Skip to main content

ಅಡ್ಯಾರ್ ಕಣ್ಣೂರು ನೇತ್ರಾವತಿ ಮಧ್ಯೆ ಇರುವ 'ದರ್ಗಾ' ನಿಜಾಂಶವೇನು

ಅಡ್ಯಾರ್ ಕಣ್ಣೂರು ನೇತ್ರಾವತಿ ಮಧ್ಯೆ ಇರುವ 'ದರ್ಗಾ' ನಿಜಾಂಶವೇನು

(2017 ಅಕ್ಟೋಬರ್ ತಿಂಗಳ ಲೇಖನ)
————————————
ದರ್ಗಾ ಕಂಡರೆ ಸಳಪಿಯ ಪಿತ್ತ ನೆತ್ತಿಗೇರುತ್ತದೆ.ಹಾಗಾಗಿಯೇ ಮದೀನಾದಲ್ಲಿರುವ ಮುತ್ತು ನೆಬಿಯವರ ಹಸಿರು ಖುಬ್ಬಾದ ದರ್ಗಾವನ್ನು ಪುಡಿಗೆಯ್ಯವ ಕನಸು ಕಾಣುತ್ತಾ ಇದ್ದಾನೆ.
ಅದು ಅವನಿಂದ ಅಸಾಧ್ಯವೆಂಬುದು ಹಗಲಿನಷ್ಟೇ ಸ್ಪಷ್ಟ.

ಇದೀಗ ಹರೇಕಳದ ಒಬ್ಬ ಸಳಪಿ ಅಡ್ಯಾರ್ ಕಣ್ಣೂರು ನೇತ್ರಾವತಿ ಮಧ್ಯ ಭಾಗದಲ್ಲಿರುವ ದರ್ಗಾದ ಕುರಿತು ತಗಾದೆ ತೆಗೆದಿದ್ದಾನೆ.!
ಅದರ ಪೂರ್ಣ ವಿಳಾಸ (ಸನದ್) ಇವನಿಗೆ ಕೊಡಬೇಕಂತೆ.
ಅಂದರೆ ದರ್ಗಾ, ಉರೂಸ್ ಎಲ್ಲಾ ಓಕೆ
ಸನದ್ ಸ್ಪಷ್ಟಪಡಿಸಬೇಕು ಎಂಬಲ್ಲಿಗೆ ಸಳಪಿ ತಲುಪಿದ್ದಾನೆ!

ಆದರೆ ಸುನ್ನಿಗಳಿಗೆ ಬರಕತ್ ಪಡೆಯುವ ವಿಷಯದಲ್ಲಿ ಸನದ್ ಬೇಡವೇ ಬೇಡ.
ನಮ್ಮ ತಾತಂದಿರು ಒಬ್ಬ ವ್ಯಕ್ತಿಯನ್ನು ಸಜ್ಜನ ಮನುಷ್ಯ ಎಂದು ಘೋಷಿಸಿ ನಮಗೆ ಕಲಿಸಿದ್ದರೆ ನಮಗೆ ಅದುವೇ ದಾರಾಳ.
ಅದರಾಚೆ ಸನದ್ ಹುಡುಕಿ ಹೋಗುವ ಅಗತ್ಯ ಮುಸ್ಲಿಮರಿಗಿಲ್ಲ.
ಈ ತತ್ವವನ್ನು ನಮಗೆ ಕಲಿಸಿ ಕೊಟ್ಟದ್ದು ಬೇರೆ ಯಾರು ಅಲ್ಲ.
ನಮ್ಮ ಮುತ್ತು ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮ್ ತಂಙಳಾಗಿದ್ದಾರೆ.
ನಾನು ಕೆಳಗೆ ಕೊಡುವ ಬುಖಾರಿಯ ಒಂದು ಹದೀಸ್ ಗಮನಿಸಿ👇🏻👇🏻👇🏻

باب ثناء الناس علي الميت
————————————
عن انس رضي الله  عنه  مروا بجنازة  فاثنوا عليها خيرا فقال النبي صلي الله عليه وسلم  (وجبت)

ಅನಸ್ (ರ) ರಿಂದ ನಿವೇದನೆ.

ಒಂದು ಜನಾಝ ಕೊಂಡುಹೋಗುವಾಗ ಜನರು ಆ ವ್ಯಕ್ತಿಯ ಗುಣಗಾನ ಮಾಡಿದರು.
ಆಗ ಮುತ್ತು ನೆಬಿ ಹೇಳಿದರು.
(وجبت)
'ವಜಬತ್'
 ಆ ಜನಾಝಕ್ಕೆ ಅದು ಕಡ್ಡಾಯವಾಯಿತು!

(ಜೊತೆಗಿದ್ದ ಜನರಿಗೆ ಮುತ್ತು ನೆಬಿಯವರ ಮಾತಿನ ತಿರುಳು ಏನೆಂದು ಅರ್ಥವಾಗಲಿಲ್ಲ)

ثم مروا باخري فاثنوا عليها شرا فقال (وجبت)

ನಂತರ ಮತ್ತೊಂದು ಜನಾಝ ಕೊಂಡು ಹೋಗುವಾಗ ಜನರು ಆ ವ್ಯಕ್ತಿಯ ಕುರಿತು ಕೆಟ್ಟದಾದ ಅಭಿಪ್ರಾಯ ಹೇಳಿದರು.
ಆಗಲೂ ಪ್ರವಾದಿಯವರು
( وجبت)
'ವಜಬತ್'
'ಆ ಜನಾಝಕ್ಕೆ ಅದು ಕಡ್ಡಾಯವಾಯಿತು!
ಎಂದು ಹೇಳಿದರು.

(ಈಗಲೂ ಜೊತೆಗಿದ್ದ ಜನರಿಗೆ ಮುತ್ತು ನೆಬಿಯವರ ಮಾತಿನ ತಿರುಳು ಏನೆಂದು ಅರ್ಥವಾಗಲಿಲ್ಲ.)

ಆಗ ಹಝ್ರತ್ ಉಮರ್ ಬಿನ್ ಖತ್ತಾಬ್ (ರ) ಮುತ್ತು ನೆಬಿಯವರಲ್ಲಿ ಪ್ರಶ್ನೆ ಹಾಕಿದರು.
'ವಜಬತ್' ಅಂದರೆ ಏನು ?

ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು.

"هذا اثنيتم عليه خيرا فوجبت له الجنة "

" ನೀವು ಮೊದಲನೇ ಜನಾಝದ ಗುಣಗಾನ ಮಾಡಿದಾಗ ಆ ವ್ಯಕ್ತಿಗೆ ಸ್ವರ್ಗ ವುಜೂಬಾಯಿತು(ಕಡ್ಡಾಯವಾಯಿತು!)

ಎರಡನೇ ಜನಾಝದ ಕುರಿತು ನೀವು ಕೆಟ್ಟದು ಹೇಳಿದಾಗ ಆ ವ್ಯಕ್ತಿಗೆ ನರಕ ವಾಜಿಬಾಯಿತು!
ಕಾರಣ ...👇🏻👇🏻👇🏻

"انتم شهداء الله  في الارض"

"ನೀವು ಭೂಮಿಯಲ್ಲಿ ಅಲ್ಲಾಹನ ಸತ್ಯ ಶಾಕ್ಷಿಗಳಾಗಿದ್ದೀರಿ"

ಒಬ್ಬ ವ್ಯಕ್ತಿಯ ಕುರಿತು ಅವನು ಒಳ್ಳೆಯವನು, ಅವುಲಿಯಾ ವಲಿಯ್ಯ್, ಸಜ್ಜನ ವ್ಯಕ್ತಿ ಎಂದು ಜನರು ಶಾಕ್ಷಿ ಹೇಳಿದರೆ ಅಲ್ಲಾಹನು ಅದನ್ನು ಖಬೂಲ್ ಮಾಡುವನು ಎಂದರ್ಥ.
ಕಾರಣ ಅವರು ಅಲ್ಲಾಹನ ಶಾಕ್ಷಿಗಳು.
ಶಾಕ್ಷಿಯ ಮಾತಿಗೆ ವಿರುದ್ಧವಾಗಿ ನ್ಯಾಯಾಧೀಶನಿಗೆ ತೀರ್ಪು ನೀಡುವಂತಿಲ್ಲ!

ಹಾಗಾಗಿ ನಮ್ಮ ಪೂರ್ವಿಕರು ಕೆಲವೊಂದು ವ್ಯಕ್ತಿಗಳ ಜನಾಝದ ಕುರಿತು ಅವರು ಸಜ್ಜನರು ವಲಿಯ್ಯ್,ಅವುಲಿಯಾ ಎಂದು ಶಾಕ್ಷಿ ನುಡಿದ್ದರಿಂದಲೇ ಅವರನ್ನು ನಾವು ಈಗಲೂ ವಲಿಯ್ಯ್ ಎಂದು ವಿಶ್ವಾಸವಿಟ್ಟು ಉರೂಸ್ ಆಚರಿಸುತ್ತೇವೆ.
ಅವರಲ್ಲಿ ಕೆಲವರ ಹೆಸರು ತಿಳಿದಿರಬಹುದು/ತಿಳಿಯದಿರಬಹುದು.
ಅದೊಂದು ಸಮಸ್ಯೆಯಾಗಿ ಮುಸ್ಲಿಮರು ಕಂಡಿಲ್ಲ.
ಹೆಸರು ಊರು ಕುಟುಂಬ ಏನು ತಿಳಿದಿಲ್ಲದವರನ್ನು ನಾವು ಮಶ್ಹೂರ್ ವಲಿಯುಲ್ಲಾ, ಮಣವಾಠಿ ಬೀವಿ,ಶುಹದಾಕ್ಕಳ್ ಮುಂತಾದ ವಿಳಾಸದಿಂದ ಕರೆಯುತ್ತೇವೆ.
ಅವರನ್ನೆಲ್ಲಾ ನಮ್ಮ ಪೂರ್ವಿಕರು ಶುಹದಾಅ್ ,ವಲಿಯ್ಯ್ ಎಂದು ಮುದ್ರೆ ಹಾಕಿ ಸತ್ಯಶಾಕ್ಷಿ ನುಡಿದಿದ್ದಾರೆ.
ಹಾಗಾಗಿ ಅದು ಅಲ್ಲಾಹನ ಹತ್ತಿರ 'ವಜಬತ್' ಆಗಿದೆ.
ಅದು ಬರಕತ್'ನ ವಿಷಯವಾದ್ದರಿಂದ ಅದರ ಸನದ್ ಹುಡುಕಿಕೊಂಡು ಹೋಗುವ ಅಗತ್ಯ ಮುಸ್ಲಿಮರಿಗಿಲ್ಲ.
ಅದರ ಕುರಿತು ಯೋಚಿಸಿ ಸಳಪಿಯ ತಲೆ ಗಿರ್ಗಿಟ್ ಆಗುವ ಅಗತ್ಯವೂ ಇಲ್ಲ.
ಕಾರಣ 'ವಜಬತ್' ಎಂದು ಮುದ್ರೆ ಒತ್ತಿದ್ದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಾಗಿದ್ದಾರೆ.

ಇನ್ನು ಸಜ್ಜನ ವ್ಯಕ್ತಿಯ ಇಡೀ ದೇಹಕ್ಕಿರುವ ಗೌರವ ಅವರ ಪ್ರತಿಯೊಂದು ಅಂಗಾಗಕ್ಕೂ ಇದೆ. ಆದ್ದರಿಂದ ಒಬ್ಬ ವಲಿಯ್ಯ್ ಮಾತ್ರವಲ್ಲ ಸಾಮನ್ಯ ಮುಸ್ಲಿಮ್ ವ್ಯಕ್ತಿಯ ಕೈ ಕಾಲು ಸಿಕ್ಕಿದರೂ ಅದನ್ನು ಅರ್ಹ ರೀತಿಯಲ್ಲಿ ಗೌರವಿಸಿ ದಫನ್ ಮಾಡಬೇಕೆಂದು ಇಸ್ಲಾಮ್ ಆಜ್ಞಾಪಿಸುತ್ತದೆ.
ಆ ಅಂಗಾಗ ವಲಿಯ್ಯ್'ನ ಅಂಗಾಗವಾದರೆ ಗೌರವ ಮತ್ತಷ್ಟು ಹೆಚ್ಚುತ್ತದೆ.

ಅಪಹಾಸ್ಯ ಪರಿಹಾಸ್ಯ ವನ್ನು ಮಾತ್ರ ತಲೆಗೆ ಹಚ್ಚಿ ಅಧರ್ಮವನ್ನೇ ಧರ್ಮವನ್ನಾಗಿ ಸ್ವೀಕರಿಸಿದ ಜಾಹಿಲ್ ಸಳಪಿಗೆ ಇದೆಲ್ಲಾ ಅರ್ಥವಾಗಲ್ಲ!

✒ ಅಬೂಶಝ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...