Skip to main content

ನಾನೇಕೆ ಈ ವಿಭಾಗವನ್ನು ಮೆಚ್ಚಿದ್ದೇನೆ.....

ನಾನೇಕೆ ಈ ವಿಭಾಗವನ್ನು ಮೆಚ್ಚಿದ್ದೇನೆ.....

--------ಅಬೂಶಝ--------------

ಹೌದು ಅವರಿಗೊಂದು ಗುರಿಯಿದೆ.
ಗುರಿ ತಲುಪಲು ಅವರು ಹುಡುಕುವ ದಾರಿಯೂ ಕಳಂಕರಹಿತವಾಗಿರುತ್ತದೆ.
ಅವರಲ್ಲಿ ನನಗೆ ಹೆಚ್ಚು ಇಷ್ಟವಾದದ್ದು ಅವರು ವೇಷ ಕಟ್ಟಲ್ಲ.
ನಾಟಕೀಯತೆ ಇಲ್ಲ.
ದೀನ್ ಅಂಗೀಕರಿಸುತ್ತದೆ ಅಂದ ಮೇಲೆ ಸದರಿ ವಿಷಯಗಳನ್ನು ಜೋಳಿಗೆ ಹಾಕಲು ಅವರು ಹಿಂದು ಮುಂದೆ ನೋಡಲ್ಲ.
ಅದರ ಹಿಂದೆ ಬರುವ ಅಪಹಾಸ್ಯ, ನಿಂದನೆ, ಪರಿಹಾಸ್ಯಗಳನ್ನು ಹೂ ಮಾಲೆಯಂತೆ ಸ್ವೀಕರಿಸುವ ಅವರ ಜಾಯಮಾನ ಮೆಚ್ಚಲೇ ಬೇಕು.
ಆದೆಂತಹ ಸುಂಟರಗಾಳಿ ಬಡಿದಪ್ಪಳಿಸಿದರೂ ಅವರು ಧ್ರತಿಗೆಡಲ್ಲ!
ರಾಜಕೀಯವನ್ನು ಹಾಗೂ ರಾಜಕಾರಣಿಗಳನ್ನು ಅವರು ಯಾವತ್ತೂ ರೋಲ್ ಮಾಡಲ್ಲ.
ಶಿಕ್ಷಣವೇ ಮಹಾ ದಾನವೆಂಬ ಮೆಂಟಾಲಿಟಿ ಮೈಗೂಡಿಸಿ ಶಿಕ್ಷಣ ಸಮುಚ್ಚಯಗಳನ್ನೇ ನಾಡಿಗೆ ಸಮರ್ಪಿಸುತ್ತಿದ್ದಾರೆ.

ಕಳ್ಳ ನಾಣ್ಯಗಳನ್ನು ಅವರು ಸಹಿಸುವುದೇ ಇಲ್ಲ.
ನಾಣ್ಯ ಅದೆಷ್ಟು ಗಟ್ಟಿಯಾಗಿದ್ದರೂ,ಪುರಾತನವಾಗಿದ್ದರೂ,ಪ್ರಸಿಧ್ಧವಾಗಿದ್ದರೂ,
ಆಪ್ತವಾಗಿದ್ದರೂ ಕ್ಯಾರೇ ಮಾಡಲ್ಲ.
ಎತ್ತಿಎಸೆಯುವರು.
ಮುಖಮೂತಿನೋಡದೆ ಕಾಲಿನಡಿಯ ಕಸದಂತೆ ಎಸೆದು ಹೊರದಬ್ಬಿದರೆ ವಿರೋಧಿಗಳು ಅದೇ ಕಸವನ್ನು ಹೆಕ್ಕಿ ಈ ವಿಭಾಗದ ವಿರುದ್ಧ ಆಯುಧ ಮಾಡುವರೆಂದು ಗೊತ್ತಿದ್ದೂ ಕೂಡಾ ಅದರ ಬಗ್ಗೆ ತಲೆಕೆಡಿಸುವ ಜಾಯಮಾನವೇ ಅವರಿಗಿಲ್ಲ.
ಅಚಂಚಲ ವಿಶ್ವಾಸ!
ಸುಟ್ಟು ಭಸ್ಮ ಮಾಡುವ ಬೆಂಕಿಯುಂಡೆ ಕೈಯಲ್ಲಿ ಹಿಡಿದ ಅನುಭವ!
ನಾಲ್ಕು ಭಾಗಗಳಿಂದಲೂ ಆಕ್ರಮಣದ ಭೀತಿ!!
ಊಹುಂ, ಧ್ರತಿಗೆಡುವ ಸಂಗತಿಯೇ ಇಲ್ಲ.
ಸತ್ಯವೆಂದು ನಂಬಿದ ಆಶಯವನ್ನು ಗಟ್ಟಿಯಾಗಿ ಅಪ್ಪಿ ಕೆಳಬೀಳದಂತೆ ಜಾಗೃತಿ ವಹಿಸುವ ಅವರ ಕಾರ್ಯವೈಖರಿ ಅಧ್ಬುತವೇ ಸರಿ!
ವಿರೋಧಿಗಳೆಲ್ಲರೂ ಸೇರಿ ಕಡಲಿನ ಅಲೆಯಂತೆ ಅತೀ ರಭಸವಾಗಿ ಮುನ್ನುಗ್ಗಿ ಇವರನ್ನು ಮುಗಿಸಲು ಮುಗಿಬೀಳುವಾಗಲೂ ಅವರು ಸತ್ಯ ಆದರ್ಶಗಳನ್ನು ಕೆಳಗಿಟ್ಟು ಶರಣಾಗದೆ ಅಚಲವಾಗಿ ಎದೆಯೊಡ್ಡು ನಿಲ್ಲುವ ಭಂಗಿ ಬಲು ಸುಂದರ!

ಇದು ರಜಬ್ ತಿಂಗಳು.
ಇಸ್ರಾ‌ಅ ಮಿಹ್ರಾಜ್ ನಡೆದ ಮಾಸ. ಅಂದರೆ ಹ್ರಸ್ವ ಸಮಯದಲ್ಲಿ ಸಾವಿರಾರು ಮೈಲು ದೂರದ ಅಖ್ಸಾ ಮಸೀದಿ,ಅಲ್ಲಿಂದ ಏಳು ಆಕಾಶ ಅದರಾಚೆ ಬೈತುಲ್ ಮಹ್ಮೂರು,ಸಿದರತುಲ್ ಮುಂಥಹ,ಅಲ್ಲಾಹನ ಮುಲಾಖಾತ್!
ಇದೆಲ್ಲಾ ಕೇವಲ ಹ್ರಸ್ವ ಸಮಯದಲ್ಲಿ ನಡೆದು ಹೋದ ಘಟನೆ!
ಪುಣ್ಯ ಹಬೀಬ್ ತನ್ನ ಸಮೂಹದ ಬಳಿ ಸದರಿ ಘಟನೆ ಕುರಿತು ಹೇಳಿದಾಗ ಹಲವರು ಇಸ್ಲಾಮಿಗೆ ರಾಜಿನಾಮೆ ಕೊಟ್ಟು ಪುನಃ ವಿಗ್ರಹರಾಧನೆ ಆರಂಭಿಸಿದ್ದರು!
ಅಂದರೆ ಅವರ ವಿಶ್ವಾಸ ಚಂಚಲವಾಗಿತ್ತು.
ಪೂರ್ಣ ಈಮಾನ್ ಹೊಂದಿದವರಾಗಿರಲಿಲ್ಲ.

ಆದರೆ ಅಬೂಬಕರ್ (ರ) ಚಂಚಲವಾಗಲಿಲ್ಲ!
ಹಿಂದು ಮುಂದೆ ನೋಡಲಿಲ್ಲ.
ಮುತ್ತು ಹಬೀಬರ ಮಾತನ್ನು ಕ್ಷಣದಲ್ಲೇ ನಂಬಿ ಬಿಟ್ಟರು!

ಕೂಡಲೇ ಅಬೂಬಕರ್ ಎಂಬ ಹೆಸರಿನ ಮುಂದೆ ಟೈಟಲ್ ಬಂತು 'ಸಿಧ್ಧೀಕ್'!

ಅಂದಿನಿಂದ ಅಬೂಬಕರ್(ರ) 'ಸಿಧ್ಧೀಕ್' ಎಂಬ ಹೆಸರಿನಿಂದ ಪ್ರಸಿದ್ದರಾದರು.
ಅದೆಷ್ಟೇ ಪ್ರಬಲವಾದ ಸುಂಟರಗಾಳಿ ಬೀಸಿದಾಗಲೂ ಸಿಧ್ಧೀಕ್ ತಂಙಳ್ ಆದರ್ಶ ಬಿಟ್ಟು  ಶರಣಾಗಲಿಲ್ಲ.

ಅದೇ ರೀತಿ ಪುಣ್ಯ ತಿರುಕೇಶ ವಿಷಯದಲ್ಲಿ ಹಲವರು ಗೊಂದಲ ಸ್ರಷ್ಟಿಸಿದಾಗಲೂ ಚಂಚಲವಾಗದ ಗಟ್ಟಿ ಈಮಾನಿನೊಂದಿಗೆ  ಪುಣ್ಯಜಲ ಕುಡಿಯಲು ಮುನ್ನುಗ್ಗಿ ಬಂದ, ಆದರ್ಶ ವೀರರಿಗೆ ಇಸ್ರಾಹ್ ಮಿಹ್ರಾಜ್ ಸ್ಪೂರ್ತಿಯಾಗಿದೆ!

ಇಸ್ರಾಹ್ ಮಿಹ್ರಾಜ್ ಚಂಚಲ ಮತ್ತು ಅಚಂಚಲ ವಿಶ್ವಾಸದ‌ ಅಂತರ ತಿಳಿಸುವ ಮಾದ್ಯಮವಾದಂತೆ ತಿರುಕೇಶ ವಿಷಯವೂ ಅದರ ಪುನರಾವರ್ತನೆಯಾಗಿತ್ತು!

ಅದನ್ನೇ ನಾ ಹೇಳಿದ್ದು,
ಹಬೀಬರ ವಿಳಾಸದಲ್ಲಿ ಐಡೆಂಟಿಫೈ ಮಾಡಿದ್ದನ್ನು ಆ ವಿಭಾಗ ಜೋಳಿಗೆ ಹಾಕಿ ನಡೆಯಲು ಹಿಂದೆ ಮುಂದೆ ನೋಡಲ್ಲ...
ಮುಡಿ,ಚಟ್ಟಿ ಯೆಂದು ಪರಿಹಾಸ್ಯ ಮಾಡಿದರೂ ಸರಿ.
ಏನಿದ್ದರೂ ಅವರಲ್ಲಿ ಆದರ್ಶಕ್ಕೆ ಮಾತ್ರ ಫುಲ್ ಮಾರ್ಕ್!
ತಮಾಷೆ ನಿಂದನೆಗಳನ್ನು ಕ್ಯಾರೇ ಮಾಡಲ್ಲ!

ರಾಜಕೀಯದ ಕೊಳಕು ರೀತಿ ಯನ್ನು ಅವರು ಯಾವತ್ತು ರೋಲ್ ಮಾಡೆಲ್ ಮಾಡಲ್ಲ.
ವಿರುಧ್ಧ ವಿಭಾಗದ ಅಧ್ಯಕ್ಷ ಪೀಠ ದಲ್ಲಿದ್ದ ಸಯ್ಯದರೊಬ್ಬರು ತಾನು ಪಕ್ಷಾಂತರವಾಗುತ್ತಿದ್ದೇನೆಂದು ಹೇಳಿದಾಗಲೂ ನಯವಾಗಿ ಸದ್ಯ ತಟಸ್ಥ ನಿಲುವು ತಾಳುವಂತೆ ಹೇಳಿದ ರೀತಿ ನಿಜವಾಗಿಯೂ ಅಧ್ಬುತವೇ ಸರಿ.
ಅವರನ್ನು ಹೊತ್ತೈದು ಅವರಿಂದ ಮೂಲ ಪಾರ್ಟಿ ಬಂಡಲ್ ಅದರ ನಾಯಕರು ವಂಚಕರೆಂದು ಹೇಳಿಸ ಬಹುದಿತ್ತು!
ಥೇಟ್ ಕೊಳಕು ರಾಜಕೀಯದವರಂತೆ!

ವಿರುದ್ಧ ವಿಭಾಗದ ಕುರಾನ್ ಪ್ರಭಾಷಣಗಾರ ಹೊರಬಂದಾಗಲೂ ಅವರೊಂದಿಗೆ ಕುದುರೆ ವ್ಯಾಪರ ಕುದುರಿಸಿ ನಮ್ಮದೇ ಹಕ್ಕ್ ಎಂದು ಹೇಳಿಸಿ ಮುಗ್ದ ಅನುಯಾಯಿಗಳನ್ನು ವಂಚಿಸಬಹುದಿತ್ತು.
ಊಹುಂ....
ಅಂತಹ ಕಚ್ಚರ ವೇದಿಕೆ ನಿರ್ಮಾಣ ಮಾಡುವ ಗೋಜಿಗೆ ಹೋಗಲೇ ಇಲ್ಲ.
ಇದು ದೀನ್!
ಇದರಲ್ಲಿ ಚದುರಂಗ ಆಟ ಇಲ್ಲ!
ರಾಜಕೀಯದಂತೆ ಡೊಂಬರಾಟ ಇಲ್ಲ!
ಪರಸ್ಪರ ಬೈಗುಳ ನಿಂದನೆ ಅಪಹಾಸ್ಯ ಇಲ್ಲ.

ಅದೆಷ್ಟೋ ಎದುರು ವಿಭಾಗದ ಬಿರುದಾಂಕಿತ ಪಧವೀದರು ಈ ವಿಭಾಗವನ್ನು ಅಪ್ಪಿ ಕಾರ್ಯಚರಿಸುವಾಗಲೂ ಒಬ್ಬರೆ ಒಬ್ಬರನ್ನು ತೋರಿಸಿ ಪಧವೀದರರ ಸಂಗಮ ಮಾಡಿದ ಚರಿತ್ರೆ ಈ ವಿಭಾಗಕ್ಕೆ ಇಲ್ಲ.
ಕಾರಣ ಅದೆಲ್ಲಾ ನಾಟಕ!
ದೀನ್ ನಲ್ಲಿ ನಾಟಕ ಇಲ್ಲ!
ಅವಕಾಶಗಳೆಲ್ಲವೂ ಕಣ್ಣ ಮುಂದೆ ಸುಲಭವಾಗಿ ತೆರೆದಿದ್ದರೂ ಅದ್ಯಾವುದಕ್ಕೂ ಈ ವಿಭಾಗ ಮಣೆ ಹಾಕಲೇ ಇಲ್ಲ.
ಕಾರಣ ಅದೆಲ್ಲವೂ ಕಾಪಟ್ಯ.

ಕಳ್ಳ ನಾಣ್ಯಗಳಾಗಿ ಪ್ಯತ್ಯಕ್ಷವಾದ ನಾಣ್ಯಗಳು ಚಿಲ್ಲರೆ ನಾಣ್ಯಗಳಾಗಿರಲಿಲ್ಲ!
ಎಲ್ಲವೂ ಪ್ರಬಲವಾಗಿದ್ದವು.
ಪ್ರಭಾಷಣ ಬರಹ ರಂಗದ ದಿಗ್ಗಜರುಗಳು,ಆರ್ಟ್ಸ್ ಪ್ರೊಫೆಸರ್ ಗಳು!
ಸಂವಾದ ಮುಖಾಮಖಿಗಳಲ್ಲಿ ಮಿಂಚಿದವರು!
ಆಪ್ತರು ಪರಮಾಪ್ತರೆಂದು ನಟನೆ ಮಾಡಿದವರು.
ನಟನೆ ಪವರ್ ಫುಲ್ ಆಗಿತ್ತು.
ರಿಝಲ್ಟ್ ಮಾತ್ರ ಗೇಟ್ ಪಾಸಾಗಿತ್ತು!
ಕಳ್ಳ ನಾಣ್ಯಗಳ ಯಾವುದೇ ತರಿಗಿಡ ಈ ವಿಭಾಗದ ಮುಂದೆ ನಡೆಯಲೇ ಇಲ್ಲ.
ಆಪ್ತ, ಪರಮಾಪ್ತ, ಪ್ರಸಿಧ್ಧಿ,ಪ್ರಚಾರ ಯಾವುದೂ ಚಲಾವಣೆಯಾಗಲಿಲ್ಲ.
ಕಳ್ಳ ನಾಣ್ಯಗಳನ್ನು ಎತ್ತಿ ಎಸೆಯಲಾಯಿತು.
ಕೆಲವೊಂದು ನಾಣ್ಯಗಳು ವಿರೋಧಿ ಗುಂಪಿನಲ್ಲಿ ಸೇರಿಕೊಂಡವು.
ಅಮೇಧ್ಯ ಕಂಡ ಪ್ರಾಣಿಯಂತೆ ಮುಗಿಬಿದ್ದು ವಿರೋಧಿ ಗುಂಪು ಹಳಸಿದ ನಾಣ್ಯಗಳನ್ನು ನೆಕ್ಕಿದಾಗಲೂ ಈ ವಿಭಾಗ ಅದನ್ನು ತಲೆಗೆ ಹಚ್ಚಲೇ ಇಲ್ಲ.

ಹೌದು ಇಂತಹ ನೀಚ ಕಲ್ಚರ್ ಈ ವಿಭಾಗದ ನಿಘಂಟುವಿನಲ್ಲಿ ಇಲ್ಲ.
ಖಂಡಿತಾ ಗುರಿ ತಲುಪಬೇಕು,
ದಾರಿಯೂ ಕ್ಲಿಯರಾಗಿರಬೇಕು.
ಅನೈತಿಕ ದಾರಿಯ ಮೂಲಕ ಗುರಿ ಮುಟ್ಟುವುದು ಅನೈತಿಕತೆಯೇ ಸರಿ.
ದೀನ್ ವಿಷಯದಲ್ಲಿ ಅನೈತಿಕತೆಗೆ ಸ್ಥಾನವಿಲ್ಲ!
ಆದ್ದರಿಂದಲೇ ಈ ವಿಭಾಗ ಆ ದಾರಿ ಅನುಸರಿಸುವುದೇ ಇಲ್ಲ.
ಹಾಗಾಗಿಯೇ ಈ ವಿಭಾಗ ನನಗೆ ಬಲು ಇಷ್ಟ.

ಅಂದ ಹಾಗೆ ಆ ವಿಭಾಗ ಯಾರು?
ನೀವೇ ಹೇಳಿ....

-ಅಬೂಶಝ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...