Skip to main content

ವಹ್ಹಾಬಿಗಳ ತರಾವೀಹ್ ನಮಾಜಿನ ಲೆಕ್ಕದಲ್ಲಿರುವ ವೈರುದ್ಯಗಳು ➖➖➖➖➖➖➖ ✍ ಗಫೂರ್ ಬಾಯಾರ್ ➖➖➖➖➖➖➖

ವಹ್ಹಾಬಿಗಳ ತರಾವೀಹ್ ನಮಾಜಿನ ಲೆಕ್ಕದಲ್ಲಿರುವ ವೈರುದ್ಯಗಳು
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
ತರಾವೀಹ್  ರಮಳಾನಿನ ಪ್ರತ್ಯೇಕ ಸುನ್ನತ್ತ್ ನಮಾಝಾಗಿದೆಯೆಂದು ಅದು 20 ರಕ್ಅತಾಗಿದೆಯೆಂದು, ಸಲಫಿ ಸ್ಥಾಪಕ ನೇತಾರುಗಳಾದ ಟಿ.ಕೆ. ಮೌಲವಿ. ಈ.ಕೆ. ಮೌಲವಿ.  ಎಂ.ಸಿ.ಸಿ. ಮೌಲವಿ. ಎಂಬವರು ಜಂಟಿಯಾಗಿ ಬರೆದ ಕರ್ಮಶಾಸ್ತ್ರ ಪುಸ್ತಕದಲ್ಲಿ ಕಲಿಸಲಾಗುತ್ತದೆ.

*ಅವ್ವಲು ಫಿಲ್ ಅಮಲಿಯಾತ್* ಎಂಬ ಪ್ರಸ್ತುತ ಪುಸ್ತಕದ 6ನೇ ಆವರ್ತಿಯನ್ನು ಹೊರ ತಂದದ್ದು 1936ರಲ್ಲಿ ಆಗಿತ್ತು. ಆ ಆವೃತಿಯಲ್ಲೂ ಸ್ವಲ್ಪವೂ ವ್ಯತ್ಯಾಸವಿಲ್ಲದೆ ಈ ವಿಷಯನ್ನು ಕಲಿಸಲಾಗುತ್ತಿತ್ತು.

ಆದರೆ 1938ರಲ್ಲಿ 7ನೇ ಆವರ್ತಿ ಹೊರ ಬಂದಾಗ ಆ ಆವರ್ತಿಯಲ್ಲಿ *ರಕ್ಅತಿನ* ಲೆಕ್ಕವನ್ನು ನಮೂದಿಸಲಿಲ್ಲ..!!

ಅಂದಿನಿಂದ ತರಾವೀಹ್ ಕೇರಳ ಮುಸ್ಲಿಂಗಳ ಎಡೆಯಲ್ಲಿ ಒಂದು ವಿವಾದವಾಗಲು ಶುರುವಾಯಿತು.

ಅದೇನೆಂದರೆ..
1922ರಲ್ಲಿ ಕೇರಳದಲ್ಲಿ ಮುಜಾಹಿದ್'ಗಳು 'ಸರಿಯಾದ ಇಸ್ಲಾಂ' ಕಲಿಸಲು ಬಂದು 16 ವರ್ಷ ಕಳೆದ ನಂತರವಾಗಿತ್ತು ತರಾವೀಹ್ 8 ರಕ್ಅತಾಗಿದೆಯೆಂದು ಅವರಿಗೆ ತಿಳಿಯುವುದು.

1941ರ ನಂತರ ಕೇರಳದ ಕೊಲ್ಲಂ ಜಿಲ್ಲೆಯ ಚಿನ್ನಕಡ ಎಂಬ ಸ್ಥಳದಲ್ಲಿ 8 ರಕ್ಅತ್ ಆಗಿ ಜಾರಿಗೊಳಿಸಲು ಮೌಲವಿಗಳು ಆಗಮಿಸಿದಾಗ ಅಂದಿನ ಅಲ್ಲಿಯ ಮುಸ್ಲಿಂಗಳು ಅದಕ್ಕೆ ಸಮ್ಮತಿಸಲಿಲ್ಲ.

ಕೇರಳದ ಕೆಲವು ಕಡೆ ಗಳಲ್ಲಿ 8 ರಕ್ಅತಾಗಿ ಜಾರಿಗೊಳಿಸುತ್ತಾ ಬರುತ್ತಿರುವಾಗ ಯಾವುದೊ ಒಬ್ಬ ಮೌಲವಿ *ತರಾವೀಹ್ 11 ರಕ್ಅತ್ತಾಗಿದೆಯೆಂದು ಕಂಡು ಹಿಡಿದನು.🤣*
ಹೀಗೆ 1969ಗಳಲ್ಲಿ 11 ರಕ್ಅತ್ ತರಾವೀಹ್ ಎಂದು ವಾದಿಸಿದ್ದರು.

*ವಿತ್'ರ್ ನಮಾಜಿನ ಹದೀಸನ್ನು ತರಾವೀಹ್ ನಮಾಜಿಗೂ ಪುರಾವೆಯಾಗಿ ಮಾಡಬಹುದೆಂದು ಹೇಳಿ ಆ ಕಾಲದಿಂದ ತರಾವೀಹ್ ಮತ್ತು ವಿತ್'ರ್ ಒಂದೇ ನಮಾಝ್ ಆಗಿದೆಯೆಂದು ವಾದಿಸಲು ಆರಂಭಿಸಿದರು.*

ತದನಂತರ ಕೆಲವು ಸನ್ನಿವೇಶಗಳನ್ನು ನೋಡಿ 8 ರಕ್ಅತೆಂದೂ, ಕೆಲವೊಮ್ಮೆ 11 ರಕ್ಅತ್ತೆಂದು ಹೇಳಲು ಶುರು ಮಾಡಿದರು.

1996 ಸೆಪ್ಟ0ಬರ್' ತಿಂಗಳಿನ ಮಲಯಾಳಂನ ಅಲ್ ಇಸ್ಲಾಹಿ ಎಂಬ ಪುಸ್ತಕದಲ್ಲಿ 8ಕ್ಕೆ ಪುರಾವೆ ತೋರಿಸದಿರುವುದು, 2006 ಸೆಪ್ಟ0ಬರ್  ತಿಂಗಳಲ್ಲಿ ಹೊರ ಬಂದ ಶಾಬಾಬ್ ನಲ್ಲೂ 8ಕ್ಕೆ ಪುರಾವೆಗಳು ಇರಲಿಲ್ಲ.
ತರಾವೀಹ್ 11 ರಕ್ಅತ್ ಆಗಿದೆಯೆಂದು ಬರೆಯ ಬೇಕಾಗಿ ಬರೆದಿರುವುದನ್ನು, ಸಲಫಿಗಳು ಹಾಗು ನಾವು ನೋಡಿರುತೇವೆ.

*ಮತ್ತೆ 8 ರಕ್ಅತ್ತನ್ನು ಬಿಟ್ಟು 11 ರಕ್'ತಾಗಿ ನಿಶ್ಚಯಿಸಿದರು. ಇದರಿಂದ ಹೆಚ್ಚು ನಮಾಜ್ ಮಾಡಿದರೆ ಅದು ಬಿದ್'ಅತ್ತಾಗಿದೆಯೆಂದು ವಾದಿಸುತ್ತಿದ್ದರು.*

ನಂತರ ಕೊನೆಗೆ 2015ರಲ್ಲಿ 11ರಿಂದ ಹೆಚ್ಚು ತರಾವೀಹ್ ಬಿದ್'ಅತ್ತಾಗಿದೆಯೆಂದು ಸಲಫಿಗಳು ಯಾರು ಕೂಡ ಹೇಳಲಿಲ್ಲವೆಂದು ಸಮ್ಮತಿಸಿ ಖೇದ ಪ್ರಕಟಿಸಿ ಅಲ್ ಇಸ್ಲಾಹ್ ಮಾಸಿಗೆಯಲ್ಲಿ ಮರು ಪ್ರಸದಿಕರಿಸಿದರು.

*ಇದಾಗಿದೆ ಕೇರಳ/ಕರ್ನಾಟಕ ವಹ್ಹಾಬಿಗಳ ತರಾವೀಹ್ ನಮಾಜಿನ ಚರಿತ್ರೆ*

ಚರಿತ್ರೆ ತಿಳಿದವರು/ ಪರಲೋಕ ಚಿಂತೆಯುಳ್ಳವರು ಹೇಗೆ ತಾನೇ ಮಜಾಹೀದ್/ಸಲಫಿ ಆಗಲು ಸಾಧ್ಯವಾಗುವುದು...!?

🤡 ಕಡಿಮೆ ಅವಧಿಯ ಕಾಲದೊಳಗೆ ಒಂದು ನಮಾಜಿನ ರಕ್'ಅತ್ 20 ಆಗಿದೆ, ಅಲ್ಲ 8 ಆಗಿದೆ, 11 ಆಗಿದೆ, ಅಲ್ಲ 8 ಯೇ ಆಗಿದೆ, ಅಲ್ಲ 8ಕ್ಕೆ ಪುರಾವೆ ಇಲ್ಲ. 11 ಸರಿಯಾಗಿದೆ....

ಹೀಗೆ ಮೌಲವಿಗಳಿಗೆ ಹೇಳಲು ಬೇಕಾದದ್ದು ಯಾಕಾಗಿರಬಹುದು..?🤔

😈ಈಗ 11 ಎಂದು ಹೇಳುವ ಪುರಾವೆಗಳೆಲ್ಲ 1941 ವರೆಗೆ ಒಂದು ಮೌಲವಿಗೂ ಕಾಣಲು ಸಾಧ್ಯವಾಗಿಲ್ಲವಂತೆ..? 🤗

🔮 1941ರ ವರೆಗಿರುವ ಮೌಲವಿಗಳು ಕಂಡ ಬುಖಾರಿ ಅಲ್ವಾ ಇಂದು ಇರುವುದು???? 🤠

🔵 ಕಾಲ ಕಳೆಯುವಂತೆ ಹದೀಸುಗಳು ಬದಲಿಯಾಗುವುದಾ??

🔵ಇಲ್ಲವಾದರೆ ಸ್ವಲ್ಪ ಕಾಲ 20, ನಂತರ 8, ನಂತರ 11, ಈ ರೀತಿ ಹದೀಸಿನಲ್ಲೆಲ್ಲೋ ಮೌಲವಿಗಳು ಕಂಡಿರಬೇಕು..🤔

🔮 ಈ ತರ ಒಂದು ನಮಾಝಿನ ವಿಷಯದಲ್ಲಿ ವೈರುಧ್ಯಗಳನ್ನು ಬರೆದಿಟ್ಟು ಕೂಡ ಅನುಯಾಯಿಗಳು ಕುರುಡರಾಗಿ ಇವರನ್ನು ನಂಬುವುದು ಯಾವ ಕಾರಣಕ್ಕೆ ಎಂದು ತಿಳಿಯುದಿಲ್ಲ!!

✍ ಗಫೂರ್ ಬಾಯಾರ್
🍂🍂🍂🍂🍂🍂🍂

Comments

Br.Taslim said…
425) Taraweeh prayer method? ತರಾವೀಹ್’ನ ರೂಪ?
http://brtaslim.com/wp-content/uploads/2016/10/2016-08-22-AUDIO-00000040.mp3

528) Is any swalat or dua between every two rakat of Taraweeh? ತರಾವೀಹ್’ನ ನಡುವಿನಲ್ಲಿ ದುಆ?
http://brtaslim.com/wp-content/uploads/2017/05/2017-05-28-AUDIO-00000550.mp3

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...