ವಹ್ಹಾಬಿಗಳ ತರಾವೀಹ್ ನಮಾಜಿನ ಲೆಕ್ಕದಲ್ಲಿರುವ ವೈರುದ್ಯಗಳು
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
ತರಾವೀಹ್ ರಮಳಾನಿನ ಪ್ರತ್ಯೇಕ ಸುನ್ನತ್ತ್ ನಮಾಝಾಗಿದೆಯೆಂದು ಅದು 20 ರಕ್ಅತಾಗಿದೆಯೆಂದು, ಸಲಫಿ ಸ್ಥಾಪಕ ನೇತಾರುಗಳಾದ ಟಿ.ಕೆ. ಮೌಲವಿ. ಈ.ಕೆ. ಮೌಲವಿ. ಎಂ.ಸಿ.ಸಿ. ಮೌಲವಿ. ಎಂಬವರು ಜಂಟಿಯಾಗಿ ಬರೆದ ಕರ್ಮಶಾಸ್ತ್ರ ಪುಸ್ತಕದಲ್ಲಿ ಕಲಿಸಲಾಗುತ್ತದೆ.
*ಅವ್ವಲು ಫಿಲ್ ಅಮಲಿಯಾತ್* ಎಂಬ ಪ್ರಸ್ತುತ ಪುಸ್ತಕದ 6ನೇ ಆವರ್ತಿಯನ್ನು ಹೊರ ತಂದದ್ದು 1936ರಲ್ಲಿ ಆಗಿತ್ತು. ಆ ಆವೃತಿಯಲ್ಲೂ ಸ್ವಲ್ಪವೂ ವ್ಯತ್ಯಾಸವಿಲ್ಲದೆ ಈ ವಿಷಯನ್ನು ಕಲಿಸಲಾಗುತ್ತಿತ್ತು.
ಆದರೆ 1938ರಲ್ಲಿ 7ನೇ ಆವರ್ತಿ ಹೊರ ಬಂದಾಗ ಆ ಆವರ್ತಿಯಲ್ಲಿ *ರಕ್ಅತಿನ* ಲೆಕ್ಕವನ್ನು ನಮೂದಿಸಲಿಲ್ಲ..!!
ಅಂದಿನಿಂದ ತರಾವೀಹ್ ಕೇರಳ ಮುಸ್ಲಿಂಗಳ ಎಡೆಯಲ್ಲಿ ಒಂದು ವಿವಾದವಾಗಲು ಶುರುವಾಯಿತು.
ಅದೇನೆಂದರೆ..
1922ರಲ್ಲಿ ಕೇರಳದಲ್ಲಿ ಮುಜಾಹಿದ್'ಗಳು 'ಸರಿಯಾದ ಇಸ್ಲಾಂ' ಕಲಿಸಲು ಬಂದು 16 ವರ್ಷ ಕಳೆದ ನಂತರವಾಗಿತ್ತು ತರಾವೀಹ್ 8 ರಕ್ಅತಾಗಿದೆಯೆಂದು ಅವರಿಗೆ ತಿಳಿಯುವುದು.
1941ರ ನಂತರ ಕೇರಳದ ಕೊಲ್ಲಂ ಜಿಲ್ಲೆಯ ಚಿನ್ನಕಡ ಎಂಬ ಸ್ಥಳದಲ್ಲಿ 8 ರಕ್ಅತ್ ಆಗಿ ಜಾರಿಗೊಳಿಸಲು ಮೌಲವಿಗಳು ಆಗಮಿಸಿದಾಗ ಅಂದಿನ ಅಲ್ಲಿಯ ಮುಸ್ಲಿಂಗಳು ಅದಕ್ಕೆ ಸಮ್ಮತಿಸಲಿಲ್ಲ.
ಕೇರಳದ ಕೆಲವು ಕಡೆ ಗಳಲ್ಲಿ 8 ರಕ್ಅತಾಗಿ ಜಾರಿಗೊಳಿಸುತ್ತಾ ಬರುತ್ತಿರುವಾಗ ಯಾವುದೊ ಒಬ್ಬ ಮೌಲವಿ *ತರಾವೀಹ್ 11 ರಕ್ಅತ್ತಾಗಿದೆಯೆಂದು ಕಂಡು ಹಿಡಿದನು.🤣*
ಹೀಗೆ 1969ಗಳಲ್ಲಿ 11 ರಕ್ಅತ್ ತರಾವೀಹ್ ಎಂದು ವಾದಿಸಿದ್ದರು.
*ವಿತ್'ರ್ ನಮಾಜಿನ ಹದೀಸನ್ನು ತರಾವೀಹ್ ನಮಾಜಿಗೂ ಪುರಾವೆಯಾಗಿ ಮಾಡಬಹುದೆಂದು ಹೇಳಿ ಆ ಕಾಲದಿಂದ ತರಾವೀಹ್ ಮತ್ತು ವಿತ್'ರ್ ಒಂದೇ ನಮಾಝ್ ಆಗಿದೆಯೆಂದು ವಾದಿಸಲು ಆರಂಭಿಸಿದರು.*
ತದನಂತರ ಕೆಲವು ಸನ್ನಿವೇಶಗಳನ್ನು ನೋಡಿ 8 ರಕ್ಅತೆಂದೂ, ಕೆಲವೊಮ್ಮೆ 11 ರಕ್ಅತ್ತೆಂದು ಹೇಳಲು ಶುರು ಮಾಡಿದರು.
1996 ಸೆಪ್ಟ0ಬರ್' ತಿಂಗಳಿನ ಮಲಯಾಳಂನ ಅಲ್ ಇಸ್ಲಾಹಿ ಎಂಬ ಪುಸ್ತಕದಲ್ಲಿ 8ಕ್ಕೆ ಪುರಾವೆ ತೋರಿಸದಿರುವುದು, 2006 ಸೆಪ್ಟ0ಬರ್ ತಿಂಗಳಲ್ಲಿ ಹೊರ ಬಂದ ಶಾಬಾಬ್ ನಲ್ಲೂ 8ಕ್ಕೆ ಪುರಾವೆಗಳು ಇರಲಿಲ್ಲ.
ತರಾವೀಹ್ 11 ರಕ್ಅತ್ ಆಗಿದೆಯೆಂದು ಬರೆಯ ಬೇಕಾಗಿ ಬರೆದಿರುವುದನ್ನು, ಸಲಫಿಗಳು ಹಾಗು ನಾವು ನೋಡಿರುತೇವೆ.
*ಮತ್ತೆ 8 ರಕ್ಅತ್ತನ್ನು ಬಿಟ್ಟು 11 ರಕ್'ತಾಗಿ ನಿಶ್ಚಯಿಸಿದರು. ಇದರಿಂದ ಹೆಚ್ಚು ನಮಾಜ್ ಮಾಡಿದರೆ ಅದು ಬಿದ್'ಅತ್ತಾಗಿದೆಯೆಂದು ವಾದಿಸುತ್ತಿದ್ದರು.*
ನಂತರ ಕೊನೆಗೆ 2015ರಲ್ಲಿ 11ರಿಂದ ಹೆಚ್ಚು ತರಾವೀಹ್ ಬಿದ್'ಅತ್ತಾಗಿದೆಯೆಂದು ಸಲಫಿಗಳು ಯಾರು ಕೂಡ ಹೇಳಲಿಲ್ಲವೆಂದು ಸಮ್ಮತಿಸಿ ಖೇದ ಪ್ರಕಟಿಸಿ ಅಲ್ ಇಸ್ಲಾಹ್ ಮಾಸಿಗೆಯಲ್ಲಿ ಮರು ಪ್ರಸದಿಕರಿಸಿದರು.
*ಇದಾಗಿದೆ ಕೇರಳ/ಕರ್ನಾಟಕ ವಹ್ಹಾಬಿಗಳ ತರಾವೀಹ್ ನಮಾಜಿನ ಚರಿತ್ರೆ*
ಚರಿತ್ರೆ ತಿಳಿದವರು/ ಪರಲೋಕ ಚಿಂತೆಯುಳ್ಳವರು ಹೇಗೆ ತಾನೇ ಮಜಾಹೀದ್/ಸಲಫಿ ಆಗಲು ಸಾಧ್ಯವಾಗುವುದು...!?
🤡 ಕಡಿಮೆ ಅವಧಿಯ ಕಾಲದೊಳಗೆ ಒಂದು ನಮಾಜಿನ ರಕ್'ಅತ್ 20 ಆಗಿದೆ, ಅಲ್ಲ 8 ಆಗಿದೆ, 11 ಆಗಿದೆ, ಅಲ್ಲ 8 ಯೇ ಆಗಿದೆ, ಅಲ್ಲ 8ಕ್ಕೆ ಪುರಾವೆ ಇಲ್ಲ. 11 ಸರಿಯಾಗಿದೆ....
ಹೀಗೆ ಮೌಲವಿಗಳಿಗೆ ಹೇಳಲು ಬೇಕಾದದ್ದು ಯಾಕಾಗಿರಬಹುದು..?🤔
😈ಈಗ 11 ಎಂದು ಹೇಳುವ ಪುರಾವೆಗಳೆಲ್ಲ 1941 ವರೆಗೆ ಒಂದು ಮೌಲವಿಗೂ ಕಾಣಲು ಸಾಧ್ಯವಾಗಿಲ್ಲವಂತೆ..? 🤗
🔮 1941ರ ವರೆಗಿರುವ ಮೌಲವಿಗಳು ಕಂಡ ಬುಖಾರಿ ಅಲ್ವಾ ಇಂದು ಇರುವುದು???? 🤠
🔵 ಕಾಲ ಕಳೆಯುವಂತೆ ಹದೀಸುಗಳು ಬದಲಿಯಾಗುವುದಾ??
🔵ಇಲ್ಲವಾದರೆ ಸ್ವಲ್ಪ ಕಾಲ 20, ನಂತರ 8, ನಂತರ 11, ಈ ರೀತಿ ಹದೀಸಿನಲ್ಲೆಲ್ಲೋ ಮೌಲವಿಗಳು ಕಂಡಿರಬೇಕು..🤔
🔮 ಈ ತರ ಒಂದು ನಮಾಝಿನ ವಿಷಯದಲ್ಲಿ ವೈರುಧ್ಯಗಳನ್ನು ಬರೆದಿಟ್ಟು ಕೂಡ ಅನುಯಾಯಿಗಳು ಕುರುಡರಾಗಿ ಇವರನ್ನು ನಂಬುವುದು ಯಾವ ಕಾರಣಕ್ಕೆ ಎಂದು ತಿಳಿಯುದಿಲ್ಲ!!
✍ ಗಫೂರ್ ಬಾಯಾರ್
🍂🍂🍂🍂🍂🍂🍂
Comments
http://brtaslim.com/wp-content/uploads/2016/10/2016-08-22-AUDIO-00000040.mp3
528) Is any swalat or dua between every two rakat of Taraweeh? ತರಾವೀಹ್’ನ ನಡುವಿನಲ್ಲಿ ದುಆ?
http://brtaslim.com/wp-content/uploads/2017/05/2017-05-28-AUDIO-00000550.mp3