Skip to main content

ಆತ್ಮ ಸಂಶುದ್ಧಗೊಳಿಸುವ ವಸಂತ ಕಾಲ ಪವಿತ್ರ ರಂಝಾನ್ ಮಾಸ. ಭಾಗ 01

ಆತ್ಮ ಸಂಶುದ್ಧಗೊಳಿಸುವ ವಸಂತ ಕಾಲ ಪವಿತ್ರ ರಂಝಾನ್ ಮಾಸ ಮಗದೊಮ್ಮೆ ಮುಸ್ಲಿಂ ಸಮೂಹಕ್ಕೆ ಅತಿಥಿಯಾಗಿ ಆಗಮಿಸುತ್ತಿದೆ. ಸತ್ಯ ವಿಶ್ವಾಸಿಗಳ ಮನಃ ಸಂತೋಷದಿಂದ ಮಿಡಿಯುವ, ಮನಃ ಪರಿವರ್ತನೆಯ ತ್ಯಾಗ ಮನೋಭಾವದಿಂದ ಹರ್ಷ ಪುಳಕಿತಗೊಳ್ಳುವ ಮಾಸ. ಕಪ್ಪಡರಿದ ಹ್ರದಯವನ್ನು ಇಬಾದತ್ತುಗಳ ಮೂಲಕ ಪ್ರಕಾಶಮಯಗೊಳಿಸುವ ಮಾಸ. ಅಲ್ಲಾಹನ ಸಾಮೀಪ್ಯಕ್ಕೆ ಅನಿವಾರ್ಯವಾದ ಶುಭ್ರ ವ್ಯಕ್ತಿತ್ವ, ಪರಹಿತ ಚಿಂತನೆ, ಸಹನೆ, ತ್ಯಾಗ ಮುಂತಾದುವುಗಳನ್ನು ಬೆಳೆಸಿ ಮೈಗೂಡಿಸಿಕೊಳ್ಳುವ ಮಾಸ. ಅಲ್ಲಾಹನ ಆದೇಶ ನಿರ್ದೇಶಗಳನ್ನು ಪಾಲಿಸದ ಕಲ್ಲು ಹ್ರದಯಿಗಳ ಮನಃ ವನ್ನು ಮಂಜಿನಂತೆ ಕರಗಿಸುವ ಮಾಸ.  ಅಧಾರ್ಮಿಕತೆಯಿಂದ ಧಾರ್ಮಿಕತೆಯೆಡೆಗೆ, ಅನ್ಯಾಯ, ಅನೈತಿಕತೆಯಿಂದ ನ್ಯಾಯ ನೀತಿಯ ಕಡೆ ಕೊಂಡೊಯ್ಯುವ ಮಾಸ. ಅನಾಚಾರ, ಭ್ರಷ್ಟಾಚಾರಗಳಿಗೆ ಕಡಿವಾಣ ಬೀಳುವ ಮಾಸ. ಚುಟುಕಾಗಿ ಹೇಳುವುದಾದರೆ ಓರ್ವ ಮುಸ್ಲಿಮನ ಸರ್ವಾಂಗೀಣ ಅಭಿವ್ರದ್ಧಿ, ವಿಜಯಕ್ಕೆ ಹೇತುವಾಗುವ ಪುಣ್ಯಗಳ ಕೊಯ್ಲು ಮಾಸ.
ರಮಳಾನ್ ತಿಂಗಳು ಒಳಿತಿನ ತಿಂಗಳು, ಸತ್ಕರ್ಮಗಳನ್ನು ಹೆಚ್ಚೆಚ್ಚು ನಿರ್ವಹಿಸಲು ಮುಸ್ಲಿಮನ ಮನಸ್ಸು ಆಶಿಸುವ ತಿಂಗಳು. ಈ ತಿಂಗಳಿನಲ್ಲಿ ನೈಜ ಮುಸ್ಲಿಮನ ಮನಃ ಕೆಡುಕಿನತ್ತ ವಾಲದು. ಪ್ರವಾದಿ ಸ.ಅ ಹೇಳಿದರು. "ರಮಳಾನ್ ಆಗತವಾದರೆ ಸ್ವರ್ಗದ ಕವಾಟಗಳು ತೆರೆಯಲ್ಪಡುವುದು, ನರಕದ ಕವಾಟಗಳು ಮುಚ್ಚಲ್ಪಡುವುದು, ಪಿಶಾಚಿಗಳು ಬಂಧಿತರಾಗುವರು" ಸತ್ಕರ್ಮಗಳನ್ನು ನಿರ್ವಹಿಸದಂತೆ ತಡೆಯುವ ಪಿಶಾಚಿಗಳ ಉಪಟಳ ತುಂಬಾ ಕಮ್ಮಿ ಇರುವ ಕಾರಣ ರಮಳಾನ್ ತಿಂಗಳಿನಲ್ಲಿ ಮುಸ್ಲಿಮನ ಮನಸ್ಸು ಅಲ್ಲಾಹನ ಸಾಮೀಪ್ಯ ಹೆಚ್ಚೆಚ್ಚು ಬಯಸುತ್ತದೆ. ರಮಳಾನ್ ತಿಂಗಳಿನ ವ್ರತ ಅದು ಪ್ರವಾದಿ ಸ.ಅ ರವರ ಸಮುದಾಯಕ್ಕೆ ಮಾತ್ರ ಸೀಮಿತವಾದುದಲ್ಲ. ಪ್ರವಾದಿ ಸ.ಅ ರವರಿಗಿಂತ ಮುಂಚಿನ ಪ್ರವಾದಿಗಳ ಸಮುದಾಯಕ್ಕೂ ವ್ರತ ಕಡ್ಡಾಯವಾಗಿತ್ತು. ಅದು ಕುರಾನಿನ ಅಲ್ ಬಖರ ಸೂರತಿನಲ್ಲಿ ಅಲ್ಲಾಹು ಸ್ಪಷ್ಟಪಡಿಸುತ್ತಾನೆ. " ಸತ್ಯ ವಿಶ್ವಾಸಿಗಳೇ, ನಿಮ್ಮ ಪೂರ್ವಿಕರಿಗೆ ವ್ರತವನ್ನು ಕಡ್ಡಾಯಗೊಳಿಸಿದಂತೆ ನಿಮಗೂ ವ್ರತವನ್ನು ಕಡ್ಡಾಯಗೊಳಿಸಲಾಗಿದೆ, ನೀವು ದೈವಭಕ್ತಿ ಉಳ್ಳವರಾಗಲು". ರಮಲಾನ್ ತಿಂಗಳ ಪ್ರಮುಖ ಆರಾಧನೆಯಾಗಿದೆ ವ್ರತಾನುಷ್ಠಿಸುವುದು. ರಮಳಾನ್ ವ್ರತದ ಮುಖ್ಯ ಗುರಿ ದೈವ ಭಕ್ತಿ ಉಂಟು ಮಾಡುವುದಾಗಿದೆಯೆಂದು ಮೇಲಿನ ಅಲ್ಲಾಹನ ಸೂಕ್ತದಿಂದ ಸ್ಪಷ್ಟವಾಗುತ್ತದೆ.
ತಿಂಗಳುಗಳಲ್ಲಿ ಅತ್ಯಂತ ಶ್ರೇಷ್ಟವೂ ಮಹತ್ತರವೂ ಆದ ತಿಂಗಳಾಗಿದೆ ಪವಿತ್ರ ರಮಳಾನ್. ರಮಳಾನ್ ತಿಂಗಳ ಆಗಮನವನ್ನು ಸತ್ಯ ವಿಶ್ವಾಸಿಯು ಕಾತರದಿಂದ ನಿರೀಕ್ಷಿಸುತ್ತಿರಬೇಕು.  ರಜಬ್ ತಿಂಗಳ ಆಗಮನವಾದರೆ ಈ ಪ್ರಾರ್ಥನೆ ನಡೆಸಬೇಕೆಂದು ಪ್ರವಾದಿ ಸ.ಅ ಹೇಳಿದರು. "" ಅಲ್ಲಾಹನೇ.. ನಮಗೆ ರಜಬ್ ತಿಂಗಳು ಹಾಗು ಶಅಬಾನ್ ತಿಂಗಳಲ್ಲಿ ಸಮ್ರದ್ಧಿಯನ್ನು ನೀಡು, ರಮಳಾನ್ ತಿಂಗಳನ್ನು ನಮಗೆ ತಲುಪಿಸು. "" ರಮಳಾನ್ ಎಂಬುದು ಮಹೋನ್ನತ ಅತಿಥಿಯಾಗಿದೆ. ಆ ಅತಿಥಿಯ ಆಗಮನವನ್ನು ರಮಳಾನಿನ ಮುಂಚಿನ ತಿಂಗಳುಗಳಾದ ರಜಬ್ ಹಾಗು ಶಅಬಾನ್ ತಿಂಗಳಲ್ಲಿ ಪ್ರಾರ್ಥನೆ ನೆರವೇರಿಸುವ ಮೂಲಕ ನಿರೀಕ್ಷಿಸುತ್ತಿರಬೇಕೆಂದು ಮೇಲಿನ ಹದೀಸಿನಿಂದ ಸ್ಪಷ್ಟವಾಗುತ್ತದೆ.
ನಮಗೆ ಆಗತವಾಗುತ್ತಿರುವ ಅತಿಥಿಯನ್ನು ಸಂತೋಷಪೂರ್ವಕ ಮನಃ ಸಂತ್ರಪ್ತಿಯೊಂದಿಗೆ ಆಶಿಸುತ್ತಿರಬೇಕು. ಪ್ರವಾದಿ ಸ.ಅ ಹೇಳಿದರು : "" ಯಾರಾದರೂ ರಂಜಾನ್ ತಿಂಗಳ ಆಗಮನವನ್ನು ನಿರೀಕ್ಷಿಸಿ ಸಂತೋಷಗೊಂಡರೆ ಅವನ ಶರೀರ ನರಕ ಪ್ರವೇಶಿಸುವುದು ನಿಷಿದ್ಧವಾಗಿದೆ."" ಪ್ರತಿಯೊಬ್ಬ ಮುಸಲ್ಮಾನನು ಈ ಭೌತಿಕ ಲೋಕದಲ್ಲಿ ಆಶಿಸುವ ಒಂದಾಗಿದೆ ಸ್ವರ್ಗ ಸಿಗಬೇಕು, ನರಕ ಸಿಗಬಾರದು ಎಂದು. ಹಾಗಾದರೆ ಅವನು ರಂಜಾನ್ ತಿಂಗಳ ಬರುವಿಕೆಯನ್ನು ಸಂತೋಷದಿಂದ ಸ್ವೀಕರಿಸಿದರೆ ಮಾತ್ರ ರಂಜಾನ್ ತಿಂಗಳಲ್ಲಿ ಉಪವಾಸ, ಲೈಲತುಲ್ ಖದ್ರ್, ಇಅತಿಕಾಫ್, ದಾನಧರ್ಮ ಮುಂತಾದ ಸತ್ಕರ್ಮಗಳನ್ನು ದೈವ ಭಕ್ತಿಯೊಂದಿಗೆ ನಿರ್ವಹಿಸಲು ಸಾಧ್ಯ.

*ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

" ಮುಂದುವರಿಯುವುದು ಇಂಶಾ ಅಲ್ಲಾಹ್ "

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...