Skip to main content

ವಿಶ್ವ ವಿಸ್ಮಯ ✒️ಅಬ್ದುಲ್ ನಾಸಿರ್ ಕಾವೂರು ಭಾಗ 2

ವಿಶ್ವ ವಿಸ್ಮಯ
✒️ಅಬ್ದುಲ್ ನಾಸಿರ್ ಕಾವೂರು
ಭಾಗ 2

ಇದನ್ನು ಪೂರ್ಣವಾಗಿ ಓದಿ. ಸ್ವಲ್ಪ ಉದ್ಧವಿದೆ ಎಂದು ಓದದೆ ಇರಬೇಡಿ. ಓದುತ್ತಾ ಹೋದಂತೆ ನಿಮ್ಮ ನಾಲಗೆಯಲ್ಲಿ "ಸುಬುಹಾನಲ್ಲಾಹ್" ಎಂದು ಹೇಳಿಯೇ ಹೇಳುತ್ತೀರಿ.

*★بسم الله الرحمان الرحيم★*

*اَلصَّلَاةُ وَالسَّلَامُ عَلَيْكَ يَا سَيَّدِي يَارَسُولَ اللّٰهِ يَاحَبِيب ﷺفِدَاكَ اَبِى وَاُمِّى يَارَسُولَ اللّهِﷺ💚*

*ವಿಶ್ವದ ಸೃಷ್ಠಿ*
➖➖➖➖➖➖

ಇಡೀ ವಿಶ್ವವು ಮುಂಚೆ ಬೃಹತ್ ದೈತ್ಯಾಕಾರದ ಒಂದೇ ಒಂದು ಆಕಾಶಕಾಯವಾಗಿತ್ತು. ನಂತರ ಅದು ತುಂಬಾ ಒತ್ತಡದಿಂದ ಮಹಾ ವಿಸ್ಪೋಟಗೊಂದು ಬೇರೆ ಬೇರೆಯಾಗಿ ದೂರದವರೆಗೆ ಸಾಗಿ ಎಷ್ಟೋ ಕೋಟ್ಯಾನುಕೋಟಿ ಗ್ರಹಗಳು ನಕ್ಷತ್ರಗಳು ಗೆಲಕ್ಸಿಗಳು ಸೃಷ್ಟಿಯಾದವು. ಈ ಮಹಾ ವಿಸ್ಪೋಟದ ಬಗ್ಗೆ *"ಪವಿತ್ರ ಖುರ್ ಆನಿನಲ್ಲಿ"* ಅಲ್ಲಾಹು ಹೇಳಿದ್ದಾನೆ.

ಬೇರೆ ಬೇರೆ ಆದ ಕೋಟ್ಯಾನುಕೋಟಿ ತುಂಡಿನ ಪೈಕಿಯಲ್ಲಿರುವ ಒಂದು ಸಣ್ಣ ಕಣವಾಗಿದೆ ನಾವು ಜೀವಿಸುತ್ತಿರುವ ಈ ಮಹಾ ಭೂಮಿ. ಸಮುದ್ರ ತೀರದಲ್ಲಿ ಎಷ್ಟು ಮರಳಿನ ಚಿಕ್ಕ ಚಿಕ್ಕ ಕಣಗಳಿವೆಯೂ ಅದಕ್ಕಿಂತಾ ಎಷ್ಟೋ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಗ್ರಹಗಳು ಮತ್ತು ಸೂರ್ಯನಂತಿರುವ ಮತ್ತು ಸೂರ್ಯನಿಗಿಂತಲೂ ಕೋಟಿ ಪಟ್ಟು ದೊಡ್ಡದಿರುವ ದೈತ್ಯ ನಕ್ಷತ್ರಗಳು ಈ ವಿಶ್ವದಲ್ಲಿದೆ.

ಈ ವಿಶ್ವ ಎಷ್ಟು ದೊಡ್ಡದಿದೆ ಎಂದು ನಾವು ಉದಾಹರಣೆಗಾಗಿ  ನೋಡುವುದಾದರೆ  *"ನಾವು ನಮ್ಮ ಈ ಭೂಮಿಯನ್ನು ವಿಶ್ವ ಅಂದಿಟ್ಟುಕೊಳ್ಳುವ ಈ ಭೂಮಿಯಲ್ಲಿರುವ ಒಂದು ಸಣ್ಣ ಮರಳಿನ ಕಣವಾಗಿದೆ ನಮ್ಮ ಈ ಭೂಮಿ ಎಂದು ನಾವು ಅಂದಾಜಿಸಬಹುದು. ವಿಶ್ವದ ಗಾತ್ರಕ್ಕೆ ಹೋಲಿಸಿದರೆ ನಮ್ಮ ಭೂಮಿ ಕೇವಲ ಮರಳ ಕಣ ಮಾತ್ರವಾಗಿದೆ. (ಸುಬುಹಾನಲ್ಲಾಹ್) ಅಷ್ಟೊಂದು ವಿಶಾಲವಾಗಿ ಹರಡಿದೆ ಈ ವಿಸ್ಮಯವಾದ ವಿಶ್ವ."*

*ಭೂಮಿ*
➖➖➖➖➖➖

ಸಣ್ಣ ಒಂದು ಮರಳಿನ ಕಣಕ್ಕೆ ಉದಾಹರಣೆ ಮಾಡಿದ ಈ ವಿಶಾಲ ಭೂಮಿಯು ಎಷ್ಟೂ ದೊಡ್ಡದಿದೆ. ಇಡೀ ಭೂಲೋಕವು 75% ನೀರಿನಿಂದ ತುಂಬಿದೆ. ಉಳಿದ ತುಂಡಿನಲ್ಲಿ 75% ಕಾಡುಗಳು ತುಂಬಿದೆ. ಎಲ್ಲವನ್ನು ತೆಗೆದರೂ ಕೂಡಾ ಜನರು ವಾಸವಾಗಿರುವ ಬಾಕಿ ಇರುವ ಪ್ರದೇಶ ಎಷ್ಟೊಂದು ನಗರಗಳು, ಪರ್ವತಗಳು ಇವೆಲ್ಲವೂ ಎಷ್ಟೆಷ್ಟು ದೊಡ್ಡದಿದೆಯೆಂದು ನಾವು ಚಿಂತಿಸಬೇಕಾಗಿದೆ.

ಈ ನಮ್ಮ ಭೂಮಿಯಲ್ಲಿ 195 ದೇಶಗಳು, 85ಲಕ್ಷ ಜಾತಿ ಜೀವಿಗಳು, 5 ಮಹಾ ಸಮುದ್ರಗಳು ಇವುಗಳೆಲ್ಲವೂ ಸೇರಿದೆ. ಈ ಭೂಮಿ ಎಷ್ಟು ದೊಡ್ಡದಾಗಿದೆಯಂದರೆ ಒಬ್ಬ ಮನುಷ್ಯನು ಭೂಮಿ ಪೂರ್ತಿ ಸುತ್ತಬೇಕಾದರೆ ಬರೋಬ್ಬರಿ 11 ವರ್ಷಗಳು ಬೇಕು. ಅಷ್ಟೊಂದು ವಿಶಾಲವಾಗಿದೆ ನಮ್ಮ ಈ ಭೂಮಿ.

*ಚಂದ್ರ*
➖➖➖➖➖➖

ರಾತ್ರಿವೇಳೆಯಲ್ಲಿ ನಮಗೆ ತುಂಬಾ ಹತ್ತಿರವಿರುವಂತೆ ಸ್ಪಷ್ಟವಾಗಿ ಕಾಣುವ  ಚಂದ್ರವು ನಾವು ಭಾವಿಸಿದಂತೆ ಹತ್ತಿರವಿಲ್ಲ. ಅದು ಭೂಮಿಯಿಂದ ಸುಮಾರು 3ಲಕ್ಷ 84ಸಾವಿರದ 400 ಕಿ.ಮಿ ಧೂರದಲ್ಲಿದೆ. ಅಂದರೆ ಚಂದ್ರ ಮತ್ತು ಭೂಮಿಯ ಮಧ್ಯೆ ಭೂಮಿಯ ಗಾತ್ರದಲ್ಲಿರುವ 30 ಗ್ರಹಗಳನ್ನು ಇಡಬಹುದು ಅಷ್ಟೊಂದು ಅಂತರವಿದೆ.

ಚಂದ್ರ ಮತ್ತು ಭೂಮಿಯ ನಡುವೆ ಎಷ್ಟು ಅಂತರವಿದೆ ಅನ್ನುವುದರ ಇನ್ನೊಂದು ಉದಾಹರಣೆ ನೋಡಿ; ಭೂಮಿ ಹಾಗೂ ಚಂದ್ರನ ಮಧ್ಯೆ ಸೌರವ್ಯೋಹದಲ್ಲಿರುವ ದೈತ್ಯಾಗ್ರಹಗಳನ್ನೊಳಗೊಂಡ ಬಾಕಿ 7 ಗ್ರಹಗಳನ್ನು ಇಟ್ಟರೂ ಕೂಡಾ ಇನ್ನೂ 8ಸಾವಿರ ಕಿ.ಮಿ ಅಂತರವಿರುತ್ತದೆ. ಅಷ್ಟೊಂದು ವಿಶಾಲವಿದೆ ಭೂಮಿ ಮತ್ತು ಚಂದ್ರನ ನಡುವೆ. ಅದೂ ಕೂಡಾ ಚಂದ್ರ ಬೇರೆ ಗ್ರಹವಲ್ಲ ಭೂಮಿಯ ಉಪಗ್ರಹ ಮಾತ್ರ. ಇನ್ನು ಬೇರೆ ಗ್ರಹಗಳು ಎಷ್ಟು ಧೂರದಲ್ಲಿರಬೇಕು.

ಚಂದ್ರನ ಗುರುತ್ವಾಕರ್ಷಣಾ ಬಲ ಭೂಮಿಯ ಗುರುತ್ವಾಕರ್ಷಣದ 6ನೇ ಒಂದು ಭಾಗ ಮಾತ್ರ. ಅಂದರೆ ಭೂಮಿಯ ಮೇಲೆ 100 ಕಿಲೋ ತೂಕ ಇರುವವನು ಚಂದ್ರನ ಮೇಲೆ ಹೋದರೆ ಅವನ ತೂಕ ಬರೀ 16.5 ಕಿಲೋ ಮಾತ್ರವಾಗಿರುತ್ತೆ. ಆದರೆ ಸೂರ್ಯನ ಮೇಲೆ  ಹೋದರೆ ಅದೇ 100 ಕಿಲೋ ಇರುವ ವ್ಯಕ್ತಿ ಬರೋಬ್ಬರಿ 1,800 ಕಿಲೋ ತೂಗುತ್ತಾನಂತೆ, ಕಾರಣ ಸೂರ್ಯನ ಗುರುತ್ವಾಕರ್ಷಣೆ ಭೂಮಿಗಿಂತಾ 18 ಪಟ್ಟು ಹೆಚ್ಚಿರುತ್ತದೆ. (ಸೂರ್ಯನ ಮೇಲೆ ಹೋಗಲು ಸಾಧ್ಯವಿಲ್ಲ ಅಂತ ಎಲ್ಲರಿಗಿಯೋ ಗೊತ್ತಿದೆ. ಇದನ್ನು ಹೇಳಿದ್ದು ಸೂರ್ಯನ ಗುರುತ್ವಾಕರ್ಷಣೆಯನ್ನು ವಿವರಿಸಲಿಕ್ಕಾಗಿದೆ.) ಇನ್ನು ನಾವು ಸ್ಪೇಸ್ (ಅಂತರೀಕ್ಷಕ್ಕೆ) ಗೆ ಹೋದರೆ ಅಲ್ಲಿ ನಮ್ಮ ತೋಕ ಸೊನ್ನೆ ಆಗಿರುತ್ತದೆ. ಕಾರಣ ಅಲ್ಲಿ ಗುರುತ್ವಾಕರ್ಷಣೆಯೇ ಇರುವುದಿಲ್ಲ. ಅಲ್ಲಿ ಎಲ್ಲಾ ವಸ್ತುವು ತೇಲುತ್ತನೇ ಇರುತ್ತದೆ. (ಅಂತರೀಕ್ಷದ ಬಗ್ಗೆ 1ನೇ ಭಾಗದಲ್ಲಿ ವಿವರಿಸಲಾಗಿದೆ)

ಭೂಮಿಯಲ್ಲಿ ನಮಗೆ ಚಂದ್ರ ಹೇಗೆ ಕಾಣುತ್ತದೆಯೂ ಅದೇ ರೀತಿಯಲ್ಲಿ ಚಂದ್ರನಮೇಲೆ ನಾವು ಹೋದರೆ ನೀಲಿ ಬಣ್ಣದ ಸುಂದರವಾದ ಪೂರ್ಣ ಭೂಮಿಯು ವೃತ್ತಾಕಾರವಾಗಿ ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತದೆ.

*ಸೌರವ್ಯೂಹ*
➖➖➖➖➖➖

ಇನ್ನೂ ಮೇಲೆ ಹೋದರೆ ನಮಗೆ ಕಾಣುವುದು ಸೌರವ್ಯೂಹ. *ಗ್ರಹಗಳು, ಉಪಗ್ರಹಗಳು, ಧೂಮಕೇತುಗಳು, ಕ್ಷುದ್ರಗ್ರಹಗಳು, ಹಾಗೂ ಉಲ್ಕೆಗಳ ಸಮೂಹವಾಗಿದೆ ಸೌರವ್ಯೂಹ.* ಸೌರವ್ಯೂಹದಲ್ಲಿ ಒಂದೇ ಒಂದು ನಕ್ಷತ್ರವಿರುತ್ತದೆ. ಅದುವೇ ಸೂರ್ಯ. (ಸೂರ್ಯನ ಗಾತ್ರದ ಬಗ್ಗೆ ಕೆಳಗಡೆ ವಿವರಿಸಲಾಗಿದೆ) ಸೌರವ್ಯೂಹದಲ್ಲಿರುವ ದೈತ್ಯ ಗ್ರಹಗಳಿಗೆ ನಮ್ಮ ಭೂಮಿಯನ್ನು ತುಲನೆ ಮಾಡಿದರೆ ಭೂಮಿಯು ಒಂದು ಚಿಕ್ಕ ಕಣ ಮಾತ್ರವಾಗಿದೆ. ಭೂಮಿಗಿಂತಲೂ ಎಷ್ಟೋ  ದೊಡ್ಡದಿರುವ ಗ್ರಹ ನಮ್ಮ ಸೌರವ್ಯೂಹದಲ್ಲೇ ಇದೆ. ಇಲ್ಲಿ ನಮ್ಮ ಭೂಮಿಯ ಜೊತೆ ಇನ್ನು 8 ಗ್ರಹಗಳು ಇರುತ್ತದೆ. ಅವುಗಳು *1.Mercury(ಬುದಗ್ರಹ) 2.Venus(ಶುಕ್ರಗ್ರಹ), 3.Earth(ಭೂಮಿ), 4.Mars(ಮಂಗಳಗ್ರಹ), 5.Jupiter(ಗುರುಗ್ರಹ), 6.Saturn(ಶನಿಗ್ರಹ), 7.Uranus, 8.Neptune, 9.Pluto.* ಚಂದ್ರ ಇದರಲ್ಲಿ ಬರುವುದಿಲ್ಲ ಅದು ಭೂಮಿಯ ಉಪಗ್ರಹವಾಗಿದೆ. ಸೌರವ್ಯೂಹದಲ್ಲಿರುವ ಇತರ ಗ್ರಹಗಳಿಗೂ ಚಂದ್ರನಂತಹಾ ಉಪಗ್ರಹಳಿವೆ. ಕೆಲವೊಂದು ಗ್ರಹಗಳಿಗೆ ಒಂದಕ್ಕಿಂತಾ ಅಧಿಕ ಉಪಗ್ರಹಗಳಿವೆ. ಭೂಮಿಗೆ ಒಂದೇ ಉಪಗ್ರಹವಾಗಿದೆ ಇರುವುದು ಅದುವೇ ಚಂದ್ರ. ಸೌರವ್ಯೂಹದಲ್ಲಿ ಅತೀ ದೊಡ್ಡ ಗ್ರಹವಾದ ಗುರುಗ್ರಹಕ್ಕೆ ಒಟ್ಟು 67 ಚಂದ್ರನಂತಿರುವ ಉಪಗ್ರಹಗಳಿವೆ. ಗುರುಗ್ರಹದ ಉಪಗ್ರಹಗಳಲ್ಲಿ ಅತೀ ಪ್ರಮುಖವಾದ 4 ಉಪಗ್ರಹಗಳಾಗಿದೆ, ಐವೋ, ಯೋರೂಪಾ, ಕ್ಯಾಲಿಸ್ಟೋ, ಗ್ಯಾನಿಮೇಡ್, ಇದರಲ್ಲಿ *ಗ್ಯಾನಿಮೇಡ್* ಎಂಬುವ ಉಪಗ್ರಹವು ಇಡೀ ಸೌರವ್ಯೂಹದಲ್ಲೇ ಅತೀ ದೊಡ್ಡ ಉಪಗ್ರಹವಾಗಿದೆ. ನಮ್ಮ ಸೌರಮಂಡಲದಲ್ಲೇ ಚಂದ್ರನಂತಿರುವ 181 ಉಪಗ್ರಹಗಳಿವೆಯೆನ್ನುತ್ತದೆ ವಿಜ್ಞಾನ.

ನಮ್ಮ ಸೌರವ್ಯೂಹದಲ್ಲೇ ಅತೀ ದೊಡ್ಡ ಗ್ರಹವಾಗಿದೆ ಗುರುಗ್ರಹ (ಜುಪಿಟರ್) ಮೇಲೆ ತಿಳಿಸಿದಂತೆ ಇದಕ್ಕೆ ಚಂದ್ರನಂತಿರುವ ಒಟ್ಟು 67 ಉಪಗ್ರಹಗಳಿವೆ. ಇದು ಭೂಮಿಯ ಗಾತ್ರಕ್ಕಿಂತಲೂ ಸಾವಿರ ಪಟ್ಟು ದೊಡ್ಡದಿದೆ. ಅಂದರೆ, ಭೂಮಿಯಷ್ಟು ಗಾತ್ರದ ಒಂದು ಸಾವಿರಕ್ಕಿಂತಲೂ ಅಧಿಕ  ಗ್ರಹಗಳು ಒಟ್ಟು ಗೂಡಿದರೆ ಅದರ ಗಾತ್ರ ಎಷ್ಟಾಗಬಹುದು ಅಷ್ಟು ದೊಡ್ಡದಿದೆ ಗುರುಗ್ರಹ. ಗುರುಗ್ರಹದ ಮೇಲೆ ಇಡೀ ಉತ್ತರ ಅಮೇರಿಕ ಖಂಡವನ್ನು ಇಟ್ಟರೆ ಅದು ಒಂದು ಸಣ್ಣ ಹಸಿರು ಮಚ್ಚೆಯಂತೆ ಕಾಣುತ್ತದೆ. ಗುರುಗ್ರಹವು ಸಂಪೂರ್ಣ ಗ್ಯಾಸ್ ನಿಂದ ಕೂಡಿದೆ.

ಸೌರವ್ಯೋಹದ 2ನೇ ದೊಡ್ಡ ಗ್ರಹವಾಗಿದೆ ಸುಂದರವಾದ ಉಂಗುರವಿರುವ ಶನಿ ಗ್ರಹ. ಕೇವಲ ಇದರ ಉಂಗುರ ಎಷ್ಟು ದೊಡ್ಡದಿದೆ ಅಂದರೆ ಆ ಉಂಗುರದಲ್ಲಿ ಎಷ್ಟೋ ಭೂಮಿಯ ಗಾತ್ರದ ಗ್ರಹಗಳನ್ನು ಇಡಬಹುದಂತೆ. ಸೌರವ್ಯೂಹದ ಐದನೇ ದೊಡ್ಡ ಗ್ರಹವಾಗಿದೆ ನಮ್ಮ ಭೂಮಿ.

ಸೌರವ್ಯೂಹ ಎಷ್ಟು ದೊಡದಿದೆ ಅಂದರೆ ವೈಜರ್ 1 ಎಂಬ ಸ್ಪೇಸ್ ಕ್ರಾಫ್ಟ್ ಇದೆ. ಇದು ಮಾನವನು ನಿರ್ಮಿಸಿದ ಅತೀ ವೇಗವಾಗಿ ಚಲಿಸುವ ಸ್ಪೇಸ್ ಕ್ರಾಫ್ಟ್ ಆಗಿದೆ. ಇದು ಕೇವಲ ಒಂದು ಸೆಕೆಂಡಿಗೆ 17ಕಿ.ಮಿ ವೇಗದಲ್ಲಿ ಚಲಿಸುತ್ತದೆಯಂತೆ. ಇದು ಭೂಮಿಯಿಂದ 1977 ರಿಂದ ಅಂದರೆ ಕಳೆದ 42 ವರ್ಷಗಳಿಂದ ಚಲಿಸುತ್ತಲೇ ಇದೆಯಂತೆ. ಇದು ನಮ್ಮ ಸೌರವ್ಯೂಹವನ್ನು ದಾಟಿ ಹೋಗಲು ಇನ್ನೂ ಬರೋಬ್ಬರಿ 30 ಸಾವಿರ ವರ್ಷಗಳು ಬೇಕಂತೆ. ಅಷ್ಟೊಂದು ವಿಶಾಲವಿದೆ ನಮ್ಮ ಸೌರವ್ಯೋಹ.

*ಸೂರ್ಯ*
➖➖➖➖➖➖

ಈ ವಿಶಾಲವಾದ ಭೂಮಿಯ ಗಾತ್ರವನ್ನು ಸೂರ್ಯಕ್ಕೆ ಹೋಲಿಸಿದರೆ ಭೂಮಿಯನ್ನು ಬರೀಗಣ್ಣಿನಿಂದ ನೋಡಲು ಸಾಧ್ಯವೇ ಇಲ್ಲದಷ್ಟು ಚಿಕ್ಕದಾಗಿ ಬಿಡುತ್ತದೆ. ಸೂರ್ಯನ  ಮುಂದೆ ಭೂಮಿಯು ಸಣ್ಣ ಒಂದು ಚುಕ್ಕೆ ಮಾತ್ರವಾಗಿದೆ. ಸೂರ್ಯವು ಭೂಮಿಯಿಂದ *15ಕೋಟಿ* ಕಿ.ಮಿ ದೂರದಲ್ಲಿದೆ. ಆದರೂ ಸೂರ್ಯನನ್ನು ಬರಿಗಣ್ಣಿನಿಂದ ನೋಡಲು ನಮ್ಮಿಂದ ಸಾಧ್ಯವಾಗಲ್ಲ. ಅಷ್ಟೊಂದು ಪ್ರಕಾಶಮಾನವಾಗಿದೆ ಸೂರ್ಯ. ಸೂರ್ಯನ ತೂಕ 20ಲಕ್ಷ ಟ್ರಿಲಿಯನ್ ಟ್ರಿಲಿಯನ್ ಟನ್ನುಗಳಾಗಿವೆ ಎನ್ನುತ್ತದೆ ವಿಜ್ಞಾನ. (ಈ ಅಂಖೆಗಳನ್ನು ಬರೆಯಬೇಕಾದರೆ 20 ರ ಪಕ್ಕದಲ್ಲಿ 24 ಸೊನ್ನೆಗಳನ್ನು ಸೇರಿಸಬೇಕಾಗುತ್ತದೆ.) ನಮಗೆ 2ಫೀಟಿನಷ್ಟು ಸಣ್ಣದ್ದಾಗಿ ಕಾಣುವ ಸೂರ್ಯನ ಗಾತ್ರವೆಷ್ಟು ಗೊತ್ತಾ.... ಭೂಮಿಗಿಂತ ಹತ್ತು ಲಕ್ಷ ಪಟ್ಟು ದೊಡ್ಡದಿದೆ. ಅಂದರೆ ಭೂಮಿಯಷ್ಟು ಗಾತ್ರದ ಒಟ್ಟು *10ಲಕ್ಷ* ಗ್ರಹಗಳನ್ನು ಒಟ್ಟುಗೂಡಿಸಿದರೆ ಎಷ್ಟು ದೊಡ್ಡದಿರಬಹುದು ಅಷ್ಟು ದೊಡ್ಡದಿದೆ ಪ್ರಜ್ವಲಿಸುವ ಸೂರ್ಯ. ಆದರೆ ನಮ್ಮ ಗೆಲಕ್ಸಿಗೆಯ ನಕ್ಷತ್ರಗಳಿಗೆ ಸೂರ್ಯನನ್ನು ಹೋಲಿಸಿದರೆ ಸೂರ್ಯ ಕೇವಲ ಸಣ್ಣ ಚುಕ್ಕೆಯಷ್ಟೇ ಸೂರ್ಯನಿಗಿಂತಲೂ ಎಷ್ಟೋ ದೊಡ್ಡ ದೊಡ್ಡ ದೈತ್ಯ ನಕ್ಷತ್ರಗಳು ನಮ್ಮ ಮಿಲ್ಕಿವೇ ಗೆಲಕ್ಸಿಯಲ್ಲಿದೆ. ಉದಾ ಹರಣೆಗಾಗಿ; ನಮ್ಮ ಮಿಲ್ಕಿವೇ ಗೆಲಕ್ಸಿಯಲ್ಲಿ  *VY canis majoris* ಎಂಬ ದೈತ್ಯ ನಕ್ಷತ್ರವಿದೆ ಅದರಮುಂದೆ ಸೂರ್ಯನನ್ನು ಇಟ್ಟರೆ ಸೂರ್ಯನು ಕೇವಲ ಒಂದು ಚುಕ್ಕೆಯಾಗಿ ಕಾಣಿಸುತ್ತಾನೆ. ಅಂದರೆ *VY canis majoris* ಎಂಬ ದೈತ್ಯ ನಕ್ಷತ್ರವು ಸೂರ್ಯನಿಗಿಂತ 290 ಕೋಟಿಯಷ್ಟು ದೊಡ್ಡದಿದೆಯಂತೆ. ಅಂದರೆ 290 ಕೋಟಿ ಸೂರ್ಯನನ್ನು ಒಟ್ಟುಗೂಡಿಸಿದರೆ ಆಗುವ ಗಾತ್ರ ಎಷ್ಟಿರಬಹುದು ಅಷ್ಟು ದೈತ್ಯಾಕಾರವಾಗಿದೆ *VY canis majoris* ಎಂಬ ನಕ್ಷತ್ರ. (ನಾವು ಇಲ್ಲಿ ಗಮನಿಸಬೇಕಾಗಿದೆ ಸೂರ್ಯನು 10 ಲಕ್ಷ ಭೂಮಿಯ ಗಾತ್ರಕ್ಕೆ ಸಮನಾಗಿದ್ದಾನೆ. ಅಂತಹಾ 290 ಕೋಟಿ ಸೂರ್ಯನಿಗೆ ಸಮವಂತೆ ಈ *VY canis majoris* ಎಂಬ ದೈತ್ಯ ನಕ್ಷತ್ರ. "ಸುಬುಹಾನಲ್ಲಾಹ್") ಸೂರ್ಯ ಇರುವುದು ಮಿಲ್ಕಿವೇ ಗೆಲಕ್ಸಿಯಲ್ಲಿ. ಮಿಲ್ಕಿವೇ ಗೆಲಕ್ಸಿಯಲ್ಲಿಯೇ ಸುಮಾರು 100 ರಿಂದ 400 ಬಿಲಿಯನ್ ಸೂರ್ಯಾನಂತಹಾ ಮತ್ತು ಅದಕ್ಕಿಂತಲೂ ಎಷ್ಟೋ ಕೋಟಿಪಟ್ಟು ದೊಡ್ಡದಿರುವ ದೈತ್ಯಾಕಾರದ ನಕ್ಷತ್ರಗಳಿದೆಯಂತೆ. ಇಂತಹಾ 10 ಸಾವಿರ ಕೋಟಿ ನಕ್ಷತ್ರಗಳು ಹಾಗೂ 10  ಸಾವಿರ ಕೋಟಿ ಗ್ರಹಗಳ ಮಿಶ್ರಣವೇ ನಮ್ಮ ಮಿಲ್ಕಿವೇ ಗೆಲಕ್ಸಿ. *"ಸುಬುಹಾನಲ್ಲಾಹ್"*

*ಮಿಲ್ಕಿವೇ ಗೆಲಕ್ಸಿ*
➖➖➖➖➖➖

ನಮ್ಮ ಸೌರವ್ಯೂಹ ದಾಟಿ ಹೋದರೆ ನಮಗೆ ಕಾಣಸಿಗುವುದು ನಮ್ಮ ಮಿಲ್ಕಿ ವೇ ಗೆಲಕ್ಸಿ. ನಮ್ಮ ಈ ಗೆಲಕ್ಸಿಯಲ್ಲಿ ಸೂರ್ಯನಂತಿರುವ ಮತ್ತು ಸೂರ್ಯನಿಗಿಂತಲೂ ಎಷ್ಟೋ ಪಟ್ಟು ದೊಡ್ಡದಿರುವ ಹಲವಾರು ನಕ್ಷತ್ರಗಳಿವೆ. ನಮ್ಮ ಮಿಲ್ಕಿವೇ ಗೆಲಕ್ಸಿ ಎಷ್ಟು ದೊಡ್ಡದಿದೆ ಅಂದರೆ ಅದರ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಬೇಕು ಅಂದರೆ 1ಲಕ್ಷ ಜ್ಯೋತಿ ವರ್ಷ ಪ್ರಯಾಣಿಸಬೇಕಾಗುತ್ತದೆ. ಅಂದರೆ ಒಂದು ಸೆಕೆಂಡಿಗೆ 3ಲಕ್ಷ ಕಿ.ಮೀ ವೇಗದಲ್ಲಿ ಬಿಡುವಿಲ್ಲದೆ ಒಂದು ಲಕ್ಷ ವರ್ಷ ಪೂರ್ತಿ ಪ್ರಯಾಣಿಸಬೇಕಾಗುತ್ತದೆ. *"ಸುಬುಹಾನಲ್ಲಾಹ್*" ಆದರೆ ಇಡೀ ವಿಶ್ವದಲ್ಲಿ 100 ಬಿಲಿಯನ್ ಗ್ಯಾಲಕ್ಸಿಗಳಿವೆ ಎಂದು ಸಮೀಕ್ಷೆ. ಈ ಎಲ್ಲಾ ಗ್ಯಾಲಕ್ಸಿಯನ್ನು ನೋಡುವುದಾದರೆ ನಮ್ಮ ಮಿಲ್ಕಿವೇ ಗೆಲಕ್ಸಿ ಸಣ್ಣ ಮಗು ಮಾತ್ರ ಅದಕ್ಕಿಂತಲೂ ಎಷ್ಟೂ ದೊಡ್ಡ ದೊಡ್ಡ ಗೆಲಕ್ಸಿಗಳು ವಿಶ್ವದಲ್ಲಿದೆ. ಮಿಲ್ಕಿವೇ ಗ್ಯಾಲಕ್ಸಿಯಿಂದ ಸುಮಾರು 35ಕೋಟಿ ಜ್ಯೋತಿವರ್ಷ ಚಲಿಸಿದರೆ ಅಲ್ಲಿ ಒಂದು *1C 1011* ಎಂಬ ದೈತ್ಯಗಾತ್ರದ ಗೆಲಕ್ಸಿ ಇದೆ. ಅದನ್ನು ನಮ್ಮ ಮಿಲ್ಕಿವೇ ಗ್ಯಾಲಕ್ಸಿಗೆ ಹೋಲಿಸಿದರೆ ನಮ್ಮ ಮಿಲ್ಕಿವೇ ಗೆಲಕ್ಸಿ ಸಣ್ಣ ಚುಕ್ಕೆ ಮಾತ್ರವಾಗಿದೆ. (ಚಿಂತಿಸಿ ಸೂರ್ಯನನಂತಹಾ ಮತ್ತು ಸೂರ್ಯಕ್ಕಿಂತಲೂ ಎಷ್ಟೊ ಕೋಟಿ ಕೋಟಿ ಪಟ್ಟು ದೈತ್ಯಾಕಾರದ 10 ಸಾವಿರ ಕೋಟಿ ನಕ್ಷತ್ರ ಮತ್ತು 10 ಸಾವಿರ ಕೋಟಿ ಗ್ರಹಗಳಿರುವ ನಮ್ಮ ಮಿಲ್ಕಿವೇ ಗೆಲಕ್ಸಿಯನ್ನು 1C 1011 ಗೆಲಕ್ಸಿಗೆ ಹೋಲಿಸಿದರೆ ನಮ್ಮ ಮಿಲ್ಕಿವೇ ಗೆಲಕ್ಸಿ ಸಣ್ಣ ಚುಕ್ಕೆ ಮಾತ್ರವಾಗಿದೆಯೆಂದರೆ 1C 1011 ಎಂಬ ದೈತ್ಯ ಗೆಲಕ್ಸಿಯ ಗಾತ್ರ ಎಷ್ಟು ದೊಡ್ಡದಿರಬಹುದು. "ಸುಬುಹಾನಲ್ಲಾಹ್".

*ಜ್ಯೋತಿವರ್ಷ(light year)*
➖➖➖➖➖➖

ವಿಶ್ವದ ಬಗ್ಗೆ ಅರಿಯುವಾಗ ನಾವು ಜ್ಯೋತಿವರ್ಷವನ್ನು ಅರಿಯಲೇ ಬೇಕು. ವಿಶ್ವದ ದೂರವನ್ನು ನಾವು ಕಿ.ಮಿ ನಲ್ಲಿ ಅಳೆದರೆ ಅದು ಅರ್ಥಾವಾಗಲ್ಲ. *"ಒಂದು ಜ್ಯೋತಿ ವರ್ಷ ಎಂದರೆ ಒಂದು ಸೆಕೆಂಡಿಗೆ 3ಲಕ್ಷ ಕಿ.ಮಿ ಬೆಳಕಿನ ವೇಗದಲ್ಲಿ ಚಲಿಸಿ ಒಂದುವರ್ಷಪೂರ್ತಿಯಾಗಿ ಬಿಡುವಿಲ್ಲದೆ ಪ್ರಯಾಣ ಮಾಡಬೇಕು ಆಗಲೇ ಒಂದು ಜ್ಯೋತಿವರ್ಷ ಆಗುವುದು."* ಜ್ಯೋತಿವರ್ಷದ ಬಗ್ಗೆ ಅರ್ಥವಾಗದೆ ಇದ್ದರೆ ಇನ್ನೊಂದು ಉದಾಹರಣೆ ನೋಡಿ; ಭೂಮಿಯಿಂದ 15ಕೋಟಿ ಕಿ.ಮೀ ದೂರದಲ್ಲಿರುವ ಸೂರ್ಯನ ಬಳಿ ಬೆಳಕಿನ ವೇಗದಲ್ಲಿ ಜ್ಯೋತಿವರ್ಷದ ಹೋಗುವುದಾದರೆ ಕೇವಲ 8.3 ನಿಮಿಷದಲ್ಲಿ ಹೋಗಿ ಮುಟ್ಟುತ್ತದೆ. ಇದೇ ವೇಗದಲ್ಲಿ ಒಂದುವರ್ಷ ಪೂರ್ತಿಯಾಗಿ ಬಿಡುವಿಲ್ಲದೆ ಪ್ರಯಾಣ ಮಾಡಿದರೆ ಒಂದು ಜ್ಯೋತಿ ವರ್ಷ ಎನ್ನುತ್ತೇವೆ. ಜ್ಯೋತಿ ವರ್ಷವನ್ನು ಕಿ.ಮೀ ನಲ್ಲಿ ಅಳೆವುದಾದರೆ ಒಂದು ಜ್ಯೋತಿವರ್ಷವು 9.5 ಟ್ರಿಲಿಯನ್ ಕಿ.ಮಿ ಆಗಿದೆ.

ಮೇಲೆತಿಳಿಸಿದ 1C 1011 ಎಂಬ ಗ್ಯಾಲಕ್ಸಿಯು ನಮ್ಮ ಗ್ಯಾಲಕ್ಸಿಯಿಂದ 35 ಕೋಟಿ ಜ್ಯೋತಿವರ್ಷ ದೂರದಲ್ಲಿದೆ. ಅಂದರೆ ಅಲ್ಲಿಗೆ ಹೋಗಬೇಕಾದರೆ *ಒಂದು ಸೆಕೆಂಡಿಗೆ ಬರೋಬ್ಬರಿ 3ಲಕ್ಷ ಕಿ.ಮಿ ನಂತೆ 35 ಕೋಟಿ ವರ್ಷಗಳು* ನಿರಂತರವಾಗಿ ಹೋಗುತ್ತಲೇ ಇರಬೇಕು. ಅಬ್ಬಾ.... ಅಲ್ಲಿಗೆ ಹೋಗುವುದು ಬಿಡಿ ಹೋಗುವುದನ್ನು ಊಹಿಸಲೂ ಸಾಧ್ಯವಿದೆಯೇ....? ನೋಡಿ ಎಷ್ಟೊಂದು ವಿಶಾಲವಾಗಿದೆ ಈ ವಿಶ್ವ. *"ಸುಬುಹಾನಲ್ಲಾಹ್* ಆಗಲಿಲ್ಲ ಇನ್ನೂ ಇದೆ.  ಇದೆಲ್ಲವೂ ವಿಶ್ವದ ವಿಶಾಲದ ಮುಂದೆ ಏನೂ ಅಲ್ಲ ಒಂದು ಚುಕ್ಕೆಯಷ್ಟೂ ಆಗಲಿಲ್ಲ. ವಿಶ್ವ ಅಷ್ಟೊಂದು ದೊಡ್ಡದಿದೆ.

**local groups of galaxies (ಲೋಕಲ್ ಗ್ರೂಪ್ ಆಫ್ ಗ್ಯಾಲಕ್ಸೀಸ್)*
➖➖➖➖➖➖

ನಾವು ನಮ್ಮ ಮಿಲ್ಕಿವೇ ಗೆಲಕ್ಸಿ ದಾಟಿ ಮುಂದೆ ಹೋದರೆ ನಮಗೆ ಕಾಣಸಿಗುವುದು *local groups of galaxies* ಅಂದರೆ ನಮ್ಮ ಮಿಲ್ಕಿವೇ ಗೆಲಕ್ಸಿ ರೀತಿಯ 54 ಗೆಲಕ್ಸಿಯ ಸಮೂಹವೇ *local groups of galaxies* ಇದರ ಸುತ್ತಳತೆ 1ಕೋಟಿ ಜ್ಯೋತಿವರ್ಷ ಅಂದರೆ ಅದರ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಬೇಕಾದರೆ *ಒಂದು ಸೆಕೆಂಡಿಗೆ 3ಲಕ್ಷ ಕಿ.ಮಿ ನಂತೆ ಒಂದುಕೋಟಿ ವರ್ಷಗಳು* ಬಿಡುವಿಲ್ಲದೆ ಪ್ರಯಾನಮಾಡಬೇಕಾಗುತ್ತದೆ.

*Virgo supercluster(ವರ್ಗೋ ಸೂಪರ್ ಕ್ಲಸ್ಟರ್)*
➖➖➖➖➖➖


*local groups of galaxies* ರೀತಿಯ ನೂರಾರು ಗ್ಯಾಲಕ್ಸಿಯ ಸಮೂಹವೇ *Virgo supercluster (ವರ್ಗೋ ಸೂಪರ್ ಕ್ಲಸ್ಟರ್)* ಇದರ ಸುತ್ತಳತೆ 11ಕೋಟಿ ಜ್ಯೋತಿವರ್ಷವಾಗಿದೆ. ಅಂದರೆ ಅದರ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಬೇಕಾದರೆ *ಒಂದು ಸೆಕೆಂಡಿಗೆ 3ಲಕ್ಷ ಕಿ.ಮಿ ನಂತೆ 11 ಕೋಟಿ ವರ್ಷ* ಬಿಡುವಿಲ್ಲದೆ ಪ್ರಯಾನಮಾಡಬೇಕಾಗುತ್ತದೆ.

*Laniakea supercluster (ಲಾನಿಕ ಸೂಪರ್ ಕ್ಲಸ್ಟರ್)*
➖➖➖➖➖➖

*Virgo supercluster* ರೀತಿಯ ಲಕ್ಷಗಟ್ಟಲೆ ಗ್ಯಾಲಕ್ಸಿಗಳ ಸಮೂಹವೇ *Laniakea supercluster* ಇದರ ಸುತ್ತಳತೆ 52ಕೋಟಿ ಜ್ಯೋತಿವರ್ಷಗಳಾಗಿವೆ. ಅಂದರೆ ಅದರ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಬೇಕಾದರೆ *ಒಂದು ಸೆಕೆಂಡಿಗೆ 3ಲಕ್ಷ ಕಿ.ಮಿ ನಂತೆ 52 ಕೋಟಿ ವರ್ಷ* ಬಿಡುವಿಲ್ಲದೆ ಪ್ರಯಾನಮಾಡಬೇಕಾಗುತ್ತದೆ.

*Observable universe (ಅಬ್ಸರ್ವೇಬಲ್ ಯೂನಿವರ್ಸ್)*
➖➖➖➖➖➖

ಮೇಲೆ ಹೇಳಿದ ಎಲ್ಲಾ ಗ್ಯಾಲಕ್ಸಿಗಳ ಸಮೂಹವೇ *Observable universe*

ಇಷ್ಟರವರೆಗಿನ ತಂತ್ರಜ್ಞಾನದಿಂದ ಮತ್ತು ಶಕ್ತಿಶಾಲಿ ಹೊಸಾ ಟೆಲಿಸ್ಕೊಪ್ ಗಳಿಂದ ವಿಶ್ವವನ್ನು ಎಷ್ಟರವರೆಗೆ ನೋಡಲು ಸಾಧ್ಯವಾಗುತ್ತದೋ ಅದನ್ನೇ *Observable universe* ಎನ್ನುತ್ತಾರೆ. ಭೂಮಿಯಿಂದ Observable universe ನ ಯಾವುದಾದರೊ ಒಂದು ಮೂಲೆಗೆ ಹೋಗಬೇಕೆಂದರೆ 4,650 ಕೋಟಿ ಜ್ಯೋತಿವರ್ಷ ಬೇಕಾಗುತ್ತದೆ. ಅಂದರೆ *ಒಂದು ಸೆಕೆಂಡಿಗೆ 3ಲಕ್ಷ ಕಿ.ಮಿ ನಂತೆ 4,650 ಕೋಟಿ ವರ್ಷಗಳು ಬಿಡುವಿಲ್ಲದೆ ಪ್ರಯಾಣಿಸಬೇಕಾಗುತ್ತದೆ. (ಸುಬುಹಾನಲ್ಲಾಹ್)* ಈಗಿರುವ ತಂತ್ರಜ್ಞಾನದಿಂದ *observable universe* ವರೆಗೆ ಮಾತ್ರ ನೋಡಬಹುದಾಗಿದೆ. ಅದರ ಆಚೆ ಏನಿದೆ ಎಂಬುವುದನ್ನು ನಮಗೆ ಯೋಚನೆಮಾಡಲು ಕೂಡಾ ಆಗುವುದಿಲ್ಲ. ಇದರ ಮುಂದೆ ಏನಿದೆ ಎಂದು ಇದನ್ನೆಲ್ಲಾ ಸೃಷ್ಟಿಸಿ ನಿಯಂತ್ರಿಸುವ ಅಲ್ಲಾಹನೇ ಬಲ್ಲ.....

ಈ ಮೇಲೆ ವಿವರಿಸಿದ ಇಡೀ *observable universe* ನ್ನು ವಿಶ್ವಕ್ಕೆ ಹೋಲಿಸಿ ಉದಾಹರಣೆ ಮಾಡುವುದಾದರೆ "ಇಡೀ ಭೂಮಿಯನ್ನು ವಿಶ್ವ ಅಂದಿಟ್ಟುಕೊಳ್ಳಿ ನಂತರ ಆ ಭೂಮಿಯಲ್ಲಿ ಕೇವಲ ಒಂದು ಫುಟ್ಬಾಲನ್ನು ಇಡಬೇಕು ಆ ಇಟ್ಟ ಫುಟ್ಬಾಲಾಗಿದೆ ಸೆಕೆಂಡಿಗೆ 3ಲಕ್ಷ ಕಿ.ಮಿ ವೇಗದಲ್ಲಿ ನಿರಂತರವಾಗಿ 4,650 ಕೋಟಿ ವರ್ಷಗಳು ಚಲಿಸಿ ದಾಟಬೇಕಾದ *observable universe* ನಂತರ ಬಾಕಿ ಇರುವ ಸ್ಥಳ ಎಷ್ಟಿರುತ್ತದೆಯೂ ಅದಾಗಿದೆ ಈ ಮಹಾ ವಿಶ್ವವೆಂದು ವಿಜ್ಞಾನ ಹೇಳುತ್ತಿದೆ. *"ಸುಬುಹಾನಲ್ಲಾಹ್"* ಅಷ್ಟೊಂದು ವಿಶಾಲವಾಗಿದೆ ಈ ಮಹಾ ವಿಸ್ಮಯದ ವಿಶ್ವ.

ಈಗ ನಾವೆಲ್ಲರೂ ಅರ್ಥ ಮಾಡಿಕೊಳ್ಳಬಹುದು. ಈ ಭೂಮಿಯನ್ನು ವಿಶ್ವಕ್ಕೆ ತುಲನೆಮಾಡುವುದಾದರೆ, ವಿಶ್ವದ ಮುಂದೆ ಭೂಮಿಯು ಸಣ್ಣ ಒಂದು ಮರಳಿನ ಕಣ ಮಾತ್ರವಾಗಿದೆಯೆಂದು. ವಿಶ್ವವನ್ನು ಬಿಡಿ, ವಿಶ್ವದೆದುರು ಕೇವಲ ಸಣ್ಣ ಮರಳ ಕಣವಾಗಿರುವ ಈ ಭೂಮಿಯ ಬಗ್ಗೆಯಿರುವ ಸಂಪೂರ್ಣ ಮಾಹಿತಿಯನ್ನೇ ವಿಜ್ಞಾನಕ್ಕೆ ಅರ್ಥಮಾಡಿಕೊಳ್ಳಲು ಈ ವರೆಗೂ ಸಾಧ್ಯವಾಗಿಲ್ಲ ಎಂಬುದಾಗಿದೆ ವಾಸ್ತವ.

*ವಿಸ್ಮಯ ಗ್ರಹಗಳು*
➖➖➖➖➖➖

ಈ ವಿಶ್ವದಲ್ಲಿ ಹಲವಾರು ವಿಸ್ಮಯ ಗ್ರಹಗಳಿವೆ ಅವುಗಳ ಬಗ್ಗೆ ಇದರಲ್ಲಿ ತಿಳಿಸಲಾಗಿಲ್ಲ. ಅಂತಹಾ ವಿಸ್ಮಯಕಾರಿಯಾದ ಒಂದು ಗ್ರಹದ ವಿಶೇಷತೆ ನೋಡಿ. "ನಮ್ಮ ಸೌರವ್ಯೂಹದ ಆಚೆ *55 Cancre E (55 ಕ್ಯಾನ್ಕ್ರಿ ಇ)* ಎಂಬ ಗ್ರಹವಿದೆ. ಇದು 2 ಭೂಮಿಯಷ್ಟು ಗಾತ್ರವಿದೆ. ಇದರ ವಿಶೇಷತೆ ಕೇಳಿದರೆ ಬೆಚ್ಚಿಬೀಳುವುದು ಖಂಡಿತ *ಇದು ಸಂಪೂರ್ಣ ವಜ್ರದಿಂದ ಕೂಡಿದೆಯಂತೆ"* ಆದರೆ ಅದರ ಬಳಿ ತಲುಪಲು ನಮಗೆ ಸಾಧ್ಯವಿಲ್ಲ. ಕಾರಣ, ಅದು 40 ಜ್ಯೋತಿವರ್ಷದಷ್ಟು ದೂರವಿದೆ. ಅಂದರೆ ಸೆಕೆಂಡಿಗೆ 3ಲಕ್ಷ ಕಿ.ಮಿ ನಂತೆ 40 ವರ್ಷ ಪೂರ್ತಿ ಸಂಚರಿಸಬೇಕಾಗುತ್ತದೆ. ಬೆಳಕಿನ ವೇಗದಲ್ಲಿ (ಪ್ರತೀ ಸೆಕೆಂಡಿಗೆ 3ಲಕ್ಷ ವೇಗದಲ್ಲಿ) ಚಲಿಸುವ ವಾಹನವನ್ನು ತಯಾರಿಸಲು ಮನುಷ್ಯನಿಂದ ಅಸಾಧ್ಯ. ಇದು ಒಂದು ಉದಾಹರಣೆ ಮಾತ್ರ. ಇಂತಹಾ ವಿಸ್ಮಯಕಾರಿಯಾದ ಹಲವಾರು ಗ್ರಹಗಳು ವಿಶ್ವದಲ್ಲಿದೆಯಂತೆ.


ಒಮ್ಮೆ ಚಿಂತಿಸಿ ಇಲ್ಲಿರುವ ಆಸ್ತಿ, ಆಡಂಬರ, ದೊಡ್ಡಸ್ತಿಕೆ, ಇಹಲೋಕ ಪ್ರೇಮ ಇದೆಲ್ಲವೂ ಯಾಕಾಗಿ....? ಇದು ಎಷ್ಟರವರೆಗೆ ನೆಲೆನಿಲ್ಲಬಹುದು. ಬೇರೆ ಒಂದು ಗ್ರಹವು ತಾನು ನೆಲೆಸಿರುವ ಕಕ್ಷೆಯನ್ನು ತಪ್ಪಿ ಭೂಮಿಯ ಹತ್ತಿರ ಬಂದರೆ, ಅಥವಾ ಭೂಮಿ ತಾನಿರುವ ಕಕ್ಷೆಯಿಂದ ತಪ್ಪಿ ಬೇರೆ ಗ್ರಹದ ಕಡೆಗೆ ಹೋದರೆ ಈ ಭೂಮಿ ಧೂಳಿಪಟವಾಗಿ ಬಿಡುತ್ತದೆ. ನಾವು ಎಣಿಸಬಹುದು ಅಷ್ಟು ದೂರದಲ್ಲಿರುವ ಗ್ರಹಗಳು ಭೂಮಿಯ ಹತ್ತಿರ ಬರಲು ತುಂಬಾ ಸಮಯ ಹಿಡಿಯಬಹುದೆಂದು, ನಾವು ಇನ್ನೊಂದು ಗ್ರಹಕ್ಕೆ ಹೋಗಲು ಸಮಯ ಬೇಕೇ ವಿನಃ ಗ್ರಹಗಳಿಗಲ್ಲ. ಅದು ದೈತ್ಯವಾಗಿರುವುದರಿಂದ ಅದರ ಕಕ್ಷೆ ತಪ್ಪಿದರೆ ಕೆಲವೇ ಕೆಲವು ಸಮಯದಲ್ಲಿ ಅಪ್ಪಳಿಸಿ ಬಿಡುತ್ತದೆ. ಉದಾಹರಣೆಗೆ ತೆಗೆಯುವುದಾದರೆ, ಒಂದು ಭಾರವಿರುವ ವಸ್ತು ಮತ್ತು ಭಾರವಿಲ್ಲದ ವಸ್ತುವನ್ನು ಒಟ್ಟಿಗೆ ಕೆಳಗಡೆ ಹಾಕಿದರೆ ಈ ಭಾರವಿರುವ ವಸ್ತುವಾಗಿದೆ ಭಾರವಿಲ್ಲದ ವಸ್ತುವಿಗಿಂತ ಎಷ್ಟೋ ಬೇಗ ಕೆಳಗಡೆ ಹೋಗಿ ಬೀಳುವುದು. ಇದನ್ನೆಲ್ಲಾ ಕ್ರಮಬದ್ಧವಾಗಿ ಅದರದರ ಕಕ್ಷೆಯಲ್ಲಿ ನಿಲ್ಲಿಸಿ ನಿಯಂತ್ರಿಸುವ ಜಗದೊಡೆಯನು ಎಷ್ಟೊಂದು ಶಕ್ತನು ಎಂದು ನಾವು ಚಿಂತಿಸಬೇಕಾಗಿದೆ.

*ನಮ್ಮ ಮುತ್ತು ನಬಿ ﷺِ ತಂಙಳ್ ರವರು ಇಡೀ ವಿಶ್ವವನ್ನು ಮಾತ್ರವಲ್ಲದೆ ಇದಕ್ಕಿಂತಲೂ ಎಷ್ಟೋ ಮೇಲೆಯಿರುವ ಏಳು ಆಕಾಶವನ್ನು ಕೂಡಾ ದಾಟಿಯಾಗಿದೆ ಮಿಹ್ರಾಜ್ (ಆಕಾಶರೋಹನ) ಯಾತ್ರೆ ಮಾಡಿದ್ದು. "ಸುಬುಹಾನಲ್ಲಾಹ್"*

ಚಿಂತಿಸಿ "ಈ ವಿಶ್ವದಲ್ಲಿಯೇ ಇಷ್ಟೊಂದು ಗ್ರಹ ನಕ್ಷತ್ರಗಳಿರುವಾಗ ಇವೆಲ್ಲದಕ್ಕಿಂತಲೂ ತುಂಬಾ ಮೇಲೆ ಸುಂದರವಾದ ಸ್ವರ್ಗಲೋಕವಿದೆ ಎನ್ನುವುದರಲ್ಲಿ ಸಂಶಯ ಇರುವವನಿಗಿಂತ ಶತ ಮೂರ್ಖ ಯಾರಿದ್ದಾನೆ. ಇಡೀ ವಿಶ್ವವನ್ನು ಆಕಾಶಕ್ಕೆ ಹೋಲಿಸಿದರೆ ವಿಶ್ವವು ಸಣ್ಣ ಚುಕ್ಕೆ ಮಾತ್ರವಾಗಿದೆ. ಹಾಗಾದರೆ ಆಕಾಶಕ್ಕಿಂತಲೂ ಮೇಲೆಯಿರುವ ಆ ಸುಂದರವಾದ ಲೋಕವನ್ನು ಅಲ್ಲಾಹನು ಯಾವ ರೀತಿಯಲ್ಲಿ ನಿರ್ಮಿಸಿರಬಹುದು. ಅಲ್ಲಾಹು ನಮ್ಮೆಲ್ಲರನ್ನೂ ಆ ಸುಂದರವಾದ, ನಶಿಸಿಹೋಗದ ಲೋಕದಲ್ಲಿ ಒಂದುಗೂಡಿಸಲಿ. *"ಆಮೀನ್"*

اللهم صل على سيدنا محمد وعلى اله وصحبه وسلم

ದುಆ ವಸಿಯ್ಯತ್ತಿನೊಂದಿಗೆ

*✒️ಅಬ್ದುಲ್ ನಾಸಿರ್ ಕಾವೂರು🍇*
➖➖➖➖➖➖➖➖➖

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...