುರ್ ಆನ್ ಮತ್ತು ಹದೀಸ್ ನಂತೆ ಬದುಕುತ್ತಿದ್ದರು. ಅಲ್ಲಾಹನ ಶರೀಅತನ್ನು ಅವರು ಅಪಾರವಾಗಿ ಗೌರವಿಸುತ್ತಿದ್ದರು. ಒಮ್ಮೆ ಅವರು ಪ್ರವಾದಿ(ಸ)ರೊಂದಿಗೆ, ಪ್ರವಾದಿವರ್ಯರೇ(ಸ) "ನನಗೆ ಅಪಸ್ಮಾರ ಬಾಧಿಸಿದಾಗ ನಾನು ಮೂರ್ಛೆ ತಪ್ಪುತ್ತೇನೆ. ಆವಾಗ ನನ್ನ ಮೈ ಕೈಯ ಪ್ರಜ್ನೆ ನನಗಿರುವುದಿಲ್ಲ. ನನ್ನ ಬಟ್ಟೆ ಬಿಚ್ಚಿ ಬಿಡುತ್ತದೆ. ನೀವು ನನಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿರಿ.*

👉🏿 *ಆ ಮಾತೆಯ ಸಮಸ್ಯೆ ಆಲಿಸಿದ ಪ್ರವಾದಿ(ಸ)ರ ಉತ್ತರ, "ನೀವು ಸಹನೆ ವಹಿಸುವುದಾದರೆ, ಅಲ್ಲಾಹನು ನಿಮಗೆ ಸ್ವರ್ಗ ದಯಪಾಲಿಸುವನು. ನಿಮ್ಮ ಸ್ಥಾನ "ಜನ್ನತ್" ಆಗಿರುವುದು ಮತ್ತು ನೀವು ಬಯಸುವುದಾದರೆ, ನಿಮ್ಮ ಅನಾರೋಗ್ಯ ದೂರವಾಗಲು, ನಿಮಗೆ 'ಆಫಿಯತ್' ಸಿಗಲು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ." ಉಮ್ಮು ಝಫರ್(ರ)  ಮತ್ತೆ ತಡಮಾಡಲಿಲ್ಲ. ಪ್ರವಾದಿ(ಸ)ರೊಂದಿಗೆ,*
*"ಪ್ರವಾದಿವರ್ಯರೇ(ಸ)! ನಾನು ಖಂಡಿತ ಸಹನೆ ವಹಿಸುವೆನು. ಆದರೆ ಆ ಸಂದರ್ಭದಲ್ಲಿ ನನ್ನ ಬಟ್ಟೆ ಬಿಚ್ಚಿ ಬಿಡುವುದನ್ನು ಭಯಪಡುತ್ತೇನೆ. ನಾನು ನಗ್ನಳಾಗದಂತೆ ನನಗಾಗಿ ನೀವು ಪ್ರಾರ್ಥಿಸಿರಿ." ಪ್ರವಾದಿ(ಸ) ಆ ಮಾತೆಗಾಗಿ ಪ್ರಾರ್ಥಿಸಿದರು.*

👉🏿 *ಹೌದು! ಪರ್ದಾ ಹೆಣ್ಣಿನ ಗೌರವ ಮತ್ತು ಅಭಿಮಾನದ ಸಂಕೇತವಾಗಿದೆ. ಅದು ಸತ್ಯವಿಶ್ವಾಸಿ ಮಹಿಳೆಯರ  ಸಮವಸ್ತ್ರವಾಗಿದೆ. ಪರ್ದಾದ ಅಗತ್ಯತೆಯನ್ನು ವಿವರಿಸಿದ ಪವಿತ್ರ ಕುರ್ ಆನ್, "ಅವರು ಗುರುತಿಸಲ್ಪಡು ವಂತಾಗಲಿಕ್ಕೂ ಸತಾಯಿಸಲ್ಪಡದಿರಲಿಕ್ಕೂ ಇದು ಹೆಚ್ಚು ಸೂಕ್ತ ನಿಯಮ"ವೆಂದು ಸಾರಿತು. ಇತಿಹಾಸದುದ್ದಕ್ಕೂ ಮುಸ್ಲಿಮ್ ಸ್ತ್ರೀಯರು ಪರ್ದಾದ ಪಾವಿತ್ರ್ಯತೆಯನ್ನು ಸದಾ ಕಾಪಾಡಿಕೊಂಡು ಬಂದರು. ಆ ಮೂಲಕ ಸಮಾಜದಲ್ಲಿ ತಾಂಡವವಾಡುತ್ತಿದ್ದ ಅನೈತಿಕತೆ, ಅಶ್ಲೀಲತೆ, ವ್ಯಬಿಚಾರ, ಅತ್ಯಾಚಾರ, ಸ್ತ್ರೀ ಶೋಷಣೆಗಳಿಗೆ ಕಡಿವಾಣ ಹಾಕಲಾಯಿತು.*

*ಎಲ್ಲಿಯ ತನಕವೆಂದರೆ, "ನನ್ನ ಮಯ್ಯತ್ತನ್ನು ಕಬರಸ್ಧಾನಕ್ಕೆ ಕೊಂಡೊಯ್ಯುವಾಗ, ಅನ್ಯ ಪುರುಷರು ನನ್ನ ಕಫನ್ ಬಟ್ಟೆಯನ್ನೂ ಕಾಣದಂತೆ  ಸೂಕ್ಷ್ಮತೆ  ಪಾಲಿಸುವಂತೆ" ವಸಿಯ್ಯತ್ ಮಾಡಿದ ಮಹಿಳಾ ರತ್ನಗಳ ಉನ್ನತ ಚಾರಿತ್ತ್ಯ  ಇಸ್ಲಾಮಿನ  ಚರಿತ್ರೆಯ ಪುಟಗಳಲ್ಲಿ ಇಂದಿಗೂ ಶೋಭಿಸುತ್ತಿದೆ.*

👉🏿 *ಆದರೆ, ಇಂದು ಮುಸ್ಲಿಮರೇ ಪರ್ದಾದ ಪಾವಿತ್ತ್ಯತೆಯನ್ನು ಫ್ಯಾಶನ್ ನ ಹೆಸರಲ್ಲಿ  ಕೆಡಿಸಿದ್ದಾರೆ. ದೇಹದ ಉಬ್ಬು ತಗ್ಗುಗಳು ಗೋಚರಿಸುವ ಬನಿಯನ್ ಟೈಪುಗಳು, ಕಣ್ಣು ಕೋರೈಸುವ ವಿವಿಧ ಬಣ್ಣಗಳು, ನೈಟಿ ಧರಿಸಿದ್ದೋ - ಬುರ್ಖಾ ಧರಿಸಿದ್ದೋ ಎಂದು ಗೊಂದಲವನ್ನುಂಟು ಮಾಡಿ ಜನರ ದೃಷ್ಟಿ ತನ್ನತ್ತ ಬೀರುವಂತೆ  ಪ್ರೆರೇಪಿಸುವ ಕೈಯ ರೆಟ್ಟೆಗೊಂದು ಬಣ್ಣ ಎದೆಗೊಂದು ಬಣ್ಣ, ಟೈಟ್ ಫಿಟ್ ಹಾಗೂ  ಅದನ್ನು ಮತ್ತಷ್ಟು ಬಿಗಿಗೊಳಿಸುವ ನಾಡೆಗಳು, ಬಟರ್ ಫ್ಲೈ ಸಂಸ್ಕಾರಗಳು ಸಮುದಾಯವನ್ನು ನಗೆಪಾಟಲೀ ಗೀಡಾಗಿಸುತ್ತಿವೆ. ಹೌದು! ಬಹಳ ನೋವಿನ ಸಂಗತಿಯೆಂದರೆ, ತೌಹೀದನ್ನು ಹೊತ್ತು ನಡೆಯುವವರೂ ಈ ಮಾಲಿನ್ಯದ ಬಲೆಯಲ್ಲಿ ಸಿಲುಕಿ ಕೊಂಡಿದ್ದಾರೆ. ಒಟ್ಟಿನಲ್ಲಿ  ಆಧುನಿಕ  ಬುರ್ಖಾಗಳು ತನ್ನ ಮೂಲ ಉದ್ದೇಶವನ್ನು ಮರೆತು ಲಜ್ಜೆಯನ್ನೇ ಪಣಕ್ಕಿಟ್ಟದೆ. ಪರ್ದಾ ಧರಿಸಿಯೂ ಧರಿಸದಂತಹ, ಬಟ್ಟೆ ತೊಟ್ಟೂ ತೊಡದಂತಹ ಅವಸ್ಥೆ‌ ಮರುಕ ಹುಟ್ಟಿಸುವಂತಿದೆ. ಸ್ವಹಾಬಿ ವನಿತೆಯರ ಪರ್ದಾದ ಪಾಲನೆ ಅನ್ಯ ಪುರುಷರು ಕಣ್ಣೆತ್ತಿಯೂ ನೋಡದಷ್ಟು ಪಾವಿತ್ರ್ಯತೆಯಿಂದ ಕೂಡಿತ್ತು‌. ಅಂದರೆ ಅದು ಕಣ್ಣಿನ ವ್ಯಬಿಚಾರಕ್ಕೂ ದೊಡ್ಡ  ತಡೆಗೋಡೆಯಾಗಿತ್ತು. ಪರ್ದಾದ ಗೌರವ ಮತ್ತು ಗಾಂಭೀರ್ಯ ಅವರಲ್ಲಿತ್ತು.*

👉🏿 *ಆಧುನಿಕ ಮುಸ್ಲಿಮ್ ಮಹಿಳೆಯರು ಫ್ಯಾಶನ್ ನ ಹೆಸರಲ್ಲಿ ದಿನಕ್ಕೊಂದರಂತೆ ಮಾರ್ಕೆಟಿಗೆ  ತರುವ ಪರ್ದಾಗಳು ಸಮುದಾಯಕ್ಕೆ ದೊಡ್ಡ ಸವಾಲಾಗಿದೆ. ಈ ಅಪರಾಧದಲ್ಲಿ ಸ್ತ್ರೀಯರಂತೆ ಪುರುಷರಿಗೂ ಪಾಲಿದೆ. ಅವರು ಕಂಡೂ ಕಾಣದಂತೆ ನಟಿಸುತ್ತಿದ್ದಾರೆ. ಬುರ್ಖಾ ಧರಿಸಿಯೂ ಒಳ ಡ್ರೆಸ್ ಕಾಣಿಸಿ ಕೊಡಲು ಮತ್ತು ಹೆಜ್ಜೆಗೆ  ಧರಿಸಿದ ಬಂಗಾರದ ಗೆಜ್ಜೆ  ಕಾಣಿಸಿಕೊಡುವ ಅಹಂಕಾರದಲ್ಲಿ ಬುರ್ಖಾವನ್ನೇ ಎತ್ತಿ ಹಿಡಿಯುವ, ಕೆಲವೊಮ್ಮೆ  ಕಾಲ್ ರಿಸೀವ್ ಮಾಡಿದರೆ, ಎಲ್ಲಿ ತನಕ ಎತ್ತಿ ಹಿಡಿಯುತ್ತಿದ್ದೇನೆಂಬ ಪ್ರಜ್ನೆಯೂ ಇಲ್ಲದ ಅವಸ್ಥೆ ಸಮುದಾಯಕ್ಕೆ ದೊಡ್ಡ  ಶಾಪವಾಗಿದೆ. ಮುಂಗೈ ಮುಚ್ಚಿ ಪಾದಗಳ ನಗ್ನತೆ ಎತ್ತಿ ತೋರಿಸುವ ಸಂಸ್ಕಾರ ಎಲ್ಲಿಂದ ಎರವಲು  ಪಡೆದದ್ದೋ ಒಂದೂ ಅರ್ಥವಾಗುತ್ತಿಲ್ಲ. ಕಾರಣ,  ಮುಂಗೈಕ್ಕಿಂತಲೂ ಪ್ರಾಧಾನ್ಯತೆ ಇರುವುದು ಪಾದ ಮುಚ್ಚಲಿಕ್ಕಲ್ಲವೇ?*

👉🏿 *ಹಝ್ರತ್  ಉಮ್ಮು ಝಫರ್(ರ) ಅನಾರೋಗ್ಯದ ಮಧ್ಯೆ,  ಸಹಜವಾಗಿ ಪ್ರಕಟವಾಗುವುದಕ್ಕೇ ನಡುಗಿ ಹೋದರು. ಅವರು ಓದಿದ ಅದೇ ಕುರ್ ಆನನ್ನಲ್ಲವೇ ನಾವು ಓದುತ್ತಿರುವುದು. "ಲಜ್ಜೆ ಈಮಾನಿನ ಭಾಗವೆಂದು" ಕಲಿಸಿದ ಪ್ರವಾದಿವರ್ಯರ(ಸ) ಅನುಯಾಯಿಗಳಲ್ಲವೇ ನಾವೆಲ್ಲ? ನಮ್ಮಲ್ಲೇಕೆ ಬದಲಾವನೆಗಳು ಬರುತ್ತಿಲ್ಲ?*
👉🏿 *ನೆನಪಿಡಿ, ಆಯಿಶಾ(ರ)ರ ಸಮೂಹದಲ್ಲಿ ಅಶ್ಲೀಲತೆ - ನಗ್ನತೆಯನ್ನು ಬಿತ್ತಿ ಬೆಳೆಸುವವರು, ಫಾತಿಮಾ(ರ)ರ ಪರ್ದಾದ ಪಾವಿತ್ತ್ಯತೆಯನ್ನು ಹಾಳು ಮಾಡುವವರು ಅಲ್ಲಾಹನ ಶಾಪಕ್ರೋಧಕ್ಕೆ ಪಾತ್ರರೆಂದು ಕುರ್ ಆನ್ ಎಚ್ಚರಿಸಿದೆ. ಸೂರಃ ಅಹ್ ಝಾಬ್ ಮತ್ತು ಅನ್ನೂರ್ ಅಧ್ಯಾಯಗಳನ್ನು ಇಂದೇ ಪರಿಶೀಲಿಸಿ ನೋಡಿ.*
👉🏿 *ಹಾಗೆಯೇ, ಅಶ್ಲೀಲತೆ ಬೆತ್ತಲೆ ಸಂಸ್ಕಾರಗಳಿಂದ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವರು ಸ್ವರ್ಗ ಪ್ರವೇಶಿಸಲಾರರು  ಮಾತ್ರವಲ್ಲ ಸ್ವರ್ಗದ ಸುವಾಸನೆಯನ್ನೂ ಆಸ್ವದಿಸಲಾರರೆಂಬ ಪ್ರವಾದಿವರ್ಯರ(ಸ)ರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸೋಣ!  ಆದ್ದರಿಂದ ಹೊಸ ಬಟ್ಟೆ ಖರೀದಿಸುವ ಮೊದಲು ಶರೀಅತ್ ನ ಸಮಗ್ರ ಬೇಡಿಕೆಯನ್ನು ಈಡೇರಿಸುವ  ಒಂದೊಳ್ಳೊಯ ಪರ್ದಾವನ್ನು ಇಂದೇ ಖರೀದಿಸೋಣ! ಅಂತಹ ಬದಲಾವಣೆಯ ಕಿಡಿಗಳು  ಸಮುದಾಯದಲ್ಲಿ  ಎದ್ದು ಬರಲಿ. ಒಂದಿಂಚೂ ಬಿಡದೆ ಕಫನ್ ನೊಂದಿಗೆ ದಫನವಾಗುವ ನಮ್ಮ ಬದುಕು ಬಹಳ ಸಣ್ಣದು. ಅಂದರೆ ನಾವೆಲ್ಲ ಮರಣಕ್ಕೆ ನಿಕಟರಾಗುತ್ತಿದ್ದೇವೆ. ಆದರೆ ನೆನಪಿರಲಿ! ಬದಲಾವಣೆಗಳೆಲ್ಲವೂ ಅಲ್ಲಾಹನಿಗಾಗಿ ಮಾತ್ರ. ಅವನ ಸಂಪ್ರೀತಿಗಾಗಿ... ಅವನಿಂದಲೇ ಪ್ರತಿಫಲದ ನಿರೀಕ್ಷೆ...  ಹಝ್ರತ್ ಉಮ್ಮು ಝಫರ್(ರ) ದಾಟಿ ಹೋದ ಅದೇ ಜನ್ನತ್ ಗಾಗಿ... ಅಲ್ಲಾಹನು ಅನುಗ್ರಹಿಸಲಿ.*

✍🏻ಮುನೀರ್ ನೇರಿಯ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...