Skip to main content

ಯತೀಮರಿಗೆ ಒಳಿತು ಮಾಡುವುದು ಉತ್ತಮ ಸ್ವಭಾವವಾಗಿದೆ

ಯತೀಮರಿಗೆ ಒಳಿತು ಮಾಡುವುದು ಉತ್ತಮ ಸ್ವಭಾವವಾಗಿದೆ

--ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

ಮುಸ್ಲಿಂ ಸಹೋದರಾ : ನಿಶ್ಚಯವಾಗಿಯೂ ಪವಿತ್ರ ಇಸ್ಲಾಂ ಒಳಿತುಗಳಿಗೆ, ಉತ್ತಮ ಸ್ವಭಾವ ಗುಣಗಳಿಗೆ ಅಪಾರವಾದ ಮಹತ್ವವನ್ನು ನೀಡಿದೆ. ಇಂತಹ ಉತ್ತಮ ಸ್ವಭಾವ ಗುಣಗಳಲ್ಲೊಂದಾಗಿದೆ ಅನಾಥರನ್ನು ಸಂರಕ್ಷಿಸುವುದು. ಅವರಿಗೆ ಸಹಾಯ ನೀಡುವುದು.
ಸಹಾಯ ನೀಡಲ್ಪಡುವ ವಿಷಯದಲ್ಲಿ ಮನುಷ್ಯರಲ್ಲಿ ಅತ್ಯಂತ ಅರ್ಹರಾದವರು ಯತೀಂ ಗಳಾಗಿದ್ದಾರೆ. ಕಾರಣ ಒಂದು ಮಗುವಿಗೆ ತನ್ನ ತಂದೆ ಅತ್ಯಂತ ಆವಶ್ಯಕವಾಗಿರುವ ಸಮಯದಲ್ಲಿ ತನ್ನ ತಂದೆ ಇಲ್ಲದಿರುವಾಗ ಆ ಮಗುವಿಗೆ ಯತೀಂ ಎಂಬ ಹೆಸರು ಬರುತ್ತದೆ. ಮಗುವಿಗೆ ಆಶ್ರಯವಾಗಬೇಕಾದ ತಂದೆ, ಮಗುವಿನ ಆವಶ್ಯಕತೆಗಳನ್ನು ಪೂರೈಸಬೇಕಾದ ತಂದೆ ಮರಣಹೊಂದಿರುವಾಗ ಆ ಮಗು ಯತೀಂ ಆಗುತ್ತದೆ. ಆದುದರಿಂದ ಯತೀಮಾದ ಮಕ್ಕಳನ್ನು ಸಂರಕ್ಷಿಸುವುದು, ಅವರ ಆವಶ್ಯಕತೆಗಳನ್ನು ಪೂರೈಸುವುದು, ಅವರಿಗೆ ಸಹಾಯ ಸಹಕಾರ ನೀಡುವುದು ಮುಸಲ್ಮಾನನ ಕರ್ತವ್ಯವಾಗುತ್ತದೆ. ಇದು ಒಂದು ಉತ್ತಮ ಸ್ವಭಾವ ಕೂಡಾ ಆಗಿದೆ.
ಸಹೋದರಾ...ಯತೀಂ ಯಾರೆಂದು ಈಗ ನೀನು ತಿಳಿದಿರುವಿ. ಒಬ್ಬ ಮುಸಲ್ಮಾನನಾದ ಮನುಷ್ಯನು ಯತೀಮರೊಂದಿಗೆ ಕರುಣೆ ತೋರಿಸಿ ಅವರಿಗೆ ಸಹಾಯ ಹಸ್ತ ಚಾಚುವುದು ಕಂಡರೆ ಅವನು ಉತ್ತಮ ಸ್ವಭಾವವನ್ನು ಮೈಗೂಡಿಸಿಕೊಂಡವನಾಗಿದ್ದಾನೆ ಎಂದು ನೀನು ತಿಳಿಯಬೇಕು. ""ಒಮ್ಮೆ ಸಾಯಿಬ್ ಇಬ್ನು ಅಬ್ದುಲ್ಲಾಹ್ ರ.ಅ ರವರು ಪ್ರವಾದಿ ಸ.ಅ ರವರ ಬಳಿ ಬಂದಾಗ ನೆಬಿ ಸ.ಅ ರವರು ಹೇಳಿದರು : ಓ ಸಾಯಿಬ್.. ನೀನು ಜಾಹಿಲಿಯ್ಯಃ ಕಾಲದಲ್ಲಿ ಮೈಗೂಡಿಸಿಕೊಂಡಿದ್ದ ನಿನ್ನ ಉತ್ತಮ ಸ್ವಭಾವದ ಕಡೆ ಒಮ್ಮೆ ನೀನು ಚಿಂತಿಸು. ಈಗ ನೀನು ಮುಸ್ಲಿಂ ಆಗಿರುವಿ.ಅದನ್ನು ನೀನು ನಿನ್ನ ಜೀವನದಲ್ಲಿ ಪುನರಾವರ್ತಿಸು. ಅತಿಥಿಗಳನ್ನು ಸತ್ಕರಿಸು, ಅನಾಥರನ್ನು ಸಂರಕ್ಷಿಸು, ನೆರೆಹೊರೆಯವರನ್ನು ಗೌರವಿಸು. ಇದನ್ನು ನೀನು ನಿನ್ನ ಜೀವನದಲ್ಲಿ ಅಳವಡಿಸು. ""

ನಿಶ್ಚಯವಾಗಿಯೂ ಅನಾಥರ ಮೇಲೆ ಕರುಣೆ ತೋರುವುದು, ಅವರಿಗೆ ಸಹಾಯ ನೀಡುವುದು ಮಹಾನರುಗಳ ಸ್ವಭಾವಗಳಲ್ಲೊಂದಾಗಿದೆ. ಉದಾತ್ತ ಮನಸ್ಸಿನ ಜನರಿಗಲ್ಲದೆ ಈ ಒಳಿತನ್ನು ನಿರ್ವಹಿಸಲು ಸಾಧ್ಯವಿಲ್ಲ. ಆ ಒಳಿತು ನಿರ್ವಹಿಸುವ, ಅನಾಥರ ಮೇಲೆ ಕರುಣೆ ತೋರುವ, ಅನಾಥರ ಸಂರಕ್ಷಣೆಗಾಗಿ ಪರಿಶ್ರಮಿಸುವ ಉದಾರಿಯಾಗಿ ಜೀವಿಸು. ನಿನ್ನ ಹಸ್ತದಿಂದ, ನಿನ್ನ ಸಂಪತ್ತಿನಿಂದ ಅವರ ಕಣ್ಣೀರನ್ಬು ಒರೆಸುವವನಾಗು. ಈ ಮೂಲಕ ಅವರ ಹ್ರದಯದಲ್ಲಿ ಸಂತೋಷದ ಸಿಂಚನವನ್ನು ಹರಿಸುವವನಾಗು. ಒಂದು ವೇಳೆ ನಿನಗೆ ಇಂತಹ ಸೌಭಾಗ್ಯ ಲಭಿಸಿದ್ದಲ್ಲಿ ಖಂಡಿತಾ ನೀನು ವಿಜಯಿಯಾಗುವಿ. ಹಾಗು "ಉತ್ತಮ ಸ್ವಭಾವದ ಒಡೆಯ" ಎಂಬ ಗೌರವ ನಾಮ ನಿನ್ನದಾಗಲಿದೆ.

""ಸ್ವರ್ಗದಲ್ಲಿ ಪ್ರವಾದಿ ಸ.ಅ ರವರ ಜತೆ ವಾಸಿಸುವ ಸೌಭಾಗ್ಯ ಯಾರಿಗೆ""

ಸರ್ವ ಸತ್ಯ ವಿಶ್ವಾಸಿಗಳು ಅತ್ಯಂತ ಹೆಚ್ಚಾಗಿ ಆಶಿಸುವ ಒಂದಾಗಿದೆ ಸ್ವರ್ಗ. ಸ್ವರ್ಗ ಪ್ರವೇಶ ಎಂಬುದು ಸತ್ಯ ವಿಶ್ವಾಸಿಗಳಿಗೆ ಸಿಗುವ ಅತ್ಯಂತ ಉನ್ನತ ವಿಜಯವಾಗಿದೆ. ಅದರಲ್ಲೂ ಆ ಸ್ವರ್ಗದಲ್ಲಿ ಪ್ರವಾದಿ ಸ.ಅ ರವರ ಜತೆ ಜತೆಯಾಗಿಯೇ ವಾಸಿಸುವ ಸೌಭಾಗ್ಯ ಲಭಿಸಿದರೆ ಆ ಸತ್ಯ ವಿಶ್ವಾಸಿಯ ಸಂತೋಷ ಹೇಗಿರಬಹುದು. 
ಹೌದು. ಇಂತಹ ಉನ್ನತ ಸೌಭಾಗ್ಯ ಲಭಿಸಬೇಕಾದರೆ ಅನಾಥರ ಮೇಲೆ ಕರುಣೆ ತೋರಿಸಬೇಕು. ಅವರಿಗೆ ಒಳಿತು ಮಾಡಬೇಕು.
ಪ್ರವಾದಿ ಸ.ಅ ಹೇಳಿದರು : ""ನಾನು ಮತ್ತು ಅನಾಥ ಸಂರಕ್ಷಕನು ಸ್ವರ್ಗದಲ್ಲಿ ಈ ರೀತಿಯಾಗಿರುವೆವು."" ಎಂದು ಹೇಳುತ್ತಾ ತನ್ನ ತೋರು ಬೆರಳು ಮತ್ತು ಮಧ್ಯದ ಬೆರಳನ್ನು ತೋರಿಸಿ ಸೂಚಿಸಿದರು.""
ಇಮಾಮ ಇಬ್ನು ಬತ್ತಾಲ್ ರಹಿಮಹುಲ್ಲಾಹು ಹೇಳುತ್ತಾರೆ : "" ಪ್ರವಾದಿ ಸ.ಅ ರವರ ಈ ಹದೀಸ್ ಕೇಳಿದ ಪ್ರತಿಯೊಬ್ಬರು ಸ್ವರ್ಗದಲ್ಲಿ ತನ್ನ ಜತೆಗಾರನಾಗಿ ನೆಬಿ ಸ.ಅ ರವರು ಲಭಿಸಲು ತನ್ನ ಜೀವನದಲ್ಲಿ ಅದನ್ನು ಅಳವಡಿಸುವುದು ಅನಿವಾರ್ಯವಾಗಿದೆ ಅಂದರು. ನಾಳೆ ಪರಲೋಕದಲ್ಲಿ ಇದಕ್ಕಿಂತ ಉನ್ನತ ಪದವಿ ಬೇರೊಂದಿಲ್ಲ.
ಅನಾಥರ ಪರಿಪಾಲಕನಾದರೆ, ಅವರಿಗೆ ಸಹಾಯ ಹಸ್ತ ಚಾಚುವವನಾದರೆ ಅವನಿಗೆ ಸಿಗುವ ಪದವಿ ಏನೆಂಬುದನ್ನು ನೀನು ತಿಳಿದಿರುವಿ. ಆದರೆ ನೀನೇನು ಮಾಡುತ್ತಿರುವಿ?. ಈ ಒಂದು ಉತ್ತಮ ಸತ್ಕರ್ಮ ನಿರ್ವಹಿಸಲು ನೀನು ತಯಾರಾಗಿರುವೆಯಾ? ನಿನ್ನ ಮನೆಯ ನೆರೆಹೊರೆಯಲ್ಲಿ, ನಿನ್ನ ಊರಿನಲ್ಲಿ ಎಷ್ಟೊಂದು ಅನಾಥ ಕುಟುಂಬವಿದೆಯೆಂದು ಗಮನ ಹರಿಸಿದ್ದೀಯಾ? ಎಷ್ಟೊಂದು ಅನಾಥ ಮಕ್ಕಳು ಮದ್ರಸ, ಶಾಲೆಯ ಬಾಗಿಲು ಕಾಣದವರಿದ್ದಾರೆಯೆಂದು ನೀನು ತಿಳಿದಿರುವೆಯಾ? ಇಸ್ಲಾಮಿನ ಹಬ್ಬಗಳ ದಿನಗಳಲ್ಲಿ ಹೊಸ ವಸ್ತ್ರವನ್ನು ಧರಿಸಲು ಭಾಗ್ಯ ಲಭಿಸದ ಎಷ್ಟು ಅನಾಥ ಮಕ್ಕಳು ಈ ಒಂದು ಕಾಲದಲ್ಲಿಯೂ ಇದ್ದಾರೆ ಎಂಬ ಸತ್ಯವನ್ನು ನೀನು ಅರಿತಿರುವೆಯಾ? ನಿನಗೆ ಅಲ್ಲಾಹು ಒಂದಿಷ್ಟು ಸಂಪತ್ತನ್ನು ನೀಡಿದ್ದಾನೆಯಾದರೆ ಸ್ವರ್ಗದಲ್ಲಿ ಅಲ್ಲಾಹನ ರಸೂಲ್ ಸ.ಅ ರವರೊಂದಿಗೆ ಜೊತೆಯಾಗಿ ವಾಸಿಸುವ ಸೌಭಾಗ್ಯ ಲಭಿಸಲು ಅನಾಥರನ್ನು ಸಂರಕ್ಷಿಸಲು, ಅವರಿಗೆ ಸಹಾಯ ಹಸ್ತ ಚಾಚಲು, ಅವರ ಮೇಲೆ ಕಾರುಣ್ಯದ ನೋಟ ಬೀರಲು ಶ್ರಮಿಸಿರುವೆಯಾ? 
ಈ ಸೌಭಾಗ್ಯ ನಿನಗೂ ಲಭಿಸಲು ನೀನು ದೊಡ್ಡ ಧನಿಕನಾಗಬೇಕೆಂದಿಲ್ಲ. ದೊಡ್ಡ ಶ್ರೀಮಂತನಾಗಬೇಕೆಂದಿಲ್ಲ. ನೀನು ಸೇವಿಸುವ ಆಹಾರ ಪಾನೀಯ ಯಾವುದಿದೆಯೋ ಅಂತಹದ್ದೇ ಯತೀಮರಿಗೂ ನೀಡುವವನಾಗು, ನೀನು ಧರಿಸುವ ವಸ್ತ್ರಗಳು ಯಾವುದಿದೆಯೋ ಅಂತಹದ್ದೇ ನೀಡುವವನಾಗು. ಅವರ ಮೇಲೆ ಕರುಣೆಯ ನೋಟ ಬೀರುವವನಾಗು. ನಿನಗೂ ಮೇಲೆ ತಿಳಿಸಿದ ಮಹಾ ಸೌಭಾಗ್ಯ ಲಭಿಸುವುದು.
ನಾಳೆ ಪರಲೋಕದಲ್ಲಿ ವಿಜಯಿಯಾಗಬೇಕೆಂಬ ಹಂಬಲ ಇದೆಯೋ ನಿನಗೆ ಪುರುಸೊತ್ತು ಸಿಗುವಾಗಲೆಲ್ಲಾ ಯತೀಮರ ಪಾಲನೆಯಲ್ಲಿ ಶ್ರಮಿಸು. ಆ ಸಮಯವನ್ನು ಸುಮ್ಮನೆ ವ್ಯರ್ಥ ಮಾಡದಿರು. ಆ ಸಮಯದಲ್ಲಿ ನಿನ್ನ ಮನಃ ಬೇರೆ ಏನನ್ನೋ ನಿರ್ವಹಿಸಲು ಕಲ್ಪಿಸುವಾಗ ಅನಾಥರ ಸಂರಕ್ಷಣೆ ಮಾಡಿದರೆ ಲಭಿಸುವ ಪ್ರತಿಫಲದ ಬಗ್ಗೆ ಚಿಂತಿಸು.

ಕೊನೆಯದಾಗಿ ಒಂದು ಮಾತು...
ನಿನಗೆ ಸ್ವರ್ಗದಲ್ಲಿ ಪ್ರವಾದಿ ಸ.ಅ ರವರು ಜತೆಗಾರನಾಗಿ ಸಿಗುವುದು ನೀನು ಇಷ್ಟಪಡುವುದಿಲ್ಲವೇ......

ಮುಂದುವರಿಯುವುದು ಇಂಶಾಅಲ್ಲಾಹ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...