Skip to main content

ಹಸ್ತ ಚುಂಬನ

♻👉 ಸಜ್ಜನರು ವಿದ್ವಾಂಸರು ತಂದೆ ತಾಯಂದಿರು ಶ್ರೇಷ್ಟ ವ್ಯಕ್ತಿಗಳು ಮುಂತಾದವರಿಗಾಗಿ ಎದ್ದು ನಿಲ್ಲುವುದು ಅವರ ಕೈ ಕಾಲು ಚುಂಬಿಸುವುದು ಸುನ್ನತ್ತಿದೆ
👉ತುಹ್ಫ 9/229

♻👉ಇಮಾಮ್ ತುರ್ಮದಿ ವರದಿ ಮಾಡುವ ಒಂದು ಹದೀಸ್ ಹೀಗಿದೆ
ಇಬ್ಬರು ಯಹೂದಿಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಬಂದರು
ಮೂಸಾ ನೆಬಿ (ಅ) ರಿಗೆ ಒಂಬತ್ತು ದ್ರಷ್ಟಾಂತಗಳನ್ನು ನೀಡಲಾಗಿದೆಯೆಂಬ ಪ್ರಸ್ಥಾಪದ ಬಗ್ಗೆ ಕೇಳಿದಾಗ ಅದಕ್ಕೆಲ್ಲವೂ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು ಆಗ ಅವರಿಬ್ಬರೂ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕೈ ಮತ್ತು ಕಾಲು ಗಳನ್ನು ಚುಂಬಿಸಿದರು.
👉ತುರ್ಮದಿ ಹದೀಸ್ ನಂಬರ್ 3069
👉ಇಬ್ನ್ ಮಾಜಾ 2651
👉ಮುಸ್ನದ್ ಅಹ್ಮದ್ ಹದೀಸ್ ನಂಬರ್17397
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು
ಅದನ್ನು ವಿರೋಧಿಸಲಿಲ್ಲ.

♻👉 ಕ ಅಬ್ ಬಿನ್ ಮಾಲಿಕ್ (ರ) ರಿಂದ ಇಬ್ನ್ ಹಿಬ್ಬಾನ್ ವರದಿ ಮಾಡುತ್ತಾರೆ.
ಅವರು ಹೇಳುತ್ತಾರೆ " ನನ್ನ ಪಶ್ಚಾತ್ತಾಪವು ಪ್ರಕಟಗೊಂಡಾಗ ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಮೀಪಿಸಿದೆ
ಹಾಗೂ ಅವರ ಕೈ ಗಳನ್ನು ಮತ್ತು ಕಾಲು ಗಳನ್ನು ಚಂಬಿಸಿದೆ"
👉ಇಬ್ನ್ ಹಿಬ್ಬಾನ್

♻👉ಇಬ್ನ್ ಹಜರ್ (ರ) ತನ್ನ ಫತಾವದಲ್ಲಿ
ಈ ಬಗ್ಗೆ ವರದಿಯಾದ ಹಲವು ಹದೀಸ್ ಗಳನ್ನು ವರದಿ ಮಾಡಿದ್ದಾರೆ.
👉ಫತಾವಲ್ ಕುಬ್ರಾ 4/237

♻👉ಅಬೂ ಹುರೈರ(ರ) ಉಮರ್ (ರ)ರವರ ಕೈ ಚುಂಬಿಸಿದ್ದು ವರದಿಯಾಗಿದೆ..!
👉ತುಹ್ಫ 9/229

♻👉ಬನೂ ಕುರೈಳಾರ ಬಗ್ಗೆ ವಿಧಿ ನೀಡಲು ಸಯ್ಯದುಲ್ ಅನ್ಸಾರ್ ಎಂಬ ಬಿರುದು ಪಡೆದ ಸಹದ್ ಬಿನ್ ಮುಆಝ್ (ರ) ರಿಗೆ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕರೆ ನೀಡಿ ಮದೀನಾ ಮಸೀದಿಗೆ ಬಂದಾಗ ಅವರಿಗಾಗಿ ಎದ್ದು ನಿಂತು ಗೌರವಿಸಲು ಸಹಾಬಿಗಳಿಗೆ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲರು ಆಜ್ಞಾಪಿಸಿದ್ದು
ಇಮಾಮ್ ಬುಖಾರಿ ಹಲವೆಡೆ ಅದನ್ನು ಉದ್ದರಿಸಿದ್ದಾರೆ.
👉2816
👉3812
👉3530
👉5791
👉ಅಂದರೆ ತಂದೆ ತಾಯಂದಿರ ಕೈಕಾಲುಗಳನ್ನು
ಮಕ್ಕಳು ಚುಂಬಿಸುವುದು ಅನುವದನೀಯ
👉ಉಸ್ತಾದರ ಕೈ ಕಾಲು ಗಳನ್ನು ಶಿಷ್ಯಂದಿರು ಚುಂಬಿಸುವುದು ಕೂಡಾ ಅನುವದನೀಯ ವೆಂದು ಇಮಾಮರು
ಹದೀಸ್ ಉದ್ಧರಿಸಿ ಹೇಳುವಾಗ
ಅದು ಶಿರ್ಕ್ ಕುರಾಫಾತ್ ಎಂದು
ಕಮಂಟ್ಸ್ ಹೊಡೆಯುವ  ನ್ಯೂ ಜನರೇಶನ್ ಮುಸ್ಲಿಮ್'ನ  ಒಳಗೆ ಅವಿತಿರುವುದು
ಶುಧ್ದ ಸಲಫಿಸಂ ಎಂದು ಎಲ್ಲರೂ ಮನವರಿಕೆ
ಮಾಡಿದರೆ ಒಳ್ಳೆಯದು.
ಅಂದರೆ ನಮ್ಮ ಉಲಮಾಗಳೊಂದಿಗೆ ಸಾಮಾನ್ಯ ಜನರು ತೋರಿಸುವ ಗೌರವ ಭಾವ ಇಲ್ಲದಂತೆ ಮಾಡುವುದೇ ಇವರ ಗುರಿ.

ಯಾವನೇ ಒಬ್ಬನ ಮನಸ್ಸಿನಲ್ಲಿ ಉಲಮಾಗಳೊಂದಿಗಿನ ಗೌರವ ನಷ್ಟ ಹೊಂದಿದರೆ ಅವನಲ್ಲಿ ನೂತನವಾದ ತುರುಕಿಸಲಿಕ್ಕೆ ಬಲು ಸುಲಭವಾಗುತ್ತೆ
ಅದಕ್ಕಾಗಿ ಇವರು ಎಷ್ಟೇ ಹೀನ ಕ್ರತ್ಯಕ್ಕೂ ಇಳಿಯಲು ಹೇಸಲಾರರು!
B Carefully 👍

✒ಅಬೂಶಝ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...