Skip to main content

ಝಿಯಾರತ್ತ್ ಕೇಂದ್ರ 👉�14👈 🌷ಭಾಗ 02🌷 *ಖುತುಬುಲ್ ಆಲಂ ಸಿ. ಎಂ ವಲಿಯುಲ್ಲಾಹಿ ಮಡವೂರ್, (ಖ:ಸಿ) ಕಲ್ಲಿಕೋಟೆ.* 〰〰〰〰〰〰〰 ✍ ಗಫೂರ್ ಬಾಯಾರ್

ಝಿಯಾರತ್ತ್ ಕೇಂದ್ರ
          👉�14👈
       🌷ಭಾಗ 02🌷

*ಖುತುಬುಲ್ ಆಲಂ ಸಿ. ಎಂ ವಲಿಯುಲ್ಲಾಹಿ ಮಡವೂರ್, (ಖ:ಸಿ) ಕಲ್ಲಿಕೋಟೆ.*
〰〰〰〰〰〰〰
✍ ಗಫೂರ್ ಬಾಯಾರ್
〰〰〰〰〰〰〰
🕌ತದನಂತರ ಯಾತ್ರೆಗಳ ಕಾಲವಾಗಿತ್ತು.

ಬಹು ಕಾಲ ಪೂರ್ವಿಕರಾದ ಪುಣ್ಯಾತ್ಮರುಗಳ ಮಖ್ಬರಗಳನ್ನು ಸಂದರ್ಶಿಸುವುದು ವಾಡಿಕೆ ಆಗಿತ್ತು.  ಕೆಲವು ಕಾಲ ಆರಾಧನಾ ಕರ್ಮಗಳಿಗಾಗಿ  ವನ ಮತ್ತು ಗುಡ್ಡಕಾಡುಗಳತ್ತ ಸಾಗುತ್ತಿದ್ದರು. ಕೆಲವು ಸಂದರ್ಭದಲ್ಲಿ ವನಾಂತರದಲ್ಲಿ ವನ್ಯ ಜೀವಿಗಳ ನಡುವೆ ಕಂಡಿರುದಾಗಿ ಕೆಲವರು ತಮ್ಮಊರ ಸಾರ್ವಜಿನಿಕರಿಗೆ ಮಾಹಿತಿ  ನೀಡುತ್ತಿದ್ದರು.

ಕೊನೆಯ ಕಾಲದಲ್ಲಿ ಸುಮಾರು 10 ವರ್ಷಗಳ ಕಾಲ ಕಲ್ಲಿಕೋಟೆಯ ಮಮ್ಮುಟ್ಟಿ ಮೂಪ ಎಂಬವರ ನಿವಾಸದಲ್ಲಿ ವಾಸವಾಗಿದ್ದರು. ಆ ವಾಸ ಸ್ಥಳಕ್ಕೆ ನೂರಾರು ಜನರು  ಮಾಹಾನುಭಾವರು ಆಶೀರ್ವಾದ ಪಡೆಯಲು ಬಂದು ಹೋಗುತ್ತಿದ್ದರು. ಸಂದರ್ಶಿಸಲು ಬಂದು ಹೋಗುವವರಿಗೆ ಸಂತೋಷ ಮತ್ತು ಸಾಂತ್ವನ ನೀಡುತ್ತಿದ್ದರು.

ಕೆಲವು ಸಂದರ್ಭಗಳಲ್ಲಿ ಸಂದರ್ಶಕರೊಂದಿಗೆ ದೂರವಿದ್ದು ಆರಾಧನಾ ಕರ್ಮಗಲ್ಲಿ ನಿರತರಾಗುತ್ತಿದ್ದರು. ಈ ಸಮಯಗಳಲ್ಲಿ ಹಲವು ಪವಾಡಗಳನ್ನು ಕಾಣಲು ಸಾಧ್ಯವಾಗುತ್ತಿತು.

ಮಹಾನುಭಾವರಿಗೆ ಹತ್ತಿರದ ಬಾಂಧವ್ಯ ಇರುವರೊಂದಿಗೆ ಸಂದರ್ಶನಾವಕಾಶ ನಿರಾಕರಿಸುತ್ತಿರಲಿಲ್ಲ. ಉದಾಹರಣೆಗೆ *ತಾಜುಲ್ ಉಲಮಾ (ಖ:ಸಿ), ಅವೇಲತ್ತ್ ತಂಗಳ್ (ಖ:ಸಿ), ಕಾಂತಪ್ಪುರಂ ಎ.ಪಿ  ಉಸ್ತಾದ್, ಮೊದಲಾದವರು.*

ಮಹಾನುಭಾವರ ಪ್ರಾಯ 63 ರ ಸಂದರ್ಭದಲ್ಲಿ ಆರೋಗ್ಯ ತುಂಬಾ ಕ್ಷೀಣಿಸಲ್ಪಟ್ಟಿತ್ತು. ಈ ಸಂದರ್ಭದಲ್ಲಿ ಜನ ಸಂಪರ್ಕವನ್ನು ಸಂಪೂರ್ಣವಾಗಿ ನಿಲ್ಲಿಸಿದರು.

ಕೊನೆ ಸಂದರ್ಭದಲ್ಲಿ ಅನಾರೋಗ್ಯ ಹೆಚ್ಚದಾಗ ಹತ್ತಿರದಲ್ಲಿ ನೆರದಿರುವವರೊಂದಿಗೆ ರಾತ್ತಿಬ್ ಮತ್ತು ದಿಕ್ರ್ ಗಳನ್ನು ಹೇಳಲು ನಿರ್ದೇಶಿಸುತ್ತಿದ್ದರು.

(ಎಪ್ರಿಲ್ 11,1991 ಶುಕ್ರವಾರ) ಹಿಜರಿ ವರ್ಷ 1411 ಶವ್ವಾಲ್ ತಿಂಗಳ 4ರಂದು ಬೆಳಿಗ್ಗೆ 9:15ಕ್ಕೆ  ಮಹಾನವರು ಈ ನಶ್ವರ ಲೋಕದಿಂದ ನಮ್ಮನ್ನುಗಲಿದರು.

ಮರಣ ವಾರ್ತೆ ಹರಡುತ್ತಲೇ ನಾನಾ ಭಾಗಗಳಿಂದ ಜನರು ಹರಿದು ಬಂದರು.
ಕಲ್ಲಿಕೋಟೆ ಶೈಖ್ ಮಸೀದಿಯಲ್ಲಿ ಜನಾಝ ನಮಾಜಿನ ನಂತರ, ಮಧ್ಯಾಹ್ನ ಸ್ವದೇಶವಾದ ಮಡವೂರಿಗೆ ಜನಾಝವನ್ನು ಕೊಂಡೊಯ್ಯಲಾಯಿತು. ಅಲ್ಲಿ ಘಟ್ಟಾನು ಘಟ್ಟವಾಗಿ ನಡೆದ  ಜನಾಝ ನಮಾಜಿನ ನಂತರ ರಾತ್ರಿ 9 ಘಂಟೆಗೆ, *ಮರ್ಹೂಂ ಅವೇಲತ್ ತಂಗಳ್ (ಖ:ಸಿ) ಹಾಗು ಕಾಂತಪುರಂ ಎ.ಪಿ ಉಸ್ತಾದ್* ಮೊದಲಾದವರು ಸೇರಿ ಜನಾಝವನ್ನು ದಫನ ಮಾಡಿದರು.

ತಂದೆ ಕುಂಞಿ ಮಾಹಿನ್ ಕೋಯ ಮುಸ್ಲಿಯಾರ್ (ಖ:ಸಿ) ರವರ ಮಖ್ಬರದ ಸಮೀಪವಾಗಿದೆ ಮಹಾನವರ ಕೂಡ ಅಂತ್ಯ ವಿಶ್ರಮ.

ಮಹಾನರ ಸ್ಮಾರಕವಾಗಿ ಹಲವಾರು ಸಂಭ್ರಮಗಳು ಇಂದು ಊರಿನ ನಾನಾ ಭಾಗಗಳಲ್ಲಿ  ಕಾರ್ಯಾಚರಿಸುತ್ತಿದೆ.

ವಫಾತ್ತಿನ ನಂತರವು ಮಹಾನುಬಾವರ ಕಶ್ಫ್ ಕರಾಮತ್ತಿನಿಂದ ಸಾವಿರಾರು ಜನರಿಗೆ ಸಾಂತ್ವನವಾಗುತ್ತಿದೆ.

ಶೈಖುನಾ ಸಿ.ಎಂ. ವಲಿಯುಲ್ಲಾಹಿಯವರು ಅಂತ್ಯ  ವಿಶ್ರಮ ಪಡೆಯುತ್ತಿರುವ  ಮಡವೂರ್ ಎಂಬ ಊರು ಇವತ್ತು ಅತೀ ದೊಡ್ಡ ಝಿಯಾರತ್ತ್  ಕೇಂದ್ರವಾಗಿದೆ. ದಿನ ನಿತ್ಯ ಸಾವಿರಾರು ಜನರ ಸಂದರ್ಶನವಾಗಿತ್ತಿದೆ.

ಮಹಾನರ ಬರ್ಕತ್ತಿನಿಂದ ಅಲ್ಲಾಹು ನಮ್ಮೆಲ್ಲರ ಇಹಪರ ಲೋಕ ವಿಜಯಗೊಳಿಸಲಿ.
ಆಮೀನ್..

✍ ~ಗಫೂರ್ ಬಾಯಾರ್~
🕌🕌🕌🕌🕌🕌🕌🕌

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...