Skip to main content

ಝಿಯಾರತ್ತ್ ಕೇಂದ್ರ 🔷19🔷 ಭಾಗ-02 ➖➖➖➖➖➖➖ *ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು* ✍ ಗಫೂರ್ ಬಾಯಾರ್

ಝಿಯಾರತ್ತ್ ಕೇಂದ್ರ
          🔷19🔷
          ಭಾಗ-02
➖➖➖➖➖➖➖
*ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು*

✍ ಗಫೂರ್ ಬಾಯಾರ್
➖➖➖👉👉👉👉

🕌ಉಳ್ಳಾಲ ರೈಲು ನಿಲ್ದಾಣದಿಂದ 3 ಕೀ ಮಿ ದೂರವಾಗಿದೆ ಉಳ್ಳಾಲ ದೊಡ್ಡ ಮಸೀದಿ ಇರುವುದು. ಅದರ ಹತ್ತಿರದಲ್ಲಿಯೇ ಮದನಿ ತಂಗಳವರ (ರ) ಅಂತ್ಯವಿಶ್ರಾಂತಿಯಾಗಿದೆ. ಮಹಾನವರ ಮಹತ್ವ, ಪ್ರೌಢತೆ, ಆತ್ಮೀಯ ಚೈತನ್ಯವು ಸಾರುವ ಹಾಗಿದೆ ದರ್ಗಾ ಶರೀಫ್.

*ಸ್ಥಾಪನೆಗಳು*

45 ವರ್ಷಗಳಿಂದ ಉನ್ನತ ನೆಲೆಯನ್ನು ಕಾಯ್ದುಕೊಂಡು ಬರುತ್ತಿರುವ *ಸಯ್ಯಿದ್ ಮದನಿ ಅರೇಬಿಕ್ ಕಾಲೇಜು* ಭಾರತದಲ್ಲಿ ಅರಿಯಲ್ಪಡುವ ಮತ ವಿಜ್ಞಾನ ಭೌಧ್ಧಿಕ ಕೇಂದ್ರವಾಗಿದೆ.
ಇಷ್ಟರವರೆಗೆ 5 ಸಾವಿರಕ್ಕಿಂತ ಹೆಚ್ಚು ಯುವ ಪಂಡಿತರನ್ನು *ಮೌಲವಿ ಫಾಸಿಲ್ ಮದನಿ* ಬಿರುದ ಕೊಟ್ಟು ಸಮುದಾಯಕ್ಕೆ ಸಮರ್ಪಿಸಿದೆ.

ಕಳೆದ 2 ವರ್ಷದ ಮುಂಚೆ ಇಲ್ಲಿಯ ಮತಬೌಧಿಕ ನೇತೃತ್ವ ಆತ್ಮೀಯ ಲೋಕದ ಕಿರೀಟವಾಗಿದ್ದ *ತಾಜುಲ್ ಉಲಮಾ ಉಳ್ಳಾಲ ತಂಗಳಾಗಿದ್ದರು* (ಖ:ಸಿ). ಅವರ ವಫಾತಿನ ನಂತರ ಕಳೆದ ಸಲದ ಉರೂಸಿಗೂ ಮತ್ತು ಇನ್ನಿತರ ಕಾರ್ಯಕ್ರಮ ನಡೆಯುವ ವೇದಿಕೆಗೂ ತಾಜುಲ್ ಉಲಮಾ ಎಂಬ ನಾಮದಲ್ಲಿ; *"ವಿಶ್ವ ಸಮಾಧಾನಕ್ಕೆ ಆತ್ಮೀಯತೆ"* ಎಂಬ ಉದ್ದಾತವಾದ ಶೀರ್ಷಿಕೆಯಡಿಯಲ್ಲಿ ಉರೂಸು ನಡೆಯಿತು.

ತಾಜುಲ್ ಉಲಮಾ (ರ) ರವರ ವಫಾತಿನ ನಂತರ ಇಲ್ಲಿಯ ನೇತೃತ್ವವನ್ನು ವಹಿಸುವುದು ಪುತ್ರರೂ ಸೂಫಿವರ್ಯರೂ, ಪಂಡಿತರೂ ಆದ, *ಅಲ್ ಆಲಿಂ ಖಾಝಿ ಅಸ್ಸಯ್ಯಿದ್ ಫಸಲ್ ಕೋಯಮ್ಮ ಎಂಬ ಕೂರ ತಂಗಳವರಾಗಿದ್ದಾರೆ*

ತಂದೆಯವರಾದ ತಾಜುಲ್ ಉಲಮಾ (ರ) ರವರ ವಫಾತಿನ ಮೊದಲೇ ಸಹ ಖಾಝಿಯಾಗಿ ನಿಯುಕ್ತರಾದ ಕೂರ ತಂಗಳವರು, ಉಳ್ಳಾಲ ಒಳಗೊಂಡ ಹಲವಾರು ಮಹಲ್ಲುಗಳ ಖಾಝಿ ಮತ್ತು ಉಪದೇಶಕರಾಗಿದ್ದಾರೆ.
ತಾಜುಲ್ ಉಲಮಾ (ರ) ರವರ ನಂತರ ಮದನಿ ಕಾಲೇಜಿನ ಪ್ರಾಂಶುಪಾಲರ ಸ್ಥಾನದಲ್ಲಿರುವುದು *ಶೈಖುನಾ ತಾಯಕೋಡ್ ಅಬ್ದುಲ್ಲಾ ಉಸ್ತಾದರಾಗಿದ್ದಾರೆ.*

ದೊಡ್ಡ ಜುಮಾಅತ್ತ್ ಮಸೀದಿ ಅಲ್ಲದೆ 15 ಜುಮಾ ಮಸೀದಿಗಳು, 18 ನಮಾಝ್ ಮಸೀದಿಗಳು, ಉನ್ನತ ನೆಲೆಯಲ್ಲಿರುವ 33 ಮದ್ರಸಗಳು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಬನಾತ್ ಶಾಲೆ, ಡಿಗ್ರಿಯವರೆಗೆ ಕಲಿಯಲಿರುವ ಎಲ್ಲಾ ಸೌಕರ್ಯಗಳು ಇತರ ವಿದ್ಯಾಭ್ಯಾಸ ಸ್ಥಾಪನೆಗಳನ್ನು ನಡೆಸುವುದು ಪ್ರತ್ಯೇಕವಾಗಿ ನಿಯಮಿತರಾದ 55 ಸದಸ್ಯರೊಳಗೊಂಡ  ಕಾರ್ಯಕಾರಣಿ ಸಮಿತಿಯಾಗಿದೆ.

ಮತ-ಬೌಧಿಕ ಸ್ಥಾಪನೆಯ ವಿದ್ಯಾರ್ಥಿಗಳ ಆಹಾರ, ವಾಸಸ್ಥಳ, 600ರಷ್ಟು ಕರ್ಮಚಾರಿಗಳ ಸಂಬಳ, ಹಾಗು ಇನ್ನಿತರರ ಖರ್ಚನ್ನು ದರ್ಗಾ ಕಮಿಟಿಯಾಗಿದೆ ವಹಿಸುತ್ತಿರುವುದು.

ಇಷ್ಟಲ್ಲದೇ, ಉಳ್ಳಾಲ ಜಮಾಅತ್ತಿನ ಒಳಗೂ ಹೊರಗೂ ಇರುವ ಅನಾಥ-ನಿರ್ಗತಿಕರ ಮತ್ತು ಬಡವರ ಅವಶ್ಯಕತೆಗಳನ್ನು ಪೊರೈಸಿಕೊಡುತ್ತಿದೆ. ವಿದ್ಯಾಭ್ಯಾಸ ಪ್ರೋತ್ಸಾಹ ಕಾರ್ಯಗಳನ್ನು ಕೂಡ ಕಮಿಟಿ ನಡೆಸಿಕೊಂಡು ಬರುತ್ತಿದೆ.

ಮಹಾನವರ ಬರ್ಕತ್ತಿನಿಂದ ಅಲ್ಲಾಹು ನಮ್ಮೆಲ್ಲರ ಪಾಪವನ್ನು ಮನ್ನಿಸಲಿ ಆಮೀನ್..

ಮುಗಿಯಿತು

✍ _ಗಫೂರ್ ಬಾಯಾರ್_
♦♦🔷🔷🔷🔶🔶

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...